For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ 15 ಪ್ರಾರಂಭ: ಅರಣ್ಯಕ್ಕೆ ಕಾಲಿಟ್ಟ ತರಹೇವಾರಿ 'ಪ್ರಾಣಿಗಳು'

  |

  ಹಿಂದಿ ಬಿಗ್‌ಬಾಸ್ ಸೀಸನ್ 15 ನಿನ್ನೆ (ಅಕ್ಟೋಬರ್ 02) ಪ್ರಾರಂಭಗೊಂಡಿದೆ. ಸಲ್ಮಾನ್ ಖಾನ್ ನಿರೂಪಿಸುತ್ತಿರುವ ಈ ಶೋನ ಉದ್ಘಾಟನಾ ಎಪಿಸೋಡ್‌ನಲ್ಲಿ ಹಲವು ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ.

  ಹಿಂದಿ ಬಿಗ್‌ಬಾಸ್ ಸೀಸನ್ 15 ಅರಣ್ಯದ ಥೀಮ್‌ನಲ್ಲಿದ್ದು ಸ್ಪರ್ಧಿಗಳು ಬಿಗ್‌ಬಾಸ್ ಮುಖ್ಯ ಮನೆ ಪ್ರವೇಶಿಸುವ ಮೊದಲು ಅರಣ್ಯಕ್ಕೆ ಪ್ರವೇಶಿಸಿ ಟಾಸ್ಕ್ ಮುಗಿಸಬೇಕಾಗುತ್ತದೆ. ಅಂತೆಯೇ ಹಲವು ಸ್ಪರ್ಧಿಗಳು ಮೊದಲ ದಿನದ ಮೊದಲ ಎಪಿಸೋಡ್‌ನಲ್ಲಿ ಮನೆ ಪ್ರವೇಶ ಮಾಡಿದರು. ಉದ್ಘಾಟನಾ ಎಪಿಸೋಡ್‌ ಭಾನುವಾರವೂ ಮುಂದುವರೆದಿದ್ದು, ಇಂದೂ ಸಹ ಕೆಲವು ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ.

  ಸಲ್ಮಾನ್ ಖಾನ್‌ರ ಧಮ್‌ದಾರ್ ನೃತ್ಯದ ಮೂಲಕ ಆರಂಭವಾದ ಶೋನಲ್ಲಿ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು ಜಯ್ ಭಾನುಶಾಲಿ. 'ಹೇಟ್‌ ಸ್ಟೋರಿ 2', 'ದೇಸಿ ಕಟ್ಟೆ', 'ಏಕ್ ಪಹೇಲಿ ಲೀಲಾ' ಸೇರಿದಂತೆ ಒಟ್ಟು 15 ಧಾರಾವಾಹಿಗಳಲ್ಲಿ ಜಯ್ ನಟಿಸಿದ್ದಾರೆ. 'ಈ ಶೋ ಅನ್ನು ಗೆಲ್ಲಲು ಬಂದಿದ್ದೇನೆ'' ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ ಜಯ್.

  1998ರಿಂದ ಹಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿರುವ ವಿಶಾಲ್ ಕೊಟಿಯಾನ್ ಎರಡನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದರು. ಶೋಗೆ ಬಂದ ವಿಶಾಲ್, ತಾನು ತನ್ನ ಕಾಲೇಜು ಫೀಸು ತುಂಬಲು ಸಲ್ಮಾನ್ ಖಾನ್ ಸಿನಿಮಾ ಟಿಕೆಟ್‌ಗಳನ್ನು ಬ್ಲ್ಯಾಕ್‌ನಲ್ಲಿ ಮಾರಾಟ ಮಾಡುತ್ತಿದ್ದುದಾಗಿ ಹೇಳಿದರು.

  ಸೌದಿ ಅರೇಬಿಯಾದಲ್ಲಿ ಜನಿಸಿದ ನಟಿ ತೇಜಸ್ವಿ ಪ್ರಕಾಶ್ ಮೂರನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದರು. ತಾನೊಬ್ಬ ಫೂಡಿ ಎಂದ ನಟಿ, ಶೋನಲ್ಲಿ ಭಾವಹಿಸಲು ಉತ್ಸುಕರಾಗಿರುವುದಾಗಿ ಹೇಳಿದರು. ಮರಾಠಿ ಸಿನಿಮಾ ಒಂದರಲ್ಲಿ ನಟಿಸಿರುವ ಈ ನಟಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

  ನಾಲ್ಕನೇ ಸ್ಪರ್ಧಿಯಾಗಿ ನಟಿ ವಿಧಿ ಪಾಂಡೆ ಬಿಗ್‌ಬಾಸ್ ಮನೆ ಪ್ರವೇಶಿಸಿದರು. ಐದನೇ ಸ್ಪರ್ಧಿಯಾಗಿ ಸಿಂಭಾ ನಾಗ್ಪಲ್ ಮನೆ ಪ್ರವೇಶಿಸಿದರು. ಇಬ್ಬರೂ ಟಿವಿ ನಟರಾಗಿದ್ದು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

  Bigg Boss 15: Many Contestants Enters The House

  ಬಿಗ್‌ಬಾಸ್‌ ಮನೆಗೆ ವೈದ್ಯರೊಬ್ಬರನ್ನು ಸ್ಪರ್ಧಿಯಾಗಿ ಕರೆತರಲಾಗಿದೆ. ಬಿಗ್‌ಬಾಸ್ 13ರ ರನ್ನರ್ ಅಪ್ ಆಗಿದ್ದ ಅಸೀಮ್‌ ರಿಯಾಜ್‌ರ ಸಹೋದರ ಉಮರ್ ರಿಯಾಜ್ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದು ಅವರೊಬ್ಬ ವೈದ್ಯರಾಗಿದ್ದಾರೆ.

  ಜೆಟ್ ಏರ್‌ವೇಸ್‌ನಲ್ಲಿ ಒಳ್ಳೆಯ ಉದ್ಯೋಗ ಬಿಟ್ಟು ನಟನಾಗಲು ಬಂದ ಈಶಾನ್ ಸೆಹ್ಗಲ್ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಬಾಡಿ ಬಿಲ್ಡರ್ ಸಹ ಆಗಿರುವ ಈಶಾನ್ ಸೆಹ್ಗಲ್ ಹಲವು ಶೋಗಳಲ್ಲಿ ಭಾಗವಹಿಸಿದ್ದಾರೆ.

  ಪತ್ರಕರ್ತೆಯಾಗಿ ವೃತ್ತಿ ಆರಂಭಿಸಿ ನಂತರ ನಟಿಯಾದ ಡೋನಲ್ ಬಿಷ್ಟ್ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ. 2014ರಿಂದ ಹಲವು ಧಾರಾವಾಹಿಗಳಲ್ಲಿ ನಟಿ ಡೋನಲ್ ಬಿಷ್ಟ್ ನಟಿಸಿದ್ದಾರೆ. ಹಾಡು ಹಾಡುತ್ತಲೇ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದವರು ಅಕಾಸಾ ಸಿಂಗ್. ಆಕೆ ಒಳ್ಳೆಯ ಗಾಯಕಿ. ಟಿವಿಯ ರಾಕ್‌ಸ್ಟಾರ್ ಎಂದೇ ಕರೆಯಲಾಗುವ ಕರಣ್ ಕುಂದ್ರಾ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ.

  'ತಿತಿಲಿಯಾ' ಹಾಡಿನಿಂದ ಖ್ಯಾತಿಗಳಿಸಿರುವ ಗಾಯಕಿ ಅಫ್ಸಾನಾ ಖಾನ್ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಈ ಶೋಗಾಗಿ ತಮ್ಮ ಮದುವೆ ಮುಂದಕ್ಕೆ ಹಾಕಿಕೊಂಡಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ ಶೋನಿಂದ ಕೊನೆಯ ಹಂತದಲ್ಲಿ ಹಿಂದೆ ಸರಿಯಲ್ಲಿ ನಿಶ್ಚಯಿಸಿದ್ದರು ಆದರೆ ಹಾಗೆ ಮಾಡಿಲ್ಲ.

  ನಟ ಸಾಹಿಲ್ ಶ್ರಾಫ್ ಹಾಗೂ ನಟಿ ಮೀಶಾ ಐಯರ್ ಅವರುಗಳು ಬಿಗ್‌ಬಾಸ್ ಮನೆ ಪ್ರವೇಶ ಮಾಡಿದರು. ಶನಿವಾರದಂದು ಬಿಗ್‌ಬಾಸ್ ಮನೆ ಸೇರಿದ ಕೊನೆಯ ಸ್ಪರ್ಧಿಗಳು ಇವರಾದರು. ಶೋ ಭಾನುವಾರವೂ ಸಹ ಮುಂದುವರೆಯಲಿದ್ದು, ಇನ್ನೂ ಕೆಲವು ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ.

  ಭಾನುವಾರದ ಶೋನ ವಿಶೇಷತೆಯೆಂದರೆ ಭಾನುವಾರದ ಶೋನಲ್ಲಿ ಸಲ್ಮಾನ್ ಖಾನ್ ಜೊತೆಗೆ ನಟ ರಣ್ವೀರ್ ಸಿಂಗ್ ಸಹ ಇರಲಿದ್ದಾರೆ. ಮೌನಿ ರಾಯ್ ನೃತ್ಯವೂ ಇರಲಿದೆ. ಇನ್ನಷ್ಟು ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ.

  English summary
  Hindi Bigg Boss 15 many contestants enters the house. This time there is a forest theme to the show. contestants will continue to enter the house on Sunday also.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X