Bigg Boss 16 Winner : ಹಿಂದಿ ಬಿಗ್‌ಬಾಸ್ ಗೆದ್ದ ಗಾಯಕನಿಗೆ ಸಿಕ್ಕ ಬಹುಮಾನವೆಷ್ಟು?

By ಫಿಲ್ಮಿಬೀಟ್ ಡೆಸ್ಕ್

ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್‌ಬಾಸ್‌ನ ಮತ್ತೊಂದು ಸೀಸನ್ ಅಂತ್ಯವಾಗಿದೆ. ಆ ಮೂಲಕ ಭಾರಿ ಜನಪ್ರಿಯ ಹೊಂದಿರುವ ಹಿಂದಿ ಬಿಗ್‌ಬಾಸ್‌ನ 16 ಸೀಸನ್‌ ಮುಗಿದಂತಾಗಿದೆ.

2022ರ ಅಕ್ಟೋಬರ್ ನಲ್ಲಿ ಪ್ರಾರಂಭವಾದ ಈ ಶೋ ಬರೋಬ್ಬರಿ 133 ದಿನಗಳ ಕಾಲ ನಡೆದಿದ್ದು ಭಾಗವಹಿಸಿದ್ದ 17 ಸ್ಪರ್ಧಿಗಳಲ್ಲಿ ರ್ಯಾಪರ್, ಗಾಯಕ ಎಂಸಿ ಸ್ಟಾನ್ ಗೆಲುವು ಸಾಧಿಸಿದ್ದಾರೆ.

ನಿನ್ನೆಯಷ್ಟೆ ಬರೋಬ್ಬರಿ ಐದು ಗಂಟೆಗಳ ಕಾಲ ನಡೆದ ಸುದೀರ್ಘ ಫಿನಾಲೆ ಕಾರ್ಯಕ್ರಮದಲ್ಲಿ ನಟ, ನಿರೂಪಕ ಸಲ್ಮಾನ್ ಖಾನ್ ಎಂಸಿ ಸ್ಟಾನ್ ಅವರನ್ನು ವಿಜೇತರನ್ನಾಗಿ ಘೋಷಣೆ ಮಾಡಿದರು.

BBH16 How Much Money Did Winner MC Stan Received

ದೇಶದ ಇತರ ಭಾಷೆಗಳಲ್ಲಿ ನಡೆವ ಬಿಗ್‌ಬಾಸ್‌ ಶೋಗಳಿಗಿಂತಲೂ ಹೆಚ್ಚು ಬಜೆಟ್‌ನ ಬಿಗ್‌ಬಾಸ್‌ ಎಂದೇ ಹೆಸರಾಗಿರುವ ಹಿಂದಿ ಬಿಗ್‌ಬಾಸ್ ಗೆದ್ದ ಸ್ಟಾನ್‌ಗೆ ಮಾತ್ರ ಭಾರಿ ದೊಡ್ಡ ಮೊತ್ತವೇನೂ ಬಹುವಾಮವಾಗಿ ದೊರೆತಿಲ್ಲ. ಹಿಂದಿ ಬಿಗ್‌ಬಾಸ್ ಸೀಸನ್ 16 ಗೆದ್ದ ಎಂಸಿ ಸ್ಟಾನ್‌ಗೆ ದೊರೆತ ಬಹುಮಾನಗಳ ಕುರಿತ ಮಾಹಿತಿ ಇಲ್ಲಿದೆ.

ಎಂಸಿ ಸ್ಟಾನ್‌ಗೆ 31.80 ಲಕ್ಷ ಹಣವನ್ನು ಬಹುಮಾನದ ಮೊತ್ತವನ್ನಾಗಿ ನೀಡಲಾಗಿದೆ. ಇದರ ಜೊತೆಗೆ ಒಂದು ಕಾರನ್ನೂ ಸಹ ಸ್ಟಾನ್‌ಗೆ ನೀಡಲಾಗಿದೆ. ಆದರೆ ಅದಾವ ಕಾರು ಎಂಬುದು ತಿಳಿದು ಬಂದಿಲ್ಲ. ಆದರೆ 133 ದಿನಗಳ ಕಾಲ ಆಟವಾಡಿದ ಎಂಸಿ ಸ್ಟಾನ್‌ಗೆ ತುಸು ಕಡಿಮೆ ಮೊತ್ತವೇ ದೊರೆತಿದೆ ಎನ್ನಬಹುದು.

ಹಿಂದಿಗೆ ಹೋಲಿಸಿದರೆ ಕನ್ನಡ ಬಿಗ್‌ಬಾಸ್ ಗೆದ್ದವರಿಗೆ ಅದರ ದುಪ್ಪಟ್ಟು ಹಣ ಸಿಗುತ್ತದೆ. ಕೆಲ ತಿಂಗಳ ಹಿಂದಷ್ಟೆ ಮುಗಿದ ಕನ್ನಡ ಬಿಗ್ ಬಾಸ್ ಗೆದ್ದ ರೂಪೇಶ್ ಶೆಟ್ಟಿಗೆ 60 ಲಕ್ಷ ನಗದು ಬಹುಮಾನ ದೊರೆತಿತ್ತು. ರನ್ನರ್ ಅಪ್ ಆದ ರಾಕೇಶ್ ಅಡಿಗಗೆ 12 ಲಕ್ಷ ನಗದು ಬಹುಮಾನ ದೊರೆತಿದೆ. ಆದರೆ ಹಿಂದಿ ಬಿಗ್‌ಬಾಸ್‌ನಲ್ಲಿ ರನ್ನರ್‌ ಅಪ್‌ಗೆ ಯಾವುದೇ ಹಣ ದೊರೆತಿಲ್ಲ!

ಕೆಲ ಮಾಹಿತಿಗಳ ಪ್ರಕಾರ, ಹಿಂದಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳಿಗೆ ವಾರವಹಿ ಸಂಭಾವನೆ ಬಹಳ ಹೆಚ್ಚಿಗೆ ಇರುತ್ತದೆಯಂತೆ ಹಾಗಾಗಿಯೇ ಅವರಿಗೆ ಪ್ರೈಜ್ ಮನಿಯಲ್ಲಿ ಕಡಿಮೆ ಕೊಡಲಾಗುತ್ತದೆ ಎಂಬ ಮಾತಿದೆ. ಅಲ್ಲದೆ, ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಶೋ ನಿರೂಪಣೆ ಮಾಡಲು ನೂರಾರು ಕೋಟಿ ಹಣ ಸಂಭಾವನೆಯಾಗಿ ಪಡೆಯುತ್ತಾರಾದ್ದರಿಂದ ಗೆದ್ದವರಿಗೆ ತುಸು ಕಡಿಮೆ ಹಣವನ್ನೇ ಕೊಡುತ್ತಾರಂತೆ ಆಯೋಜಕರು!

More from Filmibeat

English summary
Bigg Boss Hindi season 16: MC Stan became winner. How much prize money did MC Stan won.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X