ಬಿಗ್ ಬಾಸ್: ತಾರಕ್ಕಕೇರಿದ ಜಗಳ, ದೊಡ್ಮನೆಯಲ್ಲಿ ಗಂಡನಿಗೆ ಚಪ್ಪಲಿಯಿಂದ ಹೊಡೆದ ಹೆಂಡತಿ!

'ಬಿಗ್ ಬಾಸ್ ಹಿಂದಿ ಸೀಸನ್ 17' ರಲ್ಲಿ ದಿನ ದಿನಕ್ಕೂ ಜಗಳ, ಕಿತ್ತಾಟ, ರೊಮ್ಯಾನ್ಸ್ ಸೇರಿ ಹಲವು ವಿಷಯಗಳಿಂದ ಜನರನ್ನು ಸೆಳೆಯುತ್ತಿದೆ. ಬಿಗ್‌ ಬಾಸ್‌ನಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಸ್ಪರ್ಧಿಗಳೆಂದರೆ ನಟಿ ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕ್ಕಿ ಜೈನ್. ಒಂದಲ್ಲ ಒಂದು ಕಾರಣಕ್ಕೆ ಈ ಜೋಡಿ ಸುದ್ದಿಯಲ್ಲಿರುತ್ತದೆ.

ಈ ವಾರ ಇಬ್ಬರ ನಡುವೆ ಚಪ್ಪಲಿ ವಾರ್ ಜೋರಾಗಿ ನಡೆದಿದೆ. ಇದರ ಜೊತೆಗೆ ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ ನಡೆದು ಕಿತ್ತಾಟ, ಮನಸ್ತಾಪಕ್ಕೆ ದಾರಿ ಮಾಡಿಕೊಟ್ಟಿದೆ. ಮತ್ತೊಂದೆಡೆ, ಅಭಿಷೇಕ್ ಕುಮಾರ್ ಖಾಂಜಾದಿ ಮನೆಯಲ್ಲಿ ನಕಲಿ ಲವ್ ಅಂಗಲ್ ಸೃಷ್ಟಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ankita-lokhande-throws-slippers-at-husband

ಪತಿಗೆ ಚಪ್ಪಲಿ ಸೇವೆ ಮಾಡಿದ ಪತ್ನಿ!

ಬಿಗ್ ಬಾಸ್ ಮನೆಯಲ್ಲಿ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ತಾವು ವಿಭಿನ್ನವಾಗಿ ಇರುತ್ತೇವೆ ಎಂದುಕೊಂಡು ಮನೆಗೆ ಬಂದಿದ್ದರು. ಮನೆಗೆ ಬರುವ ಮುನ್ನ ತುಂಬಾ ಕ್ಯೂಟ್ ಕಲಪ್ ಎನಿಸಿಕೊಂಡಿದ್ದ ಇವರು ರಿಯಾಲಿಟಿ ಶೋನಲ್ಲಿ ತಮ್ಮ ರಿಯಲ್ ಅವತಾರವನ್ನು ಜನರ ಮುಂದಿಡುತ್ತಿದ್ದಾರೆ. ಪದೇ ಪದೇ ಜಗಳ, ಮನಸ್ತಾಪ ಇವರ ನಡುವೆ ಬರುತ್ತಿದೆ.

'ಬಿಗ್ ಬಾಸ್ 17' ರ ಇತ್ತೀಚಿನ ಸಂಚಿಕೆಯಲ್ಲಿ ಇಶಾ ಮಾಳವಿಯಾ, ಖಾನ್‌ಜಾದಿ, ಅನುರಾಗ್ ದೋಭಾಲ್, ವಿಕ್ಕಿ ಜೈನ್ ಮತ್ತು ಮುನಾವರ್ ಫಾರುಕಿ ಅವರು ಊಟದ ವಿಷಯದಲ್ಲಿ ತೀವ್ರ ವಾಗ್ವಾದಕ್ಕಿಳಿದಿದ್ದರು. 'ಧಿಮಾಗ್' ರೂಮ್ ಸದಸ್ಯರ ನಡುವಿನ ಗಲಾಟೆಯಲ್ಲಿ ನಟಿ ಅಂಕಿತಾ ಕೂಡ ಮಧ್ಯೆ ಬಂದಿದ್ದಾರೆ.

ಜಗಳ ನಡೆಯುತ್ತಿದ್ದ ಕಡೆ ಬಂದ ಅಂಕಿತಾ ಲೋಖಂಡೆ, ಖಾನ್‌ಜಾದಿ ಅವರು ಆಹಾರ ತಿಂದಿದ್ದನ್ನು ತಾನು ನೋಡಿರುವುದಾಗಿ ಹೇಳಿದ್ದಾರೆ. ಈ ವೇಳೆ ಆಕೆಯ ಪತಿ ವಿಕ್ಕಿ ಜೈನ್ ತಮಾಷೆಯಾಗಿ ಅವರ ಕುತ್ತಿಗೆ ಹಿಡಿದು ಎಳೆದಿದ್ದಾರೆ. ಇದಕ್ಕೆ ಕೋಪಗೊಂಡ ನಟಿ ಅವರನ್ನು ತಳ್ಳಲು ಪ್ರಯತ್ನಿಸಿದಾಗ, ಆತ ಮತ್ತೆ ಪ್ರೀತಿಯಿಂದ ಅವಳ ಕೈಯನ್ನು ಹಿಡಿದು ತಿರುಗಿಸಿದ್ದಾರೆ. ನಂತರ ಅಂಕಿತಾ ತನ್ನ ಎರಡೂ ಚಪ್ಪಲಿಗಳನ್ನು ತೆಗೆದು ವಿಕ್ಕಿ ಮೇಲೆ ಎಸೆದಿದ್ದಾರೆ. ಇದು ಮನೆಯವರಿಗೆ ಸಕತ್ ಮಜಾ ಕೊಟ್ಟಿದೆ.

ತಾನು ಗರ್ಭಿಣಿ ಎಂದಿದ್ದ ಅಂಕಿತಾ !

ಕಳೆದ ವಾರ, ಅಂಕಿತಾ ಲೋಖಂಡೆ ಗರ್ಭಿಣಿ ಎಂಬ ವಿಷಯ ಸಕತ್ ಸದ್ದು ಮಾಡಿತ್ತು. ಪತಿ ವಿಕ್ಕಿ ಜೈನ್ ಜೊತೆಗೆ ತನಗೆ ಆರೊಗ್ಯ ಸರಿಯಿಲ್,ಲ ಹುಳಿ ತಿನ್ನುವ ಹಾಗೆ ಆಗ್ತಿದೆ. ಪಿರಿಯಡ್ಸ್ ಆಗಿಲ್ಲ ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು ಮತ್ತು ಅವರ ಸಂಭಾಷಣೆಯ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತು.

ankita-lokhande-throws-slippers-at-husband

ಇದು ಈ ಜೋಡಿ ಮೊದಲ ಮಗುವನ ನಿರೀಕ್ಷೆಯಲ್ಲಿದ್ದಾರೆ. ನಟಿ ಅಂಕಿತಾ ಲೋಖಂಡೆ ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳಿಗೆ ಕಾರಣವಾಯಿತು. ವೈರಲ್ ವಿಡಿಯೋ ಕ್ಲಿಪ್‌ನಲ್ಲಿ, ತಾನು ಸುಸ್ತಾಗಿದ್ದೇನೆ, ಹುಷಾರಿಲ್ಲ, ನಾನು ಪ್ರೆಗ್ನೆನ್ಸಿ ಟೆಸ್ಟ್‌ಗಾಗಿ ರಕ್ತ ಪರೀಕ್ಷೆಗೆ ನೀಡಿದ್ದೇನೆ. ನಗೆ ಮೂಡ್ ಸ್ವಿಂಗ್ ಇದೆ. ನಾನು ಮನೆಗೆ ಹೋಗಬೇಕೆಂದು ಪತಿಯ ಬಳಿ ಹೇಳಿದ್ದರು.

ಸಲ್ಮಾನ್ ಖಾನ್ ಅವರ ಬಿಗ್ ಬಾಸ್ ಅಕ್ಟೋಬರ್ 15 ರಂದು ಆರಂಭವಾಗಿದ್ದು, ಕನ್ನಡ ಬಿಗ್ ಬಾಸ್‌ನಂತೆಯೇ ಹಿಂದಿ ಬಿಗ್ ಬಾಸ್ 17 ಕೂಡ ಸೋಮವಾರದಿಂದ ಶುಕ್ರವಾರದಿಂದ ರಾತ್ರಿ 10 ಗಂಟೆಗೆ ಮತ್ತು ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್ ಟಿವಿ ಮತ್ತು ಜಿಯೋ ಸಿನಿಮಾದಲ್ಲಿ 24x7 ಪ್ರಸಾರವಾಗುತ್ತದೆ.

More from Filmibeat

English summary
Bigg Boss 17: Ankita Lokhande throws her slippers at Vicky Jain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X