Bigg Boss: ಬಿಗ್ ಬಾಸ್ ಸ್ಪರ್ಧಿ ಅಂಕಿತಾ ಲೋಖಂಡೆ ಪ್ರೆಗ್ನೆನ್ಸಿ ರಿಸಲ್ಟ್: ಎಲಿಮಿನೇಟ್ ಆದ ಮಾಜಿ ಪತ್ರಕರ್ತೆ ಹೇಳಿದ್ದೇನು?

ಹಿಂದಿ ಬಿಗ್ ಬಾಸ್‌ನಲ್ಲಿ ಹಲವು ಪ್ರಯೋಗಗಳನ್ನು ಮಾಡಲಾಗುತ್ತಿದ್ದು, ಈ ಬಾರಿ ಮದುವೆಯಾಗಿರುವ ಜೋಡಿ ಕೂಡ ಮನೆಯೊಳಗೆ ಇದ್ದು, ನಟಿ ಅಂಕಿತಾ ಲೋಖಂಡೆ ತಮ್ಮ ಪತಿ ವಿಕ್ಕಿ ಜೈನ್ ಅವರೊಂದಿಗೆ ಮನೆಗೆ ಕಾಲಿಟ್ಟಿದ್ದಾರೆ. ಜೊತೆಗೆ ಬಿಗ್ ಬಾಸ್‌ನಲ್ಲಿ ಸದ್ದು ಮಾಡುತ್ತಿರುವ ಸ್ಪರ್ಧಿಗಳಲ್ಲಿ ಅವರೇ ಮುನ್ನಲೆಯಲ್ಲಿದ್ದಾರೆ.

ಇತ್ತೀಚೆಗೆ ನಟಿ ಅಂಕಿತಾ ಲೋಖಂಡೆ ಅವರ ಪ್ರೆಗ್ನೆನ್ಸಿ ವದಂತಿಗಳು ಸಕತ್ ಸದ್ದು ಮಾಡಿದ್ದವು. ತಾವು ಗರ್ಭಿಣಿ ಇರಬಹುದು ಎಂದು ಅವರೇ ಹೇಳಿಕೊಂಡಿದ್ದರು. ಜೊತೆಗೆ ತಮ್ಮ ಮೂಡ್ ಸ್ವೀಂಗ್ಸ್, ಊಟದ ವಿಚಾರಗಳಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆಯೂ ಮಾತನಾಡಿದ್ದರು. ಇದಾದ ನಂತರ ಆ ಬಗ್ಗೆ ಬಿಗ್ ಬಾಸ್ ಮುಂದಿನ ಎಪಿಸೋಡ್‌ಗಳಲ್ಲಿ ಯಾವುದೆ ಚರ್ಚೆಯಾಗಿರಲಿಲ್ಲ. ಈಗ ಮತ್ತೆ ಎಲಿಮಿನೇಟ್ ಆಗಿರುವ ಸ್ಪರ್ಧಿ, ಮಾಜಿ ಪತ್ರಕರ್ತೆ ಜಿಗ್ನಾ ವೋರಾ ಮಾಹಿತಿ ನೀಡಿದ್ದಾರೆ.

Bigg Boss 17: Actress Ankita Lokhandes pregnancy report was negative

ಅಂಕಿತಾ ಲೋಖಂಡೆ ಗರ್ಭಿಣಿಯಾಗಿಲ್ಲ: ಜಿಗ್ನಾ ವೋರಾ

ಕಳೆದ ವಾರ ಬಿಗ್ ಬಾಸ್‌ನಿಂದ ಎಲಿಮಿನೇಟ್ ಆಗಿರುವ ಮಾಜಿ ಪತ್ರಕರ್ತೆ ಜಿಗ್ನಾ ವೋರಾ, ನಟಿ ಅಂಕಿತಾ ಲೋಖಂಡೆ ಅವರ ಗರ್ಭಧಾರಣೆಯ ವರದಿ ಬಗ್ಗೆ ಮಾತನಾಡಿದ್ದಾರೆ. ಇದು ಅವರ ವೈಯಕ್ತಿಕ ವಿಷಯ ಎಂದು ಹೇಳುತ್ತಾ ಅಂಕಿತಾ ಲೋಖಂಡೆ ಗರ್ಭಿಣಿಯಾಗಿಲ್ಲ ಎಂದು ಜಿಗ್ನಾ ವೋರಾ ಹೇಳಿದ್ದಾರೆ.

ಮಾಜಿ ಬಿಪತ್ರಕರ್ತೆ ಜಿಗ್ನಾ ವೋರಾ ಅವರು ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಿರುವ ರಿಯಾಲಿಟಿ ಶೋ ಗ್ ಬಾಸ್ 17 ರಿಂದ ಎಲಿಮಿನೇಟ್ ಆಗಿದ್ದು, ದೈನಿಕ್ ಭಾಸ್ಕರ್ ಪತ್ರಿಕೆಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಟಿಯ ಗರ್ಭಧಾರಣೆಯ ಪರೀಕ್ಷೆಯ ವರದಿಯು ನೆಗೆಟಿವ್ ಬಂದಿದೆ ಎಂದಿದ್ದಾರೆ.

ಅಂಕಿತಾ ಲೋಖಂಡೆ ಅವರ ಗರ್ಭಾವಸ್ಥೆಯ ಬಗ್ಗೆ ಇನ್ನೂ ಕುತೂಹಲ ಹಾಗೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, "ನನಗೆ ತಿಳಿದಿರುವಂತೆ, ಅಂಕಿತಾ ಅವರ ಗರ್ಭಧಾರಣೆಯ ಪರೀಕ್ಷೆಯ ವರದಿಯು ನೆಗೆಟಿವ್ ಆಗಿತ್ತು. ಅವರೇ ಇದನ್ನು ನನಗೆ ಹೇಳಿದರು. ಇದು ತುಂಬಾ ವೈಯಕ್ತಿಕ ವಿಷಯವಾದ್ದರಿಂದ ನಾನು ಈ ಬಗ್ಗೆ ಹೆಚ್ಚು ಹೇಳಲು ಇಷ್ಟಪಡುವುದಿಲ್ಲ" ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಅಂಕಿತಾ ಗರ್ಭಧಾರಣೆಯ ವದಂತಿಗೆ ತೆರೆ ಎಳೆದಿದ್ದಾರೆ.

Bigg Boss 17: Actress Ankita Lokhandes pregnancy report was negative

ಅಂಕಿತಾಗೆ ಸಮಯ ನೀಡದ ಪತಿ ವಿಕ್ಕಿ ಜೈನ್!

ಸಂದರ್ಶನದಲ್ಲಿ ಮಾತನಾಡಿರುವ ಜಿಗ್ನಾ ವೋರ್, ಅಂಕಿತಾ ಲೋಖಂಡೆ ತನ್ನ ಪತಿ ವಿಕ್ಕಿ ಜೈನ್ ಅವರೊಂದಿಗೆ ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾರೆ. ಆದರೆ, ಇವರಿಬ್ಬರು ಹೊಗಡೆ ಇದ್ದಂತೆ ಇಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅಂಕಿತಾಗೆ ತನ್ನ ಪತಿಯಿಂದ ಯಾವುದೇ ಸಪೋರ್ಟ್ ಸಿಗುತ್ತಿಲ್ಲ ಎಂಬುದನ್ನೂ ಹೇಳಿದ್ದಾರೆ.

"ಪತ್ನಿಯಾಗಿ, ವಿಕ್ಕಿ ಭಾವನಾತ್ಮಕವಾಗಿ ಬೆಂಬಲಿಸಬೇಕು ಎಂದು ಅಂಕಿತಾ ಅಂದುಕೊಳ್ಳುತ್ತಾರೆ. ಆದರೆ ಅವರು ಇತರ ಸಮಸ್ಯೆಗಳು ಮತ್ತು ಇತರ ಜನರೊಂದಿಗೆ ತುಂಬಾ ಬೆರೆಯುತ್ತಿದ್ದು, ಅಂಕಿತಾಗೆ ಸಮಯ ನೀಡುವುದಿಲ್ಲ. ಅದಕ್ಕಾಗಿಯೇ ಅಂಕಿತಾ ವಿಕ್ಕಿ ಬಗ್ಗೆ ಅಸಮಾಧಾನ ಹೊಂದಿದ್ದಾಳೆ" ಎಂದು ತಿಳಿಸಿದ್ದಾರೆ.

ಅಂಕಿತಾ ಲೋಖಂಡೆ ಪ್ರೆಗ್ನೆನ್ಸಿ ವದಂತಿ

ಹೊಸ ಸೀಸನ್ ಆರಂಭವಾದಾಗಿನಿಂದಲೂ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಬಿಗ್ ಬಾಸ್ ಮನೆಯೊಳಗೆ ಸಕತ್ ಜಗಳ ಮತ್ತು ಮನಸ್ಥಾಪದಿಂದಿ ಸುದ್ದಿಯಾಗುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ, ಬಿಗ್ ಬಾಸ್ 17 ರ ವೀಡಿಯೊವೊಂದರಲ್ಲಿ ಅಂಕಿತಾ ಅವರು ತನ್ನ ಪತಿ ವಿಕ್ಕಿ ಜೈನ್‌ಗೆ ತನ್ನ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಮನೆಗೆ ಹೋಗಬೇಕೆಂದು ಹೇಳುವುತ್ತಿದ್ದರು. ನಂಗೆ ಹುಳಿ ತಿನ್ನಬೇಕು ಎನ್ನಿಸುತ್ತಿದೆ. ಮೂಡ್ ಸ್ವಿಂಗ್ಸ್ ಆಗುತ್ತಿದ್ದೆ. ನಾನು ಪ್ರೆಗ್ನೆನ್ಸಿ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ಮಾಡಿಸಿದ್ದೇನೆ ಎಂದು ಹೇಳಿದ್ದರು. ಇದು ಸಕತ್ ವೈರಲ್ ಆಗಿತ್ತು.

More from Filmibeat

English summary
Bigg Boss 17: Ankita Lokhande's pregnancy report update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X