BB 17: ಬಿಗ್ ಬಾಸ್ ಮನೆಯಲ್ಲಿ ಹೆಂಡತಿಯನ್ನು ಅವಮಾನಿಸುವುದು ಆಟವಲ್ಲ; ಅಂಕಿತಾ ಲೋಖಂಡೆ ಪರ ನಿಂತ ನಟಿ

ಹಿಂದಿ ಬಿಗ್ ಬಾಸ್‌ ಸೀಸನ್ 17 ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ. ಅದರಲ್ಲಿ ಈ ಬಾರಿ ಹೆಚ್ಚು ಸುದ್ದಿಯಾಗುತ್ತಿರುವುದು ಕೂಡ ವಿಕ್ಕಿ ಜೈನ್ ಅವರ ಪತ್ನಿ ಅಂಕಿತಾ ಲೋಖಂಡೆ. ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗುತ್ತಿದ್ದು, ವೀಕ್ಷಕರು ನಟಿ ಅಂಕಿತಾಗೆ ಬೆಂಬಲ ನೀಡುತ್ತಿದ್ದಾರೆ.

ನಟ ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ವಿಕ್ಕಿ ಜೈನ್ ಅವರು ತಮ್ಮ ಪತ್ನಿ ಅಂಕಿತಾ ಲೋಖಂಡೆ ಬಗ್ಗೆ ಸರಿಯಾಗಿ ಗಮನ ಹರಿಸುತ್ತಿಲ್ಲ. ಅವರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಅಂಕಿತಾ ಲೋಖಂಡೆ ಕೂಡ ತಾವು ಒಂಟಿತನ ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬೆನ್ನಲ್ಲೆ ಇನ್ನೊಬ್ಬ ಕಿರುತೆರೆ ನಟಿ ದೇವೋಲೀನಾ ಭಟ್ಟಾಚಾರ್ಜಿ ಅಂಕಿತಾ ಅವರಿಗೆ ಬೆಂಬಲ ನೀಡಿದ್ದಾರೆ.

Bigg Boss 17: Actress Devoleena slams Vicky Jain for insulting his wife Ankita Lokhande

ವಿಕ್ಕಿ ಜೈನ್ ವಿರುದ್ಧ ಕಿಡಿಕಾರಿ, ಅಂಕಿತಾಗೆ ದೇವೋಲೀನಾ ಬೆಂಬಲ

ಅಂಕಿತಾ ಲೋಖಂಡೆ ಅವರ ನಡವಳಿಕೆಯನ್ನು ಹಲವು ಬಿಗ್ ಬಾಸ್ ಅಭಿಮಾನಿಗಳು ಖಂಡಿಸುತ್ತಿದ್ದು, ಅವರ ಜೊತೆಗೆ ನಟಿ ದೇವೋಲೀನಾ ಭಟ್ಟಾಚಾರ್ಜಿ ಕೂಡ ಸೇರಿಕೊಂಡಿದ್ದಾರೆ. ಭಿನ್ನಾಭಿಪ್ರಾಯ ಮತ್ತು ತಮಾಷೆ ವೈವಾಹಿಕ ಜೀವನದ ಭಾಗವಾಗಿದೆ. ಆದರೆ, ಹೆಂಡತಿಯನ್ನು ಅವಮಾನಿಸುವುದು ಆಟದ ಭಾಗವಾಗಬಾರದು ಎಂದು ಹೇಳಿದ್ದಾರೆ.

ಬಿಗ್ ಬಾಸ್ 17 ರಲ್ಲಿ ನಡೆಯುತ್ತಿರುವ ಜಗಳಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ನಟಿ ದೇವೋಲೀನಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. " ಗಂಡ ಹೆಂಡತಿಯ ನಡುವೆ ಜಗಳಗಳು ನಡೆಯುತ್ತಲೇ ಇರುತ್ತವೆ. ಆದರೆ ಹೆಂಡತಿಯನ್ನು ಪ್ರತಿದಿನ ಅವಮಾನಿಸುವ, ನಿರ್ಲಕ್ಷಿಸುವುದು ಮನರಂಜನೆ ನೀಡುವುದಿಲ್ಲ. ಅದು ಆಟದ ಭಾಗವಾಗಿರಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಜೊತೆಗೆ ಬಿಗ್ ಬಾಸ್ 17 ಎಂಬ ಟ್ಯಾಗ್ ಬಳಸಿದ್ದಾರೆ.

Bigg Boss 17: Actress Devoleena slams Vicky Jain for insulting his wife Ankita Lokhande

ಅಂಕಿತಾ ಲೋಖಂಡೆಗೆ ಅಭಿಮಾನಿಗಳ ಬೆಂಬಲ

ನಟಿ ಅಂಕಿತಾ ಲೋಖಂಡೆ ಅವರ ಹಲವಾರು ಅಭಿಮಾನಿಗಳು ನಟಿ ದೇವೋಲೀನಾ ಅವರ ಪೋಸ್ಟ್ ಅನ್ನು ಬೆಂಬಲಿಸಿದ್ದಾರೆ. ಅವರ ಫೋಸ್ಟ್ ಹಲವರಿಗೆ ರೀಚ್ ಆಗಿದ್ದು, ಅವರಲ್ಲಿ ಒಬ್ಬರು, "ಹೌದು ನನಗೂ ಹಾಗೆಯೇ ಅನಿಸುತ್ತದೆ. ಜನರು ತಮ್ಮ ಸಂಬಂಧದ ಗೌರವ ಮತ್ತು ಘನತೆಯನ್ನು ಕಾಪಾಡಿಕೊಳ್ಳಬೇಕು. ಆಟಕ್ಕಿಂತ ಸಂಬಂಧ ಮುಖ್ಯ" ಎಂದು ಕಾಮೆಂಟ್ ಮಾಡಿದ್ದಾರೆ.


ಬಿಗ್ ಬಾಸ್ 17 ರಲ್ಲಿ ವಿಕ್ಕಿ ಜೈನ್ ಮತ್ತು ಅಂಕಿತಾ ಲೋಖಂಡೆ

ಬಿಗ್ ಬಾಸ್‌ಗೆ ಹೋಗುವ ಮೊದಲು ನಟಿ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ತುಂಬಾ ಕ್ಯೂಟ್ ಕಪಲ್ ಎಂದು ಹೇಳಲಾಗುತ್ತಿತ್ತು. ಆದರೆ, ಬಿಗ್ ಬಾಸ್‌ನ ಹೊಸ ಸೀಸನ್‌ನಲ್ಲಿ ಕಾಣಿಸಿಕೊಂಡ ಬಳಿಕ ಇಬ್ಬರು ಆಗಾಗ್ಗೆ ಜಗಳವಾಡುವುದನ್ನು ಕಾಣಬಹುದು. ಬಿಗ್ ಬಾಸ್ 17 ವೀಕ್ಷಕರು ಒಬ್ಬರ ಜಗಳಗಳ ಹಲವು ವಿಡಿಯಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ವಿಕ್ಕಿ ಜೈನ್ ಮನೆಯೊಳಗೆ ಅಂಕಿತಾ ಲೋಖಂಡೆ ಅವರನ್ನು ಕೀಳಾಗಿ ನೋಡುವುದು ಮತ್ತು ಅವಮಾನಿಸುತ್ತಿರುವುದನ್ನು ಕಾಣಿಸುತ್ತದೆ.

ಈ ಹಿಂದೆ ಅಂಕಿತಾ ಲೋಖಂಡೆ ಪತಿ ವಿಕ್ಕಿ ಜೈನ್ ಮೇಲೆ
ಅಸಮಾಧಾನಗೊಂಡಿದ್ದರು. ಜೊತೆಗೆ ನಾನಿಲ್ಲಿ ಒಂಟಿತನ ಅನುಭವಿಸುತ್ತಿದ್ದೇನೆ ಎಂದು ಹೇಳಿದ್ದರು. ತಾವು ಬಿಗ್ ಬಾಸ್ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತೇವೆ ಎಂದು ಅಂದುಕೊಂಡಿದ್ದು, ಇಲ್ಲಿ ಹಾಗೆ ಇಲ್ಲದೆ ಇರುವುದರ ಕುರಿತು ಅಂಕಿತಾ ಕಣ್ಣೀರು ಹಾಕಿದ್ದರು. "ನಾನು ಯಾಕೆ ಇಲ್ಲಿ ಒಂಟಿತನ ಅನುಭವಿಸುತ್ತಿದ್ದೇನೆ ಎಂದು ನನಗೆ ಗೊತ್ತಾಗುತ್ತಿಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಕಡೆ ಇದ್ದಿಯ. ಆದರೆ ನನ್ನ ಜೊತೆ ಮಾತ್ರ ಇಲ್ಲ. ಅದನ್ನು ನಾನು ಫೀಲ್ ಮಾಡುತ್ತಿದ್ದೇನೆ" ಎಂದು ಆರೋಪಿಸಿದ್ದರು. ಈಗ ಅದು ಮತ್ತಷ್ಟು ಹೆಚ್ಚಾಗಿದೆ.

More from Filmibeat

English summary
Devoleena slams Vicky Jain for insulting Ankita Lokhande in Bigg Boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X