Bigg Boss 17: ಫೈನಲ್ ತಲುಪಿದ ತಂಗಿ ಮನ್ನಾರಾ ಚೋಪ್ರಾಗೆ ನಟಿ ಪ್ರಿಯಾಂಕಾ ಚೋಪ್ರಾ ಕಿವಿಮಾತು!
'ಬಿಗ್ ಬಾಸ್ 17' ಫಿನಾಲೆಗೆ ತಲುಪಿದೆ. ಅಂಕಿತಾ ಲೋಖಂಡೆ, ಅರುಣ್ ಮಾಶೆಟ್ಟೆ, ಅಭಿಷೇಕ್ ಕುಮಾರ್, ಮುನಾವರ್ ಫಾರುಕಿ ಮತ್ತು ಮನ್ನಾರಾ ಚೋಪ್ರಾ ಫಿನಾಲೆ ಹಂತಕ್ಕೆ ತಲುಪಿದ್ದಾರೆ. ಇದರಲ್ಲಿ ಟಾಫ್ ಫೈವ್‌ಗೆ ಬರಲಿದ್ದಾರೆ ಎಂದುಕೊಂಡಿದ್ದ ವಿಕ್ಕಿ ಜೈನ್ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಈ ಹಂತದಲ್ಲಿ ನಟಿ ಮನ್ನಾರ್ ಚೋಪ್ರಾಗೆ ಬೆಂಬಲ ಹರಿದುಬರುತ್ತಿದೆ.
ಫೈನಲಿಸ್ಟ್ ಆಗಿರುವ ನಟಿ ಮನ್ನಾರಾ ಚೋಪ್ರಾ ಅವರು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಸೋದರಸಂಬಂಧಿ. ಹೀಗಾಗಿ ಪಿನಾಲೆ ತಲುಪಿರುವ ತಮ್ಮ ತಂಗಿಗೆ ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಕಿವಿಮಾತು ಹೇಳಿದ್ದಾರೆ. ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಕೂಡ ಶುಭ ಹಾರೈಸಿದ್ದಾರೆ.

ಮನ್ನಾರಾ ಚೋಪ್ರಾಗೆ ಪ್ರಿಯಾಂಕಾ ಚೋಪ್ರಾ ಬೆಂಬಲ
'ಬಿಗ್ ಬಾಸ್ 17' ಗ್ರ್ಯಾಂಡ್ ಫಿನಾಲೆಗೆ ಇನ್ನು ಕೇವಲ ನಾಲ್ಕು ದಿನ ಬಾಕಿ ಇದೆ. ಟಾಪ್ ಫೈವ್ ಕಂಟೆಸ್ಟೆಂಟ್ಸ್ ಆಗಿ ಮನ್ನಾರಾ ಚೋಪ್ರಾ, ಮುನಾವರ್ ಫಾರುಕಿ, ಅಭಿಷೇಕ್ ಕುಮಾರ್, ಅರುಣ್ ಮಾಶೆಟ್ಟಿ ಮತ್ತು ಅಂಕಿತಾ ಲೋಖಂಡೆ ಇದ್ದಾರೆ. ಈ ಸಮಯದಲ್ಲಿ ಮನ್ನಾರ್‌ಗೆ ಪ್ರಿಯಾಂಕಾ ಚೋಪ್ರಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಳಿಗ್ಗೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮನ್ನಾರಾ ಚೋಪ್ರಾ ಅವರ ಫೋಟೋ ಹಂಚಿಕೊಂಡು ಅದಕ್ಕೆ "Give it your best and forget about the rest" ಎಂದು ಹೇಳಿದ್ದಾರೆ. ನಿನ್ನ ಕೈಯಲ್ಲಿ ಆದಷ್ಟು ಪ್ರಯತ್ನ ಪಡು ಉಳಿದ ವಿಷಯಗಳನ್ನು ಮರೆತುಬಿಡು ಎಂದು ತಂಗಿಗೆ ಸಲಹೆ ನೀಡಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮನ್ನಾರಾ ಚೋಪ್ರಾ ಅವರಿಗೆ ಧೈರ್ಯ ಹೇಳಿ ವಿಡಿಯೋ ಸಂದೇಶ ನೀಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಆಗಿ ಇರುವು ಮತ್ತು ಯಾರಿಂದಲೂ ಆಕೆ ಕುಸಿದು ಹೋಗದಷ್ಟು ಗಟ್ಟಿಯಾಗಿರುವಂತೆ ಹೇಳಿದ್ದರು.
"ಮನ್ನಾರಾ ನೀವು ಚೆನ್ನಾಗಿ ಆಡುತ್ತಿದ್ದೀರಿ. ನೀವು ಕಾರ್ಯಕ್ರಮದ ಫೈನಲಿಸ್ಟ್‌ಗಳಲ್ಲಿ ಒಬ್ಬರು. ನಾನು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ, ಗಟ್ಟಿಯಾಗಿರಿ ನಿಜವಾಗಿಯೂ ಸ್ಟ್ರಾಂಗ್ ಅಗಿರಿ. ಆಲ್ ದಿ ಬೆಸ್ಟ್. ನಿಮ್ಮ ಬಗ್ಗೆ ಹೆಮ್ಮೆಯಿದೆ" ಎಂದು ಮಧು ಚೋಪ್ರಾ ಸಲಹೆ ನೀಡಿ, ಧೈರ್ಯದ ಮಾತಾಡಿದ್ದರು.
ಇನ್ನು, ಅಂಕಿತಾ ಲೋಖಂಡೆ ಮತ್ತು ಇಶಾ ಮಾಳವಿಯಾ ಅವರು ಮನ್ನಾರಾ ಚೋಪ್ರಾ ಅವರೊಂದಿಗೆ ಜಗಳವಾಡುತ್ತಿರುವ ವೀಡಿಯೊದ ಅಡಿಯಲ್ಲಿ ಮಧು ಚೋಪ್ರಾ "ಓ ಮೈ ಗಾಡ್! ಅವರು ಅನಾಗರಿಕವಾಗಿ ವರ್ತಿಸುತ್ತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದರು. ಮನ್ನಾರಾಗಾಗಿ ಇಡೀ ಚೋಪ್ರಾ ಫ್ಯಾಮಿಲಿ ಒಂದಾಗಿದೆ. ಬಿಗ್ ಬಾಸ್ ಹಿಂದಿ ಸೀಸನ್ 17 ರ ಗ್ರ್ಯಾಂಡ್ ಫಿನಾಲೆ ಜನವರಿ 28 ರಂದು ನಡೆಯಲಿದೆ.


Click it and Unblock the Notifications











