ಬಿಗ್ ಬಾಸ್ ಮನೆಗೆ ಬಂದು ಸುಂದರ ಸಂಸಾರಕ್ಕೆ ತಾವೇ ಸಮಾಧಿ ತೋಡಿಕೊಂಡ್ರಾ ಈ ಜೋಡಿ!?
ಈ ಬಾರಿಯ ಹಿಂದಿ ಬಿಗ್ ಬಾಸ್ ಸೀಸನ್ 17 ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಮದುವೆಯಾಗಿರುವ ಒಂದು ಜೋಡಿ ಮನೆಯಲ್ಲಿದೆ. ಮಾಜಿ ಪ್ರೇಮಿಗಳನ್ನು ಒಂದೆ ಕಡೆ ಇರಿಸಲಾಗಿದೆ. ಈ ಕಾರಣಗಳಿಂದಲೇ ಸಲ್ಮಾನ್ ಖಾನ್ ಅವರ ಬಿಗ್ ಬಾಸ್ ಶೋ ಕೆಟ್ಟ ನಿರ್ಧಾರಗಳಿಗೂ ಕಾರಣವಾಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿರುವ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಜೋಡಿ ನಡುವೆ ಹಲವು ದಿನಗಳಿಂದ ಎಲ್ಲವೂ ಸರಿಯಿಲ್ಲ ಎಂಬುದು ವೀಕ್ಷಕರಿಗೆ ಕಾಣುತ್ತಿದೆ. ಇದರ ನಡುವೆ ರಿಯಾಲಿಟಿ ಶೋನ ಇತ್ತೀಚಿನ ಸಂಚಿಕೆಯಲ್ಲಿ, ಬಿಗ್ ಬಾಸ್ ಸ್ಪರ್ಧಿಗಳಿಗೆ ನಾಮಿನೇಟ್ ಟಾಸ್ಕ್ ನೀಡಿತು. ಇದು ಸ್ಪರ್ಧಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಅದರಲ್ಲೂ ವಿಕ್ಕಿ ಜೈನ್ ಮದುವೆಯಾದ ಗಂಡಸರು ನೋವು ಅನುಭವಿಸುತ್ತಾರೆ ಎಂಬ ರೀತಿಯಲ್ಲಿ ಮಾತನಾಡಿರುವುದು ಈ ಜೋಡಿಯನ್ನು ವಿಚ್ಛೇಧನದವರೆಗೂ ತೆಗೆದುಕೊಂಡು ಹೋಗಿದೆ.

ಮದುವೆ ಕುರಿತು ಅಭಿಪ್ರಾಯ ಹಂಚಿಕೊಂಡ ಆಯೇಷಾ, ವಿಕ್ಕಿ ಜೈನ್
ಇತ್ತೀಚಿನ ಸಂಚಿಕೆಯಲ್ಲಿ ಆಯೇಶಾ ಖಾನ್, ವಿಕ್ಕಿ ಜೈನ್ ಅವರನ್ನು ವೈವಾಹಿಕ ಜೀವನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅಯ್ಯೋ ಮದುವೆಯಾದ ಗಂಡಸರ ಕಷ್ಟ ಯಾರಿಗೂ ಹೇಳಲು ಆಗುವುದಿಲ್ಲ ಎಂದು ತಮಾಷೆ ಮಾಡಿದ್ದಾರೆ. ಬಳಿಕ ಆಯೇಶಾ ಕೂಡ ತಾನು ಯಾವತ್ತಿಗೂ ಮದುವೆಯಾಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
"ನನಗೆ ಹೇಗೆ ಅನಿಸುತ್ತದೆ ಎಂದು ನಾನು ಎಂದಿಗೂ ಹೇಳಿಕೊಳ್ಳಲಾರೆ. ವಿವಾಹಿತರು, ವಿಶೇಷವಾಗಿ ಗಂಡಸರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಅವರು ಏನನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಅವರು ಯಾರ ಬಳಿಯೂ ಹೇಳಿಕೊಳ್ಳಲು ಸಾಧ್ಯವೇ ಇಲ್ಲ" ಎಂದು ವಿಕಗಕಿ ಜೈನ್ ತಿಳಿಸಿದ್ದಾರೆ.

ಸುಮ್ಮನೆ ಕಷ್ಟ ಏಕೆ ಪಡುತ್ತೀರಿ..? ಡೈವೋರ್ಸ್ ತೆಗೆದುಕೊಳ್ಳೋಣ!
ಈ ಮಾತುಕತೆಯನ್ನು ಕೇಳಿದ ನಟಿ, ವಿಕ್ಕಿ ಜೈನ್ ಪತ್ನಿ ಅಂಕಿತಾ ಲೋಖಂಡೆ , "ನಿಮಗೆ ಇಷ್ಟೊಂದು ಕಷ್ಟವಾಗುತ್ತಿದ್ದರೇ...ನನ್ನ ಜೊತೆಗೆ ಏಕೆ ಇದ್ದಿರಾ...? ನಾವು ಡೈವೋರ್ಸ್ ತೆಗೆದುಕೊಳ್ಳೋಣ. ನಾನು ನಿಮ್ಮ ಜೊತೆಗೆ ಮತ್ತೆ ಮನೆಗೆ ಬರಲು ಇಷ್ಟಪಡುವುದಿಲ್ಲ" ಎಂದು ಕಡ್ಡಿ ತುಂಡಾದಂತೆ ಮಾತನಾಡಿದ್ದಾರೆ. ಈ ಹಿಂದೆಯೂ ವಿಕ್ಕಿ ಜೈನ್ ತನ್ನ ಪತ್ನಿಯನ್ನು ನೆಗ್ಲೆಕ್ಟ್ ಮಾಡಿದಾಗ ಕುಡ ಅಂಕಿತಾ ಇದೇ ಅಭಿಪ್ರಾಯ ಹೊರಹಾಕಿದ್ದರು.
ಇದಾದ ನಂತರ ಆಯೇಶಾ ಜೊತೆಗೆ ಮಾತನಾಡುವ ಅಂಕಿತಾ ಲೋಖಂಡೆ, "ವಿಕ್ಕಿ ನನ್ನನ್ನು ಪ್ರೀತಿಸುತ್ತಾರೆ ಎಂದು ನನಗೆ ಗೊತ್ತು. ಆದರೆ, ನನಗೆ ಏನು ಬೇಕೋ ಅದನ್ನು ಅವರು ನೀಡುತ್ತಿಲ್ಲ. ನನ್ನನ್ನು ಆತ ನಿಯಂತ್ರಿಸುತ್ತಿದ್ದಾನೆ. ನಾನು ಮೇಲ್ ಕಂಟೆಸ್ಟೆಂಟ್ ಜೊತೆಗೆ ಜಗಳಕ್ಕೆ ಇಳಿದಾಗೆಲ್ಲಾ ಆತ ಓಡಿ ಬಂದು ನನ್ನನ್ನು ಹೇಗೆ ತಡೆಯುತ್ತಾನೆ ಎಂಬುದನ್ನು ನಾನು ಗಮನಿಸಿದ್ದೇನೆ" ಎಂದಿದ್ದಾರೆ. ನಟಿ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ 2021ರ ಡಿಸೆಂಬರ್ 14 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.


Click it and Unblock the Notifications











