Bigg boss 17: ಹೊರಗಡೆ ಮುದ್ದಾಗಿದ್ದ ಜೋಡಿ ಬಿಗ್ ಬಾಸ್ ಮನೆಗೆ ಬಂದು ಡೈವೋರ್ಸ್ ಪಡೆಯುವಂತೆ ಆಗ್ತಿದ್ಯಾ?
ಹಿಂದಿ 'ಬಿಗ್ ಬಾಸ್ ಸೀಸನ್ 17' ದಿನದಿಂದ ದಿನಕ್ಕೆ ಕುತೂಹಲಕಾರಿಯಾಗುತ್ತಿದೆ. ಬ್ಯಾಚುಲರ್‌ಗಳ ಜೊತೆ ಜೊತೆಗೆ ವಿವಾಹಿತ ದಂಪತಿಯಾದ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಕೂಡ ಟಿವಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿದ್ದಾರೆ. ಆದರೆ, ಹೊರಗಡೆ ತುಂಬಾ ಮುದ್ದಾಗಿ ಕಾಣುತ್ತಿದ್ದ ಈ ಸ್ಟಾರ್ ಜೋಡಿ ಮನೆಯ ಒಳಗೆ ಹೋದ ಮೇಲೆ ಫುಲ್ ಚೇಂಜ್ ಆಗಿದ್ದಾರೆ.
ಬಿಗ್ ಬಾಸ್ ಆರಂಭವಾದ ನಂತರ ಈಗಾಗಲೇ ಇಬ್ಬರ ನಡುವೆ ಹಲವು ಬಾರಿ ಜಗಳವಾಗಿದೆ. ನಟಿ ಅಂಕಿತಾ ಲೋಖಂಡೆ ಪದೇ ಪದೇ ತಮ್ಮ ನಡುವೆ ಹೆಚ್ಚಾಗುತ್ತಿರುವ ಅಂತರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಈಗ ಅದು ಮತ್ತಷ್ಟು ಹೆಚ್ಚಾಗಿದ್ದು, ಹೊಸ ಪ್ರೋಮೋದಲ್ಲಿ ಇಬ್ಬರು ಮದುವೆಯನ್ನೇ ಮುರಿಯುವ ಹಂತಕ್ಕೆ ಹೋಗಿದ್ದಾರೆ.

ಮದುವೆ ಆಗಿದ್ದೇವು ಎಂಬುದೇ ಮರೆತುಬಿಡು!
ಬಿಗ್ ಬಾಸ್ ಸಂಚಿಕೆಯ ಹೊಸ ಪ್ರೋಮೋದಲ್ಲಿ, ಅಂಕಿತಾ ತಮ್ಮ ಪತಿ ವಿಕ್ಕಿ ಮೇಲೆ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಆತ ತನ್ನನ್ನು 'ಬಳಸಿಕೊಂಡಿದ್ದಾನೆ' ಎಂದು ಗಂಭೀರ ಆರೋಪ ಮಾಡಿದ್ದಾರೆ. ಇಷ್ಟೇ ಅಲ್ಲದೇ ತಾವು ಮದುವೆಯಾಗಿದ್ದೇವು ಎಂಬುದನ್ನು ಮರೆತುಬಿಡುವಂತೆ ಎಚ್ಚರಿಕೆ ನೀಡಿದ್ದಾರೆ.
ಸದ್ಯ ವಿಕ್ಕಿ ಜೈನ್ ಅವರನ್ನು ದಿಮಾಗ್ ರೂಮ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ಬಿಗ್ ಬಾಸ್ ಘೋಷಿಸುವುದರೊಂದಿಗೆ ಹೊಸ ಪ್ರೋಮೋ ಪ್ರಾರಂಭವಾಗಿದೆ. ಅವರನ್ನು ಬೇರೆ ಕಡೆ ಶಿಫ್ಟ್ ಮಾಡಿದ ಕಾರಣ ಆತ ತನ್ನ ಪತ್ನಿ ಅಂಕಿತಾಯಿಂದ ಬೇರ್ಪಟ್ಟಿದ್ದಾರೆ. ಆದರೆ, ಈ ನಿರ್ಧಾರದಿಂದ ವಿಕ್ಕಿ ಜೈನ್ ಖುಷಿಯಾಗಿರುವಂತೆ ಕಾಣುತ್ತಿದೆ. ಜೊತೆಗೆ ನಗುವುದನ್ನು ಸಹ ಕಾಣಬಹುದು.
ಗಂಡನ ವರ್ತನೆ ನೋಡಿ ಕೋಪಗೊಂಡ ಅಂಕಿತಾ ಲೋಖಂಡೆ, "ಹೀಗೆ ಹಲ್ಲು ಕಿಸಿದುಕೊಂಡು ಸಂತೋಷದಿಂದ ನಗುತ್ತಿದ್ದೀರಿ. ಇಲ್ಲಿಂದ ಹೊರಟುಹೋಗಲು ನಿಮಗೆ ಇಷ್ಟೊಂದು ಸಂತೋಷವಾಗಿದೆಯೇ? ನಾವು ಮದುವೆಯಾಗಿದ್ದೇವೆ ಎಂಬುದನ್ನು ಮರೆತುಬಿಡಿ" ಎಂದು ಕೋಪದಿಂದ ಕಿರುಚಾಡಿದ್ದಾರೆ.

ನನ್ನನ್ನು ಬಳಸಿಕೊಂಡು ಬಿಟ್ಟಿದ್ದಿರಾ!
ಅಂಕಿತಾ ಲೋಖಂಡೆ ಕೋಪದ ಮಾತಿನ ನಂತರ ವಿಕ್ಕಿ ಅಂಕಿತಾ ಜೊತೆಗೆ ಮಾತನಾಡಲು ಹೋಗುತ್ತಾನೆ. ಆದರೆ, ಆಕೆ ಮಾತನಾಡಲು ಇಷ್ಟಪಡುವುದಿಲ್ಲ. ಜೊತೆಗೆ, "ನೀವು ನನ್ನನ್ನು ಬಳಸಿದ್ದೀರಿ, ನೀವು ಯಾವಾಗಲೂ ಹೀಗೆಯೇ ಇದ್ದವರು" ಎಂದು ಕಿಡಿಕಾರಿದ್ದಾರೆ. ಇನ್ನು, ಈ ಪ್ರೋಮೋಗೆ "ದಿಮಾಗ್ ರೂಮ್‌ನಲ್ಲಿ ಈಗ ವಿಕ್ಕಿಯ ಎಂಟ್ರಿ, ಅಂಕಿತಾ ತರಹ ನಿಮಗೂ ಕೂಡ ಶಾಕ್ ಆಗಿದೆಯೇ..?" ಎಂದು ಶೀರ್ಷಿಕೆ ನೀಡಲಾಗಿದೆ.
ಸಲ್ಮಾನ್ ಖಾನ್ ಅವರ ಬಿಗ್ ಬಾಸ್ ಸೀಸನ್ 17, ಅಕ್ಟೋಬರ್ 15 ರಂದು ಪ್ರಾರಂಭವಾಗಿದೆ. ಕಲರ್ಸ್ ಟಿವಿಯಲ್ಲಿ ರಾತ್ರಿ 9 ರಿಂದ ಪ್ರಸಾರವಾಗಲಿದೆ. ಜಿಯೋ ಸಿನಿಮಾದಲ್ಲಿ ಯಾವಾಗ ಬೇಕಾದರೂ ನೋಡಬಹುದು. ಈ ಬಾರಿ ಮನೆಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿ, ವಿಭಿನ್ನವಾಗಿ ಆಟವಾಡಿಸಲಾಗುತ್ತಿದೆ.
ಸದ್ಯ 'ಬಿಗ್ ಬಾಸ್ ಸೀಸನ್ 17' ಮನೆಯಲ್ಲಿ ಅಭಿಷೇಕ್ ಕುಮಾರ್ ಮತ್ತು ಇಶಾ ಮಾಳವಿಯಾ, ರಿಂಕು ಧವನ್, ಅರುಣ್ ಮಾಶೆಟ್ಟೆ, ಸನ್ನಿ ಆರ್ಯ, ಫಿರೋಜಾ ಖಾನ್ (ಖಂಜಾದಿ), ಜಿಗ್ನಾ ವೋರಾ, ಸನಾ ರಯೀಸ್ ಖಾನ್, ಅನುರಾಗ್ ದೋಭಾಲ್, ಮುನಾವರ್ ಫಾರುಕಿ, ಅಂಕಿತಾ ಲೋಖಂಡೆ, ವಿಕ್ಕಿ ಜೈನ್, ನಾವಿದ್ ಸೋಲೆ, ನೀಲ್ ಭಟ್, ಐಶ್ವರ್ಯ ಶರ್ಮಾ, ಸಮರ್ಥ್ ಜುರೆಲ್ ಮತ್ತು ಮನ್ನಾರಾ ಚೋಪ್ರಾ ಇದ್ದಾರೆ.


Click it and Unblock the Notifications











