Bigg Boss: ಶುರುವಾಯಿತು ಗಂಡ ಹೆಂಡತಿ ನಡುವೆ ಜಗಳ, ಒಂಟಿತನ ಕಾಡುತ್ತಿದೆ ಎಂದ ಅಂಕಿತಾ ಲೋಖಂಡೆ!
ಭಾರತದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗಾಗಲೇ ಕನ್ನಡ, ತೆಲುಗು, ಹಿಂದಿಯಲ್ಲಿ ಆರಂಭವಾಗಿದೆ. ಹಿಂದಿಯಲ್ಲಿ ವಿಭಿನ್ನವಾಗಿ ನಡೆಯುತ್ತಿದ್ದು, ಮದುವೆಯಾಗಿರುವ ಜೋಡಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಜನಪ್ರಿಯ ಕಿರುತೆರೆ ನಟಿ ಅಂಕಿತಾ ಲೋಖಂಡೆ ತನ್ನ ಪತಿ ವಿಕ್ಕಿ ಜೈನ್ ಅವರೊಂದಿಗೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇವರ ಜೊತೆಗೆ ನೀಲ್ ಭಟ್ ಮತ್ತು ಐಶ್ವರ್ಯ ಶರ್ಮಾ ಕೂಡ ಭಾಗಿಯಾಗಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಆಟ ಶುರುವಾಗಿದ್ದು, ಅಂಕಿತಾ ಲೋಖಂಡೆ ಪತಿ ವಿಕ್ಕಿ ಜೈನ್ ಮೇಲೆ ಅಸಮಾಧಾನಗೊಂಡಿದ್ದಾರೆ. ಜೊತೆಗೆ ನಾನಿಲ್ಲಿ ಒಂಟಿತನ ಅನುಭವಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ರಿಯಾಲಿಟಿ ಶೋನ ಬುಧವಾರದ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ವಿವಾಹಿತ ಎರಡು ಜೋಡಿಗಳು ಮನೆಯಲ್ಲಿ ಉಳಿಯಲು ಹೆಣಗಾಡುತ್ತಿರುವುದನ್ನು ತೋರಿಸಿದೆ.

ಗಂಡನ ಮೇಲೆ ಅಸಮಾಧಾನ ಹೊರಹಾಕಿದ ಅಂಕಿತಾ ಲೋಖಂಡೆ
ಹೊಸ ಪ್ರೋಮೋದಲ್ಲಿ ಅಂಕಿತಾ ಲೋಖಂಡೆ ವಿಕ್ಕಿಯೊಂದಿಗೆ ಅಸಮಾಧಾನವನ್ನು ತೋರುತ್ತಿದ್ದಾರೆ. ಪ್ರೋಮೋದ ಎರಡನೇ ಭಾಗವು ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಮಲಗುವ ಕೋಣೆಯಲ್ಲಿ ಮಾತನಾಡುವುದನ್ನು ತೋರಿಸುತ್ತದೆ. ಬಿಗ್ ಬಾಸ್ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತೇವೆ ಎಂದು ಅವರು ಹೇಗೆ ಚರ್ಚಿಸಿದ್ದರು. ಆದರೆ, ಅವರು ಈಗ ಹಾಗೆ ನಡೆಯುತ್ತಿಲ್ಲ ಎಂದು ಅಂಕಿತಾ ಕಣ್ಣೀರು ಹಾಕುತ್ತಾ ಹೇಳುತ್ತಾರೆ.
"ಜನರು ನನ್ನನ್ನು ನೋಯಿಸಲು ಸಾಧ್ಯವಿಲ್ಲ, ನೀನು ಮಾತ್ರ ನನ್ನನ್ನು ನೋಯಿಸಬಹುದು. ಈಗ ಅದೇ ಮಾಡುತ್ತಿದ್ದಿಯ. ನಂಗೆ ಹರ್ಟ್ ಆಗುತ್ತಿದೆ " ಎಂದು ಅಂಕಿತಾ ಹೇಳುತ್ತಿದ್ದು, ವಿಕ್ಕಿ ಆಕೆಯ ಬಳಿ ಕ್ಷಮೆ ಕೇಳಿತ್ತಿದ್ದಾರೆ. ಕಣ್ಣೀರು ಹಾಕುತ್ತಿರುವ ನಟಿ "ನಾನು ಯಾಕೆ ಒಂಟಿತನ ಅನುಭವಿಸುತ್ತಿದ್ದೇನೆ ಎಂದು ನನಗೆ ಗೊತ್ತಾಗುತ್ತಿಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಕಡೆ ಇದ್ದಿಯ. ಆದರೆ ನನ್ನೊಂದಿಗೆ ಮಾತ್ರ ಇಲ್ಲ. ಅದನ್ನು ನಾನು ಫೀಲ್ ಮಾಡುತ್ತಿದ್ದೇನೆ" ಎಂದು ಆರೋಪಿಸುತ್ತಿದ್ದಾರೆ.
ಗಂಡನ ಜೊತೆಗೆ ಬಿಗ್ ಬಾಸ್ ಮನೆಗೆ ಪ್ರವೇಶಿಸಿರುವ ನಟಿ ಅಂಕಿತಾ
ಬಿಗ್ ಬಾಸ್ ಮನೆ ಪ್ರವೇಶಿಸುವ ಮೊದಲು, ಅಂಕಿತಾ ಲೋಖಂಡೆ ಪಿಟಿಐಗೆ ಸಂದರ್ಶನ ನೀಡಿದ್ದರು. ಅದರಲ್ಲಿ, "ನಾನು ಬಿಗ್ ಬಾಸ್ ಸ್ಪರ್ಧಿಯಾಗಬಹುದು ಎಂದು ಎಂದೂ ಯೋಚಿಸಲಿಲ್ಲ. ನಾನು ವಿವಾದಗಳಿಂದ ದೂರ ಉಳಿಯಲು ಪ್ರಯತ್ನಿಸುತ್ತೇನೆ. ನನಗೆ ಜಗಳವಾಡಲು ಇಷ್ಟವಾಗುವುದಿಲ್ಲ. ಬಿಗ್ ಬಾಸ್‌ನಲ್ಲಿ ಜನರು ಪರಸ್ಪರ ಜಗಳವಾಡುವುದನ್ನು ಮತ್ತು ಕೂಗಾಡುವುದನ್ನು ನಾನು ನೋಡಿದ್ದೇನೆ. ಆದರೆ, ಕೆಲವು ವರ್ಷಗಳಿಂದ ಎಲ್ಲವೂ ಬದಲಾಗಿದೆ" ಎಂದಿದ್ದರು.

ಗಂಡನ ಜೊತೆಗೆ ಹೋಗುತ್ತಿರುವ ಬಗ್ಗೆ, "ಬಿಗ್ ಬಾಸ್ ಮನೆಗೆ ಈಗ ಒಂದು ನಿರ್ದಿಷ್ಟ ಗಡಿ ಇದೆ. ಅದು ನನಗೆ ಖುಷಿ ಕೊಟ್ಟಿದೆ. ಇನ್ನೊಂದು ವಿಷಯವೆಂದರೆ ನನ್ನ ಪಕ್ಕದಲ್ಲಿ ವಿಕ್ಕಿ ಇದ್ದಾನೆ. ನಾನು ತುಂಬಾ ಭಾವನಾತ್ಮಕ ವ್ಯಕ್ತಿ. ಆದ್ದರಿಂದ, ರಿಯಾಲಿಟಿ ಶೋನಲ್ಲಿ ನನ್ನೊಂದಿಗೆ ನನ್ನ ಗಂಡ ಇರುವುದು ನನಗೆ ದೊಡ್ಡ ಬೆಂಬಲ ಮತ್ತು ಶಕ್ತಿ" ಎಂದು ಹೇಳಿಕೊಂಡಿದ್ದರು.
ಐಶ್ವರ್ಯಾ ಶರ್ಮಾ ಮತ್ತು ನೀಲ್ ಭಟ್
ಬಿಗ್ ಬಾಸ್ ಮನೆಗೆ ಹೋಗಿರುವ ಮತ್ತೊಂದು ಜೋಡಿ ನೀಲ್ ಭಟ್ ಮತ್ತು ಐಶ್ವರ್ಯಾ ಶರ್ಮಾ. ಇವರು ಕೂಡ ಬಿಗ್ ಬಾಸ್ ಮನೆಯಲ್ಲಿ ಹೊಂದಿಕೊಳ್ಳಲು ಆಗದೆ ಪರದಾಡುತ್ತಿದ್ದಾರೆ. ಈ ಕಾರ್ಯಕ್ರಮ ಹೇಗೆ ನಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂಬ ಗೊಂದಲದಲ್ಲಿದ್ದಾರೆ.


Click it and Unblock the Notifications











