ಬಿಗ್ ಬಾಸ್‌ನಲ್ಲಿ ಮಗಳ ವರ್ತನೆ ನೋಡಿ ಶಾಕ್ ಆದ ತಂದೆ -ತಾಯಿ: ಬಿಗ್ ಬಾಸ್ ನೋಡಲ್ಲವಂತೆ!
ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಗ್ ಬಾಸ್‌ನ ಬೇರೆ ಬೇರೆ ಸೀಸನ್‌ಗಳು ಪ್ರಸಾರವಾಗುತ್ತಿವೆ. ಒಂದೊಂದರಲ್ಲಿ ಒಂದೊಂದು ಡ್ರಾಮಾ ನಡೆಯುತ್ತಲೇ ಇದೆ. ಸದ್ಯ ಹಿಂದಿ ಬಿಗ್ ಬಾಸ್ 17ರ ಸ್ಪರ್ಧಿ ಇಶಾ ಮಾಳವಿಯಾದ್ದೇ ಸುದ್ದಿ. ಆಕೆಯ ಸಂಬಂಧಗಳು, ಗೊಂದಲಗಳ ಜೊತೆಗೆ ಒಂದು ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ಇಶಾ ಮಾಳವಿಯಾ ಅವರ ಮಾಜಿ ಗೆಳೆಯ ಅಭಿಷೇಕ್ ಕುಮಾರ್ ಮತ್ತು ಆಕೆಯ ಬಾಯ್‌ಫ್ರೆಂಡ್ ಸಮರ್ಥ್ ಜುರೆಲ್ ಜೊತೆಗಿನ ಸಂಬಂಧಗಳಲ್ಲಿನ ಗೊಂದಲ ಬೊಗ್ ಬಾಸ್ ವೀಕ್ಷಕರಿಗೆ ಮಾತ್ರವಲ್ಲ, ಮನೆಯ ಸದಸ್ಯರಿಗೂ ಕುತೂಹಲ ಮೂಡಿಸುತ್ತಿದೆ. ಇನ್ನು, ಇತ್ತೀಚೆಗೆ ಇಶಾ ಮತ್ತು ಸಮರ್ಥ್ ಬೆಡ್‌ಶಿಟ್ ಒಳಗೆ ತುಂಬಾ ಕ್ಲೋಸ್ ಆಗಿ ನಡೆದುಕೊಂಡಿರುವುದು ಟ್ರೋಲರ್‌ಗಳಿಗೆ ಆಹಾರ ಆಗುವ ಜೊತೆಗೆ ಆಕೆಯ ಪೋಷಕರನ್ನು ಮುಜುಗರಕ್ಕೆ ತಳ್ಳಿದೆ.

ಮಗಳ ವರ್ತನೆ ನೋಡಿ ಪೋಷಕರು ಶಾಕ್!
ಬಿಗ್ ಬಾಸ್ ಹಿಂದಿಯಲ್ಲಿ ಇಶಾ ಮಾಳವಿಯಾ, ಆಕೆಯ ಮಾಜಿ ಮತ್ತು ಹಾಲಿ ಗೆಳೆಯರು ಪ್ರವೇಶ ಪಡೆದಿದ್ದಾರೆ. ಹೀಗಾಗಿ ಮನೆಯಲ್ಲಿ ಕಾವು ಹೆಚ್ಚಾಗಿದ್ದು, ನೋಡುಗರಿಗೆ ಒಳ್ಳೆ ಮನರಂಜನೆ ಸಿಗುತ್ತಿದೆ. ಮನೆಯೊಳಗೆ ನಡೆಯುತ್ತಿರುವ ಎಲ್ಲಾ ಘಟನೆಗಳ ನಡುವೆ, ಇಶಾ ಮಾಳವಿಯಾ ಅವರ ಪೋಷಕರು ತಮ್ಮ 19 ವರ್ಷದ ಮಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪಿಂಕ್ವಿಲ್ಲಾ ವೆಬ್ಸೈಟ್ ವರದಿ ಮಾಡಿದೆ.
ಇಶಾ ಮಾಳವಿಯಾ ಅವರ ಬಾಯ್‌ಫ್ರೆಂಡ್ ಸಮರ್ಥ್ ಜುರೆಲ್ ಮತ್ತು ಮಾಜಿ ಗೆಳೆಯ ಅಭಿಷೇಕ್ ಕುಮಾರ್ ಅವರೊಂದಿಗಿನ ಇಶಾ ಅವರ ಸಂಬಂಧ ತುಂಬಾ ಗೊಂದಲಮಯವಾಗಿದೆ. ಅವರು ಇಬ್ಬರ ಜೊತೆಗೂ ತಮ್ಮ ಸಂಬಂಧವನ್ನು ಸರಿಪಡಿಸುವುದನ್ನು ಮುಂದುವರೆಸುತ್ತಿದ್ದಾರೆ. ಈ ವೇಳೆ ಅವರ ಜೊತೆಗೆ 'ಉದಾರಿಯನ್' ಧಾರಾವಾಹಿಯಲ್ಲಿ ತೆರೆ ಹಂಚಿಕೊಂಡಿದ್ದ ನಟ ಲೋಕೇಶ್ ಬಟ್ಟಾ ಕೆಲವು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
ಪಿಂಕ್ವಿಲ್ಲಾ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಇಶಾ ವರ್ತನೆಗೆ ಅವರ ಪೋಷಕರು ಬೇಸರ ಪಟ್ಟುಕೊಂಡಿದ್ದಾರೆ. ಕಳೆದ ವರ್ಷ ಅಂಕಿತ್ ಗುಪ್ತಾ ಮತ್ತು ಪ್ರಿಯಾಂಕಾ ಚಾಹರ್ ಚೌಧರಿ ಬಿಗ್ ಬಾಸ್‌ಗೆ ಹೋದಾಗಿನಿಂದ, ಇಶಾ ಅಲ್ಲಿಗೆ ಹೋಗಬೇಕೆಂದು ಕಾಯುತ್ತಿದ್ದರು ಎಂದು ಲೋಕೇಶ್ ಬಟ್ಟಾ ಹೇಳಿದ್ದಾರೆ.
"ಹಿಂದಿನ ಸೀಸನ್‌ನಲ್ಲಿ ಉದರಿಯಾನ್ ಧಾರಾವಾಹಿಯ ನಟರು ಭಾಗಿಯಾದ ನಂತರ, ತನಗೂ ಅಲ್ಲಿಂದ ಕರೆ ಬರಲಿದೆ ಎಂದು ಇಶಾ ಕುತೂಹಲದಿಂದ ನಿರೀಕ್ಷಿಸುತ್ತಿದ್ದರು. ಅದಿ ಅವರ ಇಮೇಜ್ ಮೇಲೆ ಪರಿಣಾಮ ಬೀರಬಹುದು ಎಂದು ಭಾವಿಸಿ, ಅವರ ತಾಯಿಗೆ ರಿಯಾಲಿಟಿ ಶೋ ಮಾಡಲು ಬಿಡಬೇಡಿ ಎಂದು ಹೇಳಿದ್ದೆ" ಎಂದು ಲೋಕೇಶ್ ಬಟ್ಟಾ ಮಾಹಿತಿ ನೀಡಿದ್ದಾರೆ.

"ಇತ್ತೀಚೆಗೆ ಆಕೆ ನನ್ನ ಮಾತುಗಳನ್ನು ನೆನಪಿಸಿಕೊಂಡು ನನಗೆ ಕರೆ ಮಾಡಿದರು. ಇಶಾ ಅವರ ತಾಯಿಯು ಶೋನಲ್ಲಿನ ಆಕೆಯ ವರ್ತನೆಯಿಂದ ಸಾಕಷ್ಟು ಅಸಮಾಧಾನಗೊಂಡಿದ್ದಾರೆ. ಆಕೆಯ ತಂದೆ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ಆದರೆ, ಆಕೆ ಅಲ್ಲಿ ನಡೆದುಕೊಳ್ಳುತ್ತಿರುವ ರೀತಿಗೆ ಬೇಸರ ಮಾಡಿಕೊಂಡಿದ್ದಾರೆ. ಅವರ ಮಗಳು ನೆಗೆಟಿವ್ ಆಗಿ ಕಾನಿಸುತ್ತಿದ್ದು, ಅಭಿಷೇಕ್‌ಗೆ ಜನರ ಸಹಾನುಭೂತಿ ಸಿಗುತ್ತಿದೆ ಎಂದು ಅವರು ಅಸಮಾಧಾನ ಮಾಡಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.
ಮಗಳ ಶೋ ನೋಡಲು ಪೋಷಕರಿಗೆ ಸಾಧ್ಯವಿಲ್ಲ
"ಈ ಇತ್ತೀಚಿನ ಸಂಚಿಕೆಯಲ್ಲಿ, ಇಶಾ ಮತ್ತು ಸಮರ್ಥ್ ಅವರ ನಡುವಿನ ಸಾಮೀಪ್ಯ ನೋಡಿ ಅವರ ಪೋಷಕರಿಗೆ ಹೆಚ್ಚು ಆಘಾತವಾಗಿದೆ. ಸಮರ್ಥ್ ಜೊತೆಗೆ ಇಶಾ ಅಷ್ಟೊಂದು ದೈಹಿಕವಾಗಿ ಕ್ಲೋಸ್ ಆಗಿರುವಾಗುವುದನ್ನು ನೋಡಿ ಅವರ ತಂದೆ ತಾಯಿ ನೊಂದುಕೊಂಡಿದ್ದಾರೆ. ಸಮರ್ಥ್ ಬಿಗ್ ಬಾಸ್‌ಗೆ ಬಂದ ನಂತರ ಅವರು ಮೊದಲಿನಂತೆ ಕಾರ್ಯಕ್ರಮ ನೋಡಲು ಸಾಧ್ಯವಿಲ್ಲ" ಎಂದಿದ್ದಾರೆ.


Click it and Unblock the Notifications











