ಬಿಗ್ ಬಾಸ್‌ನಲ್ಲಿ ಒಬ್ಬ ವ್ಯಕ್ತಿಯ ಎಲಿಮಿನೇಷನ್‌ಗೆ ಇಡೀ ಮನೆಯೇ ಕಣ್ಣೀರು!: ಕಾರಣವಿದು
ದಿನ ಜಗಳ, ಕೋಪ, ಮನಸ್ತಾಪಗಳಿಂದಲೇ ಸುದ್ದಿಯಾಗುತ್ತಿದ್ದ ಹಿಂದಿ ಬಿಗ್ ಬಾಸ್ ಸೀಸನ್ 17 ಈ ವಾರ ಹೊಸ ವಿಷಯಕ್ಕೆ ಸುದ್ದಿಯಾಗಿದೆ. ಅದು ವೀಕೆಂಡ್ ಕಾ ವಾರ್ ಸಂಚಿಕೆಯ ಎಲಿಮಿನೇಷನ್‌ನಲ್ಲಿ ಅಪರೂಪದ ಘಟನೆ ನಡೆದಿದ್ದು, ಒಬ್ಬ ವ್ಯಕ್ತಿಯ ಸರ್ಪೈಸ್ ಎಲಿಮಿನೇಶ್‌ನಿಂದಾಗಿ ಇಡೀ ಮನೆಯೇ ಕಣ್ಣೀರು ಹಾಕಿದೆ.
ಕಲರ್ಸ್ ಹಿಂದಿಯ ಹೊಸ ಪ್ರೋಮೋದಲ್ಲಿ ಈ ಬಾರಿ ಕರಣ್ ಜೋಹರ್ ವೀಕೆಂಡ್ ಕಾ ವಾರ್ ಸಂಚಿಕೆ ನಡೆಸಿಕೊಡುತ್ತಿರುವುದು ಕಂಡು ಬಂದಿದೆ. ಪ್ರತಿ ವಾರದಂತೆ ಈ ಬಾರಿ ಸಲ್ಮಾನ್ ಖಾನ್ ಬಂದಿಲ್ಲ. ಹೀಗಾಗಿ ಕರಣ್ ಜೋಹಾರ್ ಅದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಸ್ಪರ್ಧಿಗಳ ವರ್ತನೆಗೆ ಸಕತ್ ಕ್ಲಾಸ್ ತೆಗೆದುಕೊಂಡಿರುವ ಅವರು ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಹೋಗುವಂತೆ ಸರ್ಪೈಸ್ ಎಲಿಮಿನೇಷನ್ ಮಾಡಿದ್ದಾರೆ.

ತಹೆಲ್ಕಾ ಅಲಿಯಾಸ್ ಅಕಾ ಸನ್ನಿ ಆರ್ಯ ಮನೆಯಿಂದ ಹೊರಕ್ಕೆ!
ಪ್ರೋಮೋದಲ್ಲಿ ಮನೆಯ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿರುವ ಕರಣ್ ಜೋಹಾರ್ ವಿಕ್ಕಿ ಜೈನ್‌ನಿಂದ ಪ್ರಾರಂಭಿಸಿ ಪ್ರತಿಯಿಬ್ಬರ ವರ್ತನೆಯನ್ನು ಬಯಲಿಗೆಳೆದಿದ್ದಾರೆ. ಇಷ್ಟಕ್ಕೆ ನಿಲ್ಲದ ಅವರು ತಹೆಲ್ಕಾ ಅಲಿಯಾಸ್ ಸನ್ನಿ ಆರ್ಯ ಅವರನ್ನು ಎಲಿಮಿನೇಟ್ ಮಾಡಿದ್ದಾರೆ. ಇದಕ್ಕೆ ಇತರ ಸ್ಪರ್ಧಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದು, ಕಣ್ಣಿರಕೋಡಿ ಹರಿಸಿದ್ದಾರೆ.
ಇತ್ತೀಚಿನ ಪ್ರೋಮೋದಲ್ಲಿ, ಕರಣ್ ಜೋಹರ್ ವೀಕೆಂಡ್ ಸಂಚಿಕೆಯ ಹೋಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಹೆಲ್ಕಾ ಅವರನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ಅವರು ಘೋಷಿಸಿದ್ದಾರೆ. ಹಿಂದಿನ ಸಂಚಿಕೆಯಲ್ಲಿ ತಹೆಲ್ಕಾ ಅವರು ಅಭಿಷೇಕ್ ಕುಮಾರ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದರು. ಅವರ ಕೊರಳಪಟ್ಟಿ ಹಿಡಿದಿದ್ದರು.
ತಹೆಲ್ಕಾಗಾಗಿ ಕಣ್ಣೀರ ಕೋಡಿ ಹರಿಸಿದ ಇತರ ಸ್ಪರ್ಧಿಗಳು!
ಕರಣ್ ಜೋಹಾರ್ ತಹೆಲ್ಕಾ ಅವರನ್ನು ಮನೆಯಿಂದ ಹೊರ ಹೋಗುವಂತೆ ಹೇಳುತ್ತಿದ್ದಂತೆ ಇತರ ಸ್ಪರ್ಥಿಗಳು ಭಾವುಕರಾಗಿದ್ದಾರೆ. ಪ್ರೋಮೋದಲ್ಲಿ ಅನೇಕ ಸ್ಪರ್ಧಿಗಳು ಅಳುವುದು ಮತ್ತು ಬಿಗ್ ಬಾಸ್ ಅವರಿಗೆ ಕೊನೆಯ ಅವಕಾಶವನ್ನು ನೀಡುವಂತೆ ಬೇಡಿಕೊಳ್ಳುವುದನ್ನು ಕಾಣಬಹುದು.
ಅರುಣ್ ಮಾಶೆಟ್ಟೆ ಮತ್ತು ಅಭಿಷೇಕ್ ಕುಮಾರ್ ತಮ್ಮ ಅಳಲು ತೋಡಿಕೊಂಡರು. ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಕೂಡ ಕಣ್ಣೀರು ಹಾಕುತ್ತಿರುವುದನ್ನು ನೋಡಿದರು. ಮುನ್ನಾವರ್ ಕಣ್ಣೀರನ್ನು ಮತ್ತೊಬ್ಬ ಸ್ಪರ್ಧಿ ವರೆಸುತ್ತಿದ್ದಾರೆ. ಬಿಗ್ ಬಾಸ್ ಮನೆಯ ಕ್ಯಾಮೆರಾಗಳ ಮುಂದೆ ನಿಂತು ದಯವಿಟ್ಟು ಅವರನ್ನು ಹೊರಗೆ ಕಳುಹಿಸಬೇಡಿ ಎಂದು ಬೇಡಿಕೊಂಡಿದ್ದಾರೆ. ಆದರೂ ಅವರು ಮನೆಯಿಂದ ಹೊರಹೋಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿನ ಸದಸ್ಯರೇ ಅಲ್ಲಿರುವವರನ್ನು ನಾಮಿನೇಟ್ ಮಾಡಿ ಎಲಿಮಿನೇಷನ್ ಮಾಡಿಸುತ್ತಾರೆ. ಆದರೆ, ಇದು ಸರ್ಪೈಸ್ ಎಲಿಮಿನೇಷನ್ ಆಗಿರುವ ಕಾರಣ ಯಾರಿಗೂ ಇದರ ಮಾಹಿತಿ ಇರಲಿಲ್ಲ. ದೊಡ್ಮನೆಯಲ್ಲಿನ ನಿಯಮಗಳನ್ನು ಪಾಲಿಸದಿದ್ದರೇ, ಅವುಗಳನ್ನು ಮೀರಿದರೇ ಅಂತಹವರನ್ನು ಮನೆಯಿಂದ ಆಚೆ ಹಾಕಲಾಗುತ್ತದೆ. ಅದೇ ರೀತಿ ತಹೆಲ್ಕಾ ಅವರನ್ನು ಎಲಿಮಿನೇಟ್ ಮಾಡಲಾಗಿದೆ.
ವಿಕ್ಕಿ ಜೈನ್‌ಗೆ ಕ್ಲಾಸ್ ತೆಗೆದುಕೊಂಡ ಕರಣ್ ಜೋಹಾರ್!
ಮತ್ತೊಂದು ಪ್ರೋಮೋದಲ್ಲಿ ಕರಣ್ ಜೋಹರ್ ವಿಕ್ಕಿ ಜೈನ್ ಅವರ ತಂತ್ರವನ್ನು ಎಲ್ಲರ ಎದುರು ಬಯಲು ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಅಲ್ಲಿನ ಸದಸ್ಯರನ್ನು ತನ್ನ ಕಡೆಗೆ ಇರುವಂತೆ ನೋಡಿಕೊಳ್ಳುವುದು, ಮನ್ನಾರಾ ಮತ್ತು ಅಭಿಷೇಕ್‌ನಂತಹ ಅನೇಕ ಜನರು ತನ್ನ ಜೊತೆಗೆ ಇರಬೇಕು ಎಂದು ಅಮದುಕೊಳ್ಳುವುದು ಏಕೆ ಎಂದು ಕೇಳಿದ್ದಾರೆ.
ಇದಕ್ಕೆ ಅವರು ತಮ್ಮೊಂದಿಗೆ ಇರಬೇಕಾದ ಅಗತ್ಯವಿಲ್ಲ ಎಂದು ವಿಕ್ಕಿ ಉತ್ತರಿಸಿದ್ದಾರೆ. ತಕ್ಷಣ ಮಧ್ಯ ಬಂದ ಕರಣ್ ಜೋಹಾರ್ ಇದಕ್ಕೆ ಅಂಕಿತಾ ಲೋಖಂಡೆ ಅವರನ್ನು ಸಾಕ್ಷಿಗೆ ತೆಗೆದುಕೊಂಡು ಇಬ್ಬರ ನಡುವಿನ ಮಾತುಕತೆಯನ್ನು ಮನೆಯ ಇತರ ಸದಸ್ಯರ ಮುಂದಿಟ್ಟಿದ್ದಾರೆ. ಇನ್ನು, ಕರಣ್ ಜೋಹಾರ್ ಈ ಹಿಂದೆಯೂ ಬಿಗ್ ಬಾಸ್ ಒಟಿಟಿಯನ್ನು ಹೋಸ್ಟ್ ಮಾಡಿದ್ದರು.


Click it and Unblock the Notifications











