'ಯಾವುದನ್ನು ಫ್ರೀಯಾಗಿ ತಟ್ಟೆಯಲ್ಲಿಟ್ಟು ಕೊಟ್ಟಿಲ್ಲ... ನಾನು ಕಷ್ಟಪಟ್ಟಿದ್ದೇನೆ': ಬಿಗ್ ಬಾಸ್ ವಿನ್ನರ್ ಮನದಾಳದ ಮಾತು!
ನಟ ಸಲ್ಮಾನ್ ಖಾನ್ ನಡೆಸಿಕೊಟ್ಟ ಬಿಗ್ ಬಾಸ್ ಹಿಂದಿ ಸೀಸನ್ 17 ಮುಗಿದಿದ್ದು, ಸ್ಟಾಂಡ್ ಅಪ್ ಕಾಮಿಡಿಯನ್, ಯೂಟ್ಯೂಬರ್ ಮುನಾವರ್ ಫಾರೂಕಿ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಬಾಲಿವುಡ್ ನಟಿ ಅಂಕಿತಾ ಲೋಖಂಡೆ ಅವರನ್ನೇ ಸೋಲಿಸಿ ಬಿಗ್ ಬಾಸ್ ವಿನ್ನರ್ ಎಂಬ ಪಟ್ಟ ಹೊತ್ತಿದ್ದಾರೆ.
ಆದರೆ, ಮುನಾವರ್ ಫಾರೂಕಿ ಅವರ ಗೆಲುವನ್ನು ಹಲವರು ಇದೊಂದು ಫಿಕ್ಸ್ ಆಗಿದ್ದ ಗೆಲುವು ಎಂದು ಟೀಕಿಸಿದ್ದಾರೆ. ಇದಕ್ಕೆ ಮುನಾವರ್ ಫಾರೂಕಿ ಕೆಂಡಕಾರಿದ್ದಾರೆ. ಜೊತೆಗೆ ಯಾವ ಗೆಲುವು ಕೂಡ ಆರಾಮಾಗಿ ತಟ್ಟೆಯಲ್ಲಿಟ್ಟು ಕೊಡುವುದಿಲ್ಲ. ಕಷ್ಟಪಟ್ಟರೆ ಮಾತ್ರ ಸಿಗುವುದು ಎಂದು ಹೇಳಿದ್ದು, ಟೀಕಿಸುವವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ಫಿಕ್ಸಿಂಗ್ ವಿವಾದಕ್ಕೆ ಮುನಾವರ್ ತಿರುಗೇಟು!
ಬಿಗ್ ಬಾಸ್ 17 ರ ವಿನ್ನರ್ ಮುನಾವರ್ ಫಾರುಕಿ ಅವರನ್ನು ಈ ಸೀಸನ್ ವಿಜೇತರನ್ನು 'ಫಿಕ್ಸ್ ಮಾಡಲಾಗಿದೆ' ಎಂಬ ಹೇಳಿಕೆಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ. ಇ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅವರನ್ನು 'ವಿಜೇತ' ಎಂದು ಮೊದಲೆ ಫೀಕ್ಸ್ ಮಾಡಲಾಗಿತ್ತು ಎಂಬ ಮಾತಿಗೆ ಪ್ರತಿಕ್ರಿಯಿಸುವಂತೆ ಕೇಳಿದ್ದಾರೆ.
ತಮ್ಮನ್ನು 'ಫಿಕ್ಸ್ಡ್ ವಿನ್ನರ್' ಎಂದು ಆರೋಪಿಸುತ್ತಿರುವ ಜನರು ಇಡೀ ಸೀಸನ್ ಅನ್ನು ನೋಡಬೇಕು. ನನ್ನನ್ನು ಎಷ್ಟು ಎಕ್ಸಾಮಿನ್‌ಗೆ ಒಳಪಡಿಸಿದ್ದಾರೆ ಎಂಬುದು ತಿಳಿಯುತ್ತದೆ ಎಂದಿದ್ದಾರೆ. ಜೊತೆಗೆ ಬಿಗ್ ಬಾಸ್ 17 ರ ಮೊದಲು, ಜನರು ನನ್ನ ಬಗ್ಗೆ ಇಟ್ಟುಕೊಂಡಿರುವ ಕೆಲವು ಗ್ರಹಿಕೆಗಳನ್ನು ಬದಲಾಯಿಸಬೇಕು ಎಂದುಕೊಂಡಿದ್ದೆ. ಆದರೆ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದು ನನಗೆ ತಿಳಿದಿದೆ ಎಂದು ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ 17 ರ ವಿನ್ನರ್ ಫಿಕ್ಸ್ ಆಗಿದ್ರಾ?
ಬಿಗ್ ಬಾಸ್ 17 ರ ವಿನ್ನರ್ ಫಿಕ್ಸ್ ಆಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಮುನಾವರ್ ಫಾರುಕಿ, "ಒಂದು ವೇಳೆ ಮೊದಲೇ ವಿನ್ನರ್ ಫಿಕ್ಸ್ ಆಗಿದ್ದರೇ, ಮನೆ ಒಳಗಡೆ ಅಷ್ಟೊಮದು ಕಚ್ಟ ಪಡಬೇಕಿರಲಿಲ್ಲ. ನಾನೇ ವಿನ್ನರ್ ಎಂದು ಫಿಕ್ಸ್ ಆಗಿದ್ದರೇ, ಎಲ್ಲವೂ ನನಗೆ ತಟ್ಟೆಯಲ್ಲೇ ಸಿಗುತ್ತಿತ್ತು. ಆದರೆ, ಪೂರ್ತಿ ಸೀಸನ್‌ನಲ್ಲಿ ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ" ಎಂದು ಹೇಳಿದ್ದಾರೆ.

"ಜನರ ಪ್ರೀತಿಯಿಂದ ನಾನು ಗೆದ್ದಿದ್ದೇನೆ ಎಂದು ನಾನು ಭಾವಿಸುತ್ತೇನೆ. ನನ್ನನ್ನು ಫಿಕ್ಸ್ಡ್ ವಿನ್ನರ್ ಎಂದು ಕರೆಯುವ ಜನರಿದ್ದರೇ, ನಾನು ಅವರ ಅಭಿಪ್ರಾಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಬಹುಶಃ ಬಿಗ್ ಬಾಸ್‌ಗೆ ಹೋಗುವ ಮೊದಲು ನಾನು ಕೂಡ ಜನರ ಯೋಚನೆಯನ್ನು ಬದಲಾಯಿಸಲು ಬಯಸಿದ್ದೆ, ಆದರೆ ಈಗ ನಾನು ಎಲ್ಲರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಾನು ತಿಳಿದುಕೊಂಡಿದ್ದೇನೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮುನಾವರ್ ಫಾರುಕಿಗೆ ಬಿಗ್ ಬಾಸ್ ಬರ್ತ್ಡೆ ಗಿಫ್ಟ್
ಮುನಾವರ್ ಫರುಕಿ ಬಿಗ್ ಬಾಸ್ ಗೆದ್ದಾಗಿನಿಂದ, ಮೊದಲ ರನ್ನರ್ ಅಪ್ ಆಗಿದ್ದ ನಟ ಅಭಿಷೇಕ್ ಕುಮಾರ್ ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿದ್ದರು. ಕೆಲವು ಬಿಗ್ ಬಾಸ್ ವೀಕ್ಷಕರು ಮುನಾವರ್ ಗಿಂತ ಅಭಿಷೇಕ್ ಟ್ರೋಫಿ ಗೆಲ್ಲಲು ಹೆಚ್ಚು ಅರ್ಹರು ಎಂದು ಹೇಳುತ್ತಿದ್ದಾರೆ. ಆದರೆ, ಕೆಲವು ವರದಿಗಳ ಪ್ರಕಾರ ಮುನಾವರ್ ಭಾರಿ ಮತಗಳ ಅಂತರದಲ್ಲಿ ಟ್ರೋಫಿ ಗೆದ್ದಿದ್ದಾರೆ.
ಮುನಾವರ್ ಫಾರುಕಿ ಅವರಿಗೆ ಬಿಗ್ ಬಾಸ್ 17 ಟ್ರೋಫಿ, ಹೊಸ ಕಾರು ಮತ್ತು ₹ 50 ಲಕ್ಷ ನಗದು ಬಹುಮಾನವನ್ನು ನೀಡಲಾಯಿತು. ಬಿಗ್ ಬಾಸ್ 17 ರಲ್ಲಿ ನಟ ಮನ್ನಾರಾ ಚೋಪ್ರಾ ಮೂರನೇ ಸ್ಥಾನ ಪಡೆದರು ಮತ್ತು ನಟಿ ಅಂಕಿತಾ ಲೋಖಂಡೆ ನಾಲ್ಕನೇ ಸ್ಥಾನ ಪಡೆದರು. ಹಾಗೆಯೇ ಟಾಫ್ ಫೈವ್‌ನಲ್ಲಿ ಯೂಟ್ಯೂಬರ್ ಅರುಣ್ ಮಹಾಶೆಟ್ಟಿ ಕೂಡ ಇದ್ದರು.


Click it and Unblock the Notifications











