ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಮತ್ತೊಂದು ಬಿಗ್ ಬಾಸ್ ಜೋಡಿ, ನಾಲ್ಕೇ ವರ್ಷಕ್ಕೆ ಮುರಿದು ಬಿತ್ತು ದಾಂಪತ್ಯ ?

ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆ ಆದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ. ದಾಂಪತ್ಯ ಜೀವನ ನಡೆಸುತ್ತಾ ಒಬ್ಬರನ್ನೊಬ್ಬರು..

ಹುಚ್ಚರಂತೆ ಪ್ರೀತಿಸುವ ಅನೇಕರು ಆ ನಂತರ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿ ಹೊರ ಬರುತ್ತಾರೆ. ಪರಸ್ಪರ ಮುಖ ನೋಡಲು ಕೂಡ ಥೂ ಅಸಹ್ಯ ಎಂದುಕೊಳ್ಳುತ್ತಾರೆ. ಮದುವೆ.. ಮನೆ.. ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಹಲವರು ಮಾಡುತ್ತಲೇ ಇರುತ್ತಾರೆ. ಈ ಸಾಲಿಗೆ ಈಗ ಐಶ್ವರ್ಯ ಶರ್ಮಾ ಮತ್ತು ನೀಲ್ ಭಟ್ ಸೇರಿಕೊಂಡಿದ್ದಾರೆ.

BIGG BOSS 17 SHOCKER Neil Bhatt and Aishwarya Sharma Officially File for Divorce

ಹೌದು, ಐಶ್ವರ್ಯ ಶರ್ಮಾ- ನೀಲ್ ಭಟ್.. ಹಿಂದಿ ಕಿರುತೆರೆಯ ಖ್ಯಾತ ಜೋಡಿ. ''ಘುಮ್ ಹೈ ಕಿಸಿಕೇ ಪ್ಯಾರ್ ಮೇ'' ಧಾರಾವಾಹಿಯಲ್ಲಿ ಜೊತೆಯಾಗಿ ಅಭಿನಯಿಸಿದವರು ಇಬ್ಬರು. ಧಾರಾವಾಹಿಯಲ್ಲಿ ಅಭಿನಯಿಸುತ್ತಲೇ ಪ್ರೀತಿಯಲ್ಲಿ ಬಿದ್ದ ಇಬ್ಬರು ಆ ನಂತರ ನಾಲ್ಕು ವರ್ಷಗಳ ಹಿಂದೆ ಅಂದರೆ 2021ರಲ್ಲಿ ಮದುವೆಯೂ ಆದರು.

ಇಷ್ಟೇ ಅಲ್ಲ ''ಬಿಗ್ ಬಾಸ್‌'' ಮನೆಯನ್ನು ಕೂಡ ಒಟ್ಟಿಗೆ ಇಬ್ಬರು ಪ್ರವೇಶಿಸಿದ್ದರು. ಹಿಂದಿಯ ''ಬಿಗ್ ಬಾಸ್'' ಸೀಸನ್ 17ರಲ್ಲಿ ಜೊತೆಯಾಗಿಯೇ ಭಾಗವಹಿಸಿದ್ದರು. ಹೆಚ್ಚು ಕಡಿಮೆ ಹನ್ನೊಂದು ವಾರ ''ಬಿಗ್ ಬಾಸ್'' ಮನೆಯಲ್ಲಿ ಜೊತೆಯಾಗಿಯೇ ಇದ್ದ ಇಬ್ಬರು ತಮ್ಮ ಅಭಿಮಾನಿಗಳ ಹೃದಯಕ್ಕೆ ಈ ಕಾರ್ಯಕ್ರಮದ ಮೂಲಕ ಇನ್ನೂ ಹತ್ತಿರವಾಗಿದ್ದರು. 70ನೇ ದಿನಕ್ಕೆ ಮನೆಯಿಂದ ಐಶ್ವರ್ಯ ಶರ್ಮಾ ಹೊರ ಬಂದರೆ ಆ ನಂತರ ನೀಲ್ ಭಟ್ ಮನೆಯಿಂದ ಎಲಿಮಿನೇಟ್ ಆಗಿದ್ದರು.

ಇಂಥಾ ಐಶ್ವರ್ಯ ಶರ್ಮಾ ಮತ್ತು ನೀಲ್ ಭಟ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕವಾಗಿ ಇವರಿಬ್ಬರ ನಡೆ ಮತ್ತು ನುಡಿ ಕೂಡ ಹಾಗೇ ಇದೆ. ಕಳೆದ ಹಲವು ದಿನಗಳಿಂದ ಜೊತೆಯಾಗಿ ಇಬ್ಬರು ಕಾಣಿಸಿಕೊಂಡಿಲ್ಲ. ಒಟ್ಟಿಗೆ ಇರುವ ಫೋಟೊವನ್ನು ಹಂಚಿಕೊಂಡಿಲ್ಲ.

ಇನ್ನೂ ಇದು ಸಾಲದು ಎಂಬಂತೆ ಐಶ್ವರ್ಯ ಶರ್ಮಾ ತಮ್ಮ ಗಂಡನಿಂದ ದೂರವಾಗಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಮಲಾಡ್‌ನಲ್ಲೊಂದು ಮನೆಯನ್ನು ಕೂಡ ಖರೀದಿಸಿದ್ದಾರೆ ಎಂಬ ಸುದ್ದಿ ಹಿಂದೆ ಹಬ್ಬಿತ್ತು. ಹೀಗಾಗಿಯೇ ಐಶ್ವರ್ಯ ಶರ್ಮಾ ಮತ್ತು ನೀಲ್ ಭಟ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿರುವುದು ನಿಜಾ ಎಂದು ಅನೇಕರು ಅಂದುಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಇದೀಗ ನೀಲ್ ಭಟ್ ಮತ್ತು ಐಶ್ವರ್ಯ ಶರ್ಮಾ ಇಬ್ಬರು ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ''ನ್ಯೂಸ್ 18'' ವರದಿಯನ್ನು ಮಾಡಿದೆ.

BIGG BOSS 17 SHOCKER Neil Bhatt and Aishwarya Sharma Officially File for Divorce

ಕಳೆದ ಕೆಲ ತಿಂಗಳಿಂದ ದೂರ ಇರುವ ಇಬ್ಬರು ಕೌಂಟುಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ''ನ್ಯೂಸ್ 18''ಗೆ ನೀಲ್ ಭಟ್ ಮತ್ತು ಐಶ್ವರ್ಯ ಶರ್ಮಾ ಅವರ ಆಪ್ತರು ಹೇಳಿದ್ದಾರೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿರುವ ''ನ್ಯೂಸ್ 18'' ಶೀಘ್ರದಲ್ಲಿಯೇ ನ್ಯಾಯಾಲಯದಲ್ಲಿ ಇವರ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ಹೇಳಿದೆ. ಸಮಸ್ಯೆಯ ಮೂಲ ಇನ್ನೂ ಬಹಿರಂಗವಾಗದಿದ್ದರೂ ಇಬ್ಬರು ವಿರುದ್ದ ದಿಕ್ಕಿನಲ್ಲಿ ನಡೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕೂಡ ಈ ವರದಿಯಲ್ಲಿ ಹೇಳಲಾಗಿದೆ.

ಅಂದ್ಹಾಗೇ ಕೆಲ ದಿನಗಳ ಹಿಂದೆ ತಮ್ಮ ದಾಂಪತ್ಯ ಜೀವನದ ಕುರಿತು ಚರ್ಚೆ ಕಾವೇರಿದ್ದ ಸಮಯದಲ್ಲಿ ''ಎಂಟ್ರಟೈನ್ಮೆಂಟ್ ನ್ಯೂಸ್ ಇಂಡಿಯಾ'' ಗೆ ಪ್ರತಿಕ್ರಿಯೆ ನೀಡಿದ್ದ ಐಶ್ವರ್ಯ ಶರ್ಮಾ, ಸಂಸಾರ ಅಂದ ಮೇಲೆ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತಾವೆ, ಎಲ್ಲರಂತೆ ನಮ್ಮ ಸಂಸಾರದಲ್ಲಿ ಕೂಡ ಇವೆ ಎಂದು ಹೇಳಿದ್ದರು. ಹಾಗಂಥ ವಿಚ್ಛೇದನ ಪಡೆಯುವಷ್ಟು ನಮ್ಮ ನಡುವೆ ಜಗಳಗಳಾಗಿಲ್ಲ ಎಂದು ಹೇಳಿದ್ದ ಐಶ್ವರ್ಯ ಶರ್ಮಾ, ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಂಡಿಲ್ಲ ಎಂದರೆ ನಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಅರ್ಥ ಅಲ್ಲ ಎಂದು ಕೂಡ ಹೇಳಿದ್ದರು.

ಆದರೆ ಈಗ ನೋಡಿದರೆ ವಿಚ್ಛೇದನದ ಸುದ್ದಿ ನೂರಕ್ಕೆ ನೂರು ಸತ್ಯ ಎಂದು ''ನ್ಯೂಸ್ 18'' ವರದಿ ಮಾಡಿದೆ. ತಮ್ಮ ಕುರಿತ ಈ ವರದಿಗೆ ಇಬ್ಬರು ಪ್ರತಿಕ್ರಿಯೆ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
The Bigg Boss 17 couple is parting ways. Read the full report on why Neil Bhatt and Aishwarya Sharma are reportedly filing for divorce just four years after their wedding
Read more about: divorce biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X