Bigg Boss 17: ಫಿನಾಲೆ ವಾರದಲ್ಲಿ ಎಲಿಮಿನೇಟ್ ಆದ ಪತಿ; ಬಿಕ್ಕಿಬಿಕ್ಕಿ ಅತ್ತ ನಟಿ ಅಂಕಿತಾ ಲೋಖಂಡೆ

ಬಿಗ್ ಬಾಸ್ ಸೀಸನ್ 17 ಫಿನಾಲೆ ಹಂತಕ್ಕೆ ಬಂದಿದೆ. ಅನಿರೀಕ್ಷಿತ ಸನ್ನಿವೇಶಗಳು, ವಾದಗಳು, ಪಕ್ಷಪಾತ, ಆಘಾತಕಾರಿ ವೈಲ್ಡ್ ಕಾರ್ಡ್ ಎಂಟ್ರಿ, ಗಂಡ ಹೆಂಡತಿ ಜಗಳ ಸೇರಿ ಸಕತ್ ಮನರಂಜನೆ ಮತ್ತು ಇರಿಟೇಷನ್ ನೀಡಿದ ಸೀಸನ್ ಇದು. ಈಗ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದು, ಆರು ಸ್ಪರ್ಧಿಗಳು ಇದ್ದರು. ಅದರಲ್ಲಿ ಮತ್ತೊಬ್ಬರು ಎಲಿಮಿನೇಟ್ ಆಗಿದ್ದಾರೆ.

ಅಂಕಿತಾ ಲೋಖಂಡೆ, ವಿಕ್ಕಿ ಜೈನ್, ಅರುಣ್ ಮಾಶೆಟ್ಟೆ, ಅಭಿಷೇಕ್ ಕುಮಾರ್, ಮುನಾವರ್ ಫಾರುಕಿ ಮತ್ತು ಮನ್ನಾರಾ ಚೋಪ್ರಾ ಫಿನಾಲೆ ಹಂತಕ್ಕೆ ತಲುಪಿದ್ದರು. ಇದರಲ್ಲಿ ಟಾಫ್ ಫೈವ್‌ಗೆ ಬರಲಿದ್ದಾರೆ ಎಂದುಕೊಂಡಿದ್ದ ವಿಕ್ಕಿ ಜೈನ್ ಅವರನ್ನು ಮನೆಯಿಂದ ಹೊರಹಾಕಿ ಬಿಗ್ ಬಾಸ್ ಸಕತ್ ಟ್ವಿಸ್ಟ್ ನೀಡಿದೆ. ಇದು ಅಂಕಿತಾ ಲೋಖಂಡೆ ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ.

Bigg Boss 17: Vicky Jain eliminated in finale week, Ankita Lokhande breaks down

ಗಂಡ ಔಟ್: ಹೆಂಡತಿಗೆ ಶಾಕ್ ನೀಡಿದ ಬಿಗ್ ಬಾಸ್!

ಬಿಗ್ ಬಾಸ್ ಮನೆಗೆ ತಮ್ಮ ಪತ್ನಿ, ನಟಿ ಅಂಕಿತಾ ಲೋಖಂಡೆ ಅವರ ಜೊತೆಗೆ ಕಾಲಿಟ್ಟಿದ್ದ ವಿಕ್ಕಿ ಜೈನ್ 100 ದಿನಗಳನ್ನು ಕಳೆದ ನಂತರ ಮಿಡ್ ವೀಕ್ ಎಲಿಮಿನೇಷನ್‌ಗೆ ಒಳಗಾಗಿದ್ದಾರೆ. ಸಲ್ಮಾನ್ ಶಾನ್ ನಡೆಸಿಕೊಡುವ ಶೋನಲ್ಲಿ ವಾರದ ಫಿನಾಲೆ ವಾರದಲ್ಲಿ ವಾರದ ಮಧ್ಯದಲ್ಲೇ ಒಬ್ಬರನ್ನು ಎಲಿಮಿನೇಟ್ ಮಾಡಲಾಗುವುದು ಎಂದು ತಿಳಿಸಿತ್ತು. ಆದರೆ, ಟಾಪ್ ಫೈವ್‌ನಲ್ಲಿ ಬರುತ್ತಾರೆ ಎನ್ನಲಗಿದ್ದ ವಿಕ್ಕಿ ಜೈನ್ ಅವರನ್ನು ಔಟ್ ಮಾಡಿ ಶಾಕ್ ನೀಡಿದೆ.

ಅಂಕಿತಾ ಲೋಖಂಡೆ, ವಿಕ್ಕಿ ಮತ್ತು ಅರುಣ್ ಮಾಶೆಟ್ಟೆ ಅವರಿಗೆ ಚೀಟಿಗಳನ್ನು ತೆರೆಯಲು ಮತ್ತು ಅವರಲ್ಲಿ ಯಾರು ಫೈನಲ್‌ನಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಬಿಗ್ ಬಾಸ್ ಟಾಸ್ಕ್ ನೀಡಿತ್ತು. ಅವರೆಲ್ಲರೂ ತಮ್ಮ ಚೀಟಿ‌ಗಳನ್ನು ತೆರೆಯಲು ಪ್ರಾರಂಭಿಸಿದಾಗ, ವಿಕ್ಕಿ ತನ್ನ ಚೀಟಿಯನ್ನು ಜೋರಾಗಿ ಓದಿದ್ದಾರೆ. ಅದರಲ್ಲಿ ಎಲಿಮಿನೇಷನ್ ಎಂದಿತ್ತು. ಇನ್ನು, ಅಂಕಿತಾ ಲೋಖಂಡೆ ಮತ್ತು ಅರುಣ್ ಫೈನಲಿಸ್ಟ್ ಆಗಿದ್ದಾರೆ.

Bigg Boss 17: Vicky Jain eliminated in finale week, Ankita Lokhande breaks down

ಬಿಕ್ಕಿ ಬಿಕ್ಕಿ ಅತ್ತ ನಟಿ ಅಂಕಿತಾ ಲೋಖಂಡೆ

ವಿಕ್ಕಿ ಜೈನ್ ಎಲಿಮಿನೇಟ್ ಆಗುತ್ತಿದ್ದಂತೆ, ಅಂಕಿತಾ ಕಾರ್ಯಕ್ರಮದಲ್ಲಿ ಜೋರಾಗಿ ಅತ್ತಿದ್ದಾರೆ. ಎಲಿಮಿನೇಟ್ ಆಗಿ ಹೊರಟ ತಮ್ಮ ಗಂಡನನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಹೋಗಬೇಡಿ ಎಂದು ಕೇಳಿಕೊಂಡಿದ್ದಾರೆ. ನನ್ನ ಪಾಲಿಗೆ ನೀವೆ ವಿನ್ನರ್. ನೀವು ತುಂಬಾ ಚೆನ್ನಾಘಿ ಆಟ ಆಡಿದ್ದಿರಿ. ನಾನು ನಿಮ್ಮ ಹೆಂಡತಿಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದಿದ್ದಾರೆ. ಆತ ಎಷ್ಟೇ ಸಮಾಧಾನ ಮಾಡಿದರೂ ಕಣ್ಣೀರು ಹಾಕುತ್ತಾ ಕುಸಿದಿದ್ದಾರೆ. ಜೊತೆಗೆ ಗಟ್ಟಿಯಾಗಿ ಅಪ್ಪಿಕೊಂಡು ಸಮಾಧಾನ ಹೇಳಿದ್ದಾರೆ.

ಇನ್ನು ಎರಡು ದಿನಗಳು ಅಷ್ಟೇ ಮುಗಿಯುತ್ತದೆ. ನೀನೇ ಬರುತ್ತಿಯ ಬಿಡು ಎಂದರೂ ಕೂಡ ಅಂಕಿತಾ ಲೋಖಂಡೆ ಯಾರ ಮಾತು ಕೇಳಿಲ್ಲ. ಈ ವೇಳೆ ವಿಕ್ಕಿ ಜೈನ್ ಆಕೆಯ ಕಾಳಜಿ ವಹಿಸುವಂತೆ ಮನೆಯ ಇತರ ಸದಸ್ಯರಿಗೆ ಹೇಳಿದ್ದಾರೆ. ಜೊತೆಗೆ ಅಂಕಿತಾ ಅವರ ಹಣೆಗೆ ಮುತ್ತಿಟ್ಟು ಎಲ್ಲರಿಗೂ ಬಾಯ್ ಮಾಡಿ ಮನೆಯಿಂದ ಹೊರ ಹೋಗಿದ್ದಾರೆ.

ಅಂಕಿತಾ ಕಣ್ಣೀರಿಗೆ ನೆಟ್ಟಿಗರ ಪ್ರತಿಕ್ರಿಯೆ

ಇತ್ತೀಚಿನ ಎಲಿಮಿನೇಟ್ ಎಪಿಸೋಡ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರು ಅಂಕಿತಾ ಲೋಖಂಡೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬರಿ ನಾಟಕ ಎಂದು ಟೀಕಿಸಿರುವ ಅವರು, ವಿಕ್ಕಿ ಜೈನ್ ತುಂಬಾ ಚೆನ್ನಾಗಿ ಆಟವಾಡಿದ್ದಾರೆ ಎಂದಿದ್ದಾರೆ. ಅಂಕಿತಾ ತುಂಬಾ ಫೇಕ್ ಆಗಿ ಕಾಣುತ್ತಾರೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು, ಇಬ್ಬರು ಮನೆಗೆ ಹೋದ ಮೇಲೆ ಹೇಗೆ ಒಟ್ಟಿಗೆ ಬದುಕುತ್ತಾರೋ..? ಎಂದು ಪ್ರಶ್ನೆ ಮಾಡಿದ್ದಾರೆ.

More from Filmibeat

English summary
Vicky Jain eliminated from Bigg Boss 17, Ankita Lokhande breaks down.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X