Bigg boss: ದೊಡ್ಮನೆಯೊಳಗೆ ಹೆಂಡತಿ, ಹೊರಗಡೆ ಮೂವರು ಹುಡುಗಿಯರ ಜೊತೆ ಗಂಡ ಪಾರ್ಟಿ

ಬಿಗ್‌ಬಾಸ್ ಕನ್ನಡ ಸೀಸನ್‌-10ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಫಿನಾಲೆ ಎಪಿಸೋಡ್ ಚಿತ್ರೀಕರಣ ಕೂಡ ನಡೆದಿದ್ದು ಯಾರು ವಿನ್ನರ್, ಯಾರು ರನ್ನರ್ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಅತ್ತ ಹಿಂದಿ ಬಿಗ್‌ಬಾಸ್ ಶೋ 17 ಗ್ರ್ಯಾಂಡ್‌ ಫಿನಾಲೆ ಕೂಡ ಇಂದೇ(ಜನವರಿ 28) ನಡೀತಿದೆ.

ಹಿಂದಿ ಬಿಗ್‌ಬಾಸ್ ಸೀಸನ್ 17 ಶೋಗೆ ವಿಕ್ಕಿ ಜೈನ್ ಹಾಗೂ ಅಂಕಿತಾ ಲೋಖಂಡೆ ದಂಪತಿ ಕೂಡ ಸ್ಪರ್ಧಿಗಳಾಗಿ ಹೋಗಿದ್ದಾರೆ. ಕೆಲ ದಿನಗಳ ಹಿಂದೆ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ಕಿರಿಕ್ ಮಾಡಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಬಳಿಕ ಇಬ್ಬರೂ ಬಹಳ ಆತ್ಮೀಯವಾಗಿ ಕಂಡಿದ್ದರು. ಫಿನಾಲೆಗೆ 4 ದಿನಗಳು ಬಾಕಿ ಇರುವಾಗ ನಟ ವಿಕ್ಕಿ ಜೈನ್ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ಪತ್ನಿ ಅಂಕಿತಾ ಫಿನಾಲೆ ಹಂತಕ್ಕೇರಿದ್ದಾರೆ.

Bigg Boss 17: Vicky Jain parties with Ayesha, Isha Malviya after get eliminated

ಅಂಕಿತಾ ಲೋಖಂಡೆ ಜೊತೆಗೆ ಅಭಿಷೇಕ್ ಕುಮಾರ್, ಮುನಾವರ್ ಫರುಕಿ, ಅರುಣ್ ಮಾಶೆಟ್ಟೆ ಮತ್ತು ಮನ್ನಾರಾ ಚೋಪ್ರಾ ಹಿಂದಿ ಬಿಗ್‌ಬಾಸ್ ಸೀಸನ್ 17 ಫಿನಾಲೆ ತಲುಪಿದ್ದಾರೆ. ಬೇರೆ ಭಾಷೆಯ ಬಿಗ್‌ಬಾಸ್ ಶೋಗಳಿಗೆ ಹೋಲಿಸಿದರೆ ಹಿಂದಿ ವರ್ಷನ್ ಕೊಂಚ ಅತಿರೇಕ ಅನಿಸುತ್ತದೆ. ಅದಕ್ಕೆ ತಕ್ಕಂತೆ ಮಾಜಿ ಪ್ರೇಮಿಗಳನ್ನು, ಗಂಡ- ಹೆಂಡತಿಯನ್ನು ಸ್ಪರ್ಧಿಗಳಾಗಿ ಮನೆಯೊಳಗೆ ಕಳುಹಿಸಿ ಸುತ್ತಾ ಕ್ಯಾಮರಾ ಇಟ್ಟು ಮನರಂಜನೆ ಉಣಬಡಿಸುವ ಪ್ರಯತ್ನ ಮಾಡಲಾಗುತ್ತದೆ.

ಈ ಬಾರಿ ಅದೇ ರೀತಿ ಕಿರುತೆರೆ ಕಲಾವಿದರಾದ ವಿಕ್ಕಿ ಜೈನ್ ಹಾಗೂ ಅಂಕಿತಾ ಲೋಖಂಡೆ ಹೋಗಿದ್ದರು. ಅಂಕಿತಾ 100 ದಿನಗಳ ಕಾಲ ಯಶಸ್ವಿಯಾಗಿ ಮನೆಯಲ್ಲಿದ್ದು ಗಮನ ಸೆಳೆದಿದ್ದಾರೆ. 4 ದಿನಗಳ ಹಿಂದೆ ವಿಕ್ಕಿ ಹೊರ ಬಂದಿದ್ದರು. ಇಬ್ಬರು ಮನೆಯೊಳಗೆ ಜಗಳವಾಗಿದ್ದು ಭಾರೀ ಸುದ್ದಿಯಾಗಿತ್ತು. ಇದು ಹೊರಗಡೆ ಎರಡೂ ಫ್ಯಾಮಿಲಿಗಳ ನಡುವಿನ ವಾಗ್ಯುದ್ದಕ್ಕೂ ಕಾರಣವಾಗಿತ್ತು. ವಿಕ್ಕಿ ಮಿಡ್ ವೀಕ್ ಎಲಿಮಿನೇಷನ್ ಆಗಿ ಹೊರ ಬಂದಿದ್ದರು.

ಇನ್ನು ಫಿನಾಲೆಗೆ 3 ದಿನ ಬಾಕಿ ಇರುವಾಗ ನಿರ್ದೇಶಕ ರೋಹಿತ್ ಶೆಟ್ಟಿ ಬಿಗ್‌ಬಾಸ್ ಮನೆಯೊಳಗೆ ಹೋಗಿದ್ದರು. ಸ್ಪರ್ಧಿಗಳ ಜೊತೆ ಮಾತನಾಡಿ ಸಮಯ ಕಳೆದಿದ್ದರು. ಅಂಕಿತಾ ಜೊತೆ ಮಾತನಾಡುತ್ತಾ "ವಿಕ್ಕಿ ನಿನ್ನ ಬಗ್ಗೆ ಗಮನ ಹರಿಸುತ್ತಿಲ್ಲ, ನೀನು ಎಷ್ಟೇ ನೋವಿನಲ್ಲಿ ಇದ್ದರೂ ತಿರುಗಿ ನೋಡಲ್ಲ ಎನ್ನುತ್ತಿದ್ದೆ. ಒಂದು ವೇಳೆ ವಿಕ್ಕಿ ಇಲ್ಲದಿದ್ದರೆ ನಿನ್ನ ಆಟ ಹೇಗಿರುತ್ತಿತ್ತು?" ಎಂದು ಕೇಳಿದ್ದಾರೆ.

Bigg Boss 17: Vicky Jain parties with Ayesha, Isha Malviya after get eliminated

ರೋಹಿತ್ ಮಾತಿಗೆ ಅಂಕಿತಾ "ಆತ ಇಲ್ಲದಿದ್ದರೆ ಇನ್ನು ಚೆನ್ನಾಗಿ ಆಡುತ್ತಿದ್ದೆ. ಸರಿಯಾದ ನಿರ್ಣೈಗಳನ್ನು ತೆಗೆದುಕೊಳ್ಳುತ್ತಿದ್ದೆ" ಎಂದಿದ್ದಾರೆ. ಅದಕ್ಕೆ ರೋಹಿತ್, ವಿಕ್ಕಿ ಕೂಡ ಹೊರಗೆ ಇದೇ ಹೇಳುತ್ತಿದ್ದಾನೆ" ಎಂದಿದ್ದು ಕೂಡಲೇ ಅಂಕಿತಾ, "ನಾನು ಆತನ ಆಟಕ್ಕೆ ಅಡ್ಡಿಪಡಿಸಲಿಲ್ಲ. ನಿನ್ನೆ ನನ್ನ ಬಿಗ್‌ಬಾಸ್ ಜರ್ನಿ ನೋಡಿದೆ. ನಾನು ವಿಕ್ಕಿ ಬಹಳ ಸಲ ಜಗಳ ಮಾಡಿದ್ದೇವೆ, ಆದರೂ ಯಾವತ್ತಿಗೂ ಆತ ನನ್ನ ಹೀರೋ" ಎಂದಿದ್ದಾರೆ.

ಬಳಿಕ ಬಿಗ್‌ಬಾಸ್ ಆದೇಶದಂತೆ ಅಂಕಿತಾಗೆ ನಿರ್ದೇಶಕ ರೋಹಿತ್ ಶೆಟ್ಟಿ ಒಂದು ಸುದ್ದಿ ಹೇಳಿದ್ದಾರೆ. "ವಿಕ್ಕಿ ಈಗಾಗಲೇ 2 ಬಾರಿ ಪಾರ್ಟಿ ಮಾಡಿದ್ದಾನೆ. ಒಂದು ಪಾರ್ಟಿಯಲ್ಲಿ ಸನಾ, ಆಯೇಷಾ ಜೊತೆಗೆ ಮತ್ತೊಬ್ಬ ಹುಡುಗಿ ಕೂಡ ಇದ್ದಳು. ಆಕೆ ಯಾರು ನನಗೆ ಗೊತ್ತಿಲ್ಲ, ಆದರೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈಗ 3ನೇ ಬಾರಿ ಪಾರ್ಟಿ ಮಾಡುತ್ತಿದ್ದಾರೆ" ಎಂದಿದ್ದಾರೆ. ಇದಕ್ಕೆ ನಗುತ್ತಾ ಅಂಕಿತಾ, ಹೊರ ಬಂದಮೇಲೆ ಸರಿಯಾಗಿ ಒದೆ ಬೀಳುತ್ತದೆ ಎಂದಿದ್ದಾರೆ.

ಅಂದಹಾಗೆ ಸನಾ ಹಾಗೂ ಆಯೇಷಾ ಈ ಬಾರಿ ಬಿಗ್‌ಬಾಸ್ ಸ್ಪರ್ಧಿಗಳಾಗಿದ್ದರು. ವಿಕ್ಕಿ ಹೊರಗೆ ಬಂದ ಮೇಲೆ ಎಲ್ಲರೂ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

More from Filmibeat

English summary
After Bigg Boss 17 Eviction, Vicky Jain Party Photo goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X