ಬಿಗ್ ಬಾಸ್ 17 : ಇತ್ತ ಗಂಡ ಹೆಂಡತಿ ಜಗಳ ನಡೆಯುತ್ತಲೇ ಇದೆ... ಅದರ ಮಧ್ಯೆ ಮತ್ತೊಬ್ಬರ 'ಎಕ್ಸ್ ಗರ್ಲ್‌ಫ್ರೆಂಡ್' ಎಂಟ್ರಿ!

ಹಿಂದಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಗಳ ಮನಸ್ಥಿತಿಯೊಂದಿಗೆ ಆಟವಾಡಲಾಗುತ್ತಿದೆ. ಸಲ್ಮಾನ್ ಖಾನ್ ನಡೆಸಿಕೊಡುವ ಈ ಶೋನಲ್ಲಿ ಈಗ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಯನ್ನು ಪರಿಚಯಿಸುವ ಮೂಲಕ ಮತ್ತೊಬ್ಬ ಸ್ಪರ್ಧಿಯ ಬುಡ ಅಲ್ಲಾಡಿಸಲು ವೇದಿಕೆ ಸಿದ್ಧವಾಗಿದೆ. ಕಾಮಿಡಿಯನ್ ಮುನಾವರ್ ಫಾರುಕಿ ಅವರ 'ಮಾಜಿ ಗೆಳತಿ' ಎಂದು ಹೇಳಿಕೊಂಡಿರುವ ಆಯೇಶಾ ಖಾನ್ ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ.

ಆಯಶಾ ಖಾನ್ ಅವರು ಈಗಾಗಲೇ ತಮ್ಮ ಸಂದರ್ಶನಗಳಲ್ಲಿ ಸ್ಯಾಂಡ್‌ಅಪ್ ಕಾಮಿಡಿಯನ್ ಮುನಾವರ್ ಫಾರುಕಿ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ಸಕತ್ ಹೈಪ್ ಕೂಡ ಕ್ರಿಯೇಟ್ ಆಗಿದೆ. ಕಲರ್ಸ್ ಬಿಟ್ಟಿರುವ ಹೊಸ ಪ್ರೋಮೋ ನೆಟ್ಟಿಗರ ಗಮನ ಸೆಳೆದಿದೆ.

Bigg Boss 17 Wildcard: Munawar Faruquis EX Girlfriend Ayesha Khan make a wildcard entry

ಬಿಗ್ ಬಾಸ್ 17 ರ ಹೊಸ ವೈಲ್ಡ್ ಕಾರ್ಡ್ ಎಂಟ್ರಿ ಆಯೇಶಾ ಖಾನ್

ಬಿಗ್ ಬಾಸ್ ಹಿಂದಿಯ ಸೀಸನ್ 17 ಹಲವು ಹೊಸ ಹೊಸ ಅವತಾರಗಳಿಗೆ ಸಾಕ್ಷಿಯಾಗುತ್ತಿದೆ. ಗಂಡ ಹೆಂಡತಿಯನ್ನು ಮನೆಗೆ ಬಿಟ್ಟು ಅವರ ನಡುವೆ ಸರಸ, ವಿರಸಗಳ ಮೂಲಕ ಜನರನ್ನು ಹಿಡಿದಿಡುತ್ತಿರುವ ರಿಯಾಲಿಟಿ ಶೋನಲ್ಲಿ ಪ್ರೇಮಿಗಳು ಇದ್ದಾರೆ. ಈಗ ಮತ್ತೆ ಬಿಗ್ ಬಾಸ್ ಮನೆಗೆ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಯ ಪ್ರವೇಶವಾಗುತ್ತಿದೆ. ಅದು ಆಯೇಶಾ ಖಾನ್ ಈ ಕಾರ್ಯಕ್ರಮಕ್ಕೆ ಬರುತ್ತಿರುವ ನಾಲ್ಕನೇ ವೈಲ್ಡ್ ಕಾರ್ಡ್ ಸ್ಪರ್ಧಿ.

ಮುನಾವರ್ ಫಾರುಕಿ ಬಗ್ಗೆ ಈಗಾಗಲೇ ಹಲವು ಸಂದರ್ಶನಗಳಲ್ಲಿ ಮಾತನಾಡಿರುವ ಅವರು, ತಾನು ಅವರ ಮಾಜಿ ಗರ್ಲ್‌ಫ್ರೆಂಡ್ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಮುನಾವರ್ ಮುಖವಾಡ ಕಳಚುತ್ತೇನೆ ಎಂದು ಬಹಿರಂಗವಾಹಿ ಸವಾಲು ಹಾಕಿದ್ದಾರೆ. ಆತ ತನ್ನ ಬಳಿ ಕ್ಷಮೆ ಕೇಳಬೇಕು. ಅದೇ ಕಾರಣಕ್ಕೆ ನಾನು ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ ಎಂದಿದ್ದಾರೆ.

Bigg Boss 17 Wildcard: Munawar Faruquis EX Girlfriend Ayesha Khan make a wildcard entry

ಮುನಾವರ್ ಫಾರುಕಿ ಕ್ಷಮೆ ಕೇಳಬೇಕು: ಆಯೇಶಾ ಖಾನ್

ಮುನಾವರ್ ಫಾರುಕಿಯ ಮಾಜಿ ಗೆಳತಿ ಎಂದು ಹೇಳಿಕೊಳ್ಳುವ ಆಯೇಷಾ ಖಾನ್ ಅವರಿಂದ ಕ್ಷಮಾಪಣೆ ಬಯಸಿದ್ದಾರೆ. ಮುನಾವರ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಬಿಬಿ 17 ಮನೆಗೆ ಪ್ರವೇಶಿಸುವ ಮೊದಲು ಆತ ತನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾಗಿ ಹೇಳಿದ್ದರು ಎಮದು ಆರೋಪಿಸಿದ್ದಾರೆ.

"ನೀವೆಲ್ಲರೂ ನನ್ನನ್ನು ಆಯೇಶಾ ಖಾನ್ ಎಂದು ತಿಳಿದಿದ್ದೀರಿ. ಈ ಮನೆಯಲ್ಲಿ ಒಬ್ಬ ಸ್ಪರ್ಧಿ ಇದ್ದಾರೆ. ಮುನಾವರ್ ಫಾರುಕಿ. ಅವರೊಂದಿಗೆ ನನ್ನ 'ಹಿಸ್ಟ್ಟಿ' ಇದೆ. ಅವರು ಕಾಣಿಸುತ್ತಿದ್ದಾರಲ್ಲ ಹಾಗೆ ಇಲ್ಲ. ಅವರ ನಿಜ ರೂಪ ಹೊರಗೆ ತರುತ್ತೇನೆ. ನೀವು ಈ ಶೋಗೆ ಹೋಗುವ ಮೊದಲು ಹೇಳುತ್ತಿದ್ದರಲ್ಲ, 'ಐ ಲವ್ ಯು.. ನಿಮ್ಮಂತಹ ಹುಡುಗಿ ಜೊತೆಗೆ ಮದುವೆಯಾಗಬೇಕು' ಎಂದೆಲ್ಲಾ ಹೇಳಿದ್ದಿರಿ....ಅದೆಲ್ಲಾ ಸುಳ್ಳೇ...? ಅವರು ಎಲ್ಲಾ ಹುಡುಗಿಯರಿಗೂ ಅಪ್ರೋಚ್ ಮಾಡುವುದು ಹೀಗೆ" ಎಂದಿದ್ದಾರೆ.

ತಾನು ಬಿಗ್ ಬಾಸ್ ಮನೆಗೆ ಹೋಗುತ್ತಿರುವುದಕ್ಕೆ ಪ್ರಮುಖ ಕಾರಣ ಅವರಿಂದ ಕ್ಷಮೆಯಾಚನೆ ಬೇಕು ಎಂಬುದು ಎಂದು ಆಯೇಶಾ ಖಾನ್ ತಮ್ಮ ಬಿಗ್ ಬಾಸ್ 17 ರ ಪರಿಚಯ ಪ್ರೋಮೋದಲ್ಲಿ ಹೇಳಿದ್ದಾರೆ.ಇ ನ್ನು, ಬಿಗ್ ಬಾಸ್ 9 ನೇ ವಾರದಲ್ಲಿ ವಿಕ್ಕಿ ಜೈನ್, ಖಾನ್ಜಾದಿ, ನೀಲ್ ಭಟ್ ಮತ್ತು ಅಭಿಷೇಕ್ ಕುಮಾರ್ ಅವರನ್ನು ನಾಮಿನೇಟ್ ಮಾಡಲಾಗಿದೆ.

More from Filmibeat

English summary
Munawar Faruqui's 'EX Girlfriend' Ayesha Khan enters Bigg Boss 17.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X