Bigg Boss 17 Winner: ಬಿಗ್‌ಬಾಸ್ 17 ಟ್ರೋಫಿ ಎತ್ತಿ ಹಿಡಿದ ಮುನಾವರ್ ಫರುಕಿ, ಸಿಕ್ತು ಭರ್ಜರಿ ಬಹುಮಾನ

ಬಿಗ್‌ಬಾಸ್ ಕನ್ನಡ ಸೀಸನ್ 10ಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಕಾರ್ತಿಕ್ ಮಹೇಶ್ ಟ್ರೋಫಿ ಎತ್ತಿ ಹಿಡಿದರು. ಅದೇ ಸಮಯದಲ್ಲಿ ಅತ್ತ ಹಿಂದಿ ಬಿಗ್‌ಬಾಸ್ ಸೀಸನ್ 17 ಸಹ ಮುಗಿದಿದೆ. ಮುನಾವರ್ ಫರುಕಿ ವಿಜೇತರಾಗಿ ಹೊರಹೊಮ್ಮಿದರು. ಸಲ್ಮಾನ್ ಖಾನ್ ಈ ಬಾರಿಯೂ ಶೋ ನಿರೂಪಣೆ ಮಾಡಿ ಗಮನ ಸೆಳೆದರು.

ಮುನಾವರ್ ಫರುಕಿ, ಅಂಕಿತಾ ಲೋಖಂಡೆ, ಮನ್ನಾರಾ ಚೋಪ್ರಾ, ಅಭಿಷೇಕ್ ಕುಮಾರ್ ಮತ್ತು ಅರುಣ್ ಮಾಶೆಟ್ಟೆ ಈ ಬಾರಿ ಫೈನಲಿಸ್ಟ್‌ಗಳಾಗಿ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ 17 ಅಕ್ಟೋಬರ್ 16 ರಿಂದ ಆರಂಭವಾಗಿತ್ತು. 5 ಜನ ಫೈನಲಿಸ್ಟ್‌ಗಳ ಜೊತೆಗೆ ಐಶ್ವರ್ಯಾ ಶರ್ಮಾ, ನೀಲ್ ಭಟ್, ಇಶಾ ಮಾಳವಿಯಾ, ಸನಾ ಖಾನ್, ರಿಂಕು ಧವನ್, ಸನ್ನಿ ಆರ್ಯ, ಖಂಜಾದಿ, ಸೋನಿಯಾ ಬನ್ಸಾಲ್, ಅನುರಾಗ್ ದೋಭಾಲ್, ಜಿಗ್ನಾ ವೋರಾ, ನಾವಿದ್ ಸೋಲೆ ಹೀಗೆ ಹಲವರು ಈ ಬಾರಿ ಮನೆ ಸೇರಿದ್ದರು. ದಕ್ಷಿಣ ಕೊರಿಯಾದ ಗಾಯಕಿ ಅವೂರಾ ಮತ್ತು ಟಿವಿ ನಟರಾದ ಸಮರ್ಥ್ ಜುರೆಲ್ ಮತ್ತು ಆಯೇಶಾ ಖಾನ್ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಶೋ ಎಂಟ್ರಿ ಕೊಟ್ಟಿದ್ದರು.

Bigg Boss 17 Winner: Munawar Faruqui Lifts Trophy

ವೈಲ್ಡ್‌ ಕಾರ್ಡ್ ಎಂಟ್ರಿ ಸೇರಿ ಈ ಬಾರಿ 21 ಜನ ಹಿಂದಿ ಬಿಗ್‌ಬಾಸ್ ಟ್ರೋಫಿಗಾಗಿ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಮುನಾವರ್ ಬಿಗ್ ಬಾಸ್ 17 ರ ವಿಜೇತರಾಗಿದ್ದಾರೆ. ಬಿಗ್‌ಬಾಸ್ 17 ಟ್ರೋಫಿ 17 ಟ್ರೋಫಿ ಜೊತೆಗೆ 50 ಲಕ್ಷ ಬಹುಮಾನದ ಹಣ ಮತ್ತು ಹೊಸ ಹುಂಡೈ ಕ್ರೆಟಾ ಕಾರು ಬಹುಮಾನವಾಗಿ ಪಡೆದರು. ಸತತ 6 ಗಂಟೆಗಳ ಕಾಲ ಮೂಡಿ ಬಂದ ಗ್ರ್ಯಾಂಡ್ ಫಿನಾಲೆ ಶೋ ಹಲವು ವಿಶೇಷತೆಗಳಿಂದ ಕೂಡಿತ್ತು.

ನಟ ಸುನಿಲ್ ಶೆಟ್ಟಿ ಹಾಗೂ ನಟಿ ಮಾಧುರಿ ದೀಕ್ಷಿತ್ ಕೂಡ ವೇದಿಕೆಗೆ ಬಂದಿದ್ದರು. ತಮ್ಮ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ದಿವಾನೆ' ಪ್ರಚಾರಕ್ಕಾಗಿ ಸಲ್ಲು ಜೊತೆ ವೇದಿಕೆ ಹಂಚಿಕೊಂಡರು. ಇನ್ನು 'ಸೈತಾನ್' ಸಿನಿಮಾ ಪ್ರಚಾರಕ್ಕಾಗಿ ಅಜಯ್ ದೇವಗನ್ ಹಾಗೂ ಆರ್. ಮಾಧವನ್ ಸಹ ಗ್ರ್ಯಾಂಡ್ ಫಿನಾಲೆಯಲ್ಲಿ ಹಾಜರಾಗಿದ್ದರು.

ಸ್ಯಾಂಡಪ್ ಕಾಮಡಿಯನ್, ರ್ಯಾಪರ್ ಹಾಗೂ ಗಾಯಕರಾಗಿರುವ ಮುನಾವರ್ ಫರುಕಿ ಮೊದಲ ದಿನದಿಂದಲೂ ಬಿಗ್‌ಬಾಸ್ ಶೋನಲ್ಲಿ ಗಮನ ಸೆಳೆಯುತ್ತಾ ಬಂದಿದ್ದರು. 4 ವರ್ಷಗಳ ಹಿಂದೆ ದಾವೂದ್ ಯಮರಾಜ್ ಅಂಡ್ ಔರತ್ ಎನ್ನುವ ಸ್ಯಾಂಡಪ್ ಕಾಮಿಡಿ ವಿಡಿಯೋದಿಂದ ಫರುಕಿ ಸದ್ದು ಮಾಡಿದರು. ಬಳಿಕ 'ಘೋಸ್ಟ್ ಸ್ಟೋರಿ' ಮತ್ತೊಂದು ವಿಡಿಯೋದಿಂದ ಗಮನ ಸೆಳೆದರು.

ಎರಡು ವರ್ಷಗಳ ಹಿಂದೆ ಕಂಗನಾ ರಣಾವತ್ ನಿರೂಪಣೆ ಮಾಡುವ 'ಲಾಕ್‌ಅಪ್' ರಿಯಾಲಿಟಿ ಶೋನಲ್ಲಿ ಮುನಾವರ್ ಭಾಗವಹಿಸಿದ್ದರು. ಓಟಿಟಿಯಲ್ಲಿ ಬಂದ ಈ ಶೋನಲ್ಲಿ ಗೆದ್ದಿದ್ದರು. ಬಳಿಕ ಆಲ್ಬಮ್ ಸಾಂಗ್‌ಗಳನ್ನು ಮಾಡಿ ಮೋಡಿ ಮಾಡಿದ್ದರು. ಕೊನೆಗೆ ಬಿಗ್‌ಬಾಸ್ 17 ಶೋಗೆ ಎಂಟ್ರಿ ಪಡೆಯುವ ಅವಕಾಶ ಸಿಕ್ಕಿತ್ತು. ಇದೀಗ ವಿಜೇತರಾಗಿ ಹೊರಹೊಮ್ಮಿದ್ದಾರೆ.

Bigg Boss 17 Winner: Munawar Faruqui Lifts Trophy

ಗುಜರಾತ್ ಮೂಲದ ಮುನಾವರ್ ಫರುಕಿ 2017ರಲ್ಲಿ ಜಾಸ್ಮಿನ್ ಎಂಬುವವರ ಕೈ ಹಿಡಿದಿದ್ದರು. ಎರಡು ವರ್ಷಗಳ ಹಿಂದೆ ಕೆಲ ಭಿನ್ನಾಭಿಪ್ರಾಯಗಳಿಂದ ಜೋಡಿ ವಿಚ್ಛೇದನ ಪಡೆದು ದೂರಾಗಿದ್ದರು. ಇನ್ನು ಯೂಟ್ಯೂಬ್‌ನಲ್ಲಿ ಭಾರೀ ಫಾಲೋಯಿಂಗ್ ಫರುಕಿಗೆ ಇದೆ. ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದವರು ಈಗ ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿದು ಎಲ್ಲರ ಹುಬ್ಬೇರಿಸಿದ್ದಾರೆ.

More from Filmibeat

English summary
Munawar Faruqui wins bigg boss 17 show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X