ಮುನಾವರ್, ಅಂಕಿತಾ, ಮನ್ನಾರ್, ವಿಕ್ಕಿ ಜೈನ್: ಹಿಂದಿ ಬಿಗ್ ಬಾಸ್ 17 ಟ್ರೋಫಿಗೆ ಮುತ್ತಿಕ್ಕುವವರು ಯಾರು?
ಬಿಗ್ ಬಾಸ್ ಹಿಂದಿ ಸೀಸನ್ 17 ಫಿನಾಲೆ ಹಂತಕ್ಕೆ ಬಂದಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಹೋಸ್ಟ್ ಮಾಡಿದ ಬಿಗ್ ಬಾಸ್ ಹದಿನೇಳನೇ ಸೀಸನ್ ಮೂರು ತಿಂಗಳ ಕಾಲ ವೀಕ್ಷಕರನ್ನು ರಂಜಿಸಿದ್ದು, ಮುಂದಿನ ವಾರ ಕೊನೆಗೊಳ್ಳಲಿದೆ. ಇದರ ಬೆನ್ನಲ್ಲೇ ಯಾರು ಈ ಟ್ರೋಫಿಗೆ ಮುತ್ತಿಡಲಿದ್ದಾರೆ ಎನ್ನುವ ಪ್ರಶ್ನೆ ವೀಕ್ಷಕರ ಮನದಲ್ಲಿ ಮೂಡಿದೆ.
ಈ ವಾರದ ಆರಂಭದಲ್ಲಿ ಸಮರ್ಥ್ ಜುರೆಲ್ ಎಲಿಮಿನೇಟ್ ಆಗಿದ್ದು, ಈಗ ಬಿಗ್ ಬಾಸ್ 17 ರಲ್ಲಿ ಎಂಟು ಸ್ಪರ್ಧಿಗಳು ಇದ್ದಾರೆ. ಅವರಲ್ಲಿ ಇಬ್ಬರು ರಿಯಾಲಿಟಿ ಶೋಗೆ ವಿದಾಯ ಹೇಳಲಿದ್ದಾರೆ. ಅಂಕಿತಾ ಲೋಖಂಡೆ, ವಿಕ್ಕಿ ಜೈನ್, ಮನ್ನಾರಾ ಚೋಪ್ರಾ, ಅಭಿಷೇಕ್ ಕುಮಾರ್, ಇಶಾ ಮಾಳವಿಯಾ, ಮುನಾವರ್ ಫರುಕಿ, ಆಯೇಶಾ ಖಾನ್ ಮತ್ತು ಅರುಣ್ ಶ್ರೀಕಾಂತ್ ಮಾಶೆಟ್ಟೆ ಇದ್ದು, ಅವರಲ್ಲಿ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ. ಉಳಿದವರಲ್ಲಿ ಒಬ್ಬರು ಟ್ರೋಫಿಯೊಂದಿಗೆ ಹೊರನಡೆಯಲಿದ್ದಾರೆ.

ಬಿಗ್ ಬಾಸ್ 17 ಟ್ರೋಫಿ ಗೆಲ್ಲುತ್ತಾರಾ ಮುನಾವರ್ ಫಾರುಕಿ?
ಪ್ರತಿ ವಾರ, Ormax ಟಾಪ್ ಫೈವ್ BB 17 ಸ್ಪರ್ಧಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಬಿಗ್ ಬಾಸ್ 17 ವಿಜೇತರ ಬಗ್ಗೆ ಅವರ ಭವಿಷ್ಯವನ್ನು ತಿಳಿಯಲು ಅಭಿಮಾನಿಗಳು ಈ ವಾರದ ಪಟ್ಟಿಗಾಗಿ ಕಾಯುತ್ತಿದ್ದರು. ಈ ವಾರದ Ormax ಪಟ್ಟಿ ಅಂತಿಮವಾಗಿ ಹೊರಬಂದಿದ್ದು, ನಿರೀಕ್ಷೆಯಂತೆ ಮುನಾವರ್ ಫಾರುಕಿ ಮತ್ತೊಮ್ಮೆ ಅಗ್ರಸ್ಥಾನ ಪಡೆದಿದ್ದಾರೆ.
ಇಲ್ಲಿ ವಿಶೇಷವೆಂದರೆ, ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಮುನಾವರ್ ಫಾರುಕಿ ಕಳೆದ 14 ವಾರಗಳಿಂದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಈ ಸೀಸನ್‌ನಲ್ಲಿ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇನ್ನು, ಬಹುತೇಕ ಎಲ್ಲಾ ಬಿಗ್ ಬಾಸ್ ಸೀಸನ್‌ಗಳ ಅಂತಿಮ ವಾರದಲ್ಲಿ ಓರ್ಮ್ಯಾಕ್ಸ್ ನೀಡಿದ ಭವಿಷ್ಯ ಸರಿಯಾಗಿಯೇ ಇದೆ. ಹೀಗಾಗಿ ಮುನಾವರ್ ಫಾರುಕಿ ಗೆಲುವು ಖಚಿತ ಎನಿಸುತ್ತಿದೆ.
ಟಾಪ್ ಎರಡನೇ ಸ್ಪರ್ಧಿ ಅಂಕಿತಾ ಲೋಖಂಡೆ!
ಇನ್ನು, ನಟಿ ಅಂಕಿತಾ ಲೋಖಂಡೆ ಈ ವಾರ ಎರಡನೇ ಸ್ಥಾನಕ್ಕೆ ಮರಳಿದ್ದಾರೆ. ಅಭಿಷೇಕ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ. ವಿಕ್ಕಿ ಜೈನ್ ಮತ್ತು ಮನ್ನಾರಾ ಚೋಪ್ರಾ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. "ಓರ್ಮ್ಯಾಕ್ಸ್ ಕ್ಯಾರೆಕ್ಟರ್ಸ್ ಇಂಡಿಯಾ ಲವ್ಸ್: ಟಾಪ್ 5 ಅತ್ಯಂತ ಜನಪ್ರಿಯ ಬಿಗ್ ಬಾಸ್ 17 ಸ್ಪರ್ಧಿಗಳು (ಜನವರಿ 13-19)" ಎಂಬ ಶೀರ್ಷಿಕೆಯೊಂದಿಗೆ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಪಟ್ಟಿಯನ್ನು ಹಂಚಿಕೊಳ್ಳಲಾಗಿದೆ.

ಇದರರ್ಥ, ಓರ್ಮ್ಯಾಕ್ಸ್ ಪ್ರಕಾರ, ಮುನಾವರ್ ಫರುಕಿ ಬಿಗ್ ಬಾಸ್ 17 ಅನ್ನು ಗೆಲ್ಲುವ ಸಾಧ್ಯತೆಯಿದೆ. ಭವಿಷ್ಯದ ಪ್ರಕಾರ, ಅಂಕಿತಾ ಲೋಖಂಡೆ ಮತ್ತು ಅಭಿಷೇಕ್ ಕುಮಾರ್ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಬಹುದು. ಅಕ್ಟೋಬರ್ 2023 ರಲ್ಲಿ ಬಿಗ್ ಬಾಸ್ ಶೋ ಆರಂಭವಾಗಿದೆ. ಬಿಗ್ ಬಾಸ್ 17 ರ ಗ್ರ್ಯಾಂಡ್ ಫಿನಾಲೆಯು ಜನವರಿ 28 ರಂದು ನಡೆಯಲಿದೆ.
ಮುನಾವರ್ ಇಕ್ಬಾಲ್ ಫಾರುಕಿ
ಮುನಾವರ್ ಇಕ್ಬಾಲ್ ಫಾರುಕಿ (ಜನನ 28 ಜನವರಿ 1992) ಒಬ್ಬ ಜನಪ್ರಿಯ ಭಾರತೀಯ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮತ್ತು ರಾಪರ್. ಹಲವು ವಿವಾದಗಳು ಮತ್ತು ಚರ್ಚೆಗೆ ಕಾರಣವಾಗಿದ್ದ ಅವರು, 2022 ರಲ್ಲಿ ಕಂಗನಾ ರನೌತ್ ಅವರ ರಿಯಾಲಿಟಿ ಟಿವಿ ಶೋ, ಲಾಕ್ ಅಪ್ ಸೀಸನ್ 1 ಅನ್ನು ಗೆದ್ದಿದ್ದಾರೆ.


Click it and Unblock the Notifications











