ಮದುವೆಯಾದ ನಾಲ್ಕೇ ತಿಂಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಬಿಗ್‌ಬಾಸ್‌ ಸ್ಪರ್ಧಿ

''ಬಿಗ್ ಬಾಸ್‌''ಗೆ ಅದಕ್ಕೆ ಆದ ಇತಿಹಾಸ ಇದೆ. ಬೇರೆ ಬೇರೆ ಭಾಷೆಯಲ್ಲಿ ಇಲ್ಲಿಯವರೆಗೆ ಹಲವು ವರ್ಷಗಳ ಕಾಲ ''ಬಿಗ್ ಬಾಸ್'' ಪ್ರಸಾರವನ್ನು ಕಂಡಿದೆ. ಆ ಪೈಕಿ ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ''ಬಿಗ್ ಬಾಸ್'' ಬೇರೆ ಎಲ್ಲಾ ಭಾಷೆಗಳಲ್ಲಿನ ''ಬಿಗ್ ಬಾಸ್‌''ಗಿಂತ ವಯಸ್ಸಿನಲ್ಲಿ ಹಿರಿಯ. ಹಿಂದಿಯಲ್ಲಿ ''ಬಿಗ್ ಬಾಸ್'' 19 ವಸಂತ ಕಂಡಿದ್ದರೆ ಕನ್ನಡದಲ್ಲಿ ''ಬಿಗ್ ಬಾಸ್‌''ಗೆ ಈಗ ಹನ್ನೆರಡರ ಹರೆಯ.

ಇನ್ನೂ ತೆಲುಗು ಮತ್ತು ತಮಿಳು ''ಬಿಗ್ ಬಾಸ್'' 09 ವರ್ಷದಾದ್ದರೆ ಮಲಯಾಳಂನ ''ಬಿಗ್‌ ಬಾಸ್'' ಕಳೆದ 07 ವರ್ಷಗಳಿಂದ ಪ್ರಸಾರವಾಗುತ್ತಿದೆ. ಇಂತಹ ಹಿನ್ನೆಲೆ ಹೊಂದಿರುವ ಈ ಬಿಗ್ ಬಾಸ್ ಮನೆಗೆ ಇಲ್ಲಿಯವರೆಗೆ ಹಲವಾರು ಜನ ಆಯಾ ಭಾಷೆಗಳಲ್ಲಿ ಸ್ಫರ್ಧಿಯಾಗಿ ಹೋಗಿದ್ದಾರೆ. ಕೆಲವರು ಗೆದ್ದು ಸೋತಿದ್ದಾರೆ. ಇನ್ನೂ ಕೆಲವರು ಸೋತು ಗೆದ್ದಿದ್ದಾರೆ. ಆ ಪೈಕಿ ಅನುರಾಗ್ ಧೋಬಾಲ್ ಕೂಡ ಒಬ್ಬರು.

bigg-boss-17s-anurag-dobhal-and-wife-ritika-announce-pregnancy-just-four-months-after-their-wedding

ಯೆಸ್. ಅನುರಾಗ್ ಧೋಬಾಲ್.. ಪ್ರಯಾಣ ಪ್ರಿಯ. ಯೂಟ್ಯೂಬರ್ ಮತ್ತು ಬೈಕ್ ರೈಡರ್. UK07 ರೈಡರ್ ಎಂದೇ ಉತ್ತರ ಭಾರತದಲ್ಲಿ ಜನಜನಿತರಾದವರು ಇವರು. ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಹಿಂದಿಯ ''ಬಿಗ್ ಬಾಸ್'' ಸೀಸನ್ 17ರ ಮನೆಗೆ ಹೋಗಿದ್ದ ಅನುರಾಗ್ ಧೋಬಾಲ್‌ ಸದ್ಯ ಮದುವೆಯಾಗಿ ನಾಲ್ಕೇ ತಿಂಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಹೌದು, ಅನುರಾಗ್ ಧೋಬಾಲ್ ಕಳೆದ ಮೇನಲ್ಲಿ ರಿತಿಕಾ ಚೌಹಾಣ್ ಅವರ ಜೊತೆ ಮದುವೆಯಾಗಿದ್ದರು. ಮದುವೆ ಮುನ್ನ ಐದು ವರ್ಷಗಳಿಂದ ರಿತಿಕಾ ಅವರನ್ನು ಅನುರಾಗ್ ಪ್ರೀತಿ ಮಾಡುತ್ತಿದ್ದರು ಕೂಡ ಈ ವಿಷಯ ಇವರ ಹಿಂಬಾಲಕರಿಗೆ ಗೊತ್ತಾಗಿರಲಿಲ್ಲ. ಅಷ್ಟರ ಮಟ್ಟಿಗೆ ತಮ್ಮ ಸಂಬಂಧದ ಗೌಪ್ಯತೆಯನ್ನು ಅನುರಾಗ್ ಕಾಪಾಡಿಕೊಂಡಿದ್ದರು.

ಇನ್ನೂ ರಿತಿಕಾ ಕೂಡ ಸಾಮಾನ್ಯದವರಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡವರು ಇವರು. ಈ ಹಿನ್ನೆಲೆ ಕಳೆದ ಮಾರ್ಚ್‌ನಲ್ಲಿ ರಿತಿಕಾ ಜೊತೆ ಅನುರಾಗ್ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಾಗ ಹಲವರು ಅಚ್ಚರಿಗೀಡಾಗಿದ್ದರು. ಇದಕ್ಕೆ ಕೈಗನ್ನಡಿ ಎನ್ನುವಂತೆ ಇವರ ನಿಶ್ಚಿತಾರ್ಥದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಕೂಡ ಆಗಿತ್ತು.

bigg-boss-17s-anurag-dobhal-and-wife-ritika-announce-pregnancy-just-four-months-after-their-wedding

ಇಂಥಾ ಅನುರಾಗ್ ಮತ್ತು ರಿತಿಕಾ ಸದ್ಯ ತಂದೆ ತಾಯಿಯಾಗಿ ಬಡ್ತಿಯನ್ನು ಪಡೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗಾಗಿ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ಧಾರೆ. ಈ ಕುರಿತು ವಿಡಿಯೋವನ್ನು ಖೂಡ ಹಂಚಿಕೊಂಡಿರುವ ಅನುರಾಗ್ ತಮ್ಮ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು ಈ ಹಿನ್ನೆಲೆ ನಾವು ಆಸ್ಪತ್ರೆಗೆ ಬಂದಿದ್ದೇವು ಎಂದು ಹೇಳಿದ್ದಾರೆ.

ಆ ನಂತರ ವೈದ್ಯರು ರಿತಿಕಾ ಗರ್ಭಧಾರಣೆಯ ಬಗ್ಗೆ ಸುಳಿವು ನೀಡಿದರು ಎಂದು ಹೇಳಿರುವ ಅನುರಾಗ್ ರಿತಿಕಾ ಗರ್ಭಿಣಿಯಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಕೆಲವು ಪರೀಕ್ಷೆಗಳನ್ನು ಕೂಡ ವೈದ್ಯರು ಮಾಡಿದರು. ಕೊನೆಗೆ ಮದುವೆಯಾದ ನಾಲ್ಕು ತಿಂಗಳಲ್ಲೇ ತಂದದೆಯಾಗುತ್ತಿದ್ದೇನೆ ಎನ್ನುವ ವಿಚಾರ ನನಗೆ ಗೊತ್ತಾಯ್ತು ಎಂದು ಹೇಳಿದ್ದಾರೆ. ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.

ಸದ್ಯ ಅನುರಾಗ್ ಮತ್ತು ರಿತಿಕಾ ಅವರಿಗೆ ಅವರ ಹಲವಾರು ಅಭಿಮಾನಿಗಳು ಶುಭಾಶಯವನ್ನು ಕೋರುತ್ತಿದ್ದಾರೆ. ಇನ್ನುಳಿದಂತೆ ಮದುವೆಗೆ ಮುನ್ನ ''ಟೆಲ್ಲಿ ಟಾಕ್‌''ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಅನುರಾಗ್ ದೋಭಾಲ್ 2025ರಲ್ಲಿ ಮದುವೆಯಾಗುವುದಾಗಿ ಹೇಳಿದ್ದರು. ಅದ್ರಂತೆಯೇ ಮದುವೆಯಾದ ಅನುರಾಗ್ ಇದೇ ಸಂದರ್ಶನದಲ್ಲಿ ಮದುವೆಯ ನಂತರ ತಮ್ಮ ಕರ್ತವ್ಯಗಳ ಕುರಿತು ಮತ್ತು ತಮ್ಮ ಸಂಬಂಧದ ಕುರಿತು ಕೂಡ ಮಾತನಾಡಿದ್ದರು.

More from Filmibeat

English summary
Anurag Dobhal and Ritika Chauhan announce their pregnancy! Discover how the Bigg Boss 17 star and his wife are starting a new chapter as a family, four months into their marriage.
Read more about: bigg boss pregnant ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X