Bigg Boss: ಲಾಯರ್ ಜೊತೆ ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಪ್ರವೇಶ ಪಡೆದ ಕತ್ತೆ
ಬಿಗ್‌ಬಾಸ್ ಕನ್ನಡ ಸೀಸನ್-11 ಶುರುವಾಗಿ ಒಂದು ವಾರ ಕಳೆದಿದೆ. ಮೊದಲ ವಾರವೇ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಈ ಬಾರಿ ಸ್ವರ್ಗ- ನರಕ ಕಾನ್ಸೆಪ್ಟ್‌ನಲ್ಲಿ ಶೋ ನಡೀತಿದೆ. ಮತ್ತೊಮ್ಮೆ ಕಿಚ್ಚ ಸುದೀಪ್ ಶೋ ನಿರೂಪಣೆ ಮಾಡುತ್ತಿದ್ದಾರೆ.
ಮೊದಲ ವಾರ ಬಿಗ್‌ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಆಟಾಟೋಪ ಜೋರಾಗಿತ್ತು. ವಾರಾಂತ್ಯದ ಪಂಚಾಯ್ತಿಯಲ್ಲಿ ಜಗದೀಶ್‌ಗೆ ಕಿಚ್ಚ ಸುದೀಪ್ ಖಡಕ್ ಟಾಂಗ್ ಕೊಟ್ಟಿದ್ದಾರೆ. ಇನ್ನು ನಟಿ ಹಂಸ ಮೊದಲ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ವಿಭಿನ್ನ ವ್ಯಕ್ತಿತ್ವದ ಬೇರೆ ಬೇರೆ ಕ್ಷೇತ್ರಗಳ ಜನರನ್ನು ಬಿಗ್‌ಬಾಸ್ ಮನೆಗೆ ಕಳುಹಿಸಲಾಗುತ್ತದೆ. ನೂರು ದಿನಗಳ ಕಾಲ ಉಳಿದುಕೊಂಡು ಗೆದ್ದವರು ವಿಜೇತರಾಗಿ ಬಹುಮಾನ ಸ್ವೀಕರಿಸುತ್ತಾರೆ.

ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಬಿಗ್‌ಬಾಸ್ ಶೋಗಳು ನಡೀತಿದೆ. ಬಿಗ್‌ಬಾಸ್ ಹಿಂದಿ 17 ಸೀಸನ್ ಮುಗಿಸಿ 18ನೇ ಸೀಸನ್ ಆರಂಭವಾಗಿದೆ. ಈ ಬಾರಿಯೂ ಸಲ್ಮಾನ್ ಖಾನ್ ಶೋ ನಡೆಸಿಕೊಡುತ್ತಿದ್ದಾರೆ. ಗ್ರ್ಯಾಂಡ್ ಪ್ರೀಮಿಯರ್ ಶೋ ಮೂಲಕ ಹೊಸ ಸೀಸನ್ ಶುರುವಾಗಿದೆ. ಈಗಾಗಲೇ ಶಿಲ್ಪಾ ಶಿರೋಡ್ಕರ್, ವಿವಿಯನ್ ಡಿಸೇನಾ, ಈಶಾ ಸಿಂಗ್, ರಜತ್ ದಲಾಲ್ ಸೇರಿ ಹಲವರು ದೊಡ್ಮನೆ ಒಳಗೆ ಪ್ರವೇಶಿಸಿದ್ದಾರೆ.
ಅಚ್ಚರಿ ಎನ್ನುವಂತೆ ಈ ಬಾರಿ ಬಿಗ್‌ಬಾಸ್ 18 ಮನೆ ಒಳಗೆ ಕತ್ತೆಯೊಂದು ಎಂಟ್ರಿ ಕೊಟ್ಟಿದೆ. ಹೌದು ನೀವು ಕೇಳುತ್ತಿರುವುದು ನಿಜ. ಇದಕ್ಕೆ ಸಂಬಂಧಿಸಿದ ಪ್ರೋಮೊವನ್ನು ಕಲರ್ಸ್ ಟಿವಿ ಹಂಚಿಕೊಂಡಿದೆ. ಇನ್ನು ಆ ಕತ್ತೆಗೆ ಗಧರಾಜ್ ಎನ್ನುವ ಹೆಸರು ಕೊಟ್ಟಿದ್ದಾರೆ. ಗುಣರತ್ನ ಸದಾವಾರ್ತೆ ಎಂಬ ವಕೀಲರೊಬ್ಬರು ಈ ಬಾರಿ ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗುತ್ತಿದ್ದಾರೆ. ಅವರು ಒಂದು ಕತ್ತೆಯನ್ನು ಸಾಕಿತ್ತಿದ್ದು ಇದೀಗ ಬಿಗ್‌ಬಾಸ್ ಮನೆಗೆ ಆ ಕತ್ತೆ ಕೂಡ ಹೋಗಿದೆ ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ರಿಯಾಲಿಟಿ ಶೋಗಳಲ್ಲಿ ಮನುಷ್ಯರು ಭಾಗವಹಿಸುತ್ತಾರೆ. ಬಿಗ್‌ಬಾಸ್ ಸೀಸನ್-10ರಲ್ಲಿ ಚಾರ್ಲಿ ಶ್ವಾನ ಬಿಗ್‌ಬಾಸ್ ಮನೆಗೆ ಹೋಗುತ್ತದೆ ಎಂದು ಹೇಳಲಾಗಿತ್ತು. ಸ್ವತಃ ಕಲರ್ಸ್ ಕನ್ನಡ ಈ ಬಗ್ಗೆ ಮಾಹಿತಿ ನೀಡಿತ್ತು. ಆದರೆ ಬಳಿಕ ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಅನಿಮಲ್ ವೆಲ್‌ಫೇರ್ ಆಫ್ ಇಂಡಿಯಾ ಅನುಮತಿ ಸಿಕ್ಕರೇ ಮಾತ್ರ ಹೀಗೆ ಪ್ರಾಣಿಗಳನ್ನು ಸಿನಿಮಾ, ಕಿರುತೆರೆ ಶೋಗಳಲ್ಲಿ ಬಳಸಿಕೊಳ್ಳಲು ಸಾಧ್ಯ. ಹಾಗಾಗಿ ಚಾರ್ಲಿ ಮನೆ ಒಳಗೆ ಹೋಗಲು ಸಾಧ್ಯವಾಗಿರಲಿಲ್ಲ.
'ಚಾರ್ಲಿ' ಬಿಗ್‌ಬಾಸ್ ಕನ್ನಡ ಶೋ ಮನೆಗೆ ಹೋಗದೇ ಇದ್ದರೂ ಬಿಗ್‌ಬಾಸ್ ಹಿಂದಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದೆ. ಅಂದಹಾಗೆ ಈ ಕತ್ತೆಯ ಹೆಸರು ಮ್ಯಾಕ್ಸ್ ಎಂದು ಹೇಳಲಾಗುತ್ತಿದೆ. ಮೇಲ್ನೋಟಕ್ಕೆ ಇದು ಶೋ ಗಿಮಿಕ್ ಎಂದು ಗೊತ್ತಾಗುತ್ತಿದೆ. ವೀಕ್ಷಕರನ್ನು ಸೆಳೆಯಲು ಈ ತಂತ್ರ ಮಾಡಿರುವುದು ಅರ್ಥವಾಗುತ್ತದೆ.
ಬಿಗ್‌ಬಾಸ್ ಮನೆಯಲ್ಲಿ ಕತ್ತೆ ಸ್ಪರ್ಧಿಯಾಗಿ ಇರುವುದಕ್ಕೆ ಸಾಧ್ಯನಾ? ಅದರೊಟ್ಟಿಗೆ ಇರಲು ಇತರೆ ಸ್ಪರ್ಧಿಗಳು ಒಪ್ಪುತ್ತಾರಾ? ಎಷ್ಟು ಸಮಯ ಈ ಕತ್ತೆ ಮನೆ ಒಳಗೆ ಇರುತ್ತದೆ? ಎನ್ನುವ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಒಟ್ಟಾರೆ ಕತ್ತೆಯ ಆಗಮನದಿಂದ ಬಿಗ್‌ಬಾಸ್-18 ಶೋ ಕುತೂಹಲ ಮೂಡಿಸಿರುವುದು ಸುಳ್ಳಲ್ಲ.
ಬಿಗ್‌ಬಾಸ್ ಹಿಂದಿ-18 ಈ ವಾರದಿಂದ ಆರಂಭವಾಗುತ್ತಿದೆ. ಸೆಪ್ಟೆಂಬರ್ 1ರಿಂದ ನಟ ನಾಗಾರ್ಜುನ ನೇತೃತ್ವದಲ್ಲಿ ಬಿಗ್‌ಬಾಸ್ ತೆಲುಗು-8 ಶೋ ಆರಂಭವಾಗಿದೆ. ಮೂವರು ಕನ್ನಡಿಗರು ಈ ಬಾರಿ ತೆಲುಗು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಇನ್ನು ಇದೇ ವಾರ ತಮಿಳಿನಲ್ಲಿ ಹೊಸ ಸೀಸನ್ ಶುರುವಾಗಿದೆ. ಈ ಬಾರಿ ಕಮಲ್ ಹಾಸನ್ ಬದಲು ವಿಜಯ್ ಸೇತುಪತಿ ಶೋ ನಿರೂಪಣೆ ಮಾಡುತ್ತಿದ್ದಾರೆ. ನಿನ್ನೆಯಷ್ಟೆ ಬಿಗ್‌ಬಾಸ್ ಮರಾಠಿ ಸೀಸನ್-5 ಮುಕ್ತಾಯವಾಗಿದೆ. ರಿತೇಶ್ ದೇಶ್‌ಮುಖ್ ನಿರೂಪಣೆಯ ಶೋನಲ್ಲಿ ಸೂರಜ್ ಚವಾಣ್ ಈ ಬಾರಿ ಟ್ರೋಫಿ ಎತ್ತಿ ಹಿಡಿದಿದ್ದಾರೆ.


Click it and Unblock the Notifications











