Bigg Boss 18 Grand Finale ; ಕುಚಿಕೂ ಗೆಳೆಯರ ಮೋಜು-ಮಸ್ತಿ, ಅಂದಾಜ್ ಅಪ್ನಾ ಅಪ್ನಾ ನೆನಪಿಸಿದ ಸಲ್ಲು -ಅಮೀರ್..!

ಮತ್ತೊಬ್ಬರ ಖಾಸಗಿ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ.

ಇಂಥಾ ಕಾರ್ಯಕ್ರಮಕ್ಕೆ ಹಿಂದಿಯಲ್ಲಿ ಈಗ ತೆರೆ ಬಿದ್ದಿದೆ. ನಿನ್ನೆ ಸಲ್ಮಾನ್ ಖಾನ್ ಸಾರಥ್ಯದಲ್ಲಿ ಬಿಗ್ ಬಾಸ್‌ನ 18ನೇ ಸೀಸನ್‌ನ ಫಿನಾಲೆ ಗ್ರ್ಯಾಂಡ್ ನೆರವೇರಿದೆ. ಹೆಚ್ಚು ಕಡಿಮೆ ಮೂರು ಗಂಟೆಗಳ ಕಾಲ ನಿನ್ನೆ ನಡೆದ ಈ ಕಾರ್ಯಕ್ರಮದಲ್ಲಿ ಕರಣ್ ವೀರ್ ಮೆಹ್ರಾ ನಂಬರ್ ಓನ್ ಸ್ಥಾನ ಅಲಂಕರಿಸಿದ್ದಾರೆ. ಬಿಗ್ ಬಾಸ್‌ ಕಪ್‌ಗೆ ಮುತ್ತಿಟ್ಟು 50 ಲಕ್ಷ ಹಣವನ್ನು ಬಹುಮಾನವನ್ನಾಗಿ ಪಡೆದಿದ್ದಾರೆ.

bigg-boss-18-finale-highlights-salman-khan-and-aamir-khan-recreate-the-magic-of-andaz-apna-apna

ಇನ್ನು ಕರಣ್ ವೀರ್ ಮೆಹ್ರಾಗೆ ಬಿಗ್ ಬಾಸ್ ಮನೆಯಲ್ಲಿ ತೀವೃವಾದ ಪೈಪೋಟಿಯನ್ನು ನೀಡಿದವರು ವಿವಿಯನ್ ಡಿಸೆನಾ. ಆರಂಭದಿಂದಲೂ ಇವರ ನಡುವೆ ಸ್ಫರ್ಧೆ ಇತ್ತು. ಆದರೆ, ಕಪ್ ಗೆಲ್ಲುವಲ್ಲಿ ವಿಫಲವಾದ ವಿವಿಯನ್ ಬಿಗ್ ಬಾಸ್‌ನ 18ನೇ ಸೀಸನ್‌ನ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಕರಣ್ ವೀರ್ ಮೆಹ್ರಾ ಮತ್ತು ವಿವಿಯನ್ ಡಿಸೆನಾ ಅವರನ್ನು ಹೊರತು ಪಡಿಸಿ ಅವಿನಾಶ್ ಮಿಶ್ರಾ, ಈಶಾ ಸಿಂಗ್, ರಜತ್ ದಲಾಲ್ ಮತ್ತು ಚುಮ್ ದರಂಗ್ ಮನೆಯಲ್ಲಿದ್ದ ಇನ್ನುಳಿದ ಸದಸ್ಯರನ್ನೆಲ್ಲ ಹಿಂದಿಕ್ಕಿ ಬಿಗ್ ಬಾಸ್‌ನ ಕೊನೆಯ ಹಂತಕ್ಕೆ ತಲುಪಿದ್ದರು.

ಆದರೆ, ಪ್ರೇಕ್ಷಕರ ಹೃದಯವನ್ನು ಕರಣ್ ಮತ್ತು ವಿವಿಯನ್ ಗೆದ್ದಂತೆ ಇವರು ಯಾರು ಗೆಲ್ಲಲಿಲ್ಲ. ಹೀಗಾಗಿಯೇ ನಿನ್ನೆ ಸುದೀರ್ಘವಾಗಿ ನಡೆದ ಫಿನಾಲೆಯಲ್ಲಿ ಒಬ್ಬೊಬ್ಬರಾಗಿಯೇ ಇವರೆಲ್ಲ ಹೊರ ಬಂದರು.

ಇನ್ನು, ಬಿಗ್ ಬಾಸ್‌ನ ಗ್ರ್ಯಾಂಡ್ ಫಿನಾಲೆಗೆ ರಂಗು ತುಂಬಲು ಅಮೀರ್ ಖಾನ್ ಬಂದಿದ್ದು ವಿಶೇಷವಾಗಿತ್ತು. ಸಭೆ-ಸಮಾರಂಭ-ಕಾರ್ಯಕ್ರಮಗಳಿಂದ ದೂರವೇ ಉಳಿದುಕೊಳ್ಳುವ ಅಮೀರ್ ಖಾನ್ ತಮ್ಮ ಮಗ ಜುನೈದ್ ಖಾನ್ ಅಭಿನಯದ 'ಲವ್‌ಯಾಪ' ಪ್ರಚಾರವನ್ನು ಮಾಡಲು ಬಂದಿದ್ದರು.

ಇನ್ನು ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಜೊತೆಯಲ್ಲಿ ಅಭಿನಯಿಸಿದ್ದ ಏಕೈಕ ಚಿತ್ರ ಅಂದರೆ ಅದು ಅಂದಾಜ್ ಅಪ್ನಾ ಅಪ್ನಾ. ಮೂರು ದಶಕದ ಹಿಂದೆ ತೆರೆಗೆ ಬಂದಿದ್ದ ಈ ಚಿತ್ರ ಆ ಕಾಲದಲ್ಲಿ ಮೋಡಿ ಮಾಡಿತ್ತು. ಇಬ್ಬರ ವೃತ್ತಿ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕಿತ್ತು. ಹೀಗಾಗಿ ಬಿಗ್ ಬಾಸ್ ವೇದಿಕೆಯಲ್ಲಿ ಹಳೆಯ ನೆನಪುಗಳಿಗೆ ಜಾರಿದ ಇಬ್ಬರು ವೇದಿಕೆಯಲ್ಲಿ ಅಂದಾಜ್ ಅಪ್ನಾ ಅಪ್ನಾ ಚಿತ್ರದ ದೃಶ್ಯಕ್ಕೆ ಅಭಿನಯಿಸಿದರು. ದೊ ಮಸ್ತಾನೆ ಚಲೇ ಜಿಂದಗಿ ಬನಾನೆ ಹಾಡಿಗೆ ಹೆಜ್ಜೆ ಹಾಕಿದರು.

ಅಂದ್ಹಾಗೇ ಕರಣ್ ವೀರ್ ಮೆಹ್ರಾ ರಿಮಿಕ್ಸ್ ಕಾರ್ಯಕ್ರಮದ ಮೂಲಕ ಕಿರುತೆರೆಯನ್ನು ಪ್ರವೇಶಿಸಿದ್ದರು. ಆ ನಂತರ ಬೀವಿ ಔರ್ ಮೇ ಧಾರಾವಾಹಿ ಇವರ ಬದುಕಿಗೆ ತಿರುವನ್ನು ನೀಡಿತ್ತು. ಇಲ್ಲಿಂದಾಚೆ ಕಿರುತೆರೆಯಿಂದ ಹಿರಿತೆರೆಗೆ ಕೂಡ ಬಂದ ಕರಣ್ ರಾಗಿಣಿ ಎಂಎಂಎಸ್ 2, ಮೇರೆ ಡ್ಯಾಡ್ ಕಿ ಮಾರುತಿ, ಬ್ಲಡ್ ಮನಿ ಸೇರಿ ಅನೇಕ ಚಿತ್ರಗಳಲ್ಲಿ ಕೂಡ ಬಣ್ಣ ಹಚ್ಚಿದರು. ಇನ್ನೂ ರಿಯಾಲಿಟಿ ಶೋ ಕರಣ್ ವೀರ್ ಮೆಹ್ರಾಗೆ ಹೊಸದಲ್ಲ. ಈ ಹಿಂದೆ ಫೀಯರ್ ಫ್ಯಾಕ್ಟರ್, ಖತ್ರೋನ್ ಕೇ ಕಿಲಾಡಿಯ 14ನೇ ಸೀಸನ್‌ನಲ್ಲಿ ಕೂಡ ಕರಣ್ ವೀರ್ ಮೆಹ್ರಾ ಭಾಗವಹಿಸಿದ್ದರು. ಅಲ್ಲಿಯೂ ಕೂಡ ಟ್ರೋಫಿ ಗೆದ್ದಿದ್ದರು. ಪವಿತ್ರ ರಿಶ್ತಾ, ಯೇ ರಿಶ್ತಾ ಕ್ಯಾ ಕೆಹ್ಲತಾ ಹೈ, ಪ್ಯಾರಿ ಹೂ ಮೇ ಕರಣ್ ವೀರ್ ಮೆಹ್ರಾ ಅಭಿನಯದ ಕೆಲ ಪ್ರಮುಖ ಧಾರಾವಾಹಿಗಳು.

More from Filmibeat

Read more about: salman khan aamir khan bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X