ಈ ಆರು ಜನರಲ್ಲಿ ಬಿಗ್ ಬಾಸ್ ಗೆಲ್ಲುವರು ಯಾರು ? ಬಿಗ್ ಬಾಸ್ ಕಪ್ ಗೆದ್ದವರಿಗೆ ಸಿಗುವ ಹಣ ಎಷ್ಟು ?
ಬಿಗ್ ಬಾಸ್ ಕೇವಲ ಸುದೀಪ್ ಅವರಿಗೆ ಮಾತ್ರ ಎರಡನೇ ಮನೆ ಅಲ್ಲ, ಸಲ್ಮಾನ್ ಖಾನ್ ಅವರಿಗೂ ಕೂಡ ಬಿಗ್ ಬಾಸ್ ಎರಡನೇ ಮನೆ. 18 ವರ್ಷಗಳಿಂದ ಸಲ್ಮಾನ್ ಖಾನ್ ಈ ಸಂಬಂಧ ಉಳಿಸಿಕೊಂಡು ಬಂದಿದ್ದಾರೆ. ಪ್ರತಿ ಬಾರಿ ಕೂಡ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಪ್ರಾಣ ಬೆದರಿಕೆ ಇದ್ದರೂ ಕೂಡ ಸಲ್ಮಾನ್ ಖಾನ್ ಬಿಗ್ ಬಾಸ್ ನಿರೂಪಣೆಯಿಂದ ಹಿಂದೆ ಸರಿದಿಲ್ಲ. ಸುಖಾಸುಮ್ಮನೆ ಕಾರಣಗಳನ್ನು ಹೇಳಿ ಕಾರ್ಯಕ್ರಮಕ್ಕೆ ಗೈರಾಗಿಲ್ಲ.
ಇಂಥಾ ಸಲ್ಮಾನ್ ಖಾನ್ ಇಂದು 18ನೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೆರೆ ಎಳೆಯಲಿದ್ದಾರೆ. ಹೌದು, ಇಂದು ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ಹೆಚ್ಚು ಕಡಿಮೆ ಮೂರುವರೆ ತಿಂಗಳು ನಡೆದ ಈ ಕಾರ್ಯಕ್ರಮದಲ್ಲಿ ಆರು ಜನ ಫೈನಲ್ ಪ್ರವೇಶಿಸಿದ್ದು ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಈಗ ಅನೇಕರನ್ನು ಕಾಡುತ್ತಿದೆ.

ಕರಣ್ ವೀರ್ ಮೆಹ್ರಾ ಮತ್ತು ವಿವಿಯನ್ ಡಿಸೆನಾ ನಡುವೆ ತೀವೃವಾದ ಸ್ಫರ್ಧೆ ಇದ್ದು ಅನೇಕರು ಕರಣ್ ವೀರ್ ಮೆಹ್ರಾ ಮುಡಿಗೆ ಬಿಗ್ ಬಾಸ್ ಕಿರೀಟ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಇನ್ನು ಕೆಲವರು ವಿವಿಯನ್ ಡಿಸೆನಾ ಬಿಗ್ ಬಾಸ್ ವಿನ್ನರ್ ಎನ್ನುತ್ತಿದ್ದಾರೆ. ವಿವಿಯನ್ ಡಿಸೆನಾ ಒಂದರ್ಥದಲ್ಲಿ ಹಿಂದಿಯ ಕಲರ್ಸ್‌ನ ಅಳಿಯ ಇದ್ದಂತೆ. ಕಲರ್ಸ್‌ನಲ್ಲಿ ಪ್ರಸಾರವಾದ ಅನೇಕ ಧಾರಾವಾಹಿಗಳಿಗೆ ವಿವಿಯನ್ ಬಣ್ಣ ಹಚ್ಚಿದ್ದಾರೆ. ಈ ಕಾರಣಕ್ಕೆ ವಿವಿಯನ್ ಡಿಸೆನಾ ಗೆಲ್ಲುವು ಖಚಿತ ಎನ್ನುವುದು ಅನೇಕರ ಅಭಿಪ್ರಾಯ.
ಈ ಇಬ್ಬರನ್ನು ಹೊರತು ಪಡಿಸಿದರೆ ಅವಿನಾಶ್ ಮಿಶ್ರಾ, ಈಶಾ ಸಿಂಗ್, ರಜತ್ ದಲಾಲ್ ಮತ್ತು ಚುಮ್ ದರಂಗ್ ಕೂಡ ಬಿಗ್ ಬಾಸ್ ಕಪ್ ಗೆಲ್ಲುವ ರೇಸ್‌ನಲ್ಲಿದ್ದಾರೆ. ಇನ್ನೂ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇಂದು ಕೇವಲ ಟ್ರೋಫಿ ಮಾತ್ರವಲ್ಲದೇ ಮೊದಲ ಸ್ಥಾನವನ್ನು ಅಲಂಕರಿಸಿದ ವ್ಯಕ್ತಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಕೂಡ ಸಿಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಕಳೆದ ವರ್ಷ ಕೂಡ ಪ್ರಶಸ್ತಿಯ ಜೊತೆ 50 ಲಕ್ಷ ನಗದು ಬಹುಮಾನವನ್ನೇ ನೀಡಲಾಗಿತ್ತು. ಆ ಮೊತ್ತವೇ ಈ ಬಾರಿ ಕೂಡ ಸಿಗಲಿದೆ. ರನ್ನರ್ ಅಪ್‌ಗೆ ಸಿಗುವ ಬಹುಮಾನದ ಮೊತ್ತದ ಕುರಿತು ವಿವರ ಇಲ್ಲ.
ಇಂದು ರಾತ್ರಿ 09-30ಕ್ಕೆ ಕಲರ್ಸ್ ಚಾನೆಲ್ ಮತ್ತು ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ 18ರ ಗ್ರ್ಯಾಂಡ್ ಫಿನಾಲೆ ನೇರ ಪ್ರಸಾರವಾಗಲಿದೆ. ಮೂರು ಗಂಟೆಗಳ ಕಾಲ ಈ ಕಾರ್ಯಕ್ರಮ ನಡೆಯುವ ನಿರೀಕ್ಷೆ ಇದೆ. ಇನ್ನು
ಬಿಗ್ ಬಾಸ್ 18ರ ಗ್ರ್ಯಾಂಡ್ ಫಿನಾಲೆ ಜನವರಿ 19, 2025ರಂದು ರಾತ್ರಿ 9:30ಕ್ಕೆ ಕಲರ್ಸ್ ಟಿವಿ ಮತ್ತು ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿದೆ. ಈ ಫಿನಾಲೆ ಸುಮಾರು ಮೂರು ಗಂಟೆಗಳ ಕಾಲ ನಡೆಯುವ ನಿರೀಕ್ಷೆಯಿದೆ.
ಇನ್ನುಳಿದಂತೆ ಇಂದು ರಾತ್ರಿ ನಡೆಯಲಿರುವ ಬಿಗ್ ಬಾಸ್‌ನ ಗ್ರ್ಯಾಂಡ್ ಫಿನಾಲೆಯಲ್ಲಿ ಸಲ್ಮಾನ್ ಖಾನ್ ಮುಂಬರುವ ಚಿತ್ರ ಸಿಂಕದರ್ ಚಿತ್ರದ ಪ್ರಚಾರ ಕೂಡ ನಡೆಯುವ ಸಾಧ್ಯತೆ ಇದೆ. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದಾರಾ ಎನ್ನುವ ಪ್ರಶ್ನೆ ಕೂಡ ಅನೇಕರನ್ನು ಈಗ ಕಾಡುತ್ತಿದೆ. ಯಾಕೆಂದರೆ ರಶ್ಮಿಕಾ ಹೊಸ ವರ್ಷದಂದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಸಿಕಂದರ್ ಚಿತ್ರದ ನಿರ್ಮಾಪಕ ಸಾಜಿದ್ ನಾಡಿಯಾವಾಲ ಕೂಡ ಭಾಗವಹಿಸುವ ಸಾಧ್ಯತೆ ಇದೆ.


Click it and Unblock the Notifications











