ಆ ಖ್ಯಾತ ಕ್ರಿಕೆಟ್ ಆಟಗಾರ ನನ್ನನ್ನು ಏಕಾಂತದಲ್ಲಿ ಭೇಟಿಯಾಗಲು ಬಯಸಿದ್ದ, ಬಾಂಬ್ ಎಸೆದ ಬಿಗ್ ಬಾಸ್ ಸ್ಫರ್ಧಿ !
''ಕ್ರಿಕೆಟ್'' ಹಾಗೂ ''ಸಿನಿಮಾ'' ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ. ಇನ್ನೂ.. ''ಮೊಹಮ್ಮದ್ ಅಜರುದ್ದೀನ್'' ಅವರಿಂದ ಹಿಡಿದು ''ವಿರಾಟ್ ಕೊಹ್ಲಿ''ಯವರೆಗೆ, ''ಅಜಯ್ ಜಡೇಜಾ'' ಅವರಿಂದ ಹಿಡಿದು ''ಕೆ.ಎಲ್.ರಾಹುಲ್''ವರೆಗೆ ಅನೇಕರು ನಾಯಕಿಯರ ಬೆಡಗು-ಭಿನ್ನಾಣಕ್ಕೆ ಮನ ಸೋತಿದ್ದಾರೆ.
ಆ ಪೈಕಿ ಕೆಲವರು ಪ್ರೀತಿಯಲ್ಲಿ ಬಿದ್ದು ಎದ್ದರೆ, ಇನ್ನೂ ಕೆಲವರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಆದರೆ ಇಲ್ಲಿಯೂ ಕೂಡ ಅಮಾಯಕ ಹೆಣ್ಣುಮಕ್ಕಳನ್ನು ತಮ್ಮ ಖೆಡ್ಡಾಗೆ ಬೀಳಿಸುವ ಪ್ರಯತ್ನವನ್ನು ಹಲವರು ಮಾಡುತ್ತಾರೆ. ಇಂತಹದ್ದೊಂದು ಎನ್ನುವ ಬಾಂಬ್‌ನ್ನು ''ಕಾಶಿಶ್ ಕಪೂರ್'' ಸದ್ಯ ಎಸೆದಿದ್ದಾರೆ.

ಹೌದು.. ''ಕಾಶಿಶ್ ಕಪೂರ್''.. ಹಿಂದಿಯ ''ಬಿಗ್ ಬಾಸ್'' ಸ್ಫರ್ಧಿ. ಕಳೆದ ಬಾರಿಯ ಸೀಸನ್‌ನಲ್ಲಿ ವೈಲ್ಡ್ ಕಾರ್ಡ್ ಮೂಲಕ ''ಬಿಗ್ ಬಾಸ್'' ಮನೆಯನ್ನು ಪ್ರವೇಶಿಸಿದ್ದ ಕಾಶಿಶ್ ''MTVಯ ಸ್ಪ್ಲಿಟ್ಸ್ ವಿಲ್ಲಾ''ದಲ್ಲಿ ಕೂಡ ಭಾಗವಹಿಸಿದ್ದರು. ಇಂಥಾ ಕಾಶಿಶ್ ಸದ್ಯ ''ಫಿಲ್ಮಿಗ್ಯಾನ್ ವೈರಲ್''ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಕ್ರಿಕೆಟ್ ಪ್ಲೇಯರ್ ಮೇಲೆ ಆರೋಪವನ್ನು ಮಾಡಿದ್ದಾರೆ.
ಈ ಕುರಿತು ಸಂದರ್ಶನದಲ್ಲಿ ನಿಮ್ಮ ಬದುಕಿನಲ್ಲಿ ಯಾರನ್ನಾದರೂ ಕಂಡು ಭಯ ಆಗಿದ್ದು ಇದೆಯಾ ? ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಕಾಶಿಶ್ ಹೌದೆಂದು ಹೇಳಿದ್ದಾರೆ. ಆತ ಪ್ರಸಿದ್ದ ಕ್ರಿಕೆಟ್ ಆಟಗಾರ ಅವನು ಮಾತು ಮತ್ತು ವರ್ತನೆಗಳಿಂದ ನನಗೆ ಭಯ ಆಗಿತ್ತು ಎಂದು ಹೇಳಿದ್ದಾರೆ.
ಆ ವ್ಯಕ್ತಿ ನನ್ನನ್ನೂ ವ್ಯೆಯಕ್ತಿಕವಾಗಿ ಏಕಾಂತದಲ್ಲಿ ಭೇಟಿಯಾಗುವಂತೆ ಹೇಳಿದ್ದ ನಾನು ಅದನ್ನು ನಿರಾಕರಿಸಿದ್ದೆ ಎಂದು ಹೇಳಿರುವ ''ಕಾಶಿಶ್'' ಆತ ಅವನ ಮನೆಯಲ್ಲಿ ಕ್ರಿಕೆಟಿಗನಾಗಿರಬಹುದು ಆದರೆ ನನ್ನ ಪಾಲಿಗೆ ಒಬ್ಬ ಸಾಮಾನ್ಯ ವ್ಯಕ್ತಿಯಷ್ಟೇ, ಅವನು ನನ್ನನ್ನೂ ಮೆಚ್ಚಿಸಬೇಕೆ ಹೊರತು ಅವನ ವೃತ್ತಿಯಿಂದ ನಾನು ಇಂಪ್ರೆಸ್ ಆಗುವುದಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಕ್ರಿಕೆಟಿಗನಾಗಿರುವುದರಿಂದ ನಾನು ಅವನನ್ನು ಮೆಚ್ಚಬಹುದು, ಸುಲಭವಾಗಿ ನನ್ನ ಇಂಪ್ರೆಸ್ ಮಾಡಬಹುದು ಎಂದು ಆತ ಅಂದುಕೊಂಡಿರಬಹುದು ಆದರೆ ನನಗೆ ಅದು ಇಷ್ಟ ಇಲ್ಲ ಎಂದು ಹೇಳಿರುವ ಕಾಶಿಶ್ ಕ್ರಿಕೆಟ್ ಒಂದು ವೃತ್ತಿ ನಾನು ಅದನ್ನು ಗೌರವಿಸುತ್ತೇನೆ ಹಾಗಂಥ ನನ್ನ ಜೊತೆ ನೀವು ಬ್ಯಾಟಿಂಗ್ ಮತ್ತು ಬೌಲಿಂಗ ಮಾಡಲು ಬಂದರೆ ನಾನು ಇಂಪ್ರೆಸ್ ಆಗುವುದಿಲ್ಲ ಎಂದು ಹೇಳಿದ್ದಾರೆ. ಆ ಕ್ರಿಕೆಟ್ ಆಟಗಾರನ ಹೆಸರು ಹೇಳಲು ನಿರಾಕರಿಸಿದ್ದಾರೆ.

ಸದ್ಯ ''ಕಾಶಿಶ್'' ಆಡಿರುವ ಈ ಮಾತು ಸಂಚಲನ ಸೃಷ್ಟಿಸಿದೆ. ಆ ಖ್ಯಾತ ಕ್ರಿಕೆಟ್ ಆಟಗಾರ ಯಾರಿರಬಹುದು ಎನ್ನುವ ಜಿಜ್ಞಾಸೆ ಕಾಡುತ್ತಿದೆ. ಹೆಸರು ಹೇಳದೇ ಈ ರೀತಿಯ ಆರೋಪಗಳನ್ನು ಮಾಡುವುದು ಎಷ್ಟು ಸರಿ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಶುರುವಾಗಿದೆ. ಪ್ರಚಾರದ ಹುಚ್ಚಿಂದ ಬಾಯಿಗೆ ಬಂದಂತೆ ಇವರೆಲ್ಲ ಮಾತನಾಡುತ್ತಾರೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.
ಅಂದ್ಹಾಗೇ ಕೇವಲ ಇದೊಂದೇ ವಿಚಾರ ಅಲ್ಲ. ಈ ಸಂದರ್ಶನದಲ್ಲಿ ಇನ್ನು ಹಲವು ವಿಚಾರಗಳ ಕುರಿತು ಮಾತನಾಡಿರುವ ''ಕಾಶಿಶ್'' ಹಲವು ಅನೈತಿಕ ಅಕ್ರಮ ಸಂಬಂಧಗಳನ್ನು ಕೂಡ ನಾನು ಈ ಬಣ್ಣದ ಲೋಕದಲ್ಲಿ ಕಂಡಿದ್ದೇನೆ ಎಂದು ಹೇಳಿದ್ದಾರೆ. ತುಂಬಾ ಜನ ಸೆಲೆಬ್ರೆಟಿಗಳು ನನ್ನ ಜೊತೆ ''ಫ್ಲರ್ಟ್'' ಮಾಡಿದ್ದಾರೆ ಎಂದು ಕೂಡ ಹೇಳಿದ್ದಾರೆ. ಸದ್ಯ ''ಕಾಶಿಶ್'' ಮಾತನಾಡಿರುವ ಈ ವಿಡಿಯೋ ವೈರಲ್ ಆಗಿದೆ.


Click it and Unblock the Notifications











