ಬಿಗ್ ಬಾಸ್ ಮಾಜಿ ಸ್ಪರ್ಧಿ ಮನೆಯಲ್ಲಿ ಕಳ್ಳತನ: ₹4.5 ಲಕ್ಷ ದೋಚಿ ಮನೆಕೆಲಸದವ ನಾಪತ್ತೆ, ಎಫ್‌ಐಆರ್ ದಾಖಲು!

ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಮನೆಗಳಿಗೆ ಕೂಡ ಕಳ್ಳಕಾಕರು ಯಾವ ಭಯ ಇಲ್ಲದೇ ನುಗ್ಗುತ್ತಿದ್ದಾರೆ. ಭದ್ರತೆಯ ನಡುವೆಯೇ ಸೆಲೆಬ್ರಿಟಿಗಳ ಐಶಾರಾಮಿ ಮನೆಯಲ್ಲಿರುವ ವಸ್ತುಗಳನ್ನೆಲ್ಲ ದೋಚಿಕೊಂಡು ಪರಾರಿಯಾಗುತ್ತಿದ್ದಾರೆ. ವಿಪರ್ಯಾಸ ಅಂದರೆ ಈ ಕಳ್ಳರ ಸುಳಿವು ಕೂಡ ಪೊಲೀಸರಿಗೆ ಸಿಗುವುದಿಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ...

ಬಿಗ್ ಬಾಸ್ ಸ್ಫರ್ಧಿಯೊಬ್ಬರ ಮನೆಯಲ್ಲಿ ಕಳ್ಳತನವಾಗಿದೆ. ಚೆಲುವೆಯ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಕಳ್ಳರ ಪಾಲಾಗಿದೆ. ಆ ಚೆಲುವೆಯ ಹೆಸರು ಕಶಿಶ್ ಕಪೂರ್. ಹೌದು.. ಕಶಿಶ್ ಕಪೂರ್.. ಹಿಂದಿಯ ಬಿಗ್ ಬಾಸ್ ಸ್ಫರ್ಧಿ. ಕಳೆದ ಬಾರಿಯ ಸೀಸನ್‌ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್‌ ಮನೆಯನ್ನು ಪ್ರವೇಶಿಸಿದ್ದ ಕಾಶಿಶ್ ''MTVಯ ಸ್ಪ್ಲಿಟ್ಸ್‌ ವಿಲ್ಲಾ''ದಲ್ಲಿ ಕೂಡ ಭಾಗವಹಿಸಿದ್ದರು.

bigg-boss-18s-kashish-kapoor-robbed-domestic-help-suspected-in-4-5-lakh-theft

ಇಂಥಾ ಕಶಿಶ್ ಕಪೂರ್ ಅವರ ಮನೆಯಲ್ಲಿ ಇದೀಗ ಕಳ್ಳತನವಾಗಿದೆ. ಮನೆಯ ಕೆಲಸಗಾರ ಸಚಿನ್ ಕುಮಾರ್ ಚೌಧರಿನೇ ಈ ಕೆಲಸವನ್ನು ಮಾಡಿದ್ದು ಎಂದು ಆರೋಪ ಮಾಡಿರುವ ಕಾಶಿಶ್ ಒಂದಲ್ಲ.. ಎರಡಲ್ಲ.. ನಾಲ್ಕು ಲಕ್ಷ ಹಣವನ್ನು ದೋಚಿ ಸಚಿನ್ ಪರಾರಿಯಾಗಿದ್ದಾನೆ ಎಂದು ದೂರನ್ನು ಸಲ್ಲಿಸಿದ್ದಾರೆ.

ಅಂಧೇರಿ ಪಶ್ಚಿಮದ ಆಜಾದ್ ನಗರದ ವೀರ್ ದೇಸಾಯಿ ರಸ್ತೆಯಲ್ಲಿರುವ ನ್ಯೂ ಅಂಬಿವಲಿ ಸೊಸೈಟಿಯಲ್ಲಿರುವ ತಮ್ಮ ಮನೆಯಲ್ಲಿ ಸಚಿನ್ ಕುಮಾರ್ ಚೌಧರಿ ಕಳೆದ ಐದು ತಿಂಗಳಿನಿಂದ ಕೆಲಸ ಮಾಡುತ್ತಿದ್ದ ಎಂದು ತಮ್ಮ ದೂರಿನಲ್ಲಿ ಹೇಳಿರುವ ಕಶಿಶ್ ತಮ್ಮ ಮನೆಯ ಕಪಾಟಿನಲ್ಲಿ ಏಳು ಲಕ್ಷ ಇಟ್ಟಿದ್ದಾಗಿ ಹೇಳಿದ್ದಾರೆ.

ನನ್ನ ತಾಯಿಗೆ ಹಣ ಕಳುಹಿಸಲು ನಾನು ನನ್ನ ಮನೆಯ ತಿಜೋರಿಯಲ್ಲಿ 07 ಲಕ್ಷ ಹಣ ಇಟ್ಟಿದ್ದೆ ಎಂದಿರುವ ಕಶಿಶ್ ಅದೊಂದು ದಿನ ನಾನು ಕಪಾಟು ತೆರೆದಾಗ ಅದರಲ್ಲಿ ಕೇವಲ 2.5 ಲಕ್ಷ ಮಾತ್ರ ಇತ್ತು ಎಂದು ಹೇಳಿದ್ದಾರೆ. 4.5 ಲಕ್ಷ ಹಣ ಕಳ್ಳತನವಾಗಿರುವ ವಿಚಾರ ನನಗೆ ಆಗಲೇ ಗೊತ್ತಾಯ್ತು ಎಂದು ಹೇಳಿದ್ದಾರೆ.

bigg-boss-18s-kashish-kapoor-robbed-domestic-help-suspected-in-4-5-lakh-theft

ಇನ್ನು ಈ ಕಳ್ಳತನ ನಡೆದ ನಂತರ ಸಚಿನ್ ಮನೆಯಲ್ಲಿ ಇರಲಿಲ್ಲ ಬದಲಿಗೆ ಮನೆಯಿಂದ ಓಡಿ ಹೋಗಿದ್ದಾನೆ ಎಂದು ಹೇಳಿರುವ ಕಶಿಶ್ ತಮಗೆ ಸಚಿನ್ ಮೇಲೆಯೇ ಅನುಮಾನ ಇದೆ ಎಂದು ತಮ್ಮ ದೂರಿನಲ್ಲಿ ದಾಖಲಿಸಿದ್ದಾರೆ. ಈ ಪ್ರಕರಣದಿಂದ ನನಗೆ ತುಂಬಾ ನೋವಾಗಿದೆ, ನಂಬಿದ ವ್ಯಕ್ತಿಯೇ ಮೋಸ ಮಾಡಿದ್ದಾನೆ.. ಈ ಮೂಲಕ ನನ್ನ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ ಅವನನ್ನು ಪೊಲೀಸರು ಶೀಘ್ರದಲ್ಲಿಯೇ ಪತ್ತೆ ಹಚ್ಚುತ್ತಾರೆ ಎನ್ನುವ ನಂಬಿಕೆ ನನಗೆ ಇದೆ ಎಂದು ಕೂಡಾ ಕಶಿಶ್ ಹೇಳಿದ್ದಾರೆ.

ಸದ್ಯ ಕಶಿಶ್ ನೀಡಿರುವ ದೂರನ್ನು ಸೆಕ್ಷನ್ 306ರ ಅಡಿ ದಾಖಲಿಸಿಕೊಂಡಿರುವ ಎಂಬೋಲಿ ಪೊಲೀಸರು ಆರೋಪಿ ಸಚಿನ್‌ಗಾಗಿ ಬಲೆ ಬೀಸಿದ್ದಾರೆ. ಇನ್ನು ತನಿಖೆಯ ವೇಳೆ ಪೊಲೀಸರಿಗೆ 50,000 ರೂಪಾಯಿ ಹಣ ಸಿಕ್ಕಿದ್ದು ಉಳಿದ ಹಣ ಪತ್ತೆ ಹಚ್ಚಲು ಮತ್ತು ಸಚಿನ್‌ನ ಹುಡುಕಲು ಪೊಲೀಸರು ಸಿಸಿಟಿವಿಯ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ.

ಇನ್ನುಳಿದಂತೆ ಹಿಂದಿ, ಇಂಗ್ಲೀಷ್, ಸಂಸ್ಕ್ರತ ಮತ್ತು ಭೋಜಪುರಿ ಭಾಷೆಯನ್ನು ಬಲ್ಲ ಕಶಿಶ್ ಕಪೂರ್ ಗೆ ಪ್ರಾಣಿಗಳೆಂದರೆ ಪಂಚ ಪ್ರಾಣ. ಕುಣಿಯುವುದು.. ಊರುರು ಸುತ್ತುವುದು.. ಇವರ ನೆಚ್ಚಿನ ಹವ್ಯಾಸ. ಇನ್‌ಸ್ಟಾಗ್ರಾಮ್‌ನಲ್ಲಿ 1.2ಮಿಲಿಯನ್ ಫಾಲೋವರ್ಸ್‌ಗಳನ್ನು ಇವರು ಹೊಂದಿದ್ದಾರೆ. ಸದ್ಯ ಕಶಿಶ್ ನೀಡಿರುವ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದು ಆರೋಪಿ ಪತ್ತೆಯಾದ ನಂತರ ಹೆಚ್ಚಿನ ವಿವರಗಳು ಲಭ್ಯವಾಗಲಿವೆ.

More from Filmibeat

English summary
Former Bigg Boss contestant Kashish Kapoor files an FIR after ₹4.5 lakh is stolen from her house. All eyes are on her domestic help, now missing.
Read more about: bigg boss robbery ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X