ಆಗಸ್ಟ್ 3ರಿಂದ ಶುರುವಾಗಲಿದೆ ಬಿಗ್ ಬಾಸ್, ಈ ಬಾರಿ ಮನೆಗೆ ಬರುತ್ತಿರುವ 13 ಸ್ಫರ್ಧಿಗಳು ಇವರೇ..?

ಬಿಗ್ ಬಾಸ್ ಜನಪ್ರಿಯವಾದ ಕಾರ್ಯಕ್ರಮ. ಹಲವರು ಈ ಕಾರ್ಯಕ್ರಮವನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡುತ್ತಾರೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಮರಾಠಿಯಲ್ಲಿ ಈ ಕಾರ್ಯಕ್ರಮಕ್ಕೆ ಅದ್ರದ್ದೇ ಆದ ಡಿಮ್ಯಾಂಡ್ ಇದೆ. ಇನ್ನು, ಹಿಂದಿಯಲ್ಲಿ ಬಿಗ್ ಬಾಸ್‌ನ 18 ಸೀಸನ್ ಪೂರ್ಣಗೊಂಡಿವೆ. ಈ 18ರಲ್ಲಿ 14 ಸೀಸನ್‌ನ ಸಲ್ಮಾನ್ ಖಾನ್ ನಡೆಸಿಕೊಂಡು ಬಂದಿದ್ದಾರೆ.

ಕನ್ನಡದಲ್ಲಿ ಈ ಕೆಲಸವನ್ನು ಸುದೀಪ್ ಕಳೆದ ಹನ್ನೊಂದು ವರ್ಷಗಳಿಂದ ಮಾಡಿದ್ದಾರೆ. ತೆಲುಗಿನಲ್ಲಿ ನಾಗಾರ್ಜುನ, ಮಲಯಾಳಂನಲ್ಲಿ ಮೋಹನ್ ಲಾಲ್ ಈ ಶೋದ ಉಸ್ತುವಾರಿ ವಹಿಸಿಕೊಂಡಿದ್ದರೆ ತಮಿಳಿನಲ್ಲಿ ಕಳೆದ ವರ್ಷದಿಂದ ವಿಜಯ್ ಸೇತು ಪತಿ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಮರಾಠಿಯಲ್ಲಿ ರಿತೇಶ್ ದೇಶಮುಖ್ ಈ ಕೆಲಸ ಮಾಡ್ತಿದ್ದಾರೆ.

Bigg Boss 19 August 3rd Premiere amp amp Here s The Star-Studded Contestant List

ಇಂಥಾ ಬಿಗ್ ಬಾಸ್ ಕಾರ್ಯಕ್ರಮ ಈ ವರ್ಷ ಮತ್ತೊಮ್ಮೆ ಶುರುವಾಗಲಿದೆ. ಈಗಾಗಲೇ ಎಲ್ಲ ಭಾಷೆಗಳಲ್ಲಿ ತೆರೆಮರೆಯಲ್ಲಿ ಕೆಲಸ ಕೂಡ ಶುರುವಾಗಿದೆ. ಅದರಲ್ಲಿಯೂ ಹಿಂದಿಯಲ್ಲಿ ಬಿಗ್ ಬಾಸ್ ಕೆಲಸಗಳು ವೇಗವಾಗಿ ನಡೆಯುತ್ತಿವೆ.

ಹೌದು, ಅಸಲಿಗೆ ಸಾಮಾನ್ಯವಾಗಿ ಬಿಗ್ ಬಾಸ್‌ನ ಕಲರವ ಪ್ರತಿ ಬಾರಿ ಜೂನ್ ಅಂತ್ಯಕ್ಕೆ ಶುರುವಾಗುತ್ತೆ. ಬಿಗ್ ಬಾಸ್‌ ಮನೆಯಲ್ಲಿ ಯಾರೆಲ್ಲ ಕಾಣಸಿಗಲಿದ್ದಾರೆ ಎಂದು ಒಂದು ವರ್ಗ ಅಂತೆ ಕಂತೆಯ ಸಂತೆಯಲ್ಲಿ ಮಾತನಾಡಲು ಶುರು ಮಾಡುತ್ತೆ. ಈ ವರ್ಷ ಕೂಡ ಇದೇ ತರಹದ ವಾತಾವರಣ ಇದೆ.

ಆದರೆ .. ಫಾರ್ ಎ ಚೇಂಜ್ .. ಪ್ರತಿ ಬಾರಿ ಎಲ್ಲ ಭಾಷೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ಒಂದೆರಡು ವಾರದ ನಂತರ ಶುರುವಾಗುತ್ತಿದ್ದ ಹಿಂದಿಯ ಬಿಗ್ ಬಾಸ್‌ ಈ ಬಾರಿ ಬೇರೆ ಎಲ್ಲ ಭಾಷೆಗಳಿಗಿಂತ ಮೊದಲು ಶುರುವಾಗಲಿದೆ.

ಹೌದು, ಕಳೆದ ಕೆಲ ದಿನಗಳ ಹಿಂದೆಯಷ್ಟೇ.. 'ಪಿಂಕ್ ವಿಲ್ಲಾ' ಬಿಗ್ ಬಾಸ್ 19ನೇ ಸೀಸನ್ ಕುರಿತು ವರದಿಯನ್ನು ಮಾಡಿತ್ತು. ಈ ಜುಲೈ 30 2025ರಿಂದ ಕಾರ್ಯಕ್ರಮ ಶುರುವಾಗಲಿದ್ದು ಜೂನ್ ಅಂತ್ಯಕ್ಕೆ ಬಿಗ್ ಬಾಸ್ ಪ್ರೋಮೋ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.

ಆದರೆ ಈಗ ಬಿಗ್ ಬಾಸ್ 19ನೇ ಸೀಸನ್‌ಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಸ್ಟ್ ವೈರಲ್ ಆಗಿದೆ. ಅದರ ಅನ್ವಯ ಈ ಬಾರಿ ಬಿಗ್ ಬಾಸ್‌ ಜುಲೈ 30 ಅಲ್ಲ ಬದಲಿಗೆ ಆಗಸ್ಟ್ 3ರಿಂದ ಶುರುವಾಗಲಿದೆ ಎಂದು ಹೇಳಲಾಗಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಬಾರಿ ಸ್ಫರ್ಧೆ ಮಾಡಲಿರುವ ಸ್ಫರ್ಧಿಗಳು ಇವರೇ ಎಂದು ಕೆಲವರ ಹೆಸರನ್ನು ಕೂಡ ಹರಿಬಿಡಲಾಗಿದೆ. ಸಿಯಾಸತ್. ಕಾಮ್ ಈ ಲಿಸ್ಟ್ ನ ಹಂಚಿಕೊಂಡಿದ್ದು ಈ ಬಾರಿ ಭಾಗವಹಿಸುವ ಸಂಭಾವ್ಯ ಸ್ಫರ್ಧಿಗಳ ಲಿಸ್ಟ್ ಈ ಕೆಳಗಿನಂತೆ ಇದೆ.

bigg-boss-19-august-3rd-premiere-heres-the-star-studded-contestant-list

ಅಂದ್ಹಾಗೇ ಈ ಬಾರಿಯ ಹಿಂದಿ ಬಿಗ್ ಬಾಸ್ ಮೂರಲ್ಲ ಬದಲಿಗೆ ಐದೂವರೆ ತಿಂಗಳು ನಡೆಯಲಿದೆ. ಈ ಮೂಲಕ ಕಿರುತೆರೆಯ ಇತಿಹಾಸದಲ್ಲಿ ಹೊಸದೊಂದು ಕ್ರಾಂತಿಯನ್ನು ಮಾಡಲು ಆಯೋಜಕರು ಮುಂದಾಗಿದ್ದಾರೆ ಎಂದು 'ಪಿಂಕ್‌ವಿಲ್ಲಾ' ಈ ಹಿಂದೆ ವರದಿ ಮಾಡಿದೆ.

ಇನ್ನು, ಕಳೆದ ಕೆಲ ವರ್ಷಗಳಿಂದ ಬಿಗ್ ಬಾಸ್‌ ಕಾರ್ಯಕ್ರಮದ ಓಟಿಟಿ ಆವೃತ್ತಿ ಪ್ರಸಾರವಾಗುತ್ತಿತ್ತು. ಆದರೆ ಈ ವರ್ಷ ಬಿಗ್ ಬಾಸ್ ಓಟಿಟಿಯನ್ನು ಕ್ಯಾನ್ಸಲ್ ಮಾಡಲಾಗಿದ್ದು ಕಿರುತೆರೆಯಲ್ಲಿಯೇ ಐದೂವರೆ ತಿಂಗಳು ಮನರಂಜನೆಯ ರಸದೌತಣ ಬಡಿಸಲು ಬಿಗ್ ಬಾಸ್ ಬಳಗ ಸಿದ್ದವಾದಂತೆ ಇದೆ. ಇದಕ್ಕೆ ಪೂರಕವಾಗಿ ಪ್ರತಿ ವರ್ಷ ಸೆಪ್ಟೆಂಬರ್-ಅಕ್ಟೋಬರ್ ಸಮಯಕ್ಕೆ ಶುರುವಾಗುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮ ಆಗಸ್ಟ್ 3ರಿಂದ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

ಇನ್ನುಳಿದಂತೆ ನಾವು ಮೇಲೆ ಉಲ್ಲೇಖಿಸಿರುವ ಸಂಭಾವ್ಯ ಸ್ಫರ್ಧಿಗಳ ಪಟ್ಟಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಪಟ್ಟಿಯಲ್ಲಿರುವರಲ್ಲಿ ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುತ್ತಾರೆ, ಇವರನ್ನು ಹೊರತು ಪಡಿಸಿ ಬೇರೆ ಯಾರೆಲ್ಲ ಬರುತ್ತಾರೆ ಎನ್ನುವುದಕ್ಕೆ ಉತ್ತರ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಒಂದು ವಾರದ ಆಚೀಚೆ ಸ್ಪಷ್ಟವಾಗಿ ಸಿಗಲಿದೆ.

More from Filmibeat

English summary
Mark your calendars! Bigg Boss 19 kicks off on August 3, 2025, with a massive twist: Discover who's entering the house in this star-studded season
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X