ಬಿಗ್ ಬಾಸ್‌ನಲ್ಲಿ ಭಾರೀ ಬದಲಾವಣೆ,ನಿರೂಪಣೆಯಿಂದ ದಿಢೀರ್ ಹಿಂದೆ ಸರಿದ ಸೂಪರ್ ಸ್ಟಾರ್ ; ಸಾರಥ್ಯ ವಹಿಸಿಕೊಂಡ ನಿರ್ದೇಶಕಿ
''ಬಿಗ್ ಬಾಸ್'' ಕೇವಲ ಸ್ಫರ್ಧಿಗಳಿಗೆ ಮಾತ್ರವಲ್ಲ ಕಾರ್ಯಕ್ರಮವನ್ನು ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಕೂಡ ಚಿನ್ನದ ಮೊಟ್ಟೆ ಇಡುವ ಕೋಳಿ. ಬೇರೆ ಬೇರೆಯ ಭಾಷೆಗಳಲ್ಲಿ ಈ ಕಾರ್ಯಕ್ರಮದ ನಿರೂಪಣೆ ಮಾಡುವ ಸೂಪರ್ ಸ್ಟಾರ್‌ಗಳು ಕೋಟ್ಯಂತರ ರೂಪಾಯಿಯ ''ಸಂಭಾವನೆ''ಯನ್ನು ಪಡೆಯುತ್ತಾರೆ. ಈ ''ಸಂಭಾವನೆ''ಯ ಕಾರಣದಿಂದನೇ ಹಲವರು ಎಷ್ಟೇ ಕಷ್ಟ ಆದರೂ ಕೂಡ ತಮ್ಮ ''ಸಂಬಂಧ''ವನ್ನು ವರ್ಷಾನುವರ್ಷಗಳಿಂದ ಮುಂದುವರೆಸಿಕೊಂಡು ಕೂಡ ಬಂದಿದ್ದಾರೆ.
ಇದಕ್ಕೆ ಕೈಗನ್ನಡಿ ಎಂಬಂತೆ ಸುದೀಪ್ ಮತ್ತು ''ಬಿಗ್ ಬಾಸ್'' ಸಂಬಂಧ ಹನ್ನೆರಡು ವರ್ಷಗಳಷ್ಟು ಹಳೆಯದಾದರೆ ಕಳೆದ ಹದಿನಾರು ವರ್ಷಗಳಿಂದ ''ಬಿಗ್ ಬಾಸ್'' ಜೊತೆ ಸಲ್ಮಾನ್ ಖಾನ್ ಸಂಬಂಧ ಬೆಸೆದುಕೊಂಡಿದೆ. ಆರಂಭದ 3 ಸೀಸನ್ ಹೊರತು ಪಡಿಸಿದರೆ ಕಳೆದ 16 ವರ್ಷಗಳಿಂದ ಸಲ್ಮಾನ್ ಖಾನ್ ''ಬಿಗ್ ಬಾಸ್''ನ ಬಹುಮುಖ್ಯ ಭಾಗವಾಗಿದ್ದಾರೆ. ನಾಗಾರ್ಜುನ ಮತ್ತು ಮೋಹನ್ ಲಾಲ್ ಕಳೆದ ಏಳು ವರ್ಷಗಳಿಂದ ಈ ಸಂಬಂಧ ಮುಂದುವರೆಸಿಕೊಂಡು ಬಂದಿದ್ದಾರೆ.

ಇನ್ನೂ.. ಕನ್ನಡದಲ್ಲಿ ''ಬಿಗ್ ಬಾಸ್'' ಅಂದರೆ ಸುದೀಪ್ ಹೇಗೆ ನೆನಪಾಗ್ತಾರೋ, ಅದೇ ರೀತಿ ಹಿಂದಿಯಲ್ಲಿ ಸಲ್ಮಾನ್ ಖಾನ್ ನೆನಪಾಗುತ್ತಾರೆ. ಯಾಕೆಂದರೆ.. ಸುದೀಪ್ ಅವರಿಗೆ ಮಾತ್ರ ''ಬಿಗ್ ಬಾಸ್'' ಎರಡನೇ ಮನೆಯಲ್ಲ. ಸಲ್ಮಾನ್ ಖಾನ್ ಅವರಿಗೆ ಕೂಡ ''ಬಿಗ್ ಬಾಸ್'' ಎರಡನೇ ಮನೆಯಂತೆಯೇ. ಸಲ್ಮಾನ್ ಖಾನ್ ಅವರಿಲ್ಲದೇ ''ಬಿಗ್ ಬಾಸ್'' ಊಹಿಸಿಕೊಳ್ಳುವುದು ಕೂಡ ಕಷ್ಟ. ಅಷ್ಟರ ಮಟ್ಟಿಗೆ ''ಬಿಗ್ ಬಾಸ್'' ಪ್ರೇಕ್ಷಕರನ್ನು ಸಲ್ಮಾನ್ ಖಾನ್ ಆವರಿಸಿಕೊಂಡಿದ್ದಾರೆ.
ಆದರೆ ಈ ಬಾರಿ ನಿರೂಪಣೆಯಿಂದ ಆಗಾಗ ಸಲ್ಮಾನ್ ಖಾನ್ ಹಿಂದೆ ಸರಿಯಲಿದ್ದಾರೆ. ಸಲ್ಮಾನ್ ಖಾನ್ ಅವರಿಲ್ಲದೇ ವಾರಾಂತ್ಯದ ಕಥೆಯನ್ನು ಕೆಲವು ದಿನ ನೋಡಬೇಕಾದ ಅನಿವಾರ್ಯತೆ ಇದೀಗ ಹಿಂದಿ ಪ್ರೇಕ್ಷಕರಿಗೆ ಎದುರಾಗಿದೆ. ಈ ವಾರದಿಂದಲೇ ಸಲ್ಮಾನ್ ಖಾನ್ ಅವರ ಅನುಪಸ್ಥಿತಿ ಕಾಡಲಿದ್ದು ಸಲ್ಮಾನ್ ಖಾನ್ ಬದಲು ಬಾಲಿವುಡ್‌ನ ಖ್ಯಾತ ನೃತ್ಯ ಕೊರಿಯೋಗ್ರಾಫರ್ .. ನಿರ್ದೇಶಕಿ.. ಫರಾ ಖಾನ್ ಇಂದು (ಸೆಪ್ಟೆಂಬರ್ 13) ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಹೌದು, ಅಸಲಿಗೆ ಈ ಬಾರಿ ''ಬಿಗ್ ಬಾಸ್'' ಮೂರಲ್ಲ ಬದಲಿಗೆ ಐದು ತಿಂಗಳು ಪ್ರಸಾರವಾಗಲಿದೆ ಎನ್ನುವ ಸುದ್ದಿ ಕಾರ್ಯಕ್ರಮ ಆರಂಭವಾಗುವ ಮುನ್ನ ಕೇಳಿ ಬಂದಿತ್ತು. ಕಾರ್ಯಕ್ರಮ ಐದು ತಿಂಗಳು ನಡೆಯುವ ಹಿನ್ನೆಲೆ ಆಗಾಗ ವಾರಾಂತ್ಯದ ಕೆಲ ಎಪಿಸೋಡ್‌ಗಳಲ್ಲಿ ಸಲ್ಮಾನ್ ಖಾನ್ ಕಾಣಿಸುವುದಿಲ್ಲ ಎಂದು ''ಪಿಂಕ್ ವಿಲ್ಲಾ'' ವರದಿ ಮಾಡಿತ್ತು. ಸಲ್ಮಾನ್ ಖಾನ್ ಗೈರು ಹಾಜರಾತಿಯಲ್ಲಿ ಅನಿಲ್ ಕಪೂರ್.. ಕರಣ್ ಜೋಹರ್ ಮತ್ತು ಫರಾ ಖಾನ್ ಕಾರ್ಯಕ್ರಮ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ ಎಂದು ಕೂಡ ಹೇಳಲಾಗಿತ್ತು.
ಈ ಸುದ್ದಿಯ ಮೇಲೆ ''ಬಿಗ್ ಬಾಸ್'' ಅಧಿಕೃತ ಮುದ್ರೆ ಒತ್ತಿಲ್ಲವಾದರು ಸದ್ಯ ಈ ಸುದ್ದಿ ನಿಜವಾದಂತೆ ಕಾಣುತ್ತಿದೆ. ಇದಕ್ಕೆ ಪುರಾವೆ ಎನ್ನುವಂತೆ ಈ ವಾರ ಸಲ್ಮಾನ್ ಖಾನ್ ಬದಲು ಫರಾ ಖಾನ್ ಬಂದಿದ್ದಾರೆ. ಸ್ಫರ್ಧಿಗಳ ಮೈಚಳಿ ಬಿಡಿಸಿದ್ದಾರೆ. ಅದರಲ್ಲಿಯೂ ಸ್ಫರ್ಧಿಯ ತಿನ್ನುವ ತಟ್ಟೆಯನ್ನು ಕಿತ್ತುಕೊಂಡ ಹಿರಿಯ ನಟಿ ಕುನಿಕಾ ಸದಾನಂದ್ ಅವರ ಮೇಲೆ ಫರಾ ಖಾನ್ ಕೆಂಡ ಕಾರಿದ್ದಾರೆ.
ಇನ್ನೂ ಫರಾ ಖಾನ್ ಮಾತ್ರವಲ್ಲ ಈ ವಾರ ಬಿಗ್ ಬಾಸ್ ಕಾರ್ಯಕ್ರಮವನ್ನು ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಕೂಡ ನಡೆಸಿಕೊಡಲಿದ್ದಾರೆ. ಇವರು ಇಬ್ಬರು ಅಭಿನಯಿಸಿರುವ ''ಜಾಲಿ ಎಲ್‌ಎಲ್‌ಬಿ 3'' ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ತಮ್ಮ ಚಿತ್ರದ ಪ್ರಚಾರವನ್ನು ಮಾಡಲು ಇಬ್ಬರು ಬಿಗ್ ಬಾಸ್ ಅಂಗಳಕ್ಕೆ ಬಂದಿದ್ದಾರೆ. ತಾವು ನಕ್ಕು ಮನೆಯಲ್ಲಿರುವ ಸ್ಫರ್ಧಿಗಳನ್ನು ಕೂಡ ನಗಿಸಿದ್ದಾರೆ.
ಇನ್ನುಳಿದಂತೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಒಂದು ಗಂಟೆಯ ಮೊದಲು ಜೀಯೋ ಹಾಟ್ ಸ್ಟಾರ್‌ನಲ್ಲಿ ಕಾರ್ಯಕ್ರಮ ಶುರುವಾಗಲಿದೆ. ಈ ಮೂಲಕ ಆಸಕ್ತ ಬಿಗ್ ಬಾಸ್ ಪ್ರೇಮಿಗಳಿಗೆ ಎಲ್ಲರಿಗಿಂತ ಮೊದಲು ಕಾರ್ಯಕ್ರಮ ಕಣ್ತುಂಬಿಕೊಳ್ಳುವ ಸೌಲಭ್ಯವನ್ನು ಆಯೋಜಕರು.. ವಾಹಿನಿಯವರು ನೀಡಿದ್ದಾರೆ. ಕಲರ್ಸ್‌ನಲ್ಲಿ ರಾತ್ರಿ 10-30ಕ್ಕೆ ಕಾರ್ಯಕ್ರಮ ಶುರುವಾದರೆ ಜೀಯೋ ಹಾಟ್‌ಸ್ಟಾರ್‌ನಲ್ಲಿ ಕಾರ್ಯಕ್ರಮ ರಾತ್ರಿ 9ಕ್ಕೆ ಶುರುವಾಗುತ್ತೆ.


Click it and Unblock the Notifications











