ಕುತೂಹಲ ಕೆರಳಿಸಿದ ಬಿಗ್ ಬಾಸ್ ಕ್ಲೈಮ್ಯಾಕ್ಸ್ ; ಇದೇ ಭಾನುವಾರ ಗ್ರ್ಯಾಂಡ್ ಫಿನಾಲೆ- ಈ 5 ಜನರಲ್ಲಿ ಗೆಲ್ಲೋರು ಯಾರು ?

''ಬಿಗ್ ಬಾಸ್'' ಕೇವಲ ಸ್ಫರ್ಧಿಗಳಿಗೆ ಮಾತ್ರವಲ್ಲ ಕಾರ್ಯಕ್ರಮವನ್ನು ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಕೂಡ ಚಿನ್ನದ ಮೊಟ್ಟೆ ಇಡುವ ಕೋಳಿ. ಬೇರೆ ಬೇರೆಯ ಭಾಷೆಗಳಲ್ಲಿ ಈ ಕಾರ್ಯಕ್ರಮದ ನಿರೂಪಣೆ ಮಾಡುವ ಸೂಪರ್ ಸ್ಟಾರ್‌ಗಳು ಕೋಟ್ಯಂತರ ರೂಪಾಯಿಯ ''ಸಂಭಾವನೆ''ಯನ್ನು ಪಡೆಯುತ್ತಾರೆ. ಈ ''ಸಂಭಾವನೆ''ಯ ಕಾರಣದಿಂದನೇ ಹಲವರು ಎಷ್ಟೇ ಕಷ್ಟ ಆದರೂ ಕೂಡ ತಮ್ಮ ''ಸಂಬಂಧ''ವನ್ನು ವರ್ಷಾನುವರ್ಷಗಳಿಂದ ಮುಂದುವರೆಸಿಕೊಂಡು ಕೂಡ ಬಂದಿದ್ದಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ಸುದೀಪ್ ಮತ್ತು ''ಬಿಗ್ ಬಾಸ್'' ಸಂಬಂಧ ಹನ್ನೆರಡು ವರ್ಷಗಳಷ್ಟು ಹಳೆಯದಾದರೆ ಕಳೆದ ಹದಿನಾರು ವರ್ಷಗಳಿಂದ ''ಬಿಗ್ ಬಾಸ್'' ಜೊತೆ ಸಲ್ಮಾನ್ ಖಾನ್ ಸಂಬಂಧ ಬೆಸೆದುಕೊಂಡಿದೆ. ಆರಂಭದ 3 ಸೀಸನ್ ಹೊರತು ಪಡಿಸಿದರೆ ಕಳೆದ 16 ವರ್ಷಗಳಿಂದ ಸಲ್ಮಾನ್ ಖಾನ್ ''ಬಿಗ್ ಬಾಸ್‌''ನ ಬಹುಮುಖ್ಯ ಭಾಗವಾಗಿದ್ದಾರೆ. ನಾಗಾರ್ಜುನ ಮತ್ತು ಮೋಹನ್ ಲಾಲ್ ಕಳೆದ ಏಳು ವರ್ಷಗಳಿಂದ ಈ ಸಂಬಂಧ ಮುಂದುವರೆಸಿಕೊಂಡು ಬಂದಿದ್ದಾರೆ.

BIGG BOSS 19 FRENZY Final 5 Set Trophy UNLEASHED The Ultimate Power Play Begins

ಇನ್ನೂ.. ಕನ್ನಡದಲ್ಲಿ ''ಬಿಗ್ ಬಾಸ್'' ಅಂದರೆ ಸುದೀಪ್ ಹೇಗೆ ನೆನಪಾಗ್ತಾರೋ, ಅದೇ ರೀತಿ ಹಿಂದಿಯಲ್ಲಿ ಸಲ್ಮಾನ್ ಖಾನ್ ನೆನಪಾಗುತ್ತಾರೆ. ಯಾಕೆಂದರೆ.. ಸುದೀಪ್ ಅವರಿಗೆ ಮಾತ್ರ ''ಬಿಗ್ ಬಾಸ್'' ಎರಡನೇ ಮನೆಯಲ್ಲ. ಸಲ್ಮಾನ್ ಖಾನ್ ಅವರಿಗೆ ಕೂಡ ''ಬಿಗ್ ಬಾಸ್'' ಎರಡನೇ ಮನೆಯಂತೆಯೇ. ಆಗಲೇ ಹೇಳಿದಂತೆ ಮನೆಯ ಜೊತೆ 16 ವರ್ಷದ ಸಂಬಂಧ ಇವರದ್ದು.

ಇಂಥಾ ಸಲ್ಮಾನ್ ಖಾನ್ ಈಗ ತಮ್ಮ ಈ ಮನೆಗೆ ಮುಂದಿನ ವರ್ಷದ ಅಂತ್ಯದವರೆಗೆ ಗುಡ್ ಬೈ ಹೇಳಲಿದ್ದಾರೆ. ಇದೇ ಭಾನುವಾರ ಈ ವರ್ಷದ ಬಿಗ್ ಬಾಸ್‌ ವಿನ್ನರ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ಹೇಳಿ ವಿಜೇತನ ಮುಡಿಗೆ ಟ್ರೋಫಿ ಅರ್ಪಿಸಲಿದ್ದಾರೆ.

ಹೌದು, ಮಲಯಾಳಂನ ನಂತರ ಈ ವರ್ಷದ ಹಿಂದಿ ಬಿಗ್ ಬಾಸ್‌ ಗೆ ತೆರೆ ಬೀಳಲಿದೆ. ಇದೇ ಭಾನುವಾರ ( ಡಿಸೆಂಬರ್ 7 ) ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಫಿನಾಲೆ ಮುನ್ನ .. ಕೊನೆಯ ಹಂತಕ್ಕೆ ಬಂದ 5 ಸ್ಫರ್ಧಿಗಳನ್ನು ಅಸೆಂಬ್ಲಿ ರೂಮ್‌ಗೆ ಕರೆದು ಈ ಬಾರಿಯ ಹೊಚ್ಚ ಹೊಸ ಟ್ರೋಫಿಯನ್ನು ಕೂಡ ಅನಾವರಣಗೊಳಿಸಲಾಗಿದೆ.

ಅಂದ್ಹಾಗೇ ಈ ಬಾರಿ ಮನೆಯೊಳಗೆ 16 ಜನ ಹೋಗಿದ್ದರು. ಇಬ್ಬರು ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಆ ನಂತರ ಹೋಗಿದ್ದರು. ಆ ಪೈಕಿ ಭಾರತ ಕ್ರಿಕೆಟ್ ತಂಡದ ಆಟಗಾರ ದೀಪಕ್ ಚಹಾರ್ ಅವರ ಸಹೋದರಿ ಮಾಲ್ತಿ ಚಹಾರ್ ಒಬ್ಬರಾದರೆ ಬಿಗ್ ಬಾಸ್ 13ನೇ ಸೀಸನ್‌ನ ರನ್ನರ್ ಅಪ್ ಶೆಹನಾಜ್ ಗಿಲ್ ಅವರ ಸಹೋದರ ಶೆಹಬಾಜ್ ಮತ್ತೊಬ್ಬರು. ಇವರು ಇಬ್ಬರು ಸದ್ಯ ಮನೆಯಿಂದ ಹೊರ ಬಂದಿದ್ದಾರೆ.

BIGG BOSS 19 FRENZY Final 5 Set Trophy UNLEASHED The Ultimate Power Play Begins

ಶೆಹಬಾಜ್ 98 ದಿನಕ್ಕೆ ಹೊರ ಬಂದರೆ ಮೊನ್ನೆ ಮೊನ್ನೆಯಷ್ಟೇ 102 ದಿನಗಳನ್ನು ಪೂರೈಸಿ ಮಾಲ್ತಿ ಚಹಾರ್ ಹೊರ ಬಂದಿದ್ದಾರೆ. ನಟಾಲಿಯಾ.. ನಗ್ಮಾ ಮಿರ್ಜಕರ್.. ಆವೇಜ್ ದರ್ಬಾರ್.. ಜೈಶಾನ್ ಖಾದ್ರಿ.. ನೇಹಲ್.. ಬಶೀರ್ ಅಲಿ.. ನೀಲಂ ಗಿರಿ.. ಅಭಿಷೇಕ್ ಬಜಾಜ್.. ಮೃದುಲ್ ತಿವಾರಿ.. ಕುನಿಕಾ ಸದಾನಂದ್.. ಆಶ್ನೂರ್ ಕೌರ್.. ಮನೆಯಿಂದ ಹೊರಗಡೆ ಬಂದಿರುವ ಉಳಿದ ಸ್ಫರ್ಧಿಗಳು.

ಸದ್ಯ ಮನೆಯೊಳಗೆ ಅಮಾಲ್ ಮಲ್ಲಿಕ್.. ತಾನ್ಯಾ ಮಿತ್ತಲ್.. ಪ್ರಣಿತ್ ಮೋರೆ.. ಫರ್ಹಾನಾ ಭಟ್.. ಮತ್ತು ಹಿಂದಿ ಕಿರುತೆರೆಯ ಶಾರುಖ್ ಖಾನ್ ಎಂದೇ ಕರೆಯಲ್ಪಡುವ ಗೌರವ್ ಖನ್ನಾ ಉಳಿದಿದ್ದಾರೆ. ಈ ಐದು ಜನರಲ್ಲಿ ಈ ಬಾರಿ ಹಲವರ ಪ್ರಕಾರ ಗೌರವ್ ಖನ್ನಾ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ನಿಜಕ್ಕೂ ಗೌರವ್ ಗೆಲ್ತಾರಾ..? ಎನ್ನುವ ಪ್ರಶ್ನೆಗೆ ಈ ಭಾನುವಾರ ಉತ್ತರ ಸಿಗಲಿದೆ.

ಇನ್ನೂ ಮೊದಲ ರನ್ನರ್ ಅಪ್ ಸ್ಥಾನ ತಾನ್ಯಾ ಮಿತ್ತಲ್ ಅವರ ಪಾಲಾದರೂ ಅಚ್ಚರಿ ಇಲ್ಲ. ಪ್ರಣಿತ್ ಮೋರೆ.. ಫರ್ಹಾನಾ ಭಟ್.. ಅಮಾಲ್ ಮಲ್ಲಿಕ್.. ಈ ಲೆಕ್ಕಾಚಾರ ಉಲ್ಟಾ ಮಾಡಿ ಟ್ರೋಫಿ ಗೆಲ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಈ ಭಾನುವಾರ ''ಬಿಗ್ ಬಾಸ್'' ಗ್ರ್ಯಾಂಡ್ ಫಿನಾಲೆ ರಾತ್ರಿ 09-30ಕ್ಕೆ ಆರಂಭವಾಗಲಿದೆ. ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ಫಿನಾಲೆಯಂದು ಮುಖ್ಯ ಅತಿಥಿಗಳಾಗಿ ವೇದಿಕೆಗೆ ಬರಲಿದ್ದಾರೆ.

More from Filmibeat

English summary
Who will win Bigg Boss 19? The Top 5 finalists are announced as the coveted trophy is unveiled. Find final predictions for Gaurav Khanna, Farrhana Bhatt, and the other contenders.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X