ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ನಡೆಯಲಿದೆ 'ರಾಜಕೀಯ', ಆಗಸ್ಟ್ 24ರಿಂದ ಹೊಸ ಸೀಸನ್ ಶುರು

ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿ, ಕಿರುತೆರೆಯಲ್ಲಿ ಹೊಸದೊಂದು ಅಲೆಯನ್ನು ಎಬ್ಬಿಸಿದ ಕಾರ್ಯಕ್ರಮ ''ಬಿಗ್ ಬಾಸ್''. ತಮ್ಮ ಮನೆಯ ಹತ್ತು ಹಲವು ಸಮಸ್ಯೆಗಳನ್ನು ಮರೆತು ಈ ಮನೆಯಲ್ಲಿನ ಸಮಸ್ಯೆಗಳನ್ನು ಹಲವಾರು ಜನ ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಕಾಲ ಕ್ರಮೇಣ ಈ ಕಾರ್ಯಕ್ರಮ ಹಳಿ ತಪ್ಪಿತು. ಬಿಗ್ ಬಾಸ್ ವಿವಾದಾತ್ಮಕ ವ್ಯಕ್ತಿಗಳಿಗಷ್ಟೇ ಲಾಯಕ್ಕು ಎನ್ನುವ ಅಭಿಪ್ರಾಯ ವ್ಯಕ್ತವಾಗಲು ಶುರುವಾಯ್ತು.

ಹಾಗಂಥ .. ಈ ಕಾರ್ಯಕ್ರಮದ ಜನಪ್ರಿಯತೆ ಕಡಿಮೆ ಆಗಲಿಲ್ಲ. ಯಾಕೆಂದರೆ.. ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಈಗಲೂ ಕೂಡ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ.

Bigg Boss 19 Salman Khan Unveils New Theme OTT First TV Premiere Follows Get Ready

ಇಂಥಾ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿ ಕೂಡ ಶುರುವಾಗಲಿದೆ. ಈಗಾಗಲೇ ದಿನಗಣನೆ ಕೂಡ ಆರಂಭವಾಗಿದೆ. ಮಲಯಾಳಂನಲ್ಲಿ ಈ ಆಗಸ್ಟ್ 3ರಿಂದ ಬಿಗ್ ಬಾಸ್ ಕಾರ್ಯಕ್ರಮ ಅದ್ಧೂರಿಯಾಗಿ ಶುರುವಾಗಲಿದೆ. ಮೋಹನ್ ಲಾಲ್ ಸಾರಥ್ಯದಲ್ಲಿ ಮೂಡಿ ಬರಲಿರುವ ಈ ಕಾರ್ಯಕ್ರಮದ ಪ್ರೋಮೋಗಳು ಈಗಾಗಲೇ ಕೇರಳಿಗರಲ್ಲಿ ಕುತೂಹಲವನ್ನು ಕೆರಳಿಸಿವೆ.

ಇನ್ನು ಮಲಯಾಳಂನಲ್ಲಿ ಕಾರ್ಯಕ್ರಮ ಶುರುವಾಗುತ್ತಿರುವ ಹಿನ್ನೆಲೆ ಕನ್ನಡ ಮತ್ತು ತೆಲುಗಿನಲ್ಲಿ ಬಿಗ್ ಬಾಸ್ ಜಾತ್ರೆ ಎಂದಿನಿಂದ ಶುರುವಾಗಲಿದೆ ಎನ್ನುವ ಪ್ರಶ್ನೆ ಸಹಜವಾಗಿ ಅನೇಕರನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಸದ್ಯ ಇನ್ನು ಉತ್ತರ ಸಿಗಬೇಕಾದರು ಹಿಂದಿಯಲ್ಲಿ ಸಲ್ಮಾನ್ ಖಾನ್ ರಣಕಹಳೆ ಊದಿದ್ದಾರೆ.

Bigg Boss 19 Salman Khan Unveils New Theme OTT First TV Premiere Follows Get Ready

ಹೌದು, ಮಲಯಾಳಂನಲ್ಲಿ ಬಿಗ್ ಬಾಸ್ ಬೆನ್ನಲ್ಲೇ ಹಿಂದಿಯಲ್ಲಿ ಬಿಗ್ ಬಾಸ್‌ ಪ್ರಸಾರದ ದಿನಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಕಾರ್ಯಕ್ರಮದ ಮೊದಲ ಪ್ರೋಮೋವನ್ನು ಅನಾವರಣ ಮಾಡಲಾಗಿದ್ದು ಸಲ್ಮಾನ್ ಖಾನ್ ರಾಜಕಾರಣಿಯ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಮನೆಯ ಅಧಿಕಾರ ಕೇವಲ ಒಬ್ಬ ವ್ಯಕ್ತಿಯ ಬಳಿ ಮಾತ್ರ ಅಲ್ಲ ಬದಲಿಗೆ ಮನೆಯ ಸದಸ್ಯರೆಲ್ಲರ ಮಾತಿನಂತೆ ನಡೆಯುತ್ತೆ ಎಂದು ಹೇಳಿದ್ದಾರೆ.

ಇನ್ನು ಈ ಬಾರಿ ಅಧಿಕಾರ ಮನೆಯ ಎಲ್ಲರ ಬಳಿ ಇರುವುದರಿಂದ ಮನೆ ತುಂಬಾ ತುಸು ಹೆಚ್ಚೇ ಗದ್ದಲ ಗಲಾಟೆಯ ಸದ್ದು ಕೇಳಿ ಬರುವ ಸಾಧ್ಯತೆ ಇದೆ. ಅಧಿಕಾರ ಚಲಾಯಿಸಲು ಎಲ್ಲರೂ ಮುಗಿಬೀಳುವ ಎಲ್ಲ ಲಕ್ಷಣ ಕಂಡು ಬರುತ್ತಿದೆ.

Bigg Boss 19 Salman Khan Unveils New Theme OTT First TV Premiere Follows Get Ready

ಆಗಸ್ಟ್ 24ರಂದು ರಾತ್ರಿ 9 ಗಂಟೆಗೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ಆದರೆ ಈ ಮೊದಲೇ ಹೇಳಿದಂತೆ ಈ ಬಾರಿ ಬಿಗ್ ಬಾಸ್ ಕಿರುತೆರೆಯಲ್ಲಿ ಅಲ್ಲ ಬದಲಿಗೆ ಮೊದಲು ಓಟಿಟಿಯಲ್ಲಿ ಪ್ರಸಾರವಾಗಲಿದೆ. ಆಗಸ್ಟ್ 24ರಿಂದ ಪ್ರತಿ ದಿನ ರಾತ್ರಿ 9:00ಕ್ಕೆ ಜೀಯೋ ಹಾಟ್‌ ಸ್ಟಾರ್‌ ನಲ್ಲಿ ಪ್ರಸಾರವಾಗಲಿರುವ ಕಾರ್ಯಕ್ರಮ ಆ ನಂತರ ರಾತ್ರಿ 10-30ಕ್ಕೆ ಕಲರ್ಸ್‌ನಲ್ಲಿ ಪ್ರಸಾರವಾಗಲಿದೆ.

ಇನ್ನು.. ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುವ ಬಿಗ್ ಬಾಸ್‌ ಕಾರ್ಯಕ್ರಮ ಈ ಬಾರಿ ಮೂರಲ್ಲ ಬದಲಿಗೆ ಐದು ತಿಂಗಳು ನಡೆಯಲಿದೆ ಎಂದು ಹೇಳಲಾಗುತ್ತಿದೆ. ''ಪಿಂಕ್ ವಿಲ್ಲಾ'' ಸೇರಿ ಹಲವು ರಾಷ್ಟ್ರೀಯ ವಾಹಿನಿಗಳು ಈ ಸುದ್ದಿಯನ್ನು ಈ ಹಿಂದೆ ಪ್ರಸಾರವನ್ನು ಮಾಡಿವೆ.

ಇನ್ನು ಕೇವಲ ಸಲ್ಮಾನ್ ಖಾನ್ ಮಾತ್ರ ಈ ಬಾರಿ ನಿರೂಪಣೆ ಮಾಡುವುದಿಲ್ಲ ಬದಲಿಗೆ ಸಲ್ಮಾನ್ ಜೊತೆ ಇನ್ನು ಮೂವರು ಸ್ಟಾರ್‌ಗಳು ಬಿಗ್ ಬಾಸ್‌ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಫರ್ಹಾ ಖಾನ್.. ಕರಣ್ ಜೋಹರ್ ಮತ್ತು ಅನಿಲ್ ಕಪೂರ್ ವಿಶೇಷ ನಿರೂಪಕರಾಗಿ ಬರುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ.

More from Filmibeat

English summary
Get ready for "too much fun" with Salman Khan in Bigg Boss 19! Premieres August 24 on JioHotstar (9 PM) & COLORS (10:30 PM). Experience the housemates run the show
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X