5 ತಿಂಗಳು, 4 ಸ್ಟಾರ್ ನಿರೂಪಕರು, ಆಗಸ್ಟ್ 29ರಿಂದ ಬಿಗ್ ಬಾಸ್ ಆಟ ಶುರು; ಟಿವಿಗಿಂತ ಮೊದಲೇ ಇಲ್ಲಿ ಪ್ರಸಾರ

ಪ್ರತಿ ವರ್ಷ ಪ್ರೇಕ್ಷಕರನ್ನು ಸೆಳೆಯಲು ಬಿಗ್ ಬಾಸ್‌ ನಲ್ಲಿ ನಾನಾ ಕಸರತ್ತುಗಳಾಗುತ್ತವೆ. ಆ ಪೈಕಿ ಕೆಲ ಒಮ್ಮೆ ಮಾಡಿದ ಪ್ಲ್ಯಾನ್ ವರ್ಕೌಟ್ ಆಗಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ಇನ್ನು ಕೆಲ ಒಮ್ಮೆ ಪ್ಲ್ಯಾನ್ ತಲೆ ಕೆಳಗಾಗಿ ಟಿಆರ್‌ಪಿ ನೆಲ ಕಚ್ಚುತ್ತೆ. ಆ ಭಾಷೆ .. ಈ ಭಾಷೆ ಅಂತಲ್ಲ. ಎಲ್ಲ ಭಾಷೆಯಲ್ಲಿ ಕೂಡ ಪ್ರತಿ ವರ್ಷ ಈ ಸರ್ಕಸ್ ನಡೆದೇ ನಡೆಯುತ್ತೆ.

ಈ ಬಾರಿಯ ಬಿಗ್ ಬಾಸ್ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಈಗಾಗಲೇ ಕನ್ನಡ .. ತೆಲುಗು.. ಮಲಯಾಳಂ ಮತ್ತು ಹಿಂದಿಯಲ್ಲಿ ಬಿಗ್ ಬಾಸ್‌ನ ಸಂತೆ ಶುರುವಾಗಿದೆ. ಹಲವು ರೀತಿಯ ರೂಪರೇಶೆ ಸಿದ್ಧಪಡಿಸಲಾಗುತ್ತಿದೆ.

BIGG BOSS 19 SHOCKER Salman Khan Joined by 3 New Hosts OTT Debut Aug 29

ತೆಲುಗು ಮತ್ತು ಮಲಯಾಳಂನಲ್ಲಿ ಜನಸಾಮಾನ್ಯರಿಗೆ ದೊಡ್ಮನೆಯ ಬಾಗಿಲನ್ನು ಆಯೋಜಕರು ತೆರೆದಿದ್ದು, ಆಸಕ್ತರಿಗೆ ಅರ್ಜಿ ಸಲ್ಲಿಸುವಂತೆ ಹೇಳಿದ್ಧಾರೆ. ಸೆಲೆಬ್ರಿಟಿಗಳ ನಡುವೆ ಈ ಬಾರಿ ಕಾಮನ್ ಮ್ಯಾನ್‌ನನ್ನೂ ಕೂಡ ಮನೆಯೊಳಗೆ ಕಳುಹಿಸಲು ಮುಂದಾಗಿದ್ದಾರೆ. ಇವರ ಈ ಪ್ರಯತ್ನಕ್ಕೆ ವ್ಯಾಪಕವಾದ ಜನ ಬೆಂಬಲ ಸಿಕ್ಕಿದ್ದು ತೆಲುಗು ಬಿಗ್ ಬಾಸ್‌ನಲ್ಲಿ ಭಾಗವಹಿಸಲು ಸುಮಾರು ಒಂದು ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇನ್ನು ಕನ್ನಡದಲ್ಲಿ ಕೂಡ ಜನಸಾಮಾನ್ಯರಿಗೆ ಅವಕಾಶ ಸಿಗುತ್ತಾ ಎನ್ನುವ ಪ್ರಶ್ನೆಗೆ ಸದ್ಯ ಸ್ಪಷ್ಟವಾದ ಉತ್ತರ ಇಲ್ಲವಾದರೂ ಸಲ್ಮಾನ್ ಖಾನ್ ಸಾರಥ್ಯದಲ್ಲಿ ಮೂಡಿ ಬರುವ ಬಿಗ್ ಬಾಸ್‌ ಕಾರ್ಯಕ್ರಮ ಈ ಬಾರಿ ಮೂರಲ್ಲ ಬದಲಿಗೆ ಐದು ತಿಂಗಳು ನಡೆಯಲಿದೆ ಎಂದು ಹೇಳಲಾಗುತ್ತಿದೆ. ''ಪಿಂಕ್ ವಿಲ್ಲಾ'' ಸೇರಿ ಹಲವು ರಾಷ್ಟ್ರೀಯ ವಾಹಿನಿಗಳು ಈ ಸುದ್ದಿಯನ್ನು ಪ್ರಸಾರವನ್ನು ಮಾಡಿವೆ.

ಇದರ ನಡುವೆ ಇದೀಗ ಹಿಂದಿಯಲ್ಲಿ ಕೇವಲ ಸಲ್ಮಾನ್ ಖಾನ್ ಮಾತ್ರ ಈ ಬಾರಿ ನಿರೂಪಣೆ ಮಾಡುವುದಿಲ್ಲ ಬದಲಿಗೆ ಸಲ್ಮಾನ್ ಜೊತೆ ಇನ್ನು ಮೂವರು ಸ್ಟಾರ್‌ಗಳು ಬಿಗ್ ಬಾಸ್‌ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ.

5 ತಿಂಗಳು ನಡೆಯಲಿದೆ ಕಾರ್ಯಕ್ರಮ

ಕಳೆದ ಕೆಲ ದಿನಗಳ ಹಿಂದೆಯೇ ಈ ಬಾರಿ ಬಿಗ್ ಬಾಸ್‌ ಕಾರ್ಯಕ್ರಮ ಮೂರಲ್ಲ ಬದಲಿಗೆ ಐದು ತಿಂಗಳು ನಡೆಯಲಿದೆ ಎಂದು ''ಪಿಂಕ್ ವಿಲ್ಲಾ'' ವರದಿಯನ್ನು ಮಾಡಿತ್ತು. ಈ ವರದಿಯನ್ನು ಈಗ ''ದಿ ಇಂಡಿಯನ್ ಎಕ್ಸ್‌ಪ್ರೆಸ್‌'' ಕೂಡ ಪುಷ್ಠಿಕರೀಸಿದ್ದು ಕಾರ್ಯಕ್ರಮ ಐದು ತಿಂಗಳು ನಡೆಯಲಿದೆ ಎಂದು ವರದಿಯನ್ನು ಮಾಡಿದೆ.

BIGG BOSS 19 SHOCKER Salman Khan Joined by 3 New Hosts OTT Debut Aug 29

ಸಲ್ಮಾನ್ ಖಾನ್ + 3 ಜನ ನಿರೂಪಕರು

ಪ್ರತಿ ವರ್ಷದಂತೆ ಈ ಬಾರಿ ಕೂಡ ಬಿಗ್‌ ಬಾಸ್‌ಗೆ ಸಲ್ಮಾನ್ ಖಾನ್ ಮುನ್ನುಡಿಯನ್ನು ಬರೆಯಲಿದ್ದಾರೆ. ಆದರೆ .. ಈ ಬಾರಿ ಕಾರ್ಯಕ್ರಮ ಈ ಹಿಂದೆಯೇ ಪಿಂಕ್‌ ವಿಲ್ಲಾ ವರದಿ ಮಾಡಿದಂತೆ ಐದು ತಿಂಗಳು ನಡೆಯಲಿದೆ. ಈ ಹಿನ್ನೆಲೆ ಈ ವರ್ಷ ಫರ್ಹಾ ಖಾನ್.. ಕರಣ್ ಜೋಹರ್ ಮತ್ತು ಅನಿಲ್ ಕಪೂರ್ ವಿಶೇಷ ನಿರೂಪಕರಾಗಿ ಬರುವ ಸಾಧ್ಯತೆ ಇದೆ ಎಂದು ''ದಿ ಇಂಡಿಯನ್ ಎಕ್ಸ್‌ಪ್ರೆಸ್‌'' ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ಬಿಗ್ ಬಾಸ್ ಜೊತೆ ಸಲ್ಮಾನ್ ಖಾನ್ ಕೇವಲ 3 ತಿಂಗಳು ಮಾತ್ರ ಒಪ್ಪಂದವನ್ನು ಮಾಡಿಕೊಂಡಿದ್ಧಾರೆ. ಹೀಗಾಗಿ ಕಾರ್ಯಕ್ರಮವನ್ನು ಶುರು ಮಾಡುವ ಸಲ್ಮಾನ್ ಖಾನ್ ಆ ನಂತರದ ದಿನಗಳಲ್ಲಿ ವೀಕೆಂಡ್‌ ವಾರ್‌ನ ಕೆಲ ಎಪಿಸೋಡ್‌ನಲ್ಲಿ ಗೈರಾಗಲಿದ್ದಾರೆ.

ಸಲ್ಮಾನ್ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಿಕೊಡುವ ಜವಾಬ್ಧಾರಿಯನ್ನು ಫರ್ಹಾ ಖಾನ್.. ಕರಣ್ ಜೋಹರ್ ಮತ್ತು ಅನಿಲ್ ಕಪೂರ್ ಅವರಿಗೆ ನೀಡುವ ಸಾಧ್ಯತೆ ಇದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಲ್ಮಾನ್ ಖಾನ್ ಸಾರಥ್ಯದಲ್ಲಿಯೇ ನಡೆಯಲಿದ್ದು ನಿರೂಪಕರ ವಿಚಾರದಲ್ಲಿ ಕಾರ್ಯಕ್ರಮದ ಆಯೋಜಕರು ಇನ್ನು ಚರ್ಚೆಯನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

ಆಗಸ್ಟ್ 29ರಿಂದ ಶುರು ಟಿವಿಗಿಂತ ಮೊದಲು ಓಟಿಟಿಯಲ್ಲಿ ಪ್ರಸಾರ

ಇನ್ನು ಈ ಬಾರಿಯ ಬಿಗ್ ಬಾಸ್ 19 ಕಾರ್ಯಕ್ರಮ ಈ ಮುಂಚೆ ಆಗಸ್ಟ್ 3ರಂದು ಶುರುವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ''ದಿ ಇಂಡಿಯನ್ ಎಕ್ಸ್‌ಪ್ರೆಸ್‌'' ವರದಿ ಅನ್ವಯ ಈ ಬಾರಿಯ ಬಿಗ್ ಬಾಸ್ ಆಗಸ್ಟ್ 29 ಅಥವಾ ಆಗಸ್ಟ್ 30ರಂದು ಶುರುವಾಗಲಿದೆ.

BIGG BOSS 19 SHOCKER Salman Khan Joined by 3 New Hosts OTT Debut Aug 29

ಇನ್ನು ವಿಶೇಷ ಅಂದರೆ.. ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮ ಕಿರುತೆರೆಗಿಂತ ಮೊದಲು ಓಟಿಟಿಯಲ್ಲಿ ಪ್ರಸಾರವಾಗಲಿದೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಒಂದು ಗಂಟೆಯ ಮೊದಲು ಜೀಯೋ ಹಾಟ್‌ ಸ್ಟಾರ್‌ನಲ್ಲಿ ಕಾರ್ಯಕ್ರಮ ಶುರುವಾಗಲಿದೆ. ಈ ಮೂಲಕ ಆಸಕ್ತ ಬಿಗ್ ಬಾಸ್ ಪ್ರೇಮಿಗಳಿಗೆ ಎಲ್ಲರಿಗಿಂತ ಮೊದಲು ಕಾರ್ಯಕ್ರಮ ಕಣ್ತುಂಬಿಕೊಳ್ಳುವ ಸೌಲಭ್ಯವನ್ನು ಆಯೋಜಕರು.. ವಾಹಿನಿಯವರು ನೀಡುತ್ತಿದ್ದಾರೆ.

ಸಂಭಾವ್ಯ ಸ್ಫರ್ಧಿಗಳು ಯಾರು ?

ಈಗಾಗಲೇ 20ಕ್ಕೂ ಅಧಿಕ ಸೆಲೆಬ್ರಿಟಿಗಳಿಗೆ ಬಿಗ್ ಬಾಸ್ ಕಡೆಯಿಂದ ಆಹ್ವಾನ ಹೋಗಿದ್ದು, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳನ್ನು ಕೂಡ ಕರೆಯಲಾಗಿದೆ, ಇದಲ್ಲದೇ 3 ರಿಂದ 5 ವೈಲ್ಡ್ ಕಾರ್ಡ್ ಎಂಟ್ರಿಗಳು ಕೂಡ ಇರಲಿವೆ ಎಂದು ''ದಿ ಇಂಡಿಯನ್ ಎಕ್ಸ್‌ಪ್ರೆಸ್‌'' ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆ ಪೈಕಿ ಭಾಗವಹಿಸಬಹುದಾದ ಸಂಭಾವ್ಯ ಸ್ಫರ್ಧಿಗಳ ಲಿಸ್ಟ್‌ನಲ್ಲಿ ಧೀರಜ್ ಧೂಪರ್, ಅಲಿಶಾ ಪನ್ವಾರ್, ಮುನ್ಮುನ್ ದತ್ತಾ, ಅನಿತಾ ಹಸನಂದಾನಿ, ಖುಷಿ ದುಬೆ, ಗೌರವ ತನೇಜಾ, ಅಪೂರ್ವ ಮುಖಿಜಾ, ಚಿಂಕಿ ಮಿಂಕಿ, ಪುರವ್ ಜಾ, ಕೃಷ್ಣ ಶ್ರಾಫ್, ಮಿಸ್ಟರ್ ಫೈಸು, ಕನಿಕಾ ಮನ್, ರಾಜ್ ಕುಂದ್ರಾ, ಡೈಸಿ ಶಾ, ಅರ್ಷಿಫಾ ಖಾನ್, ತನುಶ್ರೀ ದತ್ತಾ, ಶರದ್ ಮಲ್ಹೋತ್ರಾ, ಮಮತಾ ಕುಲಕರ್ಣಿ, ಪರಾಸ್ ಕಲ್ನಾವತ್ ಮತ್ತು ಮಿಕ್ಕಿ ಮ್ಯಾಕೋವರ್ ಹೆಸರುಗಳು ಇವೆ ಎಂದು ಹೇಳಲಾಗುತ್ತಿದೆ. ಹಿರಿಯ ನಟ ಆಶಿಷ್ ವಿದ್ಯಾರ್ಥಿ ಮತ್ತು ನಟಿ ಲತಾ ಸಬೆರ್ವಾಲ್ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಇನ್ನುಳಿದಂತೆ ನಾವು ಮೇಲೆ ಉಲ್ಲೇಖಿಸಿರುವುದು ಕೇವಲ ಸಂಭಾವ್ಯ ಸ್ಫರ್ಧಿಗಳ ಪಟ್ಟಿಯಾಗಿದ್ದು, ಈ ಪಟ್ಟಿಯಲ್ಲಿರುವರಲ್ಲಿ ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುತ್ತಾರೆ, ಇವರನ್ನು ಹೊರತು ಪಡಿಸಿ ಬೇರೆ ಯಾರೆಲ್ಲ ಬರುತ್ತಾರೆ ಎನ್ನುವುದಕ್ಕೆ ಉತ್ತರ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಒಂದು ವಾರದ ಆಚೀಚೆ ಸ್ಪಷ್ಟವಾಗಿ ಸಿಗಲಿದೆ. ಆಗಸ್ಟ್ 29ರಿಂದ ಬಿಗ್ ಬಾಸ್ ಆಟ ಶುರುವಾಗಲಿದೆ.

More from Filmibeat

English summary
SHOCKER! Bigg Boss 19 returns to OTT on August 29 with Salman Khan and three surprise new hosts. Brace yourself for 5 months of non-stop entertainment!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X