ಬಿಗ್ ಬಾಸ್‌ಗೆ ಬಿಗ್ ಶಾಕ್ ನೀಡಿದ ಚೆಲುವೆ, ₹6 ಕೋಟಿ ಆಫರ್ ರಿಜೆಕ್ಟ್ ಮಾಡಿದ ನಟಿ
ಬಿಗ್ ಬಾಸ್ ಅಂದರೆ ಎಲ್ಲರ ಕಣ್ಣು ಅರಳುತ್ತೆ .. ಕಿವಿ ನಿಮಿರುತ್ತೆ. ಈ ವರ್ಷ ತಮ್ಮ ಇಷ್ಟದ ತಾರೆಯರು ಬಿಗ್ ಬಾಸ್ ಮನೆಗೆ ಬರಬಹುದಾ ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತೆ. ಇದಕ್ಕೆ ಪೂರಕವಾಗಿ ಬಿಗ್ ಬಾಸ್ ಆರಂಭವಾಗುವ ಒಂದೆರಡು ತಿಂಗಳ ಮುಂಚೆಯೇ ಕೆಲವರ ಹೆಸರುಗಳು ಚಿತ್ರಸಂತೆಯಲ್ಲಿ ಕೇಳಿ ಬರಲು ಶುರುವಾಗುತ್ತವೆ. ಸಹಜವಾಗಿ ಈ ಅಂತೆ-ಕಂತೆಗಳನ್ನು..
ಕೇಳಿ ಹಲವು ಹಲವು ಪ್ರೇಕ್ಷಕರು ಸಂಭ್ರಮ ಪಡ್ತಾರೆ. ತಮ್ಮ ಇಷ್ಟದ ಸೆಲೆಬ್ರೆಟಿಯ ಬದುಕನ್ನು ಹತ್ತಿರದಿಂದ ನೋಡುವ ಅವಕಾಶ ನಮ್ಮದಾಯ್ತು ಎಂದುಕೊಳ್ಳುತ್ತಾರೆ.

ಇನ್ನು ಬಿಗ್ ಬಾಸ್ ಕಡೆಯಿಂದ ಕರೆ ಬಂದಿದ್ದೇ ತಡ ಹಲವು ತಾರೆಯರು ತಮ್ಮ ಕೆಲಸವನ್ನೆಲ್ಲಾ ಮರೆತು ಬಿಗ್ ಬಾಸ್ ಅಡ್ರೆಸ್ ಹುಡುಕಿಕೊಂಡು ಹೋಗುತ್ತಾರೆ. ಎಷ್ಟೇ ಬ್ಯುಸಿಯಾಗಿದ್ದರು ಕೂಡ ಹಣದಾಸೆಗೆ ರಂಪ-ರಾಮಾಯಣ-ಕಿರಿಕ್‌ನ ಭಾಗವಾಗಲು ಮನೆಗೆ ಬರುತ್ತಾರೆ.
ಆದರೆ.. ಇಲ್ಲೊಬ್ಬರು ಆರು ಕೋಟಿಯ ಆಮಿಷವನ್ನು ಬಿಗ್ ಬಾಸ್ ಒಡ್ಡಿದ್ದರೂ ಕೂಡ ಕ್ಯಾರೇ ಎಂದಿಲ್ಲ. ಬಂದ ಆಫರ್‌ನ ಎಡಗಾಲಿನಿಂದ ಒದ್ದಿದ್ದಾರೆ. ಈ ಮೂಲಕ ಬಿಗ್ ಬಾಸ್‌ಗೆ ಬಿಗ್ ಶಾಕ್ ನೀಡಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಮಲಯಾಳಂನಲ್ಲಿ ಈಗಾಗಲೇ ಬಿಗ್ ಬಾಸ್ ಶುರುವಾಗಿದೆ. ಹಿಂದಿಯಲ್ಲಿ ಇದೇ ಆಗಸ್ಟ್ 24ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮಕ್ಕೆ ಜರ್ಮನ್‌ನ ಚೆಲುವೆ ''ಎಲ್ನಾಜ್ ನೊರೌಜಿ'' ಅವರಿಗೆ ಕರೆಯಲಾಗಿತ್ತು. ಆರು ಕೋಟಿಯ ಸಂಭಾವನೆ ಕೂಡ ನಿಗದಿ ಮಾಡಲಾಗಿತ್ತು.
ಆದರೆ ಎಲ್ನಾಜ್ ನೊರೌಜಿ ಮಾತ್ರ ಬಿಗ್ ಬಾಸ್ ಮನೆಗೆ ಹೋಗದಿರುವ ತೀರ್ಮಾನ ಮಾಡಿದ್ದಾರೆ ಎಂದು ''ಹಿಂದೂಸ್ತಾನ್ ಟೈಮ್ಸ್'' ವರದಿಯನ್ನು ಮಾಡಿದೆ. ಹೌದು, ಅಸಲಿಗೆ ಎಲ್ನಾಜ್ ಸದ್ಯ ಬಾಲಿವುಡ್‌ನ ಹಿಟ್ ಫ್ರಾಂಚೈಸಿಯಲ್ಲಿ ಒಂದಾದ ''ಮಸ್ತಿ'' ನಾಲ್ಕನೇ ಭಾಗದಲ್ಲಿ ಆಕ್ಟ್ ಮಾಡುತ್ತಿದ್ದಾರೆ.

ಸದ್ಯ ಈ ಚಿತ್ರದ ಚಿತ್ರೀಕರಣ ಲಂಡನ್‌ನಲ್ಲಿ ನಡೆಯುತ್ತಿದೆ. ಹೀಗಿರುವಾಗ ಕಾರ್ಯಕ್ರಮಕ್ಕೆ ಬಂದರೆ ಚಿತ್ರದ ಮೇಲೆ ಪರಿಣಾಮವಾಗುತ್ತೆ, ನಿರ್ಮಾಪಕರಿಗೆ ಹೊರೆಯಾಗುತ್ತೆ ಎಂದುಕೊಂಡು ಎಲ್ನಾಜ್ ನೋ ಎಂದು ಹೇಳಿದ್ದಾರೆ. ಈ ಮೂಲಕ ಹಣ ಮುಖ್ಯ ಅಲ್ಲ ವೃತ್ತಿ ಬದ್ದತೆ ಮುಖ್ಯವೆನ್ನುವ ಸಂದೇಶವನ್ನು ರವಾನೆ ಮಾಡಿದ್ದಾರೆ.
ಅಂದ್ಹಾಗೇ ಎಲ್ನಾಜ್ ನೊರೌಜಿ ''ಸೇಕ್ರೆಡ್ ಗೇಮ್ಸ್''.. ''ಮೇಡ್ ಇನ್ ಹೆವನ್''.. ''ಗೇಮ್ಸ್''.. ''ಜುಗ್‌ಜುಗ್ ಜೀಯೋ''.. ''ಹಲೋ ಚಾರ್ಲಿ''.. ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ''ದಿ ಟ್ರೈಟರ್'' ಎಂಬ ರಿಯಾಲಿಟಿ ಕಾರ್ಯಕ್ರಮದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಜಾನ್ ಅಬ್ರಾಹಿಂ ಜೊತೆ ಇವರು ಅಭಿನಯಿಸಿರುವ ''ತೆಹ್ರಾನ್'' ಬಿಡುಗಡೆಯಾಗಬೇಕಿದೆ.
ಇನ್ನುಳಿದಂತೆ ಆಗಸ್ಟ್ 24ರಂದು ರಾತ್ರಿ 9 ಗಂಟೆಗೆ ಶುರುವಾಗಲಿರುವ ಹಿಂದಿ ಬಿಗ್ ಬಾಸ್ ಕಿರುತೆರೆಯಲ್ಲಿ ಅಲ್ಲ ಬದಲಿಗೆ ಮೊದಲು ಓಟಿಟಿಯಲ್ಲಿ ಪ್ರಸಾರವಾಗಲಿದೆ. ಆಗಸ್ಟ್ 24ರಿಂದ ಪ್ರತಿ ದಿನ ರಾತ್ರಿ 9:00ಕ್ಕೆ ಜೀಯೋ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗಲಿರುವ ಕಾರ್ಯಕ್ರಮ ಆ ನಂತರ ರಾತ್ರಿ 10-30ಕ್ಕೆ ಕಲರ್ಸ್‌ನಲ್ಲಿ ಪ್ರಸಾರವಾಗಲಿದೆ.
ಇನ್ನು ಸ್ಫರ್ಧಿಗಳ ವಿಚಾರಕ್ಕೆ ಬಂದರೆ ಈಗಾಗಲೇ ಹಲವರ ಹೆಸರುಗಳು ಬಿಗ್ ಬಾಸ್ ಮನೆಯ ಸುತ್ತ ಮುತ್ತ ಕೇಳಿ ಬರುತ್ತಿವೆ. ಆ ಪೈಕಿ ಹಿಂದಿಯ ಪ್ರಖ್ಯಾತ ನಟ ರಾಮ್ ಕಪೂರ್ ನಾನು 20 ಕೋಟಿ ಹಣ ನೀಡಿದರು ಕೂಡ ಬಿಗ್ ಬಾಸ್‌ಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಡೈಸಿ ಷಾ ಮತ್ತು ಜರೀನ್ ಖಾನ್ ಕೂಡ ಬಿಗ್ ಬಾಸ್ ಮನೆಗೆ ಕಾಲಿಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ.ಈಗ ಎಲ್ನಾಜ್ ಕೂಡ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ.
ಇವರನ್ನು ಹೊರತು ಪಡಿಸಿದರೆ ಯೂಟ್ಯೂಬರ್ ಗೌತಮ್ ತನೇಜಾ, ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ, ಕೃಷ್ಣಾ ಶ್ರಾಫ್, ಮಿಕ್ಕಿ ಮೇಕ್ ಓವರ್, ಫೈಸಲ್ ಶೇಖ್, ಧೀರಜ್ ಧೋಪರ್, ಮಮತಾ ಕುಲಕರ್ಣಿ, ಧನಶ್ರೀ ವರ್ಮಾ, ಅಪೂರ್ವ ಮುಖಿಜಾ, ಹೀಗೆ ಹಲವರ ಹೆಸರುಗಳು ಸದ್ಯ ಸಂಭಾವ್ಯ ಸ್ಫರ್ಧಿಗಳ ಲಿಸ್ಟ್‌ನಲ್ಲಿ ಕಂಡು ಬರುತ್ತಿವೆ. ಇವರಲ್ಲಿ ಯಾರು ಹೋಗಲಿದ್ದಾರೆ ಎನ್ನುವುದಕ್ಕೆ ಉತ್ತರ ಕಾರ್ಯಕ್ರಮದ ಆರಂಭವಾಗುವ ದಿನವೇ ಅಧಿಕೃತವಾಗಿ ಸಿಗಲಿದೆ.


Click it and Unblock the Notifications











