Bigg Boss Sanjana: ಬಿಗ್ ಬಾಸ್ to 'ಭರ್ಜರಿ ಬ್ಯಾಚುಲರ್ಸ್'.. ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಂಜನಾ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 4' ರ ಸ್ಪರ್ಧಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡ ನಟಿ ಸಂಜನಾ ಚಿದಾನಂದ್ ಬಿಗ್ ಗ್ಯಾಪ್‌ನ ನಂತರ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ವಿಭಿನ್ನ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಜೀ ಕನ್ನಡ ವಾಹಿನಿಯಲ್ಲಿ ಇದೀಗ 'ಭರ್ಜರಿ ಬ್ಯಾಚುಲರ್ಸ್' ಎನ್ನುವ ಹೊಸ ರಿಯಾಲಿಟಿ ಶೋ ಶುರುವಾಗಿದ್ದು ಅದರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ ಸಂಜನಾ ಚಿದಾನಂದ್.
ಭರ್ಜರಿ ಬ್ಯಾಚುಲರ್ಸ್ ಕಾನ್ಸೆಪ್ಟ್ ಕನ್ನಡ ಕಿರುತೆರೆಯಲ್ಲಿ ಒಂದು ಹೊಸದಾಗಿರುವ ಪ್ರಯತ್ನ ಎನ್ನಬಹುದು. ಮದುವೆಯ ವಯಸ್ಸಿಗೆ ಬಂದಿರುವ ಹದಿಹರೆಯದ ಹುಡುಗರು ಸಮಾಜದಲ್ಲಿ ಯಾವ ರೀತಿಯ ತೊಂದರೆಗಳನ್ನು ಎದುರಿಸುತ್ತಾರೆ ಎಂಬ ವಿಚಾರವನ್ನು ಆಧಾರವಾಗಿಟ್ಟುಕೊಂಡು ಈ ಶೋ ಮಾಡಲಾಗಿದೆ. ಈ ಶೋನಲ್ಲಿ ಕನ್ನಡ ಕಿರುತೆರೆಯ ಕೆಲವು ಬ್ಯಾಚುಲರ್ಸ್ ಸ್ವರ್ಧಿಯಾಗಿದ್ದಾರೆ.

ಮನೋಹರ್ ಜೋಡಿಯಾಗಿ ಸಂಜನಾ
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮನೋಹರ್ ಕೂಡಾ ಈ ಭರ್ಜರಿ ಬ್ಯಾಚುಲರ್ಸ್ ಶೋ ವಿನ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದು ಅವರಿಗೆ ಮೆಂಟರ್ ಆಗಿ ಸಂಜನಾ ಚಿದಾನಂದ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಮೂರು ವಾರಗಳು ಕಳೆದಿದ್ದು ಪ್ರತಿ ವಾರವೂ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ ಸಂಜನಾ ಚಿದಾನಂದ್.
'ಬ್ರಹ್ಮಗಂಟು'ನಲ್ಲಿ ಕೊನೆಯದಾಗಿ ನಟನೆ
ಜೀ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಕೊನೆಯ ಬಾರಿ ನಟಿಸಿದ್ದ ಸಂಜನಾ ಆ ಧಾರಾವಾಹಿಯಲ್ಲಿಯೂ ಚಿತ್ರನಟಿಯಾಗಿ ಕಾಣಿಸಿಕೊಂಡಿದ್ದು ವಿಶೇಷ. ಅದರಲ್ಲಿ ನಾಯಕ ಲಕ್ಕಿಯನ್ನು ಪ್ರೀತಿಸುವ ಹುಡುಗಿಯಾಗಿ ಸಂಜನಾ ಚಿದಾನಂದ್ ಮೋಡಿ ಮಾಡಿದ್ದರು.

'ಜೀವನ ಚೈತ್ರ'ದ ಮೂಲಕ ಕಿರುತೆರೆ ಪಯಣ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೀವನ ಚೈತ್ರ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಸಂಜನಾ ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲ ವಧು' ಧಾರಾವಾಹಿಯಲ್ಲಿ ವಚನಾ ಆಗಿ ಕಾಣಿಸಿಕೊಂಡಿದ್ದರು.
ಸಿನಿಮಾದಲ್ಲಿಯೂ ಮಿಂಚಿದ ಪ್ರತಿಭೆ
'ಉಡುಂಬ' ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿ ಸಿನಿಪ್ರಿಯರನ್ನು ರಂಜಿಸಿದ ಸಂಜನಾ ನಂತರ 'ಮೊಂಬತ್ತಿ','ಕಿರಿಕ್ ಕೀರ್ತಿ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಇದರ ಜೊತೆಗೆ 'ಸಂಜು ಮತ್ತು ನಾನು' ಎನ್ನುವ ಸಿರೀಸ್‌ನಲ್ಲಿಯೂ ಈಕೆ ಅಭಿನಯಿಸಿದ್ದು ಇವರಿಗೆ ಜೊತೆಯಾಗಿ ಒಳ್ಳೆ ಹುಡುಗ ಪ್ರಥಮ್ ಹಾಗೂ ಭುವನ್ ಪೊನ್ನಣ್ಣ ಕಾಣಿಸಿಕೊಂಡಿದ್ದರು.


Click it and Unblock the Notifications











