»   » ಬಿಗ್ ಬಾಸ್ 6 ಶೋನಲ್ಲಿ ಸಲ್ಮಾನ್ ಖಾನ್ ಹೊಸ ಹೆಜ್ಜೆ

ಬಿಗ್ ಬಾಸ್ 6 ಶೋನಲ್ಲಿ ಸಲ್ಮಾನ್ ಖಾನ್ ಹೊಸ ಹೆಜ್ಜೆ

Posted By:
Subscribe to Filmibeat Kannada
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇತ್ತೀಚಿಗೆ ಸಾಕಷ್ಟು ಸಹಾಯಹಸ್ತ ಚಾಚುತ್ತಿದ್ದಾರೆ. ತಾವು ನಡೆಸಿಕೊಡುತ್ತಿರುವ 'ಬಿಗ್ ಬಾಸ್ 6' ರಿಯಾಲಿಟಿ ಶೋದಲ್ಲಿ, ಈಗ್ಗೆ ಕೆಲದಿನಗಳ ಹಿಂದೆ ಕೆಲವು ಚಿತ್ರಗಳ ಪ್ರಮೋಶನ್ ಕಾರ್ಯಕ್ಕೆ ಜಾಗ ಮಾಡಿಕೊಟ್ಟು ತಮ್ಮ ಹಿರಿಮೆ ಮೆರೆದಿದ್ದರು. ಸ್ಟೂಡೆಂಟ್ ಆಫ್ ದಿ ಈಯರ್, ಅಯ್ಯಾ, ಸನ್ ಆಫ್ ಸರ್ದಾರ್ ಹೀಗೆ ಕೆಲವು ಚಿತ್ರಗಳು ಸಲ್ಲೂರ 'ಬಿಗ್ ಬಾಸ್ 6' ನಲ್ಲಿ ಪ್ರಚಾರ ಕಂಡವು.

ಈಗ ಸಲ್ಲೂ ತಮ್ಮದೇ ನಾಯಕತ್ವದ ಬರಲಿರುವ 'ದಬಾಂಗ್ 2' ಚಿತ್ರದ ಟ್ರೇಲರ್ ಅನ್ನು ತಾವು ನಡೆಸಿಕೊಡುತ್ತಿರುವ 'ಬಿಗ್ ಬಾಸ್ 6' ಟಿವಿ ರಿಯಾಲಿಟಿ ಶೋದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ಚಿತ್ರವೊಂದನ್ನು ತಾವು ನಡೆಸಿಕೊಡುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಪ್ರಮೋಟ್ ಮಾಡಿಕೊಂಡಿದ್ದಾರೆ ಸಲ್ಲೂ.

ಮೊನ್ನೆ, ಅಂದರೆ 09 ನವೆಂಬರ್ 2012ರಂದು ಪ್ರಸಾರವಾದ 'ಬಿಗ್ ಬಾಸ್ 6' ನ ಸಂಚಿಕೆಯ ಜೊತೆ ಬರಲಿರುವ ತಮ್ಮ 'ದಬಾಂಗ್-2' ಚಿತ್ರದ ಟ್ರೇಲರ್ ಪ್ರಸಾರ ಕಾಣುವಂತೆ ನೋಡಿಕೊಂಡಿದ್ದಾರೆ ಸೂಪರ್ ಸ್ಟಾರ್ ಸಲ್ಲೂ. ಸಲ್ಲೂ ನಟನೆಯ ಈ ಚಿತ್ರವನ್ನು ಅವರ ಸಹೋದರ ಅರ್ಬಾಜ್ ಖಾನ್ ನಿರ್ದೇಶಿಸಿದ್ದಾರೆ. 'ದಬಾಂಗ್' ಚಿತ್ರದಲ್ಲಿ ಸಲ್ಲೂ ಜೊತೆ ನಾಯಕಿಯಾಗಿ ನಟಿಸಿದ್ದ ಸೋನಾಕ್ಷಿ ಸಿನ್ಹ ಈ ಚಿತ್ರದಲ್ಲೂ ಸಲ್ಲೂಗೆ ಜೊತೆಯಾಗಿದ್ದಾರೆ.

ಅಂದಹಾಗೆ, ಬರಲಿರುವ 'ದಬಾಂಗ್-2' ಚಿತ್ರದಲ್ಲಿ ಕೂಡ ಸಲ್ಮಾನ್ ಖಾನ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ಬಂದಿದ್ದ 'ದಬಾಂಗ್' ಚಿತ್ರದಲ್ಲಿ ವಿಲನ್ ಆಗಿದ್ದ ಕನ್ನಡಿಗ, ನಟ ಪ್ರಕಾಶ್ ರಾಜ್ ಈ ಚಿತ್ರದಲ್ಲೂ ಜೊತೆಯಾಗಿದ್ದಾರೆ. ಈ 'ದಬಾಂಗ್-2' ಚಿತ್ರದ ವಿಶೇಷವೆಂದರೆ ಇದರಲ್ಲಿ ನಟಿ ಕರೀನಾ ಕಪೂರ್ 'ಐಟಂ ಸಾಂಗ್' ನಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ 'ದಬಾಂಗ್-2' ಚಿತ್ರದ ಮೇಲೆ ಭಾರಿ ನಿರೀಕ್ಷೆ ಶುರುವಾಗಿದೆ. (ಏಜೆನ್ಸೀಸ್)

English summary
Actor Salman Khan will release the trailer of his much awaited movie Dabangg 2 on his popular TV reality show Bigg Boss 6. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada