For Quick Alerts
  ALLOW NOTIFICATIONS  
  For Daily Alerts

  ತನೀಶಾ ಹೊರಕ್ಕೆ ಕಳಿಸಿ ಬಾಸ್.. ಇಲ್ಲಾಂದ್ರೆ

  By ಜೇಮ್ಸ್ ಮಾರ್ಟಿನ್
  |

  ದಿನದಿಂದ ದಿನಕ್ಕೆ ಚಿತ್ರ ವಿಚಿತ್ರ ಟಾಸ್ಕ್ ಗಳ ನಡುವೆ ಬೆಳೆಯುತ್ತಿರುವ ಪ್ರೇಮ ಕಥಾನಕಗಳ ಬಗ್ಗೆ ಸ್ಪರ್ಧಿಗಳ ಮನೆಯವರು ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದಾರೆ. ಕಳೆದ ಎಪಿಸೋಡ್ ನಲ್ಲಿ ಎಲ್ಲರ ಮನೆಯವರು ಮನೆಗೆ ಬಂದು ಹೋಗಿ ಮಾಡಿದರೂ ತನೀಶಾ ಕುಟುಂಬದವರು ಗೈರು ಹಾಜರಾಗಿದ್ದು ಏಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

  ಅರ್ಮಾನ್ ಕೊಹ್ಲಿ ಜತೆ ಸಾಂಗತ್ಯ ಬೆಳೆಸಿಕೊಂಡು ಎಲ್ಲೆ ಮೀರಿ ವರ್ತಿಸುತ್ತಿರುವ ತನೀಶಾಳನ್ನು ಮನೆಯಿಂದ ಹೊರಕ್ಕೆ ಕರೆಸಿಕೊಳ್ಳಲು ಸಾಧ್ಯವಾಗದ ಅಕ್ಕ ಕಾಜೋಲ್ ಹಾಗೂ ಭಾವ ಅಜಯ್ ದೇವಗನ್ ಅವರು ಬಿಗ್ ಬಾಸ್ ರಿಯಾಲಿಟಿ ಶೋನ ನಿರ್ವಹಣೆ ಹೊತ್ತಿರುವ ವಯಾಕಾಂ 18 ಸಂಸ್ಥೆಗೆ ಬೆದರಿಕೆ ಹಾಕಿದ್ದಾರೆ.

  ತನೀಶಾ ಮನೆಯಿಂದ ಕೂಡಲೇ ಹೊರ ಬರದಿದ್ದರೆ ನಾವು ಇನ್ಮುಂದೆ ಕಲರ್ಸ್ ವಾಹಿನಿ, ವಯಾಕಾಂ 18 ಆಯೋಜನೆಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ ಎಂಬ ಸುದ್ದಿ ಬಂದಿದೆ. ಬಿಗ್ ಬಾಸ್ ನ ಸ್ಪರ್ಧಿಗಳ ಮನೆಯವರು ಒಬ್ಬರೊಬ್ಬರಾಗಿ ಮನೆಗೆ ಬಂದು ಹೋದರೂ ತನ್ನ ಅಮ್ಮ ತನುಜಾ ಆಗಲಿ, ಅಕ್ಕ ಕಾಜೋಲ್ ಆಗಲಿ ಬರದಿರುವುದು ಕಂಡು ತನೀಶಾಳಿಗೆ ತುಂಬಾ ಬೇಸರವಾಗಿದೆ. ತನ್ನ ಮನೆಯವರು ತನ್ನ ಮೇಲೆ ಸಿಟ್ಟಾಗಿದ್ದಾರೆ ಎಂದೆನಿಸಿದೆ.

  ಮನೆಯವರ ಮಾತು ಕೇಳದೆ ರಿಯಾಲಿಟಿ ಶೋಗೆ ಬಂದು ಭಾಗವಹಿಸಿರುವ ತನೀಶಾಗೆ ಮನೆಯವರ ಸಪೋರ್ಟ್ ಸಿಗದಿದ್ದರೂ ಪ್ರೇಕ್ಷಕರ ಸಪೋರ್ಟ್ ಇದ್ದೇ ಇದೆ ಹೀಗಾಗಿ ನಾವು ಏನು ಮಾಡುವಂತಿಲ್ಲ ಎಂದು ಬಿಗ್ ಬಾಸ್ ತಂಡ ಹೇಳಿದೆ.

  ಅಜಯ್ ದೇವಗನ್ ಹಾಗೂ ಕಾಜೋಲ್ ಅವರು ಸಲ್ಮಾನ್ ಖಾನ್ ಜತೆ ಕೂಡಾ ಮಾತನಾಡಿ ಅರ್ಮಾನ್ ಜತೆ ತನೀಶಾ ಸೇರದಂತೆ ಮಾಡಿ ಎಂದಿದ್ದಾರೆ. ಸಲ್ಲೂ ಕೂಡಾ ಬುದ್ಧಿವಾದ ಹೇಳಿ ಹೇಳಿ ಸೋತಿದ್ದಾನೆ. ಕಳೆದೆರಡು ಎಪಿಸೋಡುಗಳಲ್ಲಿ ಮತ್ತೆ ಅರ್ಮಾನ್ ಹಾಗೂ ತನೀಶಾ ಲಲ್ಲೆಗೆರೆಯುವ ದೃಶ್ಯಗಳು ಪ್ರಸಾರವಾಗಿದ್ದು ಕಾಜೋಲ್ ಕುಟುಂಬ ಕೆರಳುವಂತೆ ಮಾಡಿದೆ.

  ವಿಜೆ ಆಂಡಿ, ಕಾಮ್ಯಾ ಅಮ್ಮ ಬಂದಿದ್ರು

  ವಿಜೆ ಆಂಡಿ, ಕಾಮ್ಯಾ ಅಮ್ಮ ಬಂದಿದ್ರು

  ವಿಜೆ ಆಂಡಿ, ಕಾಮ್ಯಾ ಅಮ್ಮ ಬಂದಿದ್ರು, ಸಂಗ್ರಾಮ್ ಗೆಳತಿ ಬಂದಿದ್ದಳು, ಗೌಹರ್ ಸೋದರಿ ಬಂದು ಕಣ್ಣೀರಿಟ್ಟಿದ್ದು ಆಯ್ತು ಆದರೆ, ತನೀಶಾ ಮನೆಯಿಂದ ಯಾರೂ ಬರಲಿಲ್ಲ. ತನೀಶಾ ತನ್ನ ಅಮ್ಮ ತನುಜಾ ಅವರನ್ನು ಕಳಿಸಿ ಎಂದು ಮನವಿ ಮಾಡಿಕೊಂಡಿದ್ದಳು.ಅರ್ಮಾನ್ ಕೊಹ್ಲಿ, ಸೋಫಿಯಾ ಹಾಗೂ ಕುಶಾಲ್ ಮನೆಯಿಂದಲೂ ಯಾರೂ ಬಂದಿರಲಿಲ್ಲ.

  ಹಳೆ ಸ್ಪರ್ಧಿ

  ಹಳೆ ಸ್ಪರ್ಧಿ

  ಬಿಗ್ ಬಾಸ್ ನ ಹಳೆ ಸೀಸನ್ ಗಳಲ್ಲಿ ಸದ್ದು ಮಾಡಿದ್ದ ಘಾಟಿ ಮಹಿಳೆ ಡಾಲಿ ಬಿಂಧ್ರಾ ಮನೆಯಲ್ಲಿ ಕಾಣಿಸಿಕೊಂಡಿದ್ದಳು

  ಬಿಗ್ ಬಾಸ್ ಮನೆ ಕಿರಿಕ್

  ಬಿಗ್ ಬಾಸ್ ಮನೆ ಕಿರಿಕ್

  ಅಜಯ್ ದೇವಗನ್ ಹಾಗೂ ಕಾಜೋಲ್ ಅವರು ಸಲ್ಮಾನ್ ಖಾನ್ ಜತೆ ಕೂಡಾ ಮಾತನಾಡಿ ಅರ್ಮಾನ್ ಜತೆ ತನೀಶಾ ಸೇರದಂತೆ ಮಾಡಿ ಎಂದಿದ್ದಾರೆ. ಸಲ್ಲೂ ಕೂಡಾ ಬುದ್ಧಿವಾದ ಹೇಳಿ ಹೇಳಿ ಸೋತಿದ್ದಾನೆ. ಕಳೆದೆರಡು ಎಪಿಸೋಡುಗಳಲ್ಲಿ ಮತ್ತೆ ಅರ್ಮಾನ್ ಹಾಗೂ ತನೀಶಾ ಲಲ್ಲೆಗೆರೆಯುವ ದೃಶ್ಯಗಳು ಪ್ರಸಾರವಾಗಿದ್ದು ಕಾಜೋಲ್ ಕುಟುಂಬ ಕೆರಳುವಂತೆ ಮಾಡಿದೆ.

  ಅರ್ಮಾನ್ ಜತೆ ಸಿಗರೇಟು ಪ್ಯಾಕ್ ಹಿಡಿದುಕೊಂಡು ತಿರುಗುವುದು ಜತೆಯಲ್ಲಿ ಕೂತು ಸಲಿಗೆಯಿಂದ ಮಾತನಾಡುವುದು, ಸತಿ ಪತಿಯಂತೆ ವರ್ತಿಸುವುದಕ್ಕೆ ಕೆಲವರು ಆಕ್ಷೇಪಿಸಿದ್ದಾರೆ.

  ಕಾಮ್ಯಾಗೆ ಅಪ್ಪುಗೆ

  ಕಾಮ್ಯಾಗೆ ಅಪ್ಪುಗೆ

  ಬಿಗ್ ಬಾಸ್ ಮನೆಯಲ್ಲಿ ಕಾಮ್ಯಾ ತನ್ನ ತಾಯಿ ಜತೆ

  ಸಂಗ್ರಾಮ್ ಜತೆ ಗೆಳತಿ

  ಸಂಗ್ರಾಮ್ ಜತೆ ಗೆಳತಿ

  ತನ್ನ ಗೆಳತಿ ಪಾಯಲ್ ಜತೆ ಸಂಗ್ರಾಮ್ ಸಿಂಗ್

  ಹೊರಕ್ಕೆ ಕಳಿಸಿ ಬಾಸ್

  ಹೊರಕ್ಕೆ ಕಳಿಸಿ ಬಾಸ್

  ತನೀಶಾ ಹೊರಕ್ಕೆ ಕಳಿಸಿ ಬಾಸ್.. ಇಲ್ಲಾಂದ್ರೆ

  ಅಮ್ಮನ ಜತೆ ಆಂಡಿ

  ಅಮ್ಮನ ಜತೆ ಆಂಡಿ

  ಅಮ್ಮನನ್ನು ಆಂಡಿ ನೋಡಿದಾಗ ಬಿಗ್ ಬಾಸ್ ಆಂಡಿಯನ್ನು ಅಲ್ಲಾಡದೆ ನಿಲ್ಲುವಂತೆ pause ಎಂದಿದ್ದರು.

  ಕಣ್ಣೀರಿಟ್ಟ ಗೌಹರ್

  ಕಣ್ಣೀರಿಟ್ಟ ಗೌಹರ್

  ಸೋದರಿಯನ್ನು ಕಂಡು ಕಣ್ಣೀರಿಟ್ಟ ಗೌಹರ್

   ಯಾರಿಗೆ ಹೆಚ್ಚು ಸಂಭಾವನೆ

  ಯಾರಿಗೆ ಹೆಚ್ಚು ಸಂಭಾವನೆ

  ಬಿಗ್ ಬಾಸ್ ನಲ್ಲಿ ತನೀಶಾಗೆ ಹೆಚ್ಚು ಸಂಭಾವನೆ, ಎಲ್ಲಿಗೆ ಕಡಿಮೆ ಸಂಭಾವನೆ ಸಿಕ್ಕಿದೆ

  ತನೀಶಾಗೆ ವಾರಕ್ಕೆ 7.5 ಲಕ್ಷ ರು ನಂತೆ ಸಿಕ್ಕಿದೆ. ಅರ್ಮಾನ್ ಕೊಹ್ಲಿ, ಕುಶಾಲ್ ಗೆ 5 ಲಕ್ಷ ರು, ಗೌಹರ್ ಖಾನ್ ಗೆ 6 ಲಕ್ಷ, ಸಂಗ್ರಾಮ್ ಹಾಗೂ ಆಂಡಿಗೆ 3 ರಿಂದ 3.5 ಲಕ್ಷ ರು ಪ್ರತಿ ವಾರಕ್ಕೆ ಸಿಗುತ್ತಿದೆ.

  ಪ್ರತ್ಯೂಷಾ ಹಾಗೂ ಕಾಮ್ಯಾಗೆ 3.5 ರಿಂದ 4 ಲಕ್ಷ ರು ತನಕ ಸಿಕ್ಕಿದೆ. ಆದರೆ, ವಿದೇಶಿ ಸ್ಪರ್ಧಿ ಎಲ್ಲಿ ಆವ್ರಾಮ್ ಗೆ ವಾರಕ್ಕೆ ಸಿಕ್ಕಿದ್ದು ಕೇವಲ 1 ಲಕ್ಷ ರು ಮಾತ್ರ.ವಿವೇಕ್, ಏಜಾಜ್ ಹಾಗೂ ಸೋಫಿಯಾಗೂ ಕಡಿಮೆ ಸಂಭಾವನೆ ಸಿಕ್ಕಿದೆ

  English summary
  BIGG BOSS 7 BREAKING: Ajay Devgn, who is doing everything possible to get his wife, Kajol‘s sister Tanisha out of Bigg Boss 7.From being caught smoking on camera, to being caught with Armaan Kohli in intimate positions various times Tanisha has entirely shattered her image, and has heavily upset Kajol, Ajay Devgn and Tanuja

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X