BB 7: ತುಟಿ ಚುಂಬಿಸು ಎಂದು ಸೋಫಿ, ಬೆಚ್ಚಿದ ಸಿಂಗ್
ಕುಶಾಲ್ ಹಾಗೂ ಗೌಹರ್ ಪ್ರೇಮ್ ಕಹಾನಿಗೆ ಟ್ವಿಸ್ಟ್ ಕೊಡಲು ಮನೆಹೊಕ್ಕಿದ್ದ ಕ್ಯಾಂಡಿ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲಳಾಗಿ ಮನೆಯಿಂದ ಹೊರ ನಡೆದ ಮೇಲೆ ನಿರೂಪಕ ಸಲ್ಮಾನ್ ಖಾನ್ ಜತೆಗಿನ ವಾರಾಂತ್ಯದ ಎಪಿಸೋಡು ಸಪ್ಪೆ ಸಪ್ಪೆ ಎನಿಸಿತ್ತು. ಸೋಮವಾರದ ಎಪಿಸೋಡ್ ಮಸಾಲೆಭರಿತವನ್ನಾಗಿಸಲು ಬಿಗ್ ಬಾಸ್ ಎಲ್ಲಾ ರೀತಿ ಸಜ್ಜಾಗಿದೆ. ನಾಮಿನೇಷನ್ ಪ್ರಕ್ರಿಯೆ ಜತೆಗೆ ಸೋಫಿಯಾ ಹಯಾತ್ ಜತೆ ಸ್ಪೀಡ್ ಡೇಟಿಂಗ್ ಟಾಸ್ಕ್ ನೀಡಲಾಗಿದೆ. ಹಯಾತ್ ತುಟಿ ಚುಂಬಿಸಲು ಸಂಗ್ರಾಮ್ ರೆಡಿಯೇ? ಟಿವಿಯಲ್ಲೇ ನೋಡಿ
ಮನೆಯಲ್ಲಿರುವ ಪುರುಷರ ಸಿಂಹಗಳ ಜತೆ ಸೋಫಿಯಾ ಹಯಾತ್ ಸ್ಪೀಡ್ ಡೇಟಿಂಗ್ ಮಾಡಲು ಮುಂದಾಗುತ್ತಾಳೆ. ಅರ್ಮಾನ್ ಕೊಹ್ಲಿ, ಏಜಾಜ್ ಖಾನ್ ಹಾಗೂ ವಿಜೆ ಆಂಡಿ ಓಕೆ ಎಂದರೂ ಸಂಗ್ರಾಮ್ ಸಿಂಗ್ ಎದೆ ಬಡಿತ ಹೆಚ್ಚಾಗುತ್ತದೆ. ಇದು ಒಂದು ಟಾಸ್ಕ್ ಎಂದು ಎಲ್ಲರೂ ತಿಳಿದಿದ್ದರೆ, ಬಿಗ್ ಬಾಸ್ ರಹಸ್ಯ ಸಂದೇಶದಂತೆ ಡೇಟಿಂಗ್ ಬರುವ ಸ್ಪರ್ಧಿಗಳ ಜತೆ ಸೋಫಿಯಾ ಒರಟಾಗಿ ನಡೆದುಕೊಳ್ಳಬೇಕಾಗುತ್ತದೆ. ಬಲವಂತವಾಗಿ ಕೆಲವು ಕೆಲಸ ಮಾಡಿಸಿಕೊಳ್ಳಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಸಂಗ್ರಾಮ್ ಬಂದಾಗ ಬಾ ನನ್ನ ತುಟಿ ಚುಂಬಿಸು ಎಂದು ಸೋಫಿಯಾ ಮುಂದಾಗುತ್ತಾಳೆ. ಸಂಗ್ರಾಮ್ ಗಾಬರಿ ಬೀಳುತ್ತಾನೆ. ಸೋಫಿಯಾ ಬಿಗಿದಪ್ಪಲು ಮುಂದಾಗುತ್ತಾಳೆ. ಸೋಫಿಯಾ ಹಿಡಿತದಿಂದ ಸಂಗ್ರಾಮ್ ತಪ್ಪಿಸಿಕೊಂಡ್ನಾ? ಸಂಗ್ರಾಮ್ ಮುತ್ತು ಕೊಟ್ಟೇ ಬಿಟ್ನಾ? ಉತ್ತರ ಕಲರ್ಸ್ ವಾಹಿನಿಯಲ್ಲಿ ಇಂದು ರಾತ್ರಿ ಸಿಗಲಿದೆ ಅಥವಾ ಎರಡು ಎಪಿಸೋಡು ಈ ಟಾಸ್ಕ್ ಇರುವುದರಿಂದ ನಾಳೆ ಈ ಸೀನ್ ನಿರೀಕ್ಷಿಸಬಹುದು.

ಗಿಫ್ಟ್ ಹಿಡಿದು ಬಂದ ಚೋರ
ನೀನು ಕಳ್ಳ ಎಂದು ಏಜಾಜ್ ಗೆ ಹೇಳಿದ್ದ ಸೋಫಿಯಾಳನ್ನು ಒಲಿಸಿಕೊಳ್ಳುವುದು ಈಗ ಏಜಾಜ್ ಗೆ ಟಾಸ್ಕ್ ಆಗಿದ್ದು, ಗಿಫ್ಟ್ ಹಿಡಿದುಕೊಂಡು ಬಂದಿದ್ದಾನೆ

ಸೋಫಿಯಾ ಯೋಜನೆ ಬೇರೆ
ಆದರೆ, ಪೂರ್ವ ನಿರ್ಧರಿತಳಾದ ಸೋಫಿಯಾ ಏಜಾಜ್ ನನ್ನು ರಿಜೆಕ್ಟ್ ಮಾಡುತ್ತಾಳೆ

ಆಂಡಿಗೂ ಅದೇ ಕಥೆ
ಏಜಾಜ್ ನಂತರ ವಿಜೆ ಆಂಡಿ ಸೋಫಿಯಾ ಬಳಿ ಬಂದು ತನ್ನ ಕಲೆ ಬಿಚ್ಚಿಡುತ್ತಾನೆ

ಆಂಡಿ ಕಂಡು ಕೂಲ್
ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಆಂಡಿ ಹಾಗೂ ಸೋಫಿಯಾ ಇಬ್ಬರಿಗೂ ಲಂಡನ್ ಕನೇಕ್ಷನ್ ಇದೆ. ಅಲ್ಲದೆ ಕ್ಯಾರವಾನ್ ನಲ್ಲಿ ಜತೆ ಯಲ್ಲಿದ್ದರು

ಉಗ್ರ ಪ್ರತಾಪಿ ಅರ್ಮಾನ್
ಕೋಪ ತಾಪ ಬಿಟ್ಟು ಶಾಂತ ಸ್ವರೂಪನಾಗಿ ಅರ್ಮಾನ್ ಸೋಫಿಯಾ ಬಳಿ ಬರುತ್ತಾನೆ

ಸಂಗ್ರಾಮ್ ಎಂಟ್ರಿ
ದೊಡ್ಡ ಹೂ ಗುಚ್ಛ ಹಿಡಿದುಕೊಂಡು ನಾಚಿಕೆಯಿಂದಲೆ ಸೋಫಿಯಾ ಬಳಿ ಸಾಗಿದ ಸಂಗ್ರಾಮ್

ಸಂಗ್ರಾಮ್ ನಾಚಿಕೆ
ಸೋಫಿಯಾ ಬದಲು ನಾಚಿ ನೀರಾಗಿದ್ದು ಕುಸ್ತಿ ಪಟು ಸಂಗ್ರಾಮ್ ಸಿಂಗ್

ಸೋಫಿಯಾ ಸ್ಪರ್ಶ
ಸೋಫಿಯಾ ಸ್ಪರ್ಶದಿಂದ ಮುಜುಗರ ಅನುಭವಿಸಿದ ಸಂಗ್ರಾಮ್

ಸಂಗ್ರಾಮ್ ಹಿಂಜರಿಕೆ
ಸಂಗ್ರಾಮ್ ದೂರಾಗುವಂತೆ ಮಾಡಲು ಸೋಫಿಯಾ ಅವನನ್ನು ತಬ್ಬಿಕೊಳ್ಳಲು ಯತ್ನಿಸಿದಳು ನಂತರ ಕಿಸ್ ಡಿಮ್ಯಾಂಡ್ ಮಾಡಿದಳು

ಕಿಸ್ ಮಿ ಸಂಗ್ರಾಮ್
ಪ್ಲೀಸ್ ಕಿಸ್ ಮೀ ಎಂದು ಮಾದಕವಾಗಿ ಸಂಗ್ರಾಮ್ ಮುಖಕ್ಕೆ ಮುಖ ಒಡ್ಡಿದ್ದ ಸೋಫಿಯಾ

ಸಂಗ್ರಾಮ್ ತಬ್ಬಿಬ್ಬು
ಸಂಗ್ರಾಮ್ ಪ್ರತಿಭಟಿಸುವಂತೆ ಮಾಡುವುದು ಸೋಫಿಯಾ ಯೋಜನೆಯಾಗಿರುತ್ತದೆ. ಆದರೆ, ಧೈರ್ಯಗೆಟ್ಟ ಸಂಗ್ರಾಮ್ ತಬ್ಬಿಬ್ಬಾಗುತ್ತಾನೆ

ಸಂಗ್ರಾಮ್ ಗೆ ಗೆಳತಿ ಭಯ
ಎಲ್ಲಾ ಟಾಸ್ಕ್ ಗೂ ಸೈ ಎನಿಸಿಕೊಂಡ ಸಂಗ್ರಾಮ್ ಕಿಸ್ ಮಾಡುತ್ತಾನೆಯೇ? ಅಥವಾ ಗೆಳತಿ ಪಾಯಲ್ ಗೆ ಹೆದರಿಕೊಂಡು ಪ್ರತಿಭಟಿಸುತ್ತಾನೆಯೇ ಬಿಗ್ ಬಾಸ್ ನ ಆಟ ಮುಂದುವರೆಯುತ್ತದೆ


Click it and Unblock the Notifications











