»   » ಬಿಗ್ ಬಾಸ್: ಊಟ ಬೇಕಾದ್ರೆ ಬಿಟ್ಟೆ ಕೋಪ ಬಿಡಲಾರೆ!

ಬಿಗ್ ಬಾಸ್: ಊಟ ಬೇಕಾದ್ರೆ ಬಿಟ್ಟೆ ಕೋಪ ಬಿಡಲಾರೆ!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮೂರನೇ ದಿನಕ್ಕೆ ಎಲ್ಲರಿಗೂ ಉಪವಾಸ. ಹೌದು, ಬಿಗ್ ಬಾಸ್ ಕೊಟ್ಟಿರುವ ಅಡುಗೆ ಸಾಮಾನು ಬೇಕಾಬಿಟ್ಟಿ ಖರ್ಚು ಮಾಡಿರುವ ಸ್ವರ್ಗ ವಾಸಿಗಳು ಭರ್ಜರಿ ಊಟ, ತಿಂಡಿ ಬೇಕು ಎನ್ನುವ ನರಕವಾಸಿಗಳಿಗೆ ಬಿಗ್ ಬಾಸ್ ಕೊಟ್ಟ ಬಜೆಟ್ ಸಾಲುತ್ತಿಲ್ಲ.

ಊಟದ ವಿಷಯ ಎರಡೂ ಕಡೆ ಸ್ಪರ್ಧಿಗಳ ಕಿತ್ತಾಟ, ಪೇಚಾಟ ಶುರುವಾಗಿದೆ. ಊಟ ಬೇಕಾದ್ರು ಬಿಟ್ಟೆ. ಕೋಪ ಬಿಡುವುದಿಲ್ಲ ಎಂಬಂತೆ ಅರ್ಮಾನ್ ವರ್ತಿಸಿದರೆ, ನನ್ನವರೇ ನನ್ನ ಜತೆಯಲ್ಲಿಲ್ಲ ಎಂದು ಗೌಹರ್ ಕಿತ್ತಾಟವಾಡಿ ಅತ್ತು ಕರೆದು ರಾದ್ಧಾಂತ ಮಾಡಿದ ಪ್ರಸಂಗ ನಡೆದಿದೆ.

ಮೂರನೇ ದಿನವೂ ಪ್ರತ್ಯೂಷಾ ಬ್ಯಾನರ್ಜಿ, ಕಾಮ್ಯಾ ಪಂಜಾಬಿ, ಗೌಹರ್ ಖಾನ್, ಅರ್ಮಾನ್, ಕುಶಾಲ್ ಆಂದಿ, ಶಿಲ್ಪಾ ಎಂದಿನಂತೆ ಸದ್ದು ಮಾಡಿದ್ದಾರೆ.

ಸ್ವೀಡಿಷ್ ಚೆಲುವೆ ಎಲ್ಲಿ ಅವ್ರಾಮ್ ಜತೆ ಸಂಗ್ರಾಮ್ ಸಿಂಗ್ ಗುಂಪಿಗೆ ಸೇರದ ಜನವಾಗಿ ಉಳಿದಿದ್ದಾರೆ. ನರಕವಾಸಿ ಅಪೂರ್ವ ಅಗ್ನಿಹೋತ್ರಿ ಸ್ವರ್ಗವಾಸಿ ಶಿಲ್ಪಾ ಅಗ್ನಿ ಹೋತ್ರಿ ಪೇಚಾಟ ಮುಂದುವರೆದಿದೆ. ವಿಜೆ ಆಂಡಿ ಆಟ ಶುರು ಮಾಡಿದ್ದಾನೆ, ಎಲ್ಲದ್ದಕೂ ಮೂಕ ಪ್ರೇಕ್ಷಕರಾಗಿದ್ದ ರಜತ್ ಹಾಗೂ ಅನಿತಾ ಕೂಡಾ ಎತ್ತರದ ಸ್ವರದಲ್ಲಿ ಮಾತಿಗಿಳಿದಿದ್ದು ವಿಶೇಷವಾಗಿತ್ತು. ತನಿಶಾ ಎಲ್ಲರಿಗೂ ಸಲ್ಲುವ ಹಾಗೆ ನಡೆದುಕೊಳ್ಳುತ್ತಿದ್ದಾಳೆ

ಸ್ವರ್ಗ, ನರಕಗಳಲ್ಲಿನ ಸ್ಪರ್ಧಿಗಳ ಪೇಚಾಟ ಬಗ್ಗೆ ಬಿಗ್ ಬಾಸ್ ಗೆ ಮನವರಿಕೆಯಾಗಿ ಆಹಾರ ಸಾಮಾಗ್ರಿ ಕಡಿಮೆ ಬಳಸಿ ಎಂದು ವಾರ್ಡನ್ ಕಡೆಯಿಂದ ವಾರ್ನಿಂಗ್ ಕೊಡಿಸಲಾಗಿದೆ. ಆದರೆ, ಊಟಕ್ಕಾಗಿ ಪರದಾಟ ಮುಂದುವರೆದಿದ್ದು, ಗೌಹರ್ ಸ್ವರ್ಗ ತೊರೆಯುವುದು ಖಾತ್ರಿಯಾಗಿದೆ ಮುಂದೆ ಓದಿ..

ನರಕವಾಸಿ ಜತೆ ಶಿಲ್ಪಾ

ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಎಲ್ಲಾ ಕಾಲಕ್ಕೂ ರೊಟ್ಟಿ ಮಾಡುತ್ತಾ ಹೋದರೆ ನಾಳೆಗೆ ಹಿಟ್ಟು ಖಾಲಿಯಾಗುತ್ತೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಅರ್ಧ ಮೊಟ್ಟೆ ತಿಂದು ನಿಮಗೆ ಪೂರ್ತಿ ಕೊಟ್ಟಿದ್ದೇವೆ. ಆಹಾರ ಕಡಿಮೆ ಬಳಸಿ ಎಂದು ಶೀಲ್ಪಾ ಅಗ್ನಿಹೋತ್ರಿ ಮನವಿ

ರಜತ್ ಹಾಗೂ ಅನಿತಾ

ಅರ್ಮಾನ್ ಡಿಮ್ಯಾಂಡ್ ತಕ್ಕಂತೆ ಊಟ ನೀಡಲು ಸ್ವರ್ಗವಾಸಿಗಳು ಮನಸ್ಸು ಮಾಡಿ ರಜತ್ ಹಾಗೂ ಅನಿತಾ ತಮ್ಮ ಪಾಲಿನ ದಾಲ್ ಹಂಚಿದರು.

ಸುನಾಮಿ ಸಿಂಗ್

ಬಿಗ್ ಬಾಸ್ ಕೊಟ್ಟ ಮೆಮೊ ಓದುತ್ತಿರುವ ರಜತ್, ಸ್ವರ್ಗ ನರಕವಾಸಿಗಳಿಗೆ ಕಡಿವಾಣ ಹಾಕಿದ ಬಿಗ್ ಬಾಸ್

ಕಥೆ ಹೇಳಿದ ಅನಿತಾ

ಸಂಗ್ರಾಮ್ ಸಿಂಗ್ ಹಾಗೂ ವಿಜೆ ಅಂಡಿ ಜತೆ ಹೆಚ್ಚು ಮಾತನಾಡುತ್ತಿರುವ ಅನಿತಾ ಅವರು ಸೂಪರ್ ಸ್ಟಾರ್ ರಾಜೇಶ್ ಖನ್ನ ಜತೆಗಿನ ಗೆಳತನ, ಲಿವ್ ಇನ್ ಸಂಬಂಧ, ಖನ್ನಾ ಅವರ ಹಠ ಎಲ್ಲದರ ಬಗ್ಗೆ ಹಂಚಿಕೊಂಡು ಗದ್ಗದಿತರಾದರು.

ದಿನದ ಜಗಳ

ಗೌಹರ್ ಹಾಗೂ ಅರ್ಮಾನ್ ಮೊದಲಿನಿಂದಲೂ ಕಿತ್ತಾಡಲು ಬಂದಂತೆ ಕಾಣುತ್ತಿದೆ. ಹಳೆ ಡೈಲಾಗ್ ಹಿಡಿದುಕೊಂಡು ಜಗಳಕ್ಕೆ ಬಂದ ಗೌಹರ್ ನಾನು ನಿಮ್ಮನ್ನು ಅರ್ಮಾನ್ ಜೀ ಎಂದು ಗೌರವ ಕೊಟ್ಟು ಮಾತನಾಡಿಸುತ್ತೇನೆ. ನೀವು ಯಾಕೆ ನನಗೆ ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂದಳು.

ಮಾತಿನ ಚಕಮಕಿ ಹೆಚ್ಚಾಗಿ ರಜತ್ ಬಂದು ಅರ್ಮಾನ್ ಗೆ ಅವಾಜ್ ಹಾಕಿದರು. ನಡುವೆ ಅನಿತಾ ಬಂದು ನಾವು ಅಡುಗೆ ಮನೆಯಲ್ಲಿ ಏನು ಚರ್ಚೆ ಮಾಡಿದೆವೋ ಅದನ್ನೇ ನರಕವಾಸಿಗಳ ಮುಂದೆ ಹೇಳಿದೆವು ಗೌಹರ್ ಹೇಳಿದ್ದು ಸರಿಯಿಲ್ಲ ಎಂದರು. ಈ ಸಂದರ್ಭದಲ್ಲಿ ಗೌಹರ್ ಕಣ್ಣೀರು ಬಂದು ಬಿಟ್ಟಿತು

ನಾಟಕರಾಣಿ ಗೌಹರ್

ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎನ್ನುವ ಹಾಗೆ ಎಲ್ಲದ್ದಕ್ಕೂ ಓವರ್ ರಿಯಾಕ್ಷನ್ ನೀಡುವ ಗೌಹರ್ ಪ್ರತಿಕ್ರಿಯೆಗಳು ನೈಜತೆಯಿಂದ ಕೂಡಿಲ್ಲ ಎಂದು ಶಿಲ್ಪಾ, ಆಂಡಿ ಹಾಗೂ ತನೀಶಾ ಮಾತನಾಡಿಕೊಂಡಿಕೊಂಡಿದ್ದಾರೆ. ಗೌಹರ್ ಎಚ್ಚರಿಕೆಯಿಂದ ಆಟವಾಡುತ್ತಿದ್ದಾಳೆ ಎಂದು ಆಂಡಿ ಸುಳಿವು ನೀಡಿದ್ದಾರೆ. ಆದರೆ, ಗೌಹರ್ ಗೆ ಈ ಆಟವೇ ಮುಳುವಾಗಿದೆ. ಸ್ವರ್ಗ ತೊರೆದು ನರಕಕ್ಕೆ ಹೋಗುವಂತೆ ಬಿಗ್ ಬಾಸ್ ಆದೇಶ ಬಂದಿದೆ. ಅದೂ ಸ್ವರ್ಗವಾಸಿಗಳ ವೋಟ್ ಔಟ್ ನಿಂದ

ಉಗ್ರಪ್ರತಾಪಿ ಅರ್ಮಾನ್

ಮೊದಲೇ ಸರಿಯಾಗಿ ಊಟ ಸಿಗದೆ ಹಸಿದ ಹೊಟ್ಟೆಯಲ್ಲಿ ಮಲಗಿ ಎದ್ದ ಅರ್ಮಾನ್ ಕೋಪಗೊಂಡಿದ್ದ. ಇದಕ್ಕೆ ಸರಿಯಾಗಿ ನಾನು ಸಾಚಾ ಎಂದು ತೋರಿಸಿಕೊಳ್ಳಲು ಗೌಹರ್ ಸಂಧಾನ ಮಾತುಕತೆಗೆ ಬಂದು ಅರ್ಮಾನ್ ಕೋಪ ಇನ್ನಷ್ಟು ಹೆಚ್ಚಿಸಿದಳು.

ರಜತ್ ಬಂದು ಹಳೆಯದನ್ನು ಮರೆತುಬಿಡು ಎಂದು ಹೇಳಿದ್ದು ಅರ್ಮಾನ್ ಇನ್ನಷ್ಟು ಕೆರಳಿಸಿತು. ನಡುವೆ ಅನಿತಾ ಆಂಟಿ ಕೂಡಾ ಬಂದು ಗೌಹರ್ ವಿರುದ್ದವಾಗಿ ಕೊಟ್ಟ ಉತ್ತರ ಅರ್ಮಾನ್ ನನ್ನು ಇನ್ನಷ್ಟು ಕೆರಳಿಸಿತು. ಈ ಸಂದರ್ಭದಲ್ಲೇ ಊಟ ತಿಂಡಿ ಏನು ಬೇಡ ಎಂದು ಅರ್ಮಾನ್ ಕೂಗಾಡಿದ.

ನರಕವಾಸಿಗಳಿಗೆ ಮನವರಿಕೆ

ಆಹಾರ ಸಾಮಾಗ್ರಿ ಕೊರತೆ ಬಗ್ಗೆ ಒಂದು ಸುತ್ತಿನ ಚರ್ಚೆ ನಂತರವೂ ಗೊಂದಲ ಇದ್ದಾಗ ಗೌಹರ್ ಮನವರಿಕೆ ಮಾಡಲು ಬಂದು ಅರ್ಮಾನ್ ಜತೆ ಜಗಳಕ್ಕೆ ಇಳಿದಳು

ಗಂಭೀರ ಚರ್ಚೆ

ಸ್ವರ್ಗ ಹಾಗೂ ನರಕವಾಸಿಗಳು ಉಟದ ವಿಚಾರವಾಗಿ ಗಂಭೀರ ಚರ್ಚೆ ನಡೆಸಿದ್ದಾರೆ.

ದಿನದ ದುಃಖತಪ್ತೆ

ಅರ್ಮಾನ್ ಜತೆ ಜಗಳವಾಡಿ ಕಣ್ಣೀರಿಟ್ಟ ಗೌಹರ್ ನಂತರ ರೂಮೊಳಗೆ ಹೋಗಿ ಗೋಳೋ ಎಂದು ಅತ್ತಳು. ಇದನ್ನು ಕಂಡು ಮರುಗಿದ ಸಂಗ್ರಾಮ್ ಸಿಂಗ್ ಸಮಾಧಾನ ಪಡಿಸಲು ಯತ್ನಿಸಿದ. ಆದರೆ, ಸಂಗ್ರಾಮ್ ನನ್ನು ತಡೆದ ಆಂಡಿ, ಅವಳ ಪಾಡಿಗೆ ಅವಳು ಇರಲಿ ಸ್ವಲ್ಪ ಕಾಲ ಬಿಡು ಎಂದು ಕರೆದುಕೊಂಡು ಹೋದ.

ದಿನದ ಬೇಡಿಕೆ

ಊಟ ಕೊಡಿ ಇನ್ನಷ್ಟು ಊಟ ಕೊಡಿ ..ಕೆಲಸ ಮಾಡಿದ್ದೇವೆ ಊಟ ಕೊಡಿ.. ಊಟದ ಬೇಡಿಕೆ ಈಡೇರದಿದ್ದರೂ ನೀರು, ಗ್ಯಾಸ್ ಸಮರ್ಪಕವಾಗಿ ಮನೆಯವರಿಗೆ ಸಿಕ್ಕಿದೆ. ಮೂರನೇ ದಿನದ ಅಂತ್ಯಕ್ಕೆ ಗೌಹರ್ ನರಕವಾಸಿಯಾಗುವುದು ಖಾತ್ರಿಯಾಗಿದೆ. ಮುಂದೇನಾಗುತ್ತೆ ಕಾದು ನೋಡೋಣ

English summary
Bigg Boss 7 - Day 3: The third day in the Bigg Boss house starts with issues between Hell and Heaven where food seems to be the biggest concern amongst the housemates. Taking into consideration the limitations of food, we will see anxiety between the Jannat and Jahannum vaasis to optimally use it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada