BB7: ಲವ್ ಬರ್ಡ್ಸ್ ದೂರ ದೂರ, ಅನಿತಾ ಬಿಚ್ಚಿಟ್ಟ ಸತ್ಯ
ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಇತ್ತೀಚೆಗಷ್ಟೇ ಎಲಿಮಿನೇಟ್ ಆಗಿದ್ದ ಅನಿತಾ ಅಡ್ವಾಣಿ ಅವರು ಹಿಂದಿ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನ ಬಗ್ಗೆ ಏನೂ ಸತ್ಯ ಹೇಳದೆ ಹೋಗಿದ್ದರು. ಖನ್ನಾ ಜತೆಗಿನ ಲಿವ್ ಇನ್ ಪಾರ್ಟ್ನರ್ ಎಂದೇ ಖ್ಯಾತಿ ಗಳಿಸಿದ್ದ ಅನಿತಾ ಅಡ್ವಾಣಿ ಅವರು ಲೈವ್ ಚಾಟ್ ನಲ್ಲಿ ಒಂದಷ್ಟು ಸತ್ಯ ಹೊರಹಾಕಿದ್ದಾರೆ.
ಮೂರು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಅನಿತಾ ಅವರಿಗೂ ಮುನ್ನ ಹಜೇಲ್ ಕೀಚ್ ಹಾಗೂ ರತನ್ ರಜಪೂತ್ ಅವರು ಮನೆಯಿಂದ ಹೊರಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ಜನರಿಗೆ ಮನರಂಜನೆ ನೀಡುವಲ್ಲಿ ಈ ಮೂವರು ಸ್ಪರ್ಧಿಗಳು ವಿಫಲರಾಗಿದ್ದರಲ್ಲದೆ ಕೆಲವು ಟಾಸ್ಕ್ ಗಳಲ್ಲಿ ಉತ್ತಮ ಸಾಧನೆ ತೋರದಿರುವುದೇ ಇವರನ್ನು ಮನೆಯಿಂದ ಹೊರಹಾಕಲು ಪ್ರಮುಖ ಕಾರಣವಾಗಿತ್ತು.
ಅನಿತಾ ಹೇಳಿದ್ದಿಷ್ಟು: ಅದಲು ಬದಲು ಕಾರ್ಯಕ್ರಮದಿಂದಾಗಿ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಗುಂಪುಗಾರಿಕೆ ಹೆಚ್ಚಾಯಿತು. ನನ್ನನ್ನು ಮೊದಲಿನಿಂದಲೂ ಟಾರ್ಗೆಟ್ ಮಾಡಿ ಹೊರ ಹಾಕಲಾಗಿದೆ. ಆದರೆ, ಹೊಸ ಬಗೆ ಜನರನ್ನು ಭೇಟಿ ಮಾಡಿ ಮಾತನಾಡಿಸಿದ ತೃಪ್ತಿ ಇದೆ.
* ಕಾಮ್ಯಾ ಹಾಗೂ ಗೌಹರ್ ಒಂದೇ ನಾಣ್ಯದ ಎರಡು ಮುಖಗಳಂತೆ ಕಂಡರೂ ಕಾಮ್ಯಾ ಬೆಟರ್ ನೇರ ಮಾತನಾಡುತ್ತಾಳೆ. ಗೌಹರ್ ನಾಟಕ ರಾಣಿ.
* ಎಲ್ಲರೂ ತಿಳಿದಂತೆ ತನೀಶಾ ಹಾಗೂ ಅರ್ಮಾನ್ ನಡುವೆ ಯಾವುದೇ ಪ್ರೇಮ ಸಂಬಂಧವಿಲ್ಲ. ಗೌಹರ್ ಹಿಂದೆ ಬಿದ್ದಿರುವ ಕುಶಾಲ್ ಗೆ ಆಘಾತ ಕಾದಿದೆ. ಇಬ್ಬರ ನಡುವಿನ ಪ್ರಣಯ ದೃಶ್ಯ, ಚೇಷ್ಟೇ ಎಲ್ಲವೂ ಫೇಕ್.
* ನನ್ನನ್ನು ಹೊರ ಹಾಕಲು ಅರ್ಮಾನ್ ಕೂಡಾ ಸಂಚು ನಡೆಸಿದ್ದ ಎಂಬುದು ತಿಳಿದು ಆಘಾತವಾಗಿದೆ.
* ರಾಜೇಶ್ ಖನ್ನಾ ಅವರ ಜತೆ ನನ್ನ ಸಂಬಂಧ ವಿವಾಹಕ್ಕಿಂತ ಅತಿದೊಡ್ಡದು. ನಾನು ಅವರ ಪತ್ನಿ ರೀತಿಯಲ್ಲೇ ಬಾಳಿದ್ದೇನೆ. ನಮ್ಮದು ಭಾವನಾತ್ಮಕ ಬೆಸುಗೆ ಎಂದು ಅನಿತಾ ಕಣ್ಣೀರು ಒರೆಸಿಕೊಂಡರು. ಇನ್ನಷ್ಟು ವಿವರ ಮುಂದೆ

ಅನಿತಾ ಹೇಳಿಕೆ
* ಅರ್ಮಾನ್ ವಿರುದ್ಧ ನಾನು ವೋಟ್ ಮಾಡಲಿಲ್ಲ. ಆದರೆ ಆತ ನನಗೆ ಮೋಸ ಮಾಡಿದ.
* ಬಿಗ್ ಬಾಸ್ ಮನೆಯಲ್ಲಿ ಸಂಗ್ರಾಮ್ ದೊಡ್ಡ ಈಡಿಯಟ್ Woh andar se khokle hai
* ಸಲ್ಮಾನ್ ಖಾನ್ ಅವರು ನನ್ನ ಕುಟುಂಬದ ಬಗ್ಗೆ ಒಳ್ಳೆ ಮಾತುಗಳನ್ನಾಡಿದ್ದು ನನಗೆ ಇಷ್ಟವಾದ ಕ್ಷಣ
* ನಾನು ಬಿಗ್ ಬಾಸ್ ಸ್ಪರ್ಧೆಗೆ ಬಂದಿದ್ದು ಕೇವಲ ಹಣಕ್ಕಾಗಿ. ಕೋರ್ಟ್ ಕೇಸ್ ನಡೆಸಲು ನನಗೆ ಹಣ ಅವಶ್ಯವಿದೆ.
* ತನೀಶಾ ನನ್ನ ಆಪ್ತಳಾಗಿದ್ದಳು. ಶಿಲ್ಪಾ ಸಹಾಯ ಮಾಡುತ್ತಿದ್ದಳು ಆದರೆ, ಕೆಲವೊಮ್ಮೆ ನಂಬಲು ಕಷ್ಟವಾಗುತ್ತಿತ್ತು.

ಲವ್ ಬರ್ಡ್ಸ್ ದೂರ ದೂರ
ವಾರದ ಅದಲು ಬದಲು ಕಾರ್ಯಕ್ರಮದ ಪರವಾಗಿ ಪ್ರೇಮ ನಾಟಕದ ಪಾತ್ರಧಾರಿಗಳಾದ ಗೌಹರ್ ಹಾಗೂ ಕುಶಾಲ್ ದೂರ ದೂರಾಗಿ ವಿರಹ ವೇದನೆ ಅನುಭವಿಸಿದ್ದಾರೆ.

ಅದಲು ಬದಲು ಕಾರ್ಯಕ್ರಮ
ಸ್ವರ್ಗವಾಸಿಗಳು ನರಕಕ್ಕೆ ನರಕದವರು ಸ್ವರ್ಗಕ್ಕೆ ಹಾರಿದ ಮೇಲೆ ಜಗಳ ಕದನ ಇನ್ನೂ ಜೋರಾಗಿದೆ. ಅರ್ಮಾನ್ ಪ್ರತಾಪ ತೋರಿದ್ದಲ್ಲದೆ 12 ಗಂಟೆ ಜೈಲು ಶಿಕ್ಷೆ ಅನುಭವಿಸಿದ್ದಾಗಿದೆ. ಆಂಡಿ ಹಾಗೂ ಅರ್ಮಾನ್ ವಾಗ್ಯುದ್ಧ ಇನ್ನೂ ಮುಗಿದಿಲ್ಲ. ಶಿಲ್ಪಾ ಹಾಗೂ ಅಪೂರ್ವ ಒಂದಾಗಿದ್ದು ಮಾತ್ರ ಅಪೂರ್ವ ಸನ್ನಿವೇಶವಾಗಿತ್ತು.

ಅಂಡಿ ಶಿಲ್ಪಾ
ನೊಂದ ಜೀವಿ ಆಂಡಿಗೆ ಶಿಲ್ಪಾ ಅಗ್ನಿಹೋತ್ರಿ ಸಾಂತ್ವನ ಹೇಳಿದ್ದಾರೆ. ನಾಲಗೆ ತಪ್ಪಿ ಬಂದ ಮಾತಿಗೆ ಆಂಡಿ ಬೇಸರ ಗೊಂಡರು ಅರ್ಮಾನ್ ಉರಿ ತಗ್ಗಿಲ್ಲ

ಎಲ್ಲರಿಗೂ ನೋವು
ಅದಲು ಬದಲು ಕಾರ್ಯಕ್ರಮದ ಫಲವಾಗಿ ಬಿಗ್ ಬಾಸ್ ಮನೆಯಲ್ಲಿ ಜೋಡಿಗಳು ಹುಟ್ಟುಕೊಳ್ಳುತ್ತಿವೆ ಆದರೆ, ಎಲ್ಲರಿಗೂ ಅದಲು ಬದಲು ಕಿರಿಕಿರಿ ಜತೆಗೆ ನೋವುಂಟು ಮಾಡುತ್ತಿದೆ.


Click it and Unblock the Notifications











