»   » ಬಿಗ್ ಬಾಸ್ ನಿರೂಪಣೆಗೆ ಸಲ್ಲುಗೆ ರು.130 ಕೋಟಿ

ಬಿಗ್ ಬಾಸ್ ನಿರೂಪಣೆಗೆ ಸಲ್ಲುಗೆ ರು.130 ಕೋಟಿ

Posted By:
Subscribe to Filmibeat Kannada

ಇದ್ದಿದ್ದನ್ನು ಇದ್ದಂಗೆ ತೋರಿಸುವ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ ಎಂಬ ಖ್ಯಾತಿಗೆ ಪಾತ್ರವಾಗಿರುವ 'ಬಿಗ್ ಬಾಸ್' ರಿಯಾಲಿಟಿ ಶೋ ಹೊಸ ಸೀಸನ್ ಗೆ ವೇದಿಕೆ ಸಿದ್ಧವಾಗುತ್ತಿದೆ. ಕಲರ್ಸ್ ವಾಹಿನಿಯ 'ಬಿಗ್ ಬಾಸ್ ಸೀಸನ್ 7'ಕ್ಕೆ ಈ ಬಾರಿಯೂ ಸಲ್ಮಾನ್ ಖಾನ್ ನಿರೂಪಿಸಲಿದ್ದಾರೆ.

ಬಾಲಿವುಡ್ ನಲ್ಲಿ ಸಲ್ಲುಗೆ ದಿನೇ ದಿನೇ ಡಿಮ್ಯಾಂಡ್ ಹೆಚ್ಚಾಗುತ್ತಲೇ ಇದೆ. ಅದೇ ರೀತಿ ಕಿರುತೆರೆಯಲ್ಲೂ ಅಷ್ಟೇ ಡಿಮ್ಯಾಂಡ್ ಇದೆ. ಕಳೆದ ಕೆಲವರ್ಷಗಳಿಂದ ಅವರು ಬಿಗ್ ಬಾಸ್ ಶೋ ನಿರೂಪಿಸಿದ್ದಾರೆ. ಈಗ ಸೀಸನ್ 7ಕ್ಕೂ ಅವರು ಬರುತ್ತಿದ್ದಾರೆ.


ಈ ಕಾರ್ಯಕ್ರಮವನ್ನು ನಿರೂಪಿಸಲು ಸಲ್ಲುಗೆ ಭರ್ಜರಿ ಸಂಭಾವನೆ ಸಿಕ್ಕಿದೆ. ಒಂದು ಎಪಿಸೋಡ್ ನಿರೂಪಣೆಗೆ ಸಲ್ಲು ಪಡೆಯುತ್ತಿರುವ ಸಂಭಾವನೆ ರು.5 ಕೋಟಿ. ಈ ಕಾರ್ಯಕ್ರಮಕ್ಕಾಗಿ ಅವರು ಪಡೆಯುತ್ತಿರುವ ಪ್ಯಾಕೇಜ್ ರು.130 ಕೋಟಿ.

ಬಿಗ್ ಬಾಸ್ ಸೀಸನ್ 6ಕ್ಕೆ ಸಲ್ಮಾನ್ ಖಾನ್ ರು.2.5 ಕೋಟಿ ಸಂಬಳ ಎಣಿಸಿದ್ದರು. ಈಗ ಅವರ ಚಾರ್ಚ್ ಡಬಲ್ ಆಗಿದೆ. ಸೀಸನ್ 7ರಲ್ಲಿ ಒಟ್ಟು 26 ಎಪಿಸೋಡ್ ಗಳಲ್ಲಿ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೆ ಬಿಗ್ ಬಾಸ್ ಸೀಸನ್ 7ರ ಪ್ರೊಮೋ ಬಿಡುಗಡೆಯಾಗಿದ್ದು ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಲ್ಲುಗೆ ಕೊಟ್ಟ ದುಡ್ಡನ್ನು ಬಡ್ಡಿ ಸಮೇತ ಪಡೆಯಬೇಕಾದರೆ ವಾಹಿನಿಯ ಜಾಹೀರಾತುಗಳ ದರವೂ ದುಪ್ಪಟಾಗುತ್ತಿದೆ.

ಈ ಬಾರಿಯ ವಿಶೇಷ ಎಂದರೆ ಸಲ್ಮಾನ್ ಖಾನ್ ಅವರದು ದ್ವಿಪಾತ್ರ ನಿರೂಪಣೆ. ಅವರ 1997ರ ಹಿಟ್ ಚಿತ್ರ 'ಜುಡ್ವಾ' ಚಿತ್ರದ ದ್ವಿಪಾತ್ರಾಭಿನಯದಂತೆ ಇರುತ್ತದೆ. 'ಜುಡ್ವಾ' ಚಿತ್ರದ ಪಾತ್ರದಂತೆ ಅವರು ಎರಡು ಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

ಈ ಬಾರಿ ತಮ್ಮ ಕಾರ್ಯಕ್ರಮವನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎನ್ನುತ್ತವೆ ವಾಹಿನಿ ಮೂಲಗಳು. 'ಬಿಗ್ ಬಾಸ್' ಸೀಸನ್ 4ರಿಂದಲೂ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಒಂದಷ್ಟು ತಮಾಷೆ, ಸೀರಿಯಸ್, ಹುಡುಗಾಟ ಎಲ್ಲವನ್ನೂ ಮಾಡುವ ಮೂಲಕ ಸಲ್ಲು ತಮ್ಮ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗಿದ್ದರು. ಈ ಬಾರಿ ಡಬಲ್ ಧಮಾಕಾ ನೀಡುವ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತರುತ್ತಿದ್ದಾರೆ. (ಏಜೆನ್ಸೀಸ್)

English summary
Bollywood star Salman Khan will be paid Rs 5 crore per episode for Bigg Boss 7 and with this Salman Khan became the highest paid actor on television with a salary of Rs 130 crore.
Please Wait while comments are loading...