For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ 7 ಟೀಸರ್ ನಲ್ಲಿ ಏನಿದೆ ಅಂದ್ರೆ...

  By Mahesh
  |

  ಕಲರ್ಸ್ ವಾಹಿನಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಈಗಾಗಲೇ ಕುತೂಹಲ ಹೆಚ್ಚಾಗಿದೆ. ಬಿಗ್ ಬಾಸ್ ಸೀಸನ್ 6 ರಲ್ಲಿ 'ಅಲಗ್ ಛೆ' ಎಂದು ವಿಭಿನ್ನವಾಗಿ ಕಾರ್ಯಕ್ರಮ ನಡೆಸಿಕೊಟ್ಟ ಸಲ್ಮಾನ್ ಸೀಸನ್ 7ನಲ್ಲಿ ಡಬ್ಬಲ್ ಧಮಾಕ ನೀಡಲು ಸಿದ್ಧರಾಗಿದ್ದಾರೆ.

  ಬಹುನಿರೀಕ್ಷಿತ ಬಿಗ್ ಬಾಸ್ 7 ನ ಅಧಿಕೃತ ಟೀಸರ್ ಹೊರಬಿದ್ದಿದೆ. ಪ್ರೋಮೊದಲ್ಲಿ ಹೇಳಿದ್ದಂತೆ ನರಕ, ಸ್ವರ್ಗದ ದರ್ಶನ ನಂತರ ಬಿಗ್ ಬಾಸ್ ದರ್ಶನ ಪ್ರಾಪ್ತಿಯಾಗಲಿದೆಯಂತೆ.

  ಕಳೆದ ವಾರವಷ್ಟೆ, ಸಲ್ಮಾನ್ ಖಾನ್ ಅವರ ದ್ವಿಪಾತ್ರದ ಚಿತ್ರಗಳ ಝಲಕ್ ಸೋರಿಕೆಯಾಗಿತ್ತು. ಸಲ್ಮಾನ್ ಅವರು ಸ್ವರ್ಗ, ನರಕದ ದರ್ಶನ ತೋರಿಸಲು ಪಾತ್ರಕ್ಕೆ ತಕ್ಕ ಉಡುಪು ಧರಿಸಿ ಅಭಿಮಾನಿಗಳಿಗೆ ಕಿಚ್ಚು ಹಚ್ಚಿದ್ದರು.ಈಗ ಪ್ರೊಮೊ ಪ್ರಕಾರ ಬಿಗ್ ಬಾಸ್ ನರಕ ನಂತರ ಸ್ವರ್ಗ ದರ್ಶನ ಮಾಡಿಸಲಿದೆ ಎಂಬುದು ತಿಳಿದು ಬಂದಿದೆ.

  ಸಲ್ಮಾನ್ ಅವರು ಬಿಗ್ ಬಾಸ್ ನಿರೂಪಣೆ ಒಪ್ಪಿಕೊಂಡ ಮೇಲೆ ಇದು ನಾಲ್ಕನೇ ಸೀಸನ್ ಆಗಿದ್ದು, ಪ್ರತಿಬಾರಿ ಹೊಸತನದಿಂದ ಪ್ರೇಕ್ಷಕರ ಮುಂದೆ ಬರುವ ಭರವಸೆ ನೀಡಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಬಿಗ್ ಬಾಸ್ 7 ಅಕ್ಟೋಬರ್ ಬದಲಿಗೆ ಸೆಪ್ಟೆಂಬರ್ ತಿಂಗಳಿನಲ್ಲೇ ತೆರೆಯನ್ನು ಅಲಂಕರಿಸುವ ಸಾಧ್ಯತೆಯಿದೆಯಂತೆ.

  ಆದರೆ, ಸದ್ಯಕ್ಕೆ ಬಿಗ್ ಬಾಸ್ 7 ಸ್ಪರ್ಧಿಗಳ ವಿವರ ಇನ್ನೂ ಸಿಕ್ಕಿಲ್ಲ, ಗಾಳಿಸುದ್ದಿ ಪ್ರಕಾರ ಈ ಬಾರಿ ಖ್ಯಾತ ಕ್ರಿಕೆಟರ್ ಒಬ್ಬರು ಮನೆಯಲ್ಲಿ ಉಳಿದುಕೊಳ್ಳಲಿದ್ದಾರಂತೆ. ಯಾರು ಯಾರು ಬಿಗ್ ಬಾಸ್ ಸೇರುತ್ತಾರೋ ಆಮೇಲೆ ನೋಡೋಣ ಮೊದಲಿಗೆ ಬಿಗ್ ಬಾಸ್ ಟೀಸರ್ ಇಲ್ಲಿದೆ ನೋಡಿ...

  ಫರ್ಫೆಕ್ಟ್ ನಿರೂಪಣೆ

  ಫರ್ಫೆಕ್ಟ್ ನಿರೂಪಣೆ

  ಬಿಗ್ ಬಾಸ್ ನಿರೂಪಣೆಗೆ ಹೊಸ ಆಯಾಯ ತಂದು ಕೊಟ್ಟ ಸಲ್ಮಾನ್ ತಮ್ಮ ನೈಜ ನಿರೂಪಣೆ ಹಾಗೂ ಸ್ಪರ್ಧಿಗಳ ಜೊತೆ ಆತ್ಮೀಯತೆ, ಕಠೋರತೆ ಎಲ್ಲಾ ಸನ್ನಿವೇಶವನ್ನು ಸೂಕ್ಷ್ಮವಾಗಿ ನಿಭಾಯಿಸಬಲ್ಲರು

  ಸ್ವರ್ಗವಾಸಿ ಸಲ್ಮಾನ್?

  ಸ್ವರ್ಗವಾಸಿ ಸಲ್ಮಾನ್?

  ನರಕಕ್ಕೂ ಮುನ್ನ ಸ್ವರ್ಗವಾಸಿ ಸಲ್ಮಾನ್ ನೋಡಿಬಿಡಿ, ರಿಯಾಲಿಟಿಯಲ್ಲಿ ಮೊದಲು ನರಕ ನಂತರ ಸ್ವರ್ಗವಂತೆ

  ನರಕದಲ್ಲಿ ಸಲ್ಲೂ

  ನರಕದಲ್ಲಿ ಸಲ್ಲೂ

  ದುಷ್ಟಪಾತ್ರದಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದು, ಈ ಸೀಸನ್ ನಲ್ಲಿ ಸ್ಪರ್ಧಿಗಳಿಗೆ ಕಠಿಣ ಪರೀಕ್ಷೆ ಎದುರಾಗಲಿದೆ ಎಂದಿದ್ದಾರೆ.

  ಏನಿದೆ ಬಿಗ್ ಬಾಸ್ ನಲ್ಲಿ

  ಏನಿದೆ ಬಿಗ್ ಬಾಸ್ ನಲ್ಲಿ

  ಬಿಗ್ ಬಾಸ್ ಅಧಿಕೃತ ಟೀಸರ್ ಅಷ್ಟೇ ಇನ್ನೂ ಬಿಡುಗಡೆಯಾಗಿದೆ. ಇದರಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡ ರೀತಿಯಲ್ಲೇ ಸ್ಪರ್ಧಿಗಳಿಗೂ ನರಕದ ನಂತರ ಸ್ವರ್ಗ ಎಂಬಂತೆ ಕಷ್ಟಪಟ್ಟರೆ ಡಬ್ಬಲ್ ಸುಖ ಸಿಗಲಿದೆಯಂತೆ

  ಸ್ಪರ್ಧಿಗಳ ಬಗ್ಗೆ ಏನಾದರೂ

  ಸ್ಪರ್ಧಿಗಳ ಬಗ್ಗೆ ಏನಾದರೂ

  ಗಾಳಿಸುದ್ದಿ ಪ್ರಕಾರ 'ಬಾಲಿಕಾ ವಧು' ನಟಿ ಪ್ರತ್ಯೂಷಾ ಬ್ಯಾನರ್ಜಿ, ನಚ್ ಬಲಿಯೇ ವಿಜೇತೆ ಮಾಹಿ ವಿಜ್, ಸಂಜಯ್ ದತ್ ನಕಲು ಮಾಡುವ ಅಯಾಜ್ ಖಾನ್ ಅವರು ಸ್ಪರ್ಧಿಗಳಾಗುವ ಸಾಧ್ಯತೆಯಿದೆಯಂತೆ

  ಟೀಸರ್ ನೋಡಿ

  ಟೀಸರ್ ನೋಡಿ

  ಬಹು ನಿರೀಕ್ಷಿತ ಬಿಗ್ ಬಾಸ್ 7 ಟೀಸರ್ ನೋಡಿ
  ಅಂದ ಹಾಗೆ, ಇತ್ತೀಚೆಗೆ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅಪ್ಪುಗೆ ನಂತರ ಇಬ್ಬರೂ ಸೇರಿ ಬಿಗ್ ಬಾಸ್ 7 ನಡೆಸಿಕೊಡುತ್ತಾರೆ ಎಂಬ ಗಾಳಿಸುದ್ದಿಯೂ ಹಬ್ಬಿತ್ತು.

  English summary
  The first official teaser of Bigg Boss season 7 is out. The promo says, metaphorically, that there is going to be hell, heaven and then there is going to be Bigg Boss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X