BB 7: ಸುಳ್ಳು ಪರೀಕ್ಷೆ ಯಂತ್ರದ ಮುಂದೆ ಸಂಗ್ರಾಮ್

By ಜೇಮ್ಸ್ ಮಾರ್ಟಿನ್

ರಾಜಕೀಯದಾಟದಲ್ಲಿ ಪಕ್ಷದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದ ಸಂಗ್ರಾಮ್ ಎಲ್ಲರೊಡನೆ ತಾನು ಸತ್ಯವಂತ ಎಂಬುದನ್ನು ಸಾಬೀತುಪಡಿಸಲು ಮುಂದಾಗಿರುವಂತಿದೆ. ಉಗ್ರ ಪ್ರತಾಪಿ ಅರ್ಮಾನ್ ಸಮಕ್ಕೂ ನಿಂತು ವಾದ ಮಾಡುತ್ತಾ ತನ್ನ ಅಸಲಿ ರೂಪದ ಪರಿಚಯ ಮಾಡಿಕೊಟ್ಟಿದ್ದ ಸಂಗ್ರಾಮ್ ನಂತರ ಕಾಮ್ಯಾ, ಪ್ರತ್ಯೂಷಾರಿಗೆ ವಾದ ಮಂಡಿಸಲು ಹೋಗಿ ಮತ್ತೆ ಸೋತಿದ್ದ. ಈಗ ಕೊನೆ ಪ್ರಯತ್ನ ಎಂಬಂತೆ ಸುಳ್ಳು ಪರೀಕ್ಷೆ ಯಂತ್ರ (lie detector test) ಮುಂದೆ ಪರೀಕ್ಷೆಗೆ ಒಡ್ಡಿಕೊಂಡು ಪ್ರೇಕ್ಷಕರ ನೇರ ಪ್ರಶ್ನೆಗೆ ಉತ್ತರಿಸಲು ಮುಂದಾಗಿದ್ದಾನೆ.

ಇತರೆ ಸ್ಪರ್ಧಿಗಳು ಹೊರಗಡೆ ಕುಳಿತು ಸಂಗ್ರಾಮ್ ಪರೀಕ್ಷೆ ಸಂವಾದವನ್ನು ಪೂರ್ತಿಯಾಗಿ ಆಲಿಸುತ್ತಿರುತ್ತಾರೆ. ಇದು ಸಂಗ್ರಾಮ್ ಇನ್ನಷ್ಟು ಕೆಳಕ್ಕೆ ತಳ್ಳುತ್ತದೆಯೇ ಮುಂದೆ ಕಾದು ನೋಡಿ.. ಈ ನಡುವೆ ಅರ್ಮಾನ್ ಮತ್ತೆ ಮತ್ತೆ ಕೂಗಾಡಿದರೂ ತನೀಶಾ ವಿಧೇಯ ಸಖಿಯಂತೆ ತಲೆ ತಗ್ಗಿಸಿ ಆತನನ್ನು ಸಹಿಸಿಕೊಳ್ಳುತ್ತಿದ್ದಾಳೆ. ಆಂಡಿ ಹಾಗೂ ಏಜಾಜ್ ನಡುವೆ ಕಿತ್ತಾಟ ಆರಂಭಗೊಂಡಿದೆ.

ರಾಜಕೀಯ ಟಾಸ್ಕ್ ನಂತರ ಎಲ್ಲರ ವೋಟ್ ಗಳಿಸಿ ಬಹುಮತದೊಂದಿಗೆ ಎಲ್ಲಿ ಮನೆಯ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾಳೆ. ರಾಜಕೀಯ ಟಾಸ್ಕ್ ಗೆದ್ದ ತಂಡದವರೇ ಕ್ಯಾಪ್ಟನ್ ಆಗಬೇಕು ಎಂದು ಬಿಗ್ ಬಾಸ್ ನಿಯಮ ವಿಧಿಸಿದ್ದು ಗೌಹರ್ ಅಂಡ್ ಗ್ಯಾಂಗ್ ಗೆ ಯಾಕೋ ಇಷ್ಟವಾಗಲಿಲ್ಲ. ಇದೆಲ್ಲದರ ನಡುವೆ ಆಂಡಿ, ಸಂಗ್ರಾಮ್, ಕಾಮ್ಯಾ ಅವರಿಗೆ ಅವರ ಕುಟುಂಬದಿಂದ ಅಚ್ಚರಿಯ ಉಡುಗೊರೆ ಕೂಡಾ ಕಾದಿದೆ.. ಮುಂದೆ ಓದಿ

ಪರೀಕ್ಷೆಯಲ್ಲಿ ಸಂಗ್ರಾಮ್

ಪರೀಕ್ಷೆಯಲ್ಲಿ ಸಂಗ್ರಾಮ್

ಸುಳ್ಳು ಪರೀಕ್ಷೆಯಲ್ಲಿ ಸಂಗ್ರಾಮ್ ಗೆ ಪ್ರೇಕ್ಷಕರು ಕೇಳುವ ನೇರ ಪ್ರಶ್ನೆಗೆ ಸಂಗ್ರಾಮ್ ನಿಂದ yes ಅಥವಾ No ಉತ್ತರ

ಗೌಹರ್ ಮರು ಪ್ರವೇಶ

ಗೌಹರ್ ಮರು ಪ್ರವೇಶ

ಬಿಗ್ ಬಾಸ್ ಮನೆಗೆ ಗೌಹರ್ ಮರು ಪ್ರವೇಶ ಸರಿಯೇ ತಪ್ಪೇ ಎಂಬ ಪ್ರಶ್ನೆಗೆ No ಎಂದು ಉತ್ತರಿಸಿದ ಸಂಗ್ರಾಮ್

ಸಂಗ್ರಾಮ್ ಉತ್ತರಕ್ಕೆ ಪ್ರತಿಕ್ರಿಯೆ

ಸಂಗ್ರಾಮ್ ಉತ್ತರಕ್ಕೆ ಪ್ರತಿಕ್ರಿಯೆ

ಸುಳ್ಳು ಪರೀಕ್ಷೆಯಲ್ಲಿ ಪ್ರೇಕ್ಷಕರು ಕೇಳುವ ನೇರ ಪ್ರಶ್ನೆಗೆ ಸಂಗ್ರಾಮ್ ನೀಡುವ ಉತ್ತರ ಸರಿಯೇ ತಪ್ಪೇ ಎಂಬುದರ ಬಗ್ಗೆ ಇತರೆ ಸ್ಪರ್ಧಿಗಳಿಂದ ಪ್ರತಿಕ್ರಿಯೆ

ಮಿಶ್ರ ಪ್ರತಿಕ್ರಿಯೆ

ಮಿಶ್ರ ಪ್ರತಿಕ್ರಿಯೆ

ಸಂಗ್ರಾಮ್ ಉತ್ತರಕ್ಕೆ ಸಹಮತ ನೀಡದ ಸದಸ್ಯರು ಸಂಗ್ರಾಮ್ ಸುಳ್ಳು ಹೇಳುತ್ತಿದ್ದಾನೆ ಎಂದು ಫಲಕ ತೋರಿಸಿದರು

ಏಜಾಜ್ ಪ್ರಾಬ್ಲಂ

ಏಜಾಜ್ ಪ್ರಾಬ್ಲಂ

ಬಾಥ್ ರೂಮಿನಲ್ಲಿ ಡ್ರೆಸ್ ಬದಲಾಯಿಸಲು ಆಗುತ್ತಿಲ್ಲ ಎಂದು ದೂರಿದ ಏಜಾಜ್ ರೂಮಿಗೆ ಬಂದು ತನೀಶಾಳಿಗೆ ಹೊರಕ್ಕೆ ಹೋಗುವಂತೆ ಹೇಳುತ್ತಾನೆ. ತನೀಶಾ ಹೊರಕ್ಕೆ ಹೋಗದಿದ್ದಾಗ ಅಲ್ಲೇ ಬಟ್ಟೆ ಕಳಚುತ್ತಾನೆ. ಇದನ್ನು ನೋಡಿ ಸೋಫಿಯ ಸಿಟ್ಟಿಗೇಳುತ್ತಾಳೆ

ಸೋಫಿಯಾ ಜತೆ ಕಿತ್ತಾಟ

ಸೋಫಿಯಾ ಜತೆ ಕಿತ್ತಾಟ

ಹಳೆ ಜಗಳ ಮತ್ತೆ ತೆಗೆದ ಏಜಾಜ್ ಹಾಗೂ ಸೋಫಿಯಾ ವಾಗ್ಯುದ್ಧ ನಡೆಸಿದ್ದನ್ನು ಸಂಗ್ರಾಮ್ ಅಚ್ಚರಿಯಿಂದ ನೋಡುತ್ತಿದ್ದಾನೆ

ಕಥಕ್ ಬಿಟ್ಟು ಬೆಲ್ಲಿ ಡ್ಯಾನ್ಸ್

ಕಥಕ್ ಬಿಟ್ಟು ಬೆಲ್ಲಿ ಡ್ಯಾನ್ಸ್

ಕಥಕ್ ಡ್ಯಾನ್ಸ್ ಬಿಟ್ಟು ಸೋಫಿಯಾ ಜತೆ ಬೆಲ್ಲಿ ಡ್ಯಾನ್ಸ್ ಮಾಡಿದ ವಿಜೆ ಆಂಡಿ

ವಿಜೆ ಆಂಡಿಗೆ ಅಚ್ಚರಿ

ವಿಜೆ ಆಂಡಿಗೆ ಅಚ್ಚರಿ

ಮನೆ ಮಂದಿ ನೋಡಿ ಖುಷಿಗೊಂಡ ಆಂಡಿ

ವಿಜೆ ಆಂಡಿ ಫ್ಯಾಮಿಲಿ

ವಿಜೆ ಆಂಡಿ ಫ್ಯಾಮಿಲಿ

ವಿಜೆ ಆಂಡಿ ಫ್ಯಾಮಿಲಿ ರೆಕಾರ್ಡ್ ವಾಯ್ಸ್ ಸಂದೇಶ ಬಿತ್ತರಿಸಲಾಯಿತು

ಗೆಳತಿ ಕರೆಗಾಗಿ ಕಾತುರ

ಗೆಳತಿ ಕರೆಗಾಗಿ ಕಾತುರ

ಸಂಗ್ರಾಮ್ ತನ್ನ ಗೆಳತಿ ಕರೆಗಾಗಿ ಕಾತುರದಿಂದ ಟಿವಿ ಪರದೆ ನೋಡುತ್ತಿದ್ದಾನೆ

ಪಾಯಲ್ ಸಂದೇಶ

ಪಾಯಲ್ ಸಂದೇಶ

ಸಂಗ್ರಾಮ್ ಗೆಳತಿ ಪಾಯಲ್ ತನ್ನ ಸಂದೇಶ ನೀಡಿದ್ದು ಹೀಗೆ

ಕಾಮ್ಯಾಗೆ ಅಚ್ಚರಿ

ಕಾಮ್ಯಾಗೆ ಅಚ್ಚರಿ

ಮಗಳ ದನಿ ಕೇಳಿ ಖುಷಿಗೊಂಡ ಕಾಮ್ಯಾ ಪಂಜಾಬಿ

ಕಾಮ್ಯಾಗೆ ಅಚ್ಚರಿ

ಕಾಮ್ಯಾಗೆ ಅಚ್ಚರಿ

ಕಾಮ್ಯಾ ಮಗಳು ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಹಾಡು ಹಾಡಿ ರಂಜಿಸಿದಳು

ಅಚ್ಚರಿಗಾಗಿ ಕಾದ ಸ್ಪರ್ಧಿಗಳು

ಅಚ್ಚರಿಗಾಗಿ ಕಾದ ಸ್ಪರ್ಧಿಗಳು

ಬಿಗ್ ಬಾಸ್ ನೀಡುವ ಅಚ್ಚರಿಗಾಗಿ ಕಾದಿರುವ ಸ್ಪರ್ಧಿಗಳು

More from Filmibeat

English summary
Bigg Boss 7's Sangram is made to take 'lie detector test', which puts him in a lot of trouble. Also, Armaan continues to disrespect Tanisha while she.Also, Andy, Sangram and Kamya get a pleasant surprise from their family members, who sent them recorded video message.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X