For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ 8 ಮತ್ತೆ ಆರಂಭ, ಸ್ಪರ್ಧಿಗಳ್ಯಾರು?

  By * ಜೇಮ್ಸ್ ಮಾರ್ಟಿನ್
  |

  ಸ್ವರ್ಗ ನರಕ ಕಲ್ಪನೆ ಹೊರ ತಂದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗ ಮತ್ತೊಮ್ಮೆ ಕಲರ್ಸ್ ವಾಹಿನಿಯಲ್ಲೇ ಪ್ರಸಾರವಾಗಲಿದೆ. ಬಿಗ್ ಬಾಸ್ 8 ರ ಸರಣಿಯನ್ನು ಮತ್ತೊಮ್ಮೆ ಸಲ್ಮಾನ್ ಖಾನ್ ನಡೆಸಿಕೊಡಲಿದ್ದಾರೆ ಎಂದು ಕಲರ್ಸ್ ವಾಹಿನಿ ಟ್ವೀಟ್ ಮಾಡಿ ಅಧಿಕೃತವಾಗಿ ಹೇಳಿಕೆ ನೀಡಿದೆ. ಆಗಸ್ಟ್ ಅಂತ್ಯಕ್ಕೆ ಬಿಗ್ ಬಾಸ್ ಆರಂಭವಾಗುವ ಸೂಚನೆ ಸಿಕ್ಕಿದೆ ಆದರೆ, ಸ್ಪರ್ಧಿಗಳ್ಯಾರು ಎಂಬ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.

  ಕಾಲ ಇದ್ದಂತೆ ಇರಲ್ಲ. ಕ್ಷಣ ಕ್ಷಣ ಬದಲಾಗುತ್ತಿರುತ್ತದೆ. ಸ್ವರ್ಗ ನರಕಗಳಂತೆ ಜೀವನ ಕೂಡಾ ಬದಲಾಗುತ್ತದೆ ಎಂದು ಹೇಳುತ್ತಾ ಎಲ್ಲರ ಮನ ಗೆದ್ದಿದ್ದ ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರು ಮತ್ತೊಮ್ಮೆ ಸ್ವರ್ಗ ನರಕ ಕಲ್ಪನೆಯನ್ನು ಮುಂದುವರೆಸುತ್ತಾ ಎಂಬ ಕುತೂಹಲವಿದೆ.[ಬಿಗ್ ಬಾಸ್ ಶೋ ಮತ್ತೆ ಆರಂಭ]

  ಸ್ವರ್ಗ ನರಕ ಕಲ್ಪನೆ ಹೊರ ತಂದ ಕಲರ್ಸ್ ವಾಹಿನಿಯ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗ ಕೋರ್ಟ್ ಮೆಟ್ಟಿಲೇರಿತ್ತು. ಹಲವಾರು ಕೇಸುಗಳನ್ನು ಕೊರಳಿಗೆ ಸುತ್ತಿಕೊಂಡಿರುವ ನಿರೂಪಕ ಸಲ್ಮಾನ್ ಖಾನ್ ಅವರ ಮೇಲೆ ಹೊಸದಾಗಿ ದೂರು ದಾಖಲಾಗಿತ್ತು. ಮುಸ್ಲಿಂ ಭಾವನೆಗಳಿಗೆ ಸಲ್ಮಾನ್ ಖಾನ್ ಅವರು ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ದೂರು ಸಲ್ಮಾನ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು.

  ಸ್ಪರ್ಧಿಗಳ ವಿಷಯಕ್ಕೆ ಬಂದರೆ ಜನಪ್ರಿಯ ನಟ, ನಟಿ, ಮಾದಕ ತಾರೆ, ಟಿವಿ ಜಗತ್ತಿನ ಜನಪ್ರಿಯ ಸ್ಟಾರ್, ವಿವಾದಿತ ವ್ಯಕ್ತಿ, ಸಲಿಂಗಿಗಳನ್ನು ಆಯ್ಕೆ ಮಾಡುವ ಮಾದರಿ ಮುಂದುವರೆಯುವ ಸಾಧ್ಯತೆಯಿದೆ.. ಬಿಗ್ ಬಾಸ್ 8 ರ ಸಂಭಾವ್ಯ ಸ್ಪರ್ಧಿಗಳ ವಿವರ ಇಲ್ಲಿದೆ

  ಮಾದಕ ನಟಿ ಶೆರ್ಲಿನ್ ಛೋಪ್ರಾ

  ಮಾದಕ ನಟಿ ಶೆರ್ಲಿನ್ ಛೋಪ್ರಾ

  ಮಾದಕ ನಟಿ ಕಾಮಸೂತ್ರ ಚಿತ್ರದ ಟ್ರೇಲರ್ ಮೂಲಕವೇ ಪಡ್ಡೆಗಳ ನಿದ್ದೆಗೆಡಿಸಿದ ಶೆರ್ಲಿನ್ ರನ್ನು 90 ದಿನಗಳ ಕಾಲ ಮನೆಯಲ್ಲಿ ಉಳಿಯುವಂತೆ ಬಿಗ್ ಬಾಸ್ ಆಯೋಜಕರು ಕೇಳಿದ್ದಾರಂತೆ.

  ಫನ್ನಾನ ನಟ ಕರಣ್ ಕುಂದ್ರಾ

  ಫನ್ನಾನ ನಟ ಕರಣ್ ಕುಂದ್ರಾ

  ಫನ್ನಾದ ನಟ ಕರಣ್ ಕುಂದ್ರಾ ಹೆಸರು ಬಲವಾಗಿ ಕೇಳಿ ಬಂದಿದೆ.

  ಗ್ರಾಂಡ್ ಮಸ್ತಿ ನಟಿ ಕರೀಷ್ಮಾ

  ಗ್ರಾಂಡ್ ಮಸ್ತಿ ನಟಿ ಕರೀಷ್ಮಾ

  ಗ್ರಾಂಡ್ ಮಸ್ತಿ ನಟಿ ಕರೀಷ್ಮಾ ತನ್ನಾ ಬಿಗ್ ಬಾಸ್ 8 ರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

  ಸ್ಪುರದ್ರೂಪಿ ನಟ ಕರಣ್ ಟಾಕರ್

  ಸ್ಪುರದ್ರೂಪಿ ನಟ ಕರಣ್ ಟಾಕರ್

  ಬಿಗ್ ಬಾಸ್ 8 ರ ಮನೆ ಪ್ರವೇಶಿಸಲು ಸ್ಪುರದ್ರೂಪಿ ನಟ ಕರಣ್ ಟಾಕರ್ ಉತ್ಸುಕರಾಗಿದ್ದಾರಂತೆ.

  ವಿದೇಶಿ ಅತಿಥಿ ಕಮ್ ಸ್ಪರ್ಧಿ ಲೂಲಿಯಾ

  ವಿದೇಶಿ ಅತಿಥಿ ಕಮ್ ಸ್ಪರ್ಧಿ ಲೂಲಿಯಾ

  ವಿದೇಶಿ ಅತಿಥಿ ಕಮ್ ಸ್ಪರ್ಧಿಯಾಗಿ ಈ ಬಾರಿ ಸಲ್ಮಾನ್ ಖಾನ್ ಅವರ ಒಂದು ಕಾಲದ ಗೆಳತಿ ಲೂಲಿಯಾ ವಂಟೂರ್ ಬರಲಿದ್ದಾರೆ ಎಂಬ ಮಾತಿದೆ. ಸ್ಪರ್ಧಿಯಾಗುತ್ತಾರಾ ಅಥವಾ ಅತಿಥಿಯಾಗಿ ಬರುತ್ತಾರಾ ಸ್ಪಷ್ಟವಾಗಿಲ್ಲ

  ಕುಸುಮ್ ಧಾರವಾಹಿ ನಟಿ ನೌಶಿನ್

  ಕುಸುಮ್ ಧಾರವಾಹಿ ನಟಿ ನೌಶಿನ್

  ಕುಸುಮ್ ಜನಪ್ರಿಯ ಧಾರವಾಹಿ ನಟಿ ನೌಶಿನ್ ಅಲಿ ಸರ್ದಾರ್ ತನ್ನ ಇತರೆ ರಿಯಾಲಿಟಿ ಶೋಗಳನ್ನು ಮುಗಿಸಿ ಬಿಗ್ ಬಾಸ್ ಮನೆಗೆ ಬರಲು ಕಾದಿದ್ದಾರಂತೆ.

  ನಟಿ ನಿಶಾ ಯಾದವ್

  ನಟಿ ನಿಶಾ ಯಾದವ್

  ಬಿಗ್ ಬಾಸ್ ಸ್ಪರ್ಧಿಯಾಗಿ ನಟಿ ನಿಶಾ ಯಾದವ್ ಹೆಸರು ಕೇಳಿ ಬಂದಿದೆ

  ನಟಿ ರಶ್ಮಿ ದೇಸಾಯಿ

  ನಟಿ ರಶ್ಮಿ ದೇಸಾಯಿ

  ಸಲ್ಮಾನ್ ಖಾನ್ ಮೆಚ್ಚಿನ ನೃತ್ಯಗಾರ್ತಿ, ಅಭಿನೇತ್ರಿ ರಶ್ಮಿ ದೇಸಾಯಿ ಬಿಗ್ ಬಾಸ್ ಮನೆಗೆ ಬರುವುದು ಬಹುತೇಕ ಖಚಿತವಾಗಿದೆ. ಉತ್ತರಣ್ ಧಾರಾವಾಹಿ ಮೂಲಕ ಮನೆ ಮಾತಾದ ಭೋಜ್ ಪುರಿ ನಟಿ ಈ ಹಿಂದೆ ಸಲ್ಲೂ ಜೊತೆ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದಳು.

  ನಟ ರಸ್ಲಾನ್ ಮಮ್ತಾಜ್

  ನಟ ರಸ್ಲಾನ್ ಮಮ್ತಾಜ್

  ಟಾರ್ಜಾನ್ ನಟ ರಸ್ಲಾನ್ ಮಮ್ತಾಜ್ ಅವರ ಜೇ ಲೇ ಝರಾ ಇತ್ತೀಚೆಗೆ ಮುಕ್ತಾಯವಾಗಿದ್ದು, ಬಿಗ್ ಬಾಸ್ ಮನೆಗೆ ಆಹ್ವಾನ ಪಡೆದುಕೊಂಡಿದ್ದಾರೆ.

  ನಟಿ ಸಂಗೀತಾ ಘೋಷ್

  ನಟಿ ಸಂಗೀತಾ ಘೋಷ್

  ನಟಿ ಸಂಗೀತಾ ಘೋಷ್ ಅವರಿಗೂ ಬಿಗ್ ಬಾಸ್ 8 ರ ಸ್ಪರ್ಧಿಯಾಗುವಂತೆ ಆಹ್ವಾನ ಹೋಗಿದೆ. ಆದರೆ, ಇನ್ನೂ ಈಕೆ ನಿರ್ಧಾರ ತಿಳಿಸಿಲ್ಲ.

  ನಟಿ ಟೀನಾ ದತ್ತಾ

  ನಟಿ ಟೀನಾ ದತ್ತಾ

  ಮುದ್ದು ಮಾತಿನಿಂದ ಎಲ್ಲರ ಮನೆ ಸೂರಿ ಮಾಡಿರುವ ಉತ್ತರಣ್ ಧಾರವಾಹಿಯ ಮತ್ತೊಬ್ಬ ನಟಿ ಟೀನಾ ದತ್ತಾ ಕೂಡಾ ಬಿಗ್ ಬಾಸ್ ಮನೆ ಪ್ರವೇಶ ಬಯಸಿದ್ದಾರೆ.

  ಕಿಲಾಡಿ ರಾಜೇಶ್ ಕೂಡಾ ಎಂಟ್ರಿ?

  ಕಿಲಾಡಿ ರಾಜೇಶ್ ಕೂಡಾ ಎಂಟ್ರಿ?

  ಖತರೋಂಕಿ ಕಿಲಾಡಿ ಶೋ ವಿಜೇತ ರಾಜೇಶ್ ದುಗ್ಗಾಲ್ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುವ ಸಾಧ್ಯತೆಯಿದೆ.

  ಆರ್ ಜೆ ಮಲಿಷ್ಕಾ

  ಆರ್ ಜೆ ಮಲಿಷ್ಕಾ

  ಝಲಕ್ ದಿಕ್ಲಾ ಜಾದಲ್ಲಿ ಸ್ಪರ್ಧಿಸಿದ್ದ ಆರ್ ಜೆ ಮಲಿಷ್ಕಾ ಅವರು ಬಿಗ್ ಬಾಸ್ ಮನೆ ಪ್ರವೇಶ ಬಯಸಿದ್ದಾರಂತೆ.

  ಗುರ್ ಮೀತ್ ಹಾಗೂ ಡೆಬಿನಾ

  ಗುರ್ ಮೀತ್ ಹಾಗೂ ಡೆಬಿನಾ

  ಖತರೋನ್ ಕೆ ಕಿಲಾಡಿ ಸ್ಪರ್ಧಿಗಳಾದ ಗುರ್ ಮೀತ್ ಹಾಗೂ ಡೆಬಿನಾ ದಂಪತಿಗಳು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಬೇಕಿದೆ.

  ಗೌರವ್ ಹಾಗೂ ನಾರಾಯಣ ಶಾಸ್ತ್ರಿ

  ಗೌರವ್ ಹಾಗೂ ನಾರಾಯಣ ಶಾಸ್ತ್ರಿ

  ಗೌರವ್ ಛೋಪ್ರಾ ಹಾಗೂ ನಾರಾಯಣಿ ಶಾಸ್ತ್ರಿ ಮಾಜಿ ಲವರ್ ಗಳನ್ನು ಒಂದೇ ಮನೆಯಲ್ಲಿ ಬಿಟ್ಟು ಮಜ ತೆಗೆದುಕೊಳ್ಳುವ ಸಾಧ್ಯತೆಯಿದೆ.

  ಕಾಮಿಡಿಯನ್ ಡ್ಯಾನ್ಸರ್ ಭಾರ್ತಿ ಸಿಂಗ್

  ಕಾಮಿಡಿಯನ್ ಡ್ಯಾನ್ಸರ್ ಭಾರ್ತಿ ಸಿಂಗ್

  ನಟಿ, ಕಾಮಿಡಿಯನ್, ಡ್ಯಾನ್ಸರ್ ಭಾರ್ತಿ ಸಿಂಗ್ ಪ್ರತಿಭೆಗೆ ಬಿಗ್ ಬಾಸ್ ವೇದಿಕೆ ಸಾಕ್ಷಿಯಾಗಬಹುದು.

  ನಟಿ ಅಮೀಷಾ ಪಟೇಲ್

  ನಟಿ ಅಮೀಷಾ ಪಟೇಲ್

  ಇತ್ತೀಚೆಗೆ ಸಿನಿಮಾ ರಂಗದಿಂದ ದೂರವಿರುವ ಅಮೀಷಾ ಪಟೇಲ್ ಬಿಗ್ ಬಾಸ್ ಮನೆಯಲ್ಲಿ ಬಂದು ತಮ್ಮ ಗೋಳು ತೋಡಿಕೊಳ್ಳಬಹುದು.

  ನಟ ಅಲೋಕ್ ನಾಥ್

  ನಟ ಅಲೋಕ್ ನಾಥ್

  ಹಿರಿಯ ನಟ ಅಲೋಕ್ ನಾಥ್ ಅವರು ತಮ್ಮ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಉಂಟಾಗಿರುವ ಹಾಸ್ಯಮಯ ಪ್ರಸಂಗಕ್ಕೆ ಉತ್ತರ ನೀಡಲು ಮನೆಗೆ ಬರುವ ಸಾಧ್ಯತೆಯಿದೆ.

  ಸನ್ನಿ ಲಿಯೋನ್ ಪತಿ

  ಸನ್ನಿ ಲಿಯೋನ್ ಪತಿ

  ಸನ್ನಿ ಲಿಯೋನ್ ನಂತರ ಆಕೆ ಪತಿ ಡೆನಿಯಲ್ ವೆಬರ್ ಬಿಗ್ ಬಾಸ್ ಮನೆಗೆ ಬಂದು ಆಕೆಯ ಇತಿಹಾಸ ಬಿಚ್ಚಿಡುವ ಸಾಧ್ಯತೆಯಿದೆ.

  English summary
  The controversial reality show Bigg Boss 8 is soon going to be back to scandalise and entertain viewers this August. The show this time too will be hosted by the Dabangg star Salman Khan. There are many names making rounds who might contest in the reality show this season, here are some of them...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X