For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಅಚ್ಚರಿ: ಫ್ಲರ್ಟ್ ಮಾಡುವ ಅಂಕಿತ್ ಹೊರಕ್ಕೆ

  By ಜೇಮ್ಸ್ ಮಾರ್ಟಿನ್
  |

  ಬಿಗ್ ಬಾಸ್ 9ರ ಡಬ್ಬಲ್ ಟ್ರಬಲ್ ಟಾರ್ಚರ್ ಪ್ರೇಕ್ಷಕರಿಗೆ ಅಚ್ಚರಿ, ಬೇಸರ ಮೂಡಿಸಿದೆ. ಜೋಡಿಯಾಗಿ ಇಬ್ಬರು ಸ್ಪರ್ಧಿಗಳು ಇರುವ ಈ ಆಟದಲ್ಲಿ ಮೊದಲ ಬಾರಿಗೆ ಒಬ್ಬ ಸ್ಪರ್ಧಿ ಮನೆಯಿಂದ ಹೊರ ನಡೆದಿದ್ದಾರೆ. ಜೋಡಿ ಬದಲಿಗೆ ಒಬ್ಬ ಸ್ಪರ್ಧಿ ಮಾತ್ರ ಮನೆ ಹೊರಕ್ಕೆ ಹೋಗುತ್ತಾರೆ ಎಂದ ಸಲ್ಮಾನ್ ಅವರು ನಂ.1 ಫ್ಲರ್ಟ್ ಅಂಕಿತ್ ಗೇರರನ್ನು ಹೊರಕ್ಕೆ ಕರೆದಾಗ ಎಲ್ಲರಿಗೂ ಸಹಜವಾಗಿ ಅಚ್ಚರಿಯಾಯಿತು.

  ಸಪ್ನೆ ಸುಹಾನೆ ಲಡಕ್ ಪನ್ ನಟ ಅಂಕಿತ್ ಗೇರ ಅವರ ತಮ್ಮ ಜೋಡಿಯಾದ ಅರವಿಂದ್ ವೆಗ್ಡಾ ಜೊತೆ ಇನ್ನಷ್ಟು ಕಾಲ ಮನೆಯಲ್ಲಿ ಕಾಲದೂಡುವ ಕನಸು ಹೊತ್ತಿದ್ದರು. ಅದರೆ, ನಾಮಿನೇಟ್ ಆಗಿದ್ದ ನಾಲ್ಕು ಜೋಡಿಗಳ ಪೈಕಿ ಅಂಕಿತ್ ಹಾಗೂ ಅರವಿಂದ್ ಕೊನೆಗೆ ಡೇಂಜರ್ ಜೋನ್ ಗೆ ಬಂದಾಗಲೂ ಎಲ್ಲರೂ ಅರವಿಂದ್ ಅವರು ಮನೆಯಿಂದ ಹೊರ ಬೀಳುತ್ತಾರೆ ಎಂದೇ ಊಹಿಸಿದ್ದರು.

  ಅರವಿಂದ್ ನೆಗ್ಡಾ ಗೊರಕೆ ರಗಳೆ, ರೇಜಿಗೆ ಹುಟ್ಟಿಸುವ ಅಂಕಿತ್ ಮಾತುಗಳ ನಡುವೆ ಸೈಲಂಟ್ ಪೇರ್ ಎನಿಸಿಕೊಂಡ ಯುವಿಕಾ ಚೌಧರಿ ಹಾಗೂ ವಿಕಾಸ್ ಭಲ್ಲಾ ಕೂಡಾ ನಾಮಿನೇಟ್ ಆಗಿದ್ದು ಪ್ರೇಕ್ಷಕರಿಗೆ ಕೊಂಚ ಅಚ್ಚರಿ ಮೂಡಿಸಿತು.

  ಸುಯ್ಯಶ್-ರಿಮಿ ಸೇನ್, ದಿಗಂಗನಾ-ರೂಪಲ್ ತ್ಯಾಗಿ, ವಿಕಾಸ್ ಭಲ್ಲಾ ಹಾಗೂ ಯುವಿಕಾ, ಅರವಿಂದ್ ಹಾಗೂ ಅಂಕಿತ್ ಜೋಡಿ ಡೇಂಜರ್ ಜೋನ್ ನಲ್ಲಿದೆ. ಬಿಗ್ ಬಾಸ್ ನ ಡಬ್ಬಲ್ ಟ್ರಬಲ್ ನಿಂದ ಮೊಟ್ಟ ಮೊದಲು ಯಾವ ಸ್ಪರ್ಧಿ ಹೊರಬೀಳುತ್ತಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

  English summary
  Bigg Boss 9's first elimination is going to happen tonight. The show that started on 11th October, has as always, attracted many audiences as they are surprised with the theme ‘double trouble'. This season's theme has already given lot of surprise to the audience and we guess this continues.
  Monday, October 19, 2015, 15:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X