ಬಿಗ್ ಬಾಸ್ 'ಡಬ್ಬಲ್ ಟ್ರಬಲ್' ರಹಸ್ಯ ಬಹಿರಂಗ
ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ 9ನೇ ಆವೃತ್ತಿಯಲ್ಲಿ ಯಾರು ಯಾರು ಸ್ಪರ್ಧಿಗಳು ಎಂಬ ಕುತೂಹಲದ ಜೊತೆಗೆ ಏನಿದು 'ಡಬ್ಬಲ್ ಟ್ರಬಲ್' ಎಂದು ತಲೆಕೆಡಿಸಿಕೊಂಡ ಪ್ರೇಕ್ಷಕರಿಗೆ ಕೊನೆಗೂ ಉತ್ತರ ಸಿಕ್ಕಿದೆ. ಸಲ್ಮಾನ್ ಖಾನ್ ಅವರು ಡಬ್ಬಲ್ ಟ್ರಬಲ್ ರಹಸ್ಯ ಹೊರಹಾಕಿದ್ದಾರೆ.
ಸಲ್ಮಾನ್ ಖಾನ್ ಅವರು ಈ ಬಾರಿ ತಮ್ಮ ಜೊತೆಗೆ ಮತ್ತೊಬ್ಬ ಸಾಥಿಯನ್ನು ಹುಡುಕಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರ ಜೊತೆಗೆ ಈ ಬಾರಿ ಅಕ್ಷಯ್ ಕುಮಾರ್ ಅವರು ನಿರೂಪಣೆ ಹೊನೆ ಹೊತ್ತಿದ್ದಾರೆ. ಡಬ್ಬಲ್ ಖುಷಿ ಹಾಗೂ ಡಬ್ಬಲ್ ಮಜಾ ನೀಡಲು ಈ ಜೋಡಿ ಸಿದ್ಧವಾಗಿದೆ.

ದಬ್ಬಾಂಗ್ ಸ್ಟಾರ್ ಹಾಗೂ ಆಕ್ಷನ್ ಸ್ಟಾರ್ ಜೋಡಿ ಏನು ಕಮಾಲ್ ಮಾಡುವುದೋ ಕಾದು ನೋಡಬೇಕಿದೆ. ಸ್ಲಿಂಗ್ ಇಸ್ ಬ್ಲಿಂಗ್ ಚಿತ್ರದ ಪ್ರಚಾರಕ್ಕಾಗಿ ಮಾತ್ರ ಅಕ್ಷಯ್ ಕುಮಾರ್ ಅವರು ಬಿಗ್ ಬಾಸ್ ಅಂಗಳದಲ್ಲಿ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿಯೂ ಇದೆ.
ಇದಲ್ಲದೆ ಸಲ್ಮಾನ್ ಜೊತೆಗೆ ರಣವೀರ್ ಸಿಂಗ್ ಕೂಡಾ ಬಿಗ್ ಬಾಸ್ 9 ರಲ್ಲಿ ಈ ಬಾರಿ ನಿರೂಪಕನ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದು ದೀಪಿಕಾ ಪಡುಕೋಣೆ ಜೊತೆಗೆ ಬಾಜಿರಾವ್ ಮಸ್ತಾನಿ ಚಿತ್ರದ ಪ್ರಚಾರ ಮಾಡಲಿದ್ದಾರೆ.
ಕಲರ್ಸ್ ವಾಹಿನಿಯಲ್ಲಿ ಅಕ್ಟೋಬರ್ 11ರಿಂದ ಬಿಗ್ ಬಾಸ್ 9 ಪ್ರಸಾರವಾಗಲಿದ್ದು, ಇನ್ನೂ ಸ್ಪರ್ಧಿಗಳು ಯಾರು ಎಂಬ ವಿಷಯ ಬಹಿರಂಗಗೊಂಡಿಲ್ಲ.


Click it and Unblock the Notifications











