ಬಿಗ್ ಬಾಸ್ ಗೆದ್ದ ಪ್ರಿನ್ಸ್ ಈಗ ಹ್ಯಾಟ್ರಿಕ್ ಚಾಂಪಿಯನ್!

By ಜೇಮ್ಸ್ ಮಾರ್ಟಿನ್

ವಿವಾದ, ಕುತೂಹಲ, ಕೀಟಲೆ, ಕಿತ್ತಾಟ, ಸಲ್ಮಾನ್ ಕಿಚಾಯಿಸುವಿಕೆ ಎಲ್ಲವನ್ನು ಒಳಗೊಂಡಿದ್ದ ಡಬ್ಬಲ್ ಟ್ರಬಲ್ ಬಿಗ್‌ಬಾಸ್-9 ಗ್ರ್ಯಾಂಡ್ ಫಿನಾಲೆ ಶನಿವಾರ ರಾತ್ರಿ ಪ್ರೇಕ್ಷಕರನ್ನು ರಂಜಿಸಿದೆ. ನಿರೀಕ್ಷೆಯಂತೆ ಪ್ರಿನ್ಸ್ ನರುಲಾ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

ಪ್ರಿನ್ಸ್ ನರೂಲಾ, ಮಂದನಾ ಕರಿಮಿ, ರಿಷಬ್ ಸಿನ್ಹಾ ಹಾಗೂ ರೊಶೆಲ್ ರಾವ್ ಇವರ ಪೈಕಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಮನೆ ಮಾಡಿತ್ತು. ಇವರ ಪೈಕಿ ಒಬ್ಬರನ್ನು ಎಲಿಮಿನೇಟ್ ಮಾಡಲು ಕತ್ರಿನಾ ಕೈಫ್ ಹಾಗೂ ಆದಿತ್ಯಾ ರಾಯ್ ಕಪೂರ್ ಅವರನ್ನು ಸಲ್ಮಾನ್ ಖಾನ್ ಬಳಸಿಕೊಂಡರು. ರೋಶೆಲ್ ಕೊನೆಯ ಎಲಿಮಿನೇಟೆಡ್ ಸ್ಪರ್ಧಿಯಾಗಿ ಹೊರ ಬಂದರು.[ದುಡ್ಡಿಗಾಗಿ ಎಲ್ಲಾ! ಬಿಗ್ ಬಾಸ್ ವಿನ್ನರ್ ಮೀರಿಸಿದ ರಿಮಿ]

ನಾನು ಫ್ಲರ್ಟ್ ಹಾಗೂ ಕೋಪಿಷ್ಠ ಎಂದು ಹೇಳಿಕೊಂಡು ಆರಂಭದಲ್ಲಿ ನಾಲ್ಕು ಸ್ಪರ್ಧಿಗಳಿಂದ ರಿಜೆಕ್ಟ್ ಆಗಿದ್ದ ಪ್ರಿನ್ಸ್ ನರುಲಾ ಅವರನ್ನು ವೀಕ್ಷಕರು ಕೈ ಹಿಡಿದಿದ್ದಾರೆ. ಶನಿವಾರ ತಡರಾತ್ರಿ ವಿಜೇತರಾಗಿ ಹೊರಹೊಮ್ಮುವ ಮೂಲಕ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿದ್ದಾರೆ. ಸ್ಪ್ಲಿಟ್ಸ್ ವಿಲ್ಲಾ 8, ಎಂಟಿವಿ ರೋಡಿಸ್ ನಂತರ ಬಿಗ್ ಬಾಸ್ ಮೈಂಡ್ ಗೇಮ್ ಗೆದ್ದು ರಿಯಾಲಿಟಿ ಶೋಗಳ ರಾಜ ಎನಿಸಿಕೊಂಡಿದ್ದಾರೆ.[ಸ್ಪರ್ಧಿಗಳಿಗೆ 'ಬಿಗ್' ಮೊತ್ತದ ಸಂಭಾವನೆ]

ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಪಡೆದುಕೊಂಡಿದ್ದ ರಿಷಬ್ ಸಿನ್ಹಾ ಮೊದಲ ರನ್ನರ್ ಅಪ್ ಪ್ರಶಸ್ತಿ ಗೆದ್ದಿದ್ದು ಹಲವರಿಗೆ ಅಚ್ಚರಿಯಾಯಿತು. ಇರಾನಿ ಮೂಲದ ನಟಿ ಮಂದನ ಕರಿಮಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಪ್ರಿನ್ಸ್ ಗೆಲ್ಲುವುದು ಖಾತ್ರಿಯಾಗಿತ್ತು

ಪ್ರಿನ್ಸ್ ಗೆಲ್ಲುವುದು ಖಾತ್ರಿಯಾಗಿತ್ತು

ಪ್ರಮುಖ ಪ್ರತಿಸ್ಪರ್ಧಿ ಕಿಶ್ವರ್ ಮರ್ಚೆಂಟ್ ಅವರನ್ನು ಜಾಣತನದಿಂದ ಪ್ರಿನ್ಸ್ ನರುಲಾ ಯಾವಾಗ ಮನೆಯಿಂದ ಎಲಿಮಿನೇಟ್ ಮಾಡಿದರೂ ಆಗಲೇ ಪ್ರಿನ್ಸ್ ಗೆಲ್ಲುವುದು ಖಾತ್ರಿಯಾಗಿತ್ತು. ಆದರೆ, ರೊಶೆಲ್ ಅಥವಾ ಮಂದನ ಕರಿಮಿ ಒಳ್ಳೆ ಫೈಟ್ ಕೊಡುವ ನಿರೀಕ್ಷೆಯಿತ್ತು. ಅಲ್ಲದೆ ಕೀತ್ ಸಿಕ್ವೆರಾ ಕೂಡಾ ಮನೆಯಿಂದ ಔಟ್ ಆಗಿದ್ದು ಪ್ರಿನ್ಸ್ ಗೆ ಕಿರೀಟ ಗ್ಯಾರಂಟಿ ಎಂಬುದು ಖಚಿತವಾಯಿತು.

ಎರಡನೇ ಸ್ಥಾನಕ್ಕೇರಿದ ರಿಷಬ್ ಸಿನ್ಹಾ

ಎರಡನೇ ಸ್ಥಾನಕ್ಕೇರಿದ ರಿಷಬ್ ಸಿನ್ಹಾ

ಪ್ರಿನ್ಸ್ ಗೆಲುವು ಖಾತ್ರಿಯಾದರೂ ಎರಡನೇ ಸ್ಥಾನಕ್ಕೆ ಮಂದನ ಕರಿಮಿ ಅಥವಾ ರೊಶೆಲ್ ರಾವ್ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ. ಇಬ್ಬರಿಗಿಂತ ರಿಷಬ್ ಪರ ಹೆಚ್ಚು ಮತಗಳು ಬಂದಿವೆ ಎನ್ನಲಾಗಿದೆ. ಅಥವಾ ಬಿಗ್ ಬಾಸ್ ಲೆಕ್ಕಾಚಾರ ಎನಿದೆಯೋ ಹಿಂದಿ ಮಾತನಾಡಲು ಬರದ ಇಬ್ಬರು ಬೆಡಗಿಯರಿಗೆ ಏಕೆ ಎರಡನೇ ಸ್ಥಾನ ಎಂಬ ಕೂಗು ಕೂಡಾ ಎದ್ದಿದ್ದು ಸುಳ್ಳಲ್ಲ.

ಗಣ್ಯರ ಉಪಸ್ಥಿತಿಯಲ್ಲಿ ಪ್ರಿನ್ಸ್ ಗೆ ಕಿರೀಟ

ಗಣ್ಯರ ಉಪಸ್ಥಿತಿಯಲ್ಲಿ ಪ್ರಿನ್ಸ್ ಗೆ ಕಿರೀಟ

ಕತ್ರೀನಾ ಕೈಫ್, ಆದಿತ್ಯಾ ರಾಯ್ ಕಪೂರ್, ಮೌನಿ ರಾಯ್, ಅರ್ಜುನ್ ಕಪೂರ್ ಅಲ್ಲದೆ ಬಿಗ್ ಬಾಸ್ ನ ಈ ಸೀಸನ್ ಸ್ಪರ್ಧಿಗಳು ಆಗಮಿಸಿದ್ದರು. ಗೆಳತಿಯರ ಪೈಕಿ ಯುವಿಕಾ ಚೌಧರಿ ಮೊದಲಿಗೆ ಶುಭಹಾರೈಸಿದರು.

ಹಾಡಿ ಕುಣಿದು ನಲಿದಾಡಿದ ಪ್ರಿನ್ಸ್ ನರುಲಾ

ಹಾಡಿ ಕುಣಿದು ನಲಿದಾಡಿದ ಪ್ರಿನ್ಸ್ ನರುಲಾ

ತಾಪ್ಕಿ ಪ್ಯಾರ್ ಕಿ ಖ್ಯಾತಿಯ ಜಿಜ್ಞಾಸಾ ಸಿಂಗ್ ಹಾಗೂ ಬಿಗ್ ಬಾಸ್ 9 ವೈಲ್ಡ್ ಕಾರ್ಡ್ ಎಂಟ್ರಿ ನೋರಾ ಫತೇಹಿ ಅಲ್ಲದೆ ಕಾಮಿಡಿ ನೈಟ್ ಬಚಾವೋ ಖ್ಯಾತಿಯ ಪೂಜಾ ಬ್ಯಾನರ್ಜಿ ಜೊತೆ ದಿಲ್ವಾಲೆ ಚಿತ್ರದ ಮನ್ವಾ ಹಾಡಿಗೆ ಹೆಜ್ಜೆ ಹಾಕಿದ ಪ್ರಿನ್ಸ್ ನರುಲಾ.

ಹ್ಯಾಟ್ರಿಕ್ ಚಾಂಪಿಯನ್ ಗೆ ಶುಭ ಹಾರೈಕೆ

ಹ್ಯಾಟ್ರಿಕ್ ಚಾಂಪಿಯನ್ ಗೆ ಶುಭ ಹಾರೈಕೆ

ಸ್ಪ್ಲಿಟ್ಸ್ ವಿಲ್ಲಾ, ರೋಡಿಸ್ ಗೆದ್ದಿರುವ ಮಿಸ್ಟರ್ ಪಂಜಾಬ್ ಪ್ರಿನ್ಸ್ ನರುಲಾಗೆ ಶುಭ ಹಾರೈಸಲು ಕತ್ರೋಂಕಾ ಕಿಲಾಡಿ 7 ರ ಸ್ಪರ್ಧಿಗಳು ಕೂಡಾ ಬಿಗ್ ಬಾಸ್ ವೇದಿಕೆಗೆ ಬಂದಿದ್ದರು. ಬಿಗ್ ಬಾಸ್ ಸ್ಪರ್ಧಿಗಳು ಹಾಗೂ ಕೆಕೆಕೆ 7 ಸ್ಪರ್ಧಿಗಳ ನಡುವಿನ ಆಟದಲ್ಲೂ ಪ್ರಿನ್ಸ್ ಮೇಲುಗೈ ಸಾಧಿಸಿದರು.

More from Filmibeat

English summary
Bigg Boss 9 Grand Finale. Prince Narula has emerged as this season's ultimate winner. Mandana is the second runner up, and Rishabh, the first runner up. In the grand finale held on Jan 23.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X