ಲೈಟ್ ಆಫ್ ಆದ್ಮೇಲೆ ಬಿಗ್ ಬಾಸ್‌ನಲ್ಲಿ ಮಿತಿ ಮೀರಿದ ವರ್ತನೆ ; ಒಂದೇ ಹಾಸಿಗೆಯಲ್ಲಿ ಕಂಬಳಿ ಹೊದ್ದು ಮಲಗಿದ ಜೋಡಿ

''ಬಿಗ್ ಬಾಸ್'' ಭಾರತದ ಜನಪ್ರಿಯ ಕಾರ್ಯಕ್ರಮದಲ್ಲೊಂದು. ಅದರಲ್ಲಿ ದೂಸ್ರಾ ಮಾತಿಲ್ಲ. ನಿಜಾ. ಈ ಕಾರ್ಯಕ್ರಮದ ಬಗ್ಗೆ ಸಾರ್ವತ್ರಿಕ ವಲಯದಲ್ಲಿ ಅಸಮಾಧಾನ ಅಸಹನೆಯ ಅಲೆ ಮೊದಲಿಂದ ಇದ್ದೇ ಇದೆ. ಆದರೂ ಕೂಡ ಬಹುದೊಡ್ಡ ವರ್ಗ ಈ ಕಾರ್ಯಕ್ರಮವನ್ನು ನೋಡುತ್ತಲೇ ಬೈಯುತ್ತಾರೆ. ಬೈಯುತ್ತಲೇ ನೋಡುತ್ತಾರೆ. ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮವನ್ನು ಒಮ್ಮೊಮ್ಮೆ ವಿಧಿಯಿಲ್ಲದೆ ನೋಡುವ ಸಂದರ್ಭ ಒದಗಿ ಬಿಡುತ್ತೆ.

ಆಗ ಆ ದೊಡ್ಡ ಮನೆಯ ಸಣ್ಣ ಸಂಗತಿಗಳು ಸಮಾಜಕ್ಕೆ ಎಂತಹ ಮೆಸೇಜ್ ಕೊಡುತ್ತಿದೆ ಎಂಬ ಪ್ರಶ್ನೆ ಕಾಡುತ್ತೆ. ಇದಕ್ಕೆ ಮತ್ತೊಂದು ಉದಾಹರಣೆಯೇ ಮೊನ್ನೆ ಮೊನ್ನೆ ನಡೆದ ಪ್ರಸಂಗ. ಹೌದು, ಎಲ್ಲ ಭಾಷೆಯಲ್ಲಿ ಶುರುವಾದಂತೆ ಈ ಬಾರಿ ಕೂಡ ತಮಿಳಿನಲ್ಲಿ ''ಬಿಗ್ ಬಾಸ್‌'' ಕಾರ್ಯಕ್ರಮ ಆರಂಭವಾಗಿದೆ. ಇಂದಿಗೆ (ಡಿಸೆಂಬರ್ 25 ) 82 ದಿನಗಳನ್ನು ಪೂರೈಸಿದೆ.

Bigg Boss 9 SHOCKER VJ Parvathy amp amp Kamarudin s Room Moment Caught on Camera Viral Video

ಸದ್ಯ ಈ ಮನೆಯಲ್ಲಿ ಹನ್ನೊಂದು ಜನ ಇದ್ದಾರೆ. ಆ ಪೈಕಿ ವಿಜೆ ಪಾರ್ವತಿ ಕೂಡ ಒಬ್ಬರು. ಸದ್ಯ ಇವರದ್ದೇ ವರ್ತನೆ ಚರ್ಚೆಗೀಡಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಜೆ ಪಾರ್ವತಿ ವಿರುದ್ಧ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಹೌದು, ಅಸಲಿಗೆ ಈ ಬಾರಿಯ ''ಬಿಗ್ ಬಾಸ್‌'' ಆರಂಭವಾದ ದಿನದಿಂದ ವಿಜೆ ಪಾರ್ವತಿ ಈ ಮನೆಯ ಕೇಂದ್ರ ಬಿಂದುವಾಗಿದ್ದಾರೆ. ಮನೆಯ ಬೇರೆ ಸದಸ್ಯರ ಜೊತೆ ಕಿರಿಕ್ ಮಾಡುತ್ತಾ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಪಾರ್ವತಿ ನೋಡುಗರನ್ನು ತಮ್ಮತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಮತ್ತೊಂದು ಕಡೆ ಮನೆಗೆ ಬಂದ ಸ್ಫರ್ಧಿ ಕಮರುದ್ದೀನ್ ಜೊತೆ ವಿಜೆ ಪಾರ್ವತಿ ಆತ್ಮೀಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇವರ ಆಪ್ತತೆಯನ್ನು ಕಂಡು ಹಲವರಿಗೆ ಇಬ್ಬರು ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಅನುಮಾನ ಬರತೊಡಗಿದೆ. ಹೀಗಿರುವಾಗ ''ಬಿಗ್ ಬಾಸ್‌'' ಮನೆಯಲ್ಲಿ ಕಮರುದ್ದೀನ್ ಅವರಿಗೆಂದೇ ವಿಶೇಷವಾದ ಕೊಠಡಿಯನ್ನು ನೀಡಲಾಗಿದೆ.

ತಮಗೆ ನೀಡಲಾದ ಈ ವಿಶೇಷವಾದ ರೂಮ್‌ನಲ್ಲಿ ಕಮರುದ್ದೀನ್ ಮಲಗಿದ್ದ ಸಮಯದಲ್ಲಿ, ಕಮರುದ್ದೀನ್ ರೂಮ್‌ಗೆ ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ವಿಜೆ ಪಾರ್ವತಿ ಬಂದಿದ್ದಾರೆ. ಇಷ್ಟೇ ಅಲ್ಲ ಹಿಂದೆ ಮುಂದೆ ಆಲೋಚನೆ ಮಾಡದೇ ಕಮರುದ್ದೀನ್ ಪಕ್ಕದಲ್ಲಿಯೇ ಅವರದ್ದೇ ಕಂಬಳಿಯನ್ನೊತ್ತು ಮಲಗಿದ್ದಾರೆ. ಇಬ್ಬರು ಒಂದೇ ಕಂಬಳಿಯನ್ನು ಹಂಚಿಕೊಂಡಿದ್ದಾರೆ.

Bigg Boss 9 SHOCKER VJ Parvathy amp amp Kamarudin s Room Moment Caught on Camera Viral Video

ಈ ಸಮಯದಲ್ಲಿ ಎಚ್ಚೆತ್ತ ಕಮರುದ್ದೀನ್ ನೀನು ಇಲ್ಲಿ ಮಲಗಬೇಡ ಎಂದು ಹೇಳಿದ್ದಾರೆ. ನಿಯಮ ಮುರಿದಂತಾಗುತ್ತೆ. ಹಾಗೊಂದು ವೇಳೆ ಆದರೆ ನಿನ್ನ ಪ್ರದರ್ಶನದ ಮೇಲೆ ಅದು ಪರಿಣಾಮ ಬೀರುತ್ತೆ ಎಂದಿದ್ದಾರೆ. ಕಮರುದ್ದೀನ್ ಹೀಗೆ ಹೇಳಿದ ಕೆಲ ಕ್ಷಣದ ನಂತರ ಪಾರ್ವತಿ ಆ ಕೋಣೆಯಿಂದ ಎದ್ದು ಹೊರ ಹೋಗಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಚರ್ಚೆಗೆ ಕೂಡ ಈ ವಿಡಿಯೋ ಮುನ್ನುಡಿ ಬರೆದಿದೆ. ಹಲವರು ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

''ಬಿಗ್ ಬಾಸ್'' ಮನೆ ಕ್ಯಾಮರಾ ಕಣ್ಗಾವಲಿನಲ್ಲಿರುತ್ತೆ. ಬಾತ್‌ ರೂಮ್‌ವೊಂದನ್ನು ಹೊರತು ಪಡಿಸಿದರೆ ಮನೆಯ ಮೂಲೆ ಮೂಲೆಯಲ್ಲಿ ಕ್ಯಾಮರಾಗಳಿರುತ್ತವೆ. ಮನೆಯೊಳಗೆ ಇರುವ ಕಮರುದ್ದೀನ್ ಮತ್ತು ಪಾರ್ವತಿಗೆ ಈ ವಿಚಾರ ಚೆನ್ನಾಗಿಯೇ ಗೊತ್ತು. ಆದರೂ ಕೂಡ ಹಾಸಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಅಂದರೆ ಇದರ ಹಿಂದೆ ಟಿ.ಆರ್.ಪಿಯ ಲೆಕ್ಕಾಚಾರ ಇದೆ ಎನ್ನುವ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಟಿಆರ್‌ಪಿಗಾಗಿ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಕಿಡಿ ಕಾರುತ್ತಿದ್ದಾರೆ.

ಇನ್ನೂ ಕೆಲವರು ಪಾರ್ವತಿಯ ಈ ವರ್ತನೆ ಖಂಡಿಸುತ್ತಿದ್ದಾರೆ. ಕೆಟ್ಟಾಕೊಳಕಾಗಿ ಮಾತನಾಡುತ್ತಿದ್ದಾರೆ. ''ಬಿಗ್ ಬಾಸ್'' ನಿಯಮಗಳನ್ನು ಅರ್ಥಮಾಡಿಕೊಂಡು ಅಲ್ಲಿಂದ ಪಾರ್ವತಿಯನ್ನು ಹೊರಗಡೆ ಕಳುಹಿಸಿದ್ದಕ್ಕೆ ಕಮರುದ್ದೀನ್ ಅವರನ್ನು ಶ್ಲಾಘಿಸುತ್ತಿದ್ದಾರೆ.

More from Filmibeat

English summary
Bigg Boss Tamil 9: VJ Parvathy and Kamarudin’s Thala Room video goes viral. Get the full story, fan reactions, and unseen footage from the latest BB9 controversy.
Read more about: ಟಿವಿ bigg boss biggboss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X