ಎರಡು ವರ್ಷಗಳ ಪ್ರೀತಿ ; ಫಾರಿನ್ ಹುಡುಗನ ಜೊತೆ ಜೊತೆ ಸದ್ದಿಲ್ಲದೇ ಮದುವೆಯಾದ ಬಿಗ್ ಬಾಸ್ ಸ್ಫರ್ಧಿ

ಲವ್ ಅಟ್ ಫಸ್ಟ್ ಸೈಟ್ ಜನಸಾಮಾನ್ಯರ ನಡುವೆ ಆಳವಾಗಿ ಬೇರೂರಿದ ನಂಬಿಕೆ. ಹಲವಾರು ಚಿತ್ರಗಳಲ್ಲಿ ಈ ಕಲ್ಪನೆಯನ್ನು ಸುಂದರವಾಗಿ ಚಿತ್ರೀಕರಿಸಲಾಗಿದೆ. ಯಾರನ್ನಾದರೂ ಮೊದಲ ಬಾರಿ ಭೇಟಿಯಾದಾಗ ಮೊದಲ ನೋಟದಲ್ಲಿಯೇ ಎದುರು ಇರುವ ವ್ಯಕ್ತಿಯ ಬಗ್ಗೆ ಮನಸಿನಲ್ಲಿ ತುಂಬಾ ದೃಢವಾದ ಮತ್ತು ಮಾನಸಿಕವಾಗಿ ಗಟ್ಟಿಯಾದ ರೊಮ್ಯಾಂಟಿಕ್ ಸಂಬಂಧ ಬೆಸೆದಂತೆ ಹಲವರಿಗೆ ಆಗುತ್ತೆ. ಹೀಗಾಗಿಯೇ ಹಲವರು ತಮ್ಮ ಪ್ರೇಮ ಕಥೆಯನ್ನು...

ಹೇಳುವಾಗ ಮೊದಲ ಭೇಟಿ.. ಮೊದಲ ನೋಟದಲ್ಲಿಯೇ.. ಪ್ರೇಮಾಂಕುರವಾಯ್ತು ಎಂದು ಹೇಳುತ್ತಾರೆ. ಈ ಲವ್ ಅಟ್ ಫಸ್ಟ್ ಸೈಟ್ ಎನ್ನುವುದು ಯಾವ ಕ್ಷಣದಲ್ಲಾದರೂ ಯಾರಿಗೆ ಬೇಕಾದರೂ ಎಲ್ಲಿ ಬೇಕಾದರೂ ಆಗಬಹುದು. ಆದರೆ ಹೀಗೆ ಆದ ಪ್ರೀತಿ ಕೇವಲ ಆಕರ್ಷಣೆಯಾಗಿದ್ದರೆ ಸಂಬಂಧ ಕಳಚಿ ಬೀಳುತ್ತೆ. ಆಕರ್ಷಣೆಯಾಗದೇ ಇದ್ದರೆ ಬಹುಕಾಲ ಉಳಿಯುತ್ತೆ. ದಿನಗಳು ಉರುಳಿದಂತೆ ಪ್ರೀತಿ ಹೆಮ್ಮರವಾಗಿ ಬೆಳೆಯುತ್ತೆ. ಉದಾಹರಣೆಗೆ ರೂಪಲ್ ತ್ಯಾಗಿ ಅವರ ಲವ್ ಸ್ಟೋರಿಯನ್ನೇ ತೆಗೆದುಕೊಳ್ಳಿ.

BIGG BOSS 9 Star Roopal Tyagi Marries Nomish Bhardwaj See The Viral Wedding Photos

ಹೌದು, ರೂಪಲ್ ತ್ಯಾಗಿ.. ಹಿಂದಿ ಕಿರುತೆರೆಯ ಚೆಲುವೆ. ಡ್ಯಾನ್ಸರ್ ಆಗಿ 2007ರಲ್ಲಿ ವೃತ್ತಿ ಬದುಕನ್ನು ಶುರು ಮಾಡಿದ್ದ ರೂಪಲ್ ತ್ಯಾಗಿ ಆ ನಂತರ ''ಹಮಾರಿ ಭೇಟಿಯೋ ಕಾ ವಿವಾಹ'' ಮೂಲಕ ಕಿರುತೆರೆಗೆ ಬಂದರು. ನೋಡ ನೋಡುತ್ತಾ ಕಿರುತೆರೆಯಲ್ಲಿ ನಾಯಕಿಯಾಗಿ ಬಡ್ತಿಯನ್ನು ಕೂಡ ಪಡೆದರು. ''ಸಪ್ನೇ ಸುಹಾನೆ ಲಡಕ್‌ಪನ್ ಕೇ'' ಇವರಿಗೆ ಅಪಾರವಾದ ಜನಪ್ರಿಯತೆ ತಂದು ಕೊಡ್ತು. ಭರ್ತಿ ಮೂರು ವರ್ಷ ಪ್ರಸಾರವಾದ ಈ ಧಾರಾವಾಹಿ ಮೂಲಕ ''ಗುಂಜನ್'' ಎಂದೇ ಜನಸಾಮಾನ್ಯರ ನಡುವೆ ಜನಜನಿತರಾದರು ರೂಪಲ್ ತ್ಯಾಗಿ.

ಆ ನಂತರ 2015ರಲ್ಲಿ ''ಬಿಗ್ ಬಾಸ್'' ಸೀಸನ್ 09ರಲ್ಲಿ ಭಾಗವಹಿಸಿದ ರೂಪಲ್ ತ್ಯಾಗಿ ಕೇವಲ ಹದಿನಾಲ್ಕೇ ದಿನಕ್ಕೆ ಮನೆಯಿಂದ ಹೊರ ಬಂದರು. ವಿಶೇಷ ಅಂದರೆ ರೂಪಲ್ ತ್ಯಾಗಿ ಜೊತೆ ಇವರ ಮಾಜಿ ಬಾಯ್‌ಫ್ರೆಂಡ್ ಅಂಕಿತ್ ಗೇರಾ ಕೂಡ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೂಪಲ್ ಮನೆಯಿಂದ ಹೊರಗಡೆ ಬರುವ ಒಂದು ವಾರದ ಮುನ್ನ ಮನೆಯಿಂದ ಹೊರ ಬಂದಿದ್ದರು. ಆದರೆ ಆ ನಂತರ ಅದ್ಯಾಕೋ ರೂಪಲ್ ಮತ್ತು ಅಂಕಿತ್ ಗೇರಾ ಸಂಬಂಧ ಮುಂದುವರೆಯಲಿಲ್ಲ. ಇದಕ್ಕೆ ಕಾರಣ ಇವರಿಬ್ಬರಿಗೆ ಗೊತ್ತು.

ಇಂಥಾ ರೂಪಲ್ ತ್ಯಾಗಿ ಈಗ ತಾವು ಮನ ಮೆಚ್ಚಿದ ಹುಡುಗ ನೋಮಿಶ್ ಭಾರದ್ವಾಜ್ ಜೊತೆ ಮದುವೆಯ ಬಂಧನಕ್ಕೊಳಗಾಗಿದ್ದಾರೆ. ತಮ್ಮ ಮದುವೆಯ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದ್ಹಾಗೇ ರೂಪಲ್ ಮದುವೆಯಾದ ಹುಡುಗ ನೋಮಿಶ್ ಮುಂಬೈ ಮೂಲದವರು. ಆದರೆ ಕೆಲಸ ಮಾಡುತ್ತಿರುವುದು ಲಾಸ್ ಏಂಜಲೀಸ್‌ನಲ್ಲಿ. ಅಲ್ಲಿಯೇ ಬದುಕು ರೂಪಿಸಿಕೊಂಡಿದ್ದಾರೆ ಇವರು.

ಎರಡು ವರ್ಷಗಳ ಹಿಂದೆ ರೂಪಲ್ ಮತ್ತು ನೋಮಿಶ್ ಕಾಮನ್ ಫ್ರೆಂಡ್ ಮೂಲಕ ಪರಿಚಯವಾಗಿದ್ದರು. ಆ ಸಮಯದಲ್ಲಿ ಮೊದಲ ನೋಟದಲ್ಲಿಯೇ ಇಬ್ಬರ ನಡುವೆ ಪ್ರೇಮಾಂಕುರ ಕೂಡ ಆಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ರೂಪಲ್ ಈ ವಿಚಾರವನ್ನು ಹಂಚಿಕೊಂಡಿದ್ದರು. ನಾವು ಇಬ್ಬರು ಭೇಟಿಯಾದ ಆ ಕ್ಷಣದಲ್ಲಿಯೇ ಓ ಮೈ ಗಾಡ್ ! ಈ ವ್ಯಕ್ತಿಯೇ ನನಗೆ ಸರಿಯಾದ ಜೋಡಿ ಎಂಬ ಭಾವನೆ ನನ್ನಲ್ಲಿ ಬಂದಿತ್ತು ಎಂದು ಹೇಳಿದ್ದರು. ನನಗೂ ಲವ್ ಅಟ್ ಫಸ್ಟ್ ಸೈಟ್ ಆಗುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ, ಅದೆಲ್ಲ ಕೇವಲ ಸಿನಿಮಾಗಳಲ್ಲಿ ಮಾತ್ರ ಎಂದುಕೊಂಡಿದ್ದೇ, ಹೀಗಾಗಿ ನನಗೆ ಖುದ್ದು ಆಶ್ಚರ್ಯವಾಗಿತ್ತು ಎಂದು ಸಂದರ್ಶನದಲ್ಲಿ ನಾಚಿ ನೀರಾಗಿದ್ದರು.

BIGG BOSS 9 Star Roopal Tyagi Marries Nomish Bhardwaj See The Viral Wedding Photos

ಇನ್ನು ಇದೇ ವರ್ಷ ಗೋವಾದಲ್ಲಿ ರೂಪಲ್ ತ್ಯಾಗಿ ಅವರಿಗೆ ನೋಮಿಶ್ ಪ್ರಪೋಸ್ ಮಾಡಿದ್ದರು. ಈಗ ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಮುಂಬೈನಲ್ಲಿ ಇಬ್ಬರು ಮದುವೆಯಾಗಿದ್ದಾರೆ. ಇದೇ ಡಿಸೆಂಬರ್ 8ರಂದು ಅಂದರೆ ನಾಳೆ (ಸೋಮವಾರ) ಚಿತ್ರರಂಗ ಮತ್ತು ಕಿರುತೆರೆಯ ಸ್ನೇಹಿತರಿಗಾಗಿ ಆರತಕ್ಷತೆ ಸಮಾರಂಭವನ್ನು ಇಬ್ಬರು ಹಮ್ಮಿಕೊಂಡಿದ್ದಾರೆ ಎನ್ನುವ ಸುದ್ದಿ ಇದೆ. ಬಣ್ಣದ ಪ್ರಪಂಚದ ಹಲವರು ಈ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಸದ್ಯ ಬೆಳ್ಳಿ ತೆರೆ ಮತ್ತು ಕಿರುತೆರೆಯ ಹಲವರು ರೂಪಲ್ ತ್ಯಾಗಿ ಮತ್ತು ನೋಮಿಶ್ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ.

More from Filmibeat

English summary
Roopal Tyagi ties the knot! The actress, famous for BB9 and SSLK, shares emotional photos of her dreamy wedding day. Find out the sweet details about her bridal look.
Read more about: biggboss bigg boss marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X