For Quick Alerts
  ALLOW NOTIFICATIONS  
  For Daily Alerts

  ದುಡ್ಡಿಗಾಗಿ 'ಆಂಟಿ' ಜೊತೆ ಮಲಗಿದ್ದ ಬಿಗ್ ಬಾಸ್ ಸ್ಪರ್ಧಿ!

  By ಜೇಮ್ಸ್ ಮಾರ್ಟಿನ್
  |

  ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ಹಿಂದಿ ಆವೃತ್ತಿಯ 9ನೇ ಸೀಸನ್ ನ ಸ್ಪರ್ಧಿಯೊಬ್ಬರ ತಪ್ಪೊಪ್ಪಿಗೆ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಕಲರ್ಸ್ ವಾಹಿನಿಯಲ್ಲಿ ಭರ್ಜರಿಯಾಗಿ ಆರಂಭಗೊಂಡ ಬಿಗ್ ಬಾಸ್ ನ ಡಬ್ಬಲ್ ಟ್ರಬಲ್ ಸ್ವಲ್ಪ ಡಲ್ ಆಗಿದ್ದು, ಅದು ಇದು ಗಿಮಿಕ್ ಗಳು ಜೋರಾಗಿ ನಡೆಯುತ್ತಿದೆ. ಮಸಾಲೆ ಕಮ್ಮಿಯಾಗಿದೆ, ಸರಿಯಾಗಿ ಟಾಸ್ಕ್ ಮಾಡಿ ಎಂದು ಖುದ್ದು ನಿರೂಪಕ ಸಲ್ಮಾನ್ ಖಾನ್ ಕೂಡಾ ಕಿವಿ ಹಿಂಡಿದ್ದಾರೆ.

  ಸಲ್ಮಾನ್ ಖಾನ್ ಅವರು 'ಡಬ್ಬಲ್ ಟ್ರಬಲ್' ಗೇಮ್ ಆಡಲು ಏಳು ಜೋಡಿಗಳನ್ನು ಮಾಡಿ ಮನೆಯೊಳಗೆ ಸೇರಿಕೊಂಡಿದ್ದು, ಈ ಪೈಕಿ ಅಂಕಿತ್ ಗೇರ, ರೂಪಲ್ ತ್ಯಾಗಿ, ಅರವಿಂದ್ ನೆಗ್ಡಾ ಹಾಗೂ ವಿಕಾಶ್ ಭಲ್ಲಾ ಮನೆಯಿಂದ ಹೊರಬಿದ್ದಿದ್ದಾರೆ. ಸಪ್ಪೆಯಾದ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಲು ಲೇಟೆಸ್ಟ್ ಆಗಿ ರಿಶಬ್ ಸಿನ್ಹಾ ಎಂಟ್ರಿಯಾಗಿದೆ. [ಯಾರು ಯಾರ ಜೋಡಿಯಾಗಿದ್ದಾರೆ?]

  ಈ ನಡುವೆ ಕಿಶ್ವಾರ್ ಮರ್ಚಂಟ್ ಜೋಡಿಯಾದ ಸುಯಶ್ ಅವರು ಈ ಹಿಂದೆ ತಪ್ಪೊಪ್ಪಿಗೆ ಮಾಡಿಕೊಂಡ ವಿಡಿಯೋ ಈಗ ಸದ್ದು ಮಾಡುತ್ತಿದೆ. ಕೈಯಲ್ಲಿ ಕಾಸು ಇಲ್ಲದ ಸಮಯದಲ್ಲಿ ಮುಂಬೈನಲ್ಲಿ ಕಷ್ಟದ ಪರಿಸ್ಥಿತಿ ಎದುರಿಸಿದ್ದೆ. ದುಡ್ಡಿಗಾಗಿ 'ಓಲ್ಡ್ ಆಂಟಿ' ಜೊತೆ ಮಲಗಿದ್ದೆ. ಇದರಿಂದ ನನಗೆ 40,000 ರು ಸಿಕ್ಕಿತ್ತು.

  ಸುಯಶ್ ಹೇಳಿಕೆ ಇರುವ ರಿಯಾಲಿಟಿ ಫಿಲಂ 'ಸೆಕ್ಸ್ ಬಾಲ್ಸ್' ವಿಡಿಯೋವನ್ನು ಆರ್ ಜೆ ಅನಿರುಧ್ ಅವರು ಯೂಟ್ಯೂಬ್ ಗೆ ಹಾಕಿದ್ದಾರೆ. ವಿಡಿಯೋದಲ್ಲಿ ಏನಿದೆ ಮುಂದೆ ಓದಿ...

  ಬಿಗ್ ಬಾಸ್ ಡಬ್ಬಲ್ ಟ್ರಬಲ್

  ಬಿಗ್ ಬಾಸ್ ಡಬ್ಬಲ್ ಟ್ರಬಲ್

  ಕಲರ್ಸ್ ವಾಹಿನಿಯಲ್ಲಿ ಅಕ್ಟೋಬರ್ 11ರಿಂದ ಬಿಗ್ ಬಾಸ್ 9 ಪ್ರಸಾರ ಅಧಿಕೃತವಾಗಿ ಆರಂಭಗೊಂಡಿದೆ. ಡಬ್ಬಲ್ ಟ್ರಬಲ್ ನಲ್ಲಿ ಸುಯಶ್- ಕಿಶ್ವಾರ್ ಜೋಡಿ, ರೊಶೆಲ್ ಹಾಗೂ ಕೀತ್ ಜೋಡಿಯನ್ನು ಬೇರ್ಪಡಿಸಲು ಈಗ ರಿಶಬ್ ಎಂಟ್ರಿಯಾಗಿದೆ. ಸಲ್ಮಾನ್ ಜೊತೆ ವಿಕೇಂಡ್ ಶೋ ರಾತ್ರಿ 9 ಗಂಟೆಗೆ ಆರಂಭಗೊಳ್ಳಲಿದೆ. ಇನ್ನೂ ಸ್ಪರ್ಧಿಗಳು ಜೋಡಿಯಾಗಿ ಮನೆಯೊಳಗೆ ಹೇಗೆ ಇರುತ್ತಾರೆ ಎಂಬ ಆಟವನ್ನು ಪ್ರತಿದಿನ ರಾತ್ರಿ 10.30 ರ ನಂತರ ಕಾಣಬಹುದು.

  ಕಿಶ್ವಾರ್ ಮದುವೆಯಾಗುವುದಾಗಿ ಘೋಷಣೆ

  ಕಿಶ್ವಾರ್ ಮದುವೆಯಾಗುವುದಾಗಿ ಘೋಷಣೆ

  ಬಿಗ್ ಬಾಸ್ ಹೊಕ್ಕ ಮೊದಲ ದಿನವೇ ಕಿಶ್ವಾರ್ ಹಾಗೂ ಸುಯಶ್ ರಾಯ್ ಅವರು ತಾವಿಬ್ಬರು ಜನವರಿ ಅಥವಾ ಫೆಬ್ರವರಿ ತಿಂಗಳ ಕೊನೆಗೆ ಇಬ್ಬರು ಮದುವೆಯಾಗುತ್ತಿದ್ದೇವೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು. ಮಧುಚಂದ್ರಕ್ಕೆ ತೆರಳಲು ಪ್ಯಾರೀಸ್, ಅಮ್ ಸ್ಟರ್ ಡ್ಯಾಂ, ಮಾಸ್ಕೋ.. ಕಡೆ ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದಾರಂತೆ.[ವಿವರ ಇಲ್ಲಿ ಓದಿ]

  ಏನಿದೆ ಸೆಕ್ಸ್ ಬಾಲ್ ವಿಡಿಯೋದಲ್ಲಿ

  ಏನಿದೆ ಸೆಕ್ಸ್ ಬಾಲ್ ವಿಡಿಯೋದಲ್ಲಿ

  ಆರ್ ಜೆ ಅನಿರುಧ್ ಹಾಕಿರುವ ವಿಡಿಯೋ, ರಿಯಾಲಿಟಿ ಫಿಲಂ ಆಗಿದ್ದು, ವಿವಿಧ ಕ್ಷೇತ್ರದಿಂದ ಬಂದ ಸ್ಪರ್ಧಿಗಳು ತಮ್ಮ ನೈತಿಕ, ಅನೈತಿಕ ಸೆಕ್ಸ್ ಅಫೇರ್ ಗಳು, ಬಯಕೆಗಳು, ಕಾಮನೆಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಬಾಲಿವುಡ್ ಗೆ ಎಂಟ್ರಿ ಕೊಡುವ ಮೊದಲು ಆರ್ಥಿಕ ಸಂಕಷ್ಟ ಎದುರಿಸಿದ್ದ ಸುಯಶ್ ಅವರು ಕಾಮನೆಗಳನ್ನು ತೀರಿಸಿಕೊಂಡು ದುಡ್ಡು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

  ಸೆಕ್ಸ್ ಬಾಲ್ ಗಾಗಿ ಸುಯಶ್ ನೀಡಿದ ಹೇಳಿಕೆ ವಿಡಿಯೋ

  ಸೆಕ್ಸ್ ಬಾಲ್ ಗಾಗಿ ಸುಯಶ್ ನೀಡಿದ ಹೇಳಿಕೆ ವಿಡಿಯೋ ಇಲ್ಲಿದೆ ನೋಡಿ. ಸುಯಶ್ ರನ್ನು ಕ್ಯಾಸನೋವಾ ಡ್ಯೂಡ್ ಎಂದು ಕರೆಯಲಾಗಿದೆ. ದಕ್ಷಿಣ ಮುಂಬೈನಲ್ಲಿ ನೆಲೆಸಿದ್ದ ತನಗಿಂತ ಹಿರಿಯ ಮಹಿಳೆಯೊಂದಿಗೆ ಹಾಸಿಗೆ ಹಂಚಿಕೊಂಡು ದುಡ್ಡು ಗಳಿಸಿದೆ ಎಂದು ಸುಯಶ್ ಹೇಳಿಕೊಂಡಿದ್ದಾರೆ.

  English summary
  Bigg Boss 9 contestant Suyyash Rai, who is seen as the devoted boyfriend of Kishwer Merchant, has had some naughty days prior to entering the Bigg Boss house. He has admitted on record, that he has slept with an "old aunty" for money, Rs. 40000, during his initial days in Mumbai.
  Tuesday, November 3, 2015, 14:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X