ಬಿಗ್ ಬಾಸ್ ಸ್ಪರ್ಧಿಯ ಮದುವೆ ಫಿಕ್ಸ್ ; ಡಿಸೆಂಬರ್ 5ರಿಂದ ಆರಂಭ ದಾಂಪತ್ಯಗೀತೆ -ಲವ್ ಮ್ಯಾರೇಜಾ ? ಅರೆಂಜ್ ಮ್ಯಾರೇಜಾ ?

ಲವ್ ಅಟ್ ಫಸ್ಟ್ ಸೈಟ್ ಜನಸಾಮಾನ್ಯರ ನಡುವೆ ಆಳವಾಗಿ ಬೇರೂರಿದ ನಂಬಿಕೆ. ಹಲವಾರು ಚಿತ್ರಗಳಲ್ಲಿ ಈ ಕಲ್ಪನೆಯನ್ನು ಸುಂದರವಾಗಿ ಚಿತ್ರೀಕರಿಸಲಾಗಿದೆ. ಯಾರನ್ನಾದರೂ ಮೊದಲ ಬಾರಿ ಭೇಟಿಯಾದಾಗ ಮೊದಲ ನೋಟದಲ್ಲಿಯೇ ಎದುರು ಇರುವ ವ್ಯಕ್ತಿಯ ಬಗ್ಗೆ ಮನಸಿನಲ್ಲಿ ತುಂಬಾ ದೃಢವಾದ ಮತ್ತು ಮಾನಸಿಕವಾಗಿ ಗಟ್ಟಿಯಾದ ರೊಮ್ಯಾಂಟಿಕ್ ಸಂಬಂಧ ಬೆಸೆದಂತೆ ಹಲವರಿಗೆ ಆಗುತ್ತೆ. ಹೀಗಾಗಿಯೇ ಹಲವರು ತಮ್ಮ ಪ್ರೇಮ ಕಥೆಯನ್ನು...

ಹೇಳುವಾಗ ಮೊದಲ ಭೇಟಿ.. ಮೊದಲ ನೋಟದಲ್ಲಿಯೇ.. ಪ್ರೇಮಾಂಕುರವಾಯ್ತು ಎಂದು ಹೇಳುತ್ತಾರೆ. ಈ ಲವ್ ಅಟ್ ಫಸ್ಟ್ ಸೈಟ್ ಎನ್ನುವುದು ಯಾವ ಕ್ಷಣದಲ್ಲಾದರೂ ಯಾರಿಗೆ ಬೇಕಾದರೂ ಎಲ್ಲಿ ಬೇಕಾದರೂ ಆಗಬಹುದು. ಆದರೆ ಹೀಗೆ ಆದ ಪ್ರೀತಿ ಕೇವಲ ಆಕರ್ಷಣೆಯಾಗಿದ್ದರೆ ಸಂಬಂಧ ಕಳಚಿ ಬೀಳುತ್ತೆ. ಆಕರ್ಷಣೆಯಾಗದೇ ಇದ್ದರೆ ಬಹುಕಾಲ ಉಳಿಯುತ್ತೆ. ದಿನಗಳು ಉರುಳಿದಂತೆ ಪ್ರೀತಿ ಹೆಮ್ಮರವಾಗಿ ಬೆಳೆಯುತ್ತೆ. ಉದಾಹರಣೆಗೆ ರೂಪಲ್ ತ್ಯಾಗಿ ಅವರ ಲವ್ ಸ್ಟೋರಿಯನ್ನೇ ತೆಗೆದುಕೊಳ್ಳಿ.

Bigg Boss 9 s Roopal Tyagi Reveals Wedding Date with Nomish Bhardwaj Dec 5

ಹೌದು, ರೂಪಲ್ ತ್ಯಾಗಿ.. ಹಿಂದಿ ಕಿರುತೆರೆಯ ಚೆಲುವೆ. ಡ್ಯಾನ್ಸರ್ ಆಗಿ 2007ರಲ್ಲಿ ವೃತ್ತಿ ಬದುಕನ್ನು ಶುರು ಮಾಡಿದ್ದ ರೂಪಲ್ ಆ ನಂತರ ''ಹಮಾರಿ ಭೇಟಿಯೋ ಕಾ ವಿವಾಹ'' ಮೂಲಕ ಕಿರುತೆರೆಗೆ ಬಂದರು. ನಾಯಕಿಯಾಗಿ ಬಡ್ತಿ ಪಡೆದರು.

''ಸಪ್ನೇ ಸುಹಾನೆ ಲಡಕ್‌ಪನ್ ಕೇ'' ಇವರಿಗೆ ಅಪಾರವಾದ ಜನಪ್ರಿಯತೆ ತಂದು ಕೊಡ್ತು. ಭರ್ತಿ ಮೂರು ವರ್ಷ ಪ್ರಸಾರವಾದ ಈ ಧಾರಾವಾಹಿ ಮೂಲಕ ''ಗುಂಜನ್'' ಎಂದೇ ಜನಸಾಮಾನ್ಯರ ನಡುವೆ ಜನಜನಿತರಾದರು ರೂಪಲ್ ತ್ಯಾಗಿ.

ಆ ನಂತರ 2015ರಲ್ಲಿ ''ಬಿಗ್ ಬಾಸ್'' ಸೀಸನ್ 09ರಲ್ಲಿ ಭಾಗವಹಿಸಿದ ರೂಪಲ್ ಕೇವಲ ಹದಿನಾಲ್ಕೇ ದಿನಕ್ಕೆ ಮನೆಯಿಂದ ಹೊರ ಬಂದರು. ವಿಶೇಷ ಅಂದರೆ ರೂಪಲ್ ಜೊತೆ ಇವರ ಮಾಜಿ ಬಾಯ್‌ಫ್ರೆಂಡ್ ಅಂಕಿತ್ ಗೇರಾ ಕೂಡ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೂಪಲ್ ಮನೆಯಿಂದ ಹೊರಗಡೆ ಬರುವ ಒಂದು ವಾರದ ಮುನ್ನ ಮನೆಯಿಂದ ಹೊರ ಬಂದಿದ್ದರು.

ಇಂಥಾ ರೂಪಲ್ ತ್ಯಾಗಿ ಇದೇ ಡಿಸೆಂಬರ್ 5ರಂದು ತಮ್ಮ ಮನ ಮೆಚ್ಚಿದ ಹುಡುಗ ನೋಮಿಶ್ ಭಾರದ್ವಾಜ್ ಜೊತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ''ಜೂಮ್'' ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಪ್ರೇಮಕಥೆ ಮತ್ತು ಮದುವೆಯ ಪ್ಲ್ಯಾನ್ ಹಂಚಿಕೊಂಡಿದ್ದಾರೆ. ನಮ್ಮದು ಲವ್ ಅಟ್ ಫಸ್ಟ್ ಸೈಟ್ ಎಂದು ಹೇಳಿದ್ದಾರೆ.

Bigg Boss 9 s Roopal Tyagi Reveals Wedding Date with Nomish Bhardwaj Dec 5

ಈ ಕುರಿತು ಮಾತನಾಡಿರುವ ರೂಪಲ್ ನಾನು ಮದುವೆಯಾಗುತ್ತಿರುವ ಹುಡುಗ ನೋಮಿಶ್ ಮುಂಬೈ ಮೂಲದವರು ಆದರೆ ಕೆಲಸ ಮಾಡುತ್ತಿರುವುದು ಲಾಸ್ ಏಂಜಲೀಸ್‌ನಲ್ಲಿ ಎಂದು ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಇಬ್ಬರಿಗೂ ಪರಿಚಯ ಇರುವ ಸ್ನೇಹಿತನ ಮೂಲಕ ನಾವು ಮೊದಲ ಬಾರಿ ಭೇಟಿಯಾದೆವು ಎಂದು ಹೇಳಿರುವ ರೂಪಲ್ ಭೇಟಿಯಾದ ಆ ಕ್ಷಣದಲ್ಲಿಯೇ ಓ ಮೈ ಗಾಡ್ ! ಈ ವ್ಯಕ್ತಿಯೇ ನನಗೆ ಸರಿಯಾದ ಜೋಡಿ ಎಂಬ ಭಾವನೆ ನನ್ನಲ್ಲಿ ಬಂದಿತ್ತು ಎಂದು ಹೇಳಿದ್ದಾರೆ. ನನಗೂ ಲವ್ ಅಟ್ ಫಸ್ಟ್ ಸೈಟ್ ಆಗುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ,ಅದೆಲ್ಲ ಕೇವಲ ಸಿನಿಮಾಗಳಲ್ಲಿ ಮಾತ್ರ ಎಂದುಕೊಂಡಿದ್ದೇ, ಹೀಗಾಗಿ ನನಗೆ ಖುದ್ದು ಆಶ್ಚರ್ಯವಾಗಿತ್ತು ಎಂದು ಹೇಳಿದ್ದಾರೆ.

ಇನ್ನು ತಮ್ಮ ಮದುವೆಯ ಕುರಿತು ಮಾತನಾಡಿರುವ ರೂಪಲ್ ಇದೇ ವರ್ಷ ನನಗೆ ಅವರು ಗೋವಾದಲ್ಲಿ ಪ್ರಪೋಸ್ ಮಾಡಿದರು. ಈ ಡಿಸೆಂಬರ್ 5ರಂದು ಸರಳವಾಗಿ, ಸಾಂಪ್ರದಾಯಿಕವಾಗಿ, ನಮ್ಮ ಕುಟುಂಬ ಮತ್ತು ಕೆಲವೇ ಕೆಲ ಆಪ್ತರ ಸಮ್ಮುಖದಲ್ಲಿ ಮದುವೆಯಾಗಲಿದ್ದೇವೆ ಎಂದು ಹೇಳಿದ್ದಾರೆ. ಡಿಸೆಂಬರ್ 8ರಂದು ಚಿತ್ರರಂಗ ಮತ್ತು ಕಿರುತೆರೆಯ ಸ್ನೇಹಿತರಿಗಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ ಎಂದು ಹೇಳಿದ್ದಾರೆ. ಇದರ ನಡುವೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಭಾವಿ ಪತಿಯ ಜೊತೆಗಿನ ಸುಂದರವಾದ ಫೋಟೊಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ ರೂಪಲ್ ತ್ಯಾಗಿ.

ಸದ್ಯ ಬೆಳ್ಳಿ ತೆರೆ ಮತ್ತು ಕಿರುತೆರೆಯ ಹಲವರು ರೂಪಲ್ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ.

More from Filmibeat

English summary
Bigg Boss 9's Roopal Tyagi is ready to tie the knot! Find out how she met her fiancé, Nomish Bhardwaj, and mark your calendars for their Dec 5 wedding.
Read more about: ಟಿವಿ bigg boss biggboss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X