₹9.35 ಕೋಟಿ ಚೀಟಿಂಗ್ ಕೇಸ್ ನಡುವೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡು ಶಾಕ್ ನೀಡಿದ ಬಿಗ್ ಬಾಸ್ ಸ್ಫರ್ಧಿ

ಹಣ.. ಹೆಸರು.. ಅಧಿಕಾರ ಮತ್ತು ಕೀರ್ತಿ ಇದ್ದಲ್ಲಿ ವಿವಾದವೂ ಇರುತ್ತೆ. ಇದಕ್ಕೆ ಬಣ್ಣದ ಲೋಕದಲ್ಲಿ ಹಲವು ಉದಾಹರಣೆಗಳಿವೆ. ಹಲವರು ಇಲ್ಲಿ ಸ್ನೇಹ.. ಪ್ರೇಮ.. ಮದುವೆ ಹೆಸರಿನಲ್ಲಿ ಹಲವರಿಗೆ ಉಂಡೆನಾಮ ತಿಕ್ಕಿದ್ದಾರೆ. ಎದುರಗಡೆ ಇರುವ ವ್ಯಕ್ತಿಯ ತಲೆಗೆ ಮಕ್ಮಲ್ ಟೋಪಿ ಹಾಕಿ ಹಣೆಗೆ ತುಪ್ಪ ಸವರುತ್ತಾರೆ. ಜಾಕ್ವೆಲಿನ್ ಫರ್ನಾಂಡಿಸ್, ವಿಕ್ರಮ್ ಭಟ್ ಅವರನ್ನೊಳಗೊಂಡು ಕೆಲವರು ಜೈಲು ಪಾಲಾದರೆ ಶ್ರೇಯಸ್ ತಲ್ಪಡೆ, ಅಲೋಕ್ ನಾಥ್ ಸೇರಿ ಹಲವರು ವಂಚನೆ ಪ್ರಕರಣ ದಾಖಲಾದರು ಕೂಡ ನೆಮ್ಮದಿಯಿಂದ ಇದ್ದಾರೆ.

ಇನ್ನೂ ಸಾಮಾನ್ಯವಾಗಿ ಇಂತಹ ವಿವಾದ ಹೆಗಲೇರಿದಾಗ ಹಲವರು ಪ್ರೇಕ್ಷಕರ ಮತ್ತು ತಮ್ಮ ಅಭಿಮಾನಿಗಳ ಗಮನ ಬೇರೆ ಕಡೆ ಸೆಳೆಯುವ ಪ್ರಯತ್ನ ಮಾಡುತ್ತಾರೆ. ದುತ್ತನೆ ಮದುವೆ ಅಥವಾ ಬೇರೆ ಯಾವುದಾದರೂ ಗುಡ್ ನ್ಯೂಸ್ ಹಂಚಿಕೊಂಡು ಡ್ಯಾಮೇಜ್ ಆದ ತಮ್ಮ ಇಮೇಜ್‌ಗೆ ತೇಪೆ ಹೆಚ್ಚುವ ಪ್ರಯತ್ನ ಮಾಡುತ್ತಾರೆ. ಸದ್ಯ ಇಂತಹದ್ದೇ ಒಂದು ಪ್ರಯತ್ನವನ್ನು ''ಬಿಗ್ ಬಾಸ್'' ಸ್ಫರ್ಧಿ ಅಶು ರೆಡ್ಡಿ ಮಾಡಿದಂತೆ ಇದ್ದು ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ಧಾರೆ.

engagement-or-escape-ashu-reddy-flaunts-ring-amidst-10-crore-nri-fraud-probe

ಹೌದು, ಅಶು ರೆಡ್ಡಿ.. ಪಕ್ಕದ ಆಂಧ್ರದ ಚೆಲುವೆ. ಡಬ್ ಸ್ಮ್ಯಾಶ್ ಮಾಡುತ್ತಲೇ ಜನಪ್ರಿಯವಾದ ಅಶು ರೆಡ್ಡಿ ಅವರನ್ನು ಹಲವರು ಜ್ಯೂನಿಯರ್ ಸಮಂತಾ ಎಂದು ಕರೆಯುತ್ತಾರೆ. ಅಮೆರಿಕಾದ ಡಲ್ಲಾಸ್ ಬ್ಯಾಪಿಸ್ಟ್ ವಿಶ್ವ ವಿದ್ಯಾಲಯದಲ್ಲಿ ಎಂಬಿಎ ಪದವಿಯನ್ನು ಕೂಡ ಪಡೆದಿರುವ ಅಶು ರೆಡ್ಡಿ ''ಚಲ್ ಮೋಹನ್ ರಂಗ''.. ''ಫೋಕಸ್''.. ''ಯೆವಮ್''.. ''ಪದ್ಮವ್ಯೂಹಂ ಲೋ ಚಕ್ರಧಾರಿ'' ಸೇರಿ ಕೆಲ ಸಿನಿಮಾಗಳನ್ನು ಮಾಡಿದ್ದಾರೆ.

ಇನ್ನು 2019ರಲ್ಲಿ ತೆಲುಗಿನ ''ಬಿಗ್ ಬಾಸ್'' 3ನೇ ಸೀಸನ್‌ನಲ್ಲಿ ಭಾಗವಹಿಸಿದ್ದ ಅಶು ರೆಡ್ಡಿ ಆ ನಂತರ ಓಟಿಟಿಯಲ್ಲಿ ಪ್ರಸಾರವಾದ ''ಬಿಗ್ ಬಾಸ್ ನಾನ್-ಸ್ಟಾಪ್''ನಲ್ಲಿ ಕೂಡ ಭಾಗವಹಿಸಿದ್ದರು. ಇಂಥಾ ಅಶು ರೆಡ್ಡಿ ಅವರ ಮೇಲೆ ಪ್ರೀತಿ ಪ್ರೇಮ ಮದುವೆಯ ಹೆಸರಿನಲ್ಲಿ ಅನಿವಾಸಿ ಭಾರತೀಯನಿಗೆ 9.35 ಕೋಟಿ ಪಂಗನಾಮ ಹಾಕಿರುವ ಆರೋಪ ಇದೆ.

ತೀರಾ ಇತ್ತೀಚೆಗಷ್ಟೇ ಆಶು ರೆಡ್ಡಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ತಮ್ಮ ಮೇಲಿನ ಎಫ್‌ಐಆರ್ ರದ್ದು ಮಾಡುವಂತೆ ತೆಲಂಗಾಣ ಹೈಕೋರ್ಟ್‌ನ ಮೊರೆ ಹೋದರೂ ಕೂಡ ಅಶು ರೆಡ್ಡಿಗೆ ಹಿನ್ನೆಡೆಯಾಗಿದೆ. ಮುಂಬರುವ ಜೂನ್ 9ರಂದು ಈ ವಂಚನೆ ಪ್ರಕರಣದ ವಿಚಾರಣೆ ಇದೆ.

ಹೀಗಿರುವಾಗ ಇದೀಗ ಅಶು ರೆಡ್ಡಿ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ಧಾರೆ. ಈ ಮೂಲಕ ಹಲವರನ್ನು ಅಚ್ಚರಿಗೆ ದೂಡಿದ್ದಾರೆ. 9.35 ಕೋಟಿ ವಂಚನೆಯ ಪ್ರಕರಣವನ್ನು ಯಾರು ಕೆದಕಬಾರದು ಎಂಬ ಉದ್ದೇಶದಿಂದಲೋ ಏನೋ ಫೋಟೊ ಹಂಚಿಕೊಂಡು ಕಾಮೆಂಟ್ ಸೆಕ್ಷನ್‌ನ ಅಶು ಆಫ್ ಮಾಡಿದ್ದಾರೆ.

engagement-or-escape-ashu-reddy-flaunts-ring-amidst-10-crore-nri-fraud-probe

ಸದ್ಯ ಅಶು ಅವರ ಈ ಎಂಗೇಜ್‌ಮೆಂಟ್ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ತೀವೃ ಚರ್ಚೆಗೆ ಗ್ರಾಸವಾಗಿದೆ. ಕುತೂಹಲವನ್ನು ಕೆರಳಿಸಿದೆ. ಇನ್ನೂ ಅಶು ರೆಡ್ಡಿ ತಾವು ಮದುವೆಯಾಗುತ್ತಿರುವ ಹುಡುಗನ ಹೆಸರು, ಕುಲ, ಗೋತ್ರ ಯಾವುದನ್ನು ಹಂಚಿಕೊಂಡಿಲ್ಲ. ಮದುವೆಯಾಗುತ್ತಿರುವ ಹುಡುಗನ ಮುಖ ಕೂಡ ತೋರಿಸಿಲ್ಲ. ಹೀಗಾಗಿ ಇದು ಯಾವುದಾದರೂ ಜಾಹೀರಾತು ಅಥವಾ ಧಾರಾವಾಹಿಯ ದೃಶ್ಯ ಇರಬಹುದು ಎನ್ನುವ ಅನುಮಾನ ಸದ್ಯ ಕೆಲವರಲ್ಲಿ ಮನೆ ಮಾಡಿದೆ.

ಅಂದ್ಹಾಗೇ ಅಶು ರೆಡ್ಡಿ ವಿರುದ್ಧ ಲಂಡನ್‌ನ ಸಾಫ್ಟವೇರ್ ಇಂಜಿನಿಯರ್ ವೈ ವಿ ಧಮೇಂದ್ರ ಅವರ ತಂದೆ ಯೆನುಮುಲ ಸತ್ಯನಾರಾಯಣ ಹೈದರಾಬಾದ್‌ನ ಸಿಟಿ ಸೆಂಟ್ರಲ್ ಕ್ರೈಂ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ ನಂತರ ಅಶು ರೆಡ್ಡಿ ಅವರದ್ದೇ ಎನ್ನಲಾದ ಆಡಿಯೋ ಒಂದು ವೈರಲ್ ಆಗಿತ್ತು.

ವೈರಲ್ ಆದ ಈ ಆಡಿಯೋದಲ್ಲಿ ರಾಜಿ ಸಂಧಾನದ ಪ್ರಯತ್ನ ನಡೆದಿತ್ತು. ಮೇ ತಿಂಗಳಾಂತ್ಯದಲ್ಲಿ ₹1.50 ಕೋಟಿ ಕೊಡುತ್ತೇನೆ ಬಾಕಿ ಹಣ ನಾನು ಬದುಕಿನಲ್ಲಿ ನೆಲೆಯೂರಿದ ನಂತರ ಕೊಡುತ್ತೇನೆ ಎನ್ನುವ ಆಡಿಯೋ ಟೇಪ್ ಅದು. ಈ ಆಡಿಯೋದಿಂದ ಈ ವಿವಾದ ಇನ್ನೂ ಕಾವೇರಿತ್ತು. ಈಗ ಅಶು ರೆಡ್ಡಿ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಶು ರೆಡ್ಡಿಯನ್ನು ಮದುವೆಯಾಗಬೇಕೆಂಬ ಆಸೆಯಲ್ಲಿ ₹9.35 ಕೋಟಿ ಕಳೆದುಕೊಂಡ ಧರ್ಮೇಂದ್ರ ಮತ್ತು ಅವರ ಕುಟುಂಬ ಈ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ.

English summary
Ashu Reddy sparks engagement rumors! As the NRI cheating scandal intensifies and the High Court probe continues, the actress drops bombshell photos. Is it a real wedding or a clever distraction? Click to find out.
Read more about: engagement biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X