For Quick Alerts
  ALLOW NOTIFICATIONS  
  For Daily Alerts

  ಬಂದ್ರು ಬಂದ್ರು ಬಿಗ್ ಬಾಸ್ ಭಾವನಾ ಬೆಳಗೆರೆ ಟಿವಿಗೆ ಬಂದ್ರು

  By Suneetha
  |

  ಸ್ಯಾಂಡಲ್ ವುಡ್ ನಟ ಶ್ರೀನಗರ ಕಿಟ್ಟಿ ಅವರ ಪತ್ನಿ ಬಿಗ್ ಬಾಸ್ ಖ್ಯಾತಿಯ ಭಾವನಾ ಬೆಳಗೆರೆ ಅವರು ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೊದಲು ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಖಾಸ್ ಬಾತ್' ಎಂಬ ಟಾಕ್ ಶೋ ಒಂದನ್ನು ನಡೆಸಿಕೊಡುವ ಮೂಲಕ ಎಲ್ಲರ ಮನೆಮಾತಾಗಿದ್ದರು.

  ಇದೀಗ ಮತ್ತೆ ಎಲ್ಲರ ಮನೆ-ಮನಕ್ಕೆ ಲಗ್ಗೆ ಇಡಲು ತಯಾರಾಗಿದ್ದಾರೆ. ಹೌದು 'ಬಿಗ್ ಬಾಸ್ ಸೀಸನ್ 3' ಶೋ ಮೂಲಕ ಗುರುತಿಸಿಕೊಂಡ ಭಾವನಾ ಬೆಳಗೆರೆ ಅವರು ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ 'ಮಹಾನದಿ' ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.[ಜೀ ಕನ್ನಡದಲ್ಲಿ ಮುಂದಿನ ವಾರದಿಂದ ಹರಿಯಲಿದೆ 'ಮಹಾನದಿ']

  'ಪದವಿಯ ಆಟಕೆ ಪ್ರೀತಿಯೇ ಪಗಡೆ' ಎಂಬ ಅಡಿಬರಹ ಹೊತ್ತು ಬರುತ್ತಿರುವ 'ಮಹಾನದಿ' ರಾಜಕೀಯ ಹಿನ್ನೆಲೆಯಿರುವ ಪ್ರೇಮ ಕಥೆ. ಈ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಭಾವನಾ ಬೆಳಗೆರೆ ಅವರು ನಾರಾಯಣಪಟ್ಟಣ ಎಂಬ ಸಣ್ಣ ಊರಿನ ಎಂ.ಎಲ್.ಎ ವಿಕ್ರಂ ಸಿಂಹನ ಪರ್ಸನಲ್ ಪಿ.ಎ ಪಾತ್ರ ವಹಿಸಿದ್ದಾರೆ.

  Bigg Boss Bhavana Belagere turns TV Actress in 'Mahanadhi' serial

  ಇವರು ಈ ಧಾರಾವಾಹಿಯಲ್ಲಿ ಪ್ರಮೋದಿನಿ ಪಾತ್ರ ವಹಿಸಿದ್ದು, ಎಂ.ಎಲ್ ಎ ಪಾತ್ರದಲ್ಲಿ ಸ್ಯಾಂಡಲ್ ವುಡ್ ನಟ ನಾಗಕಿರಣ್ ಅವರು ಮಿಂಚಿದ್ದಾರೆ. ನಟಿಸಿದ ಚಿತ್ರಗಳು ಅಷ್ಟಾಗಿ ಬ್ರೇಕ್ ಕೊಡದ ಕಾರಣ ಇದೀಗ ಕಿರುತೆರೆಯಲ್ಲಿ ಮೋಡಿ ಮಾಡಲು ನಾಗಕಿರಣ್ ಅವರು ತಯಾರಾಗಿದ್ದಾರೆ.[ಹ್ಯಾಂಡ್ಸಮ್ ನಟ ನಾಗಕಿರಣ್ ಈಗ ಹೇಗಿದ್ದಾರೆ ಗೊತ್ತಾ?]

  ಒಟ್ನಲ್ಲಿ ಬಿಗ್ ಬಾಸ್ ನಂತರ ಇದೀಗ ಧಾರಾವಾಹಿ ಮೂಲಕ ಶಾಸಕರ ಪಿ.ಎ ಆಗಿ ವೀಕ್ಷಕರನ್ನು ಮೋಡಿ ಮಾಡಲು ಹೊರಟಿರುವ ಭಾವನಾ ಬೆಳಗೆರೆ ಅವರನ್ನು ಇನ್ನುಮುಂದೆ ದಿನಾ ರಾತ್ರಿ ಟಿವಿಯಲ್ಲಿ ನೋಡಬಹುದು.

  'ಶ್ರೀರಸ್ತು ಶುಭಮಸ್ತು', 'ಚಿ.ಸೌ.ಸಾವಿತ್ರಿ', 'ಮಹಾದೇವಿ', 'ಪುನರ್ ವಿವಾಹ'ದಂತಹ ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ಶೃತಿ ನಾಯ್ಡು ರವರು ಈ ಕಾರ್ಯಕ್ರಮದ ನಿರ್ಮಾಣ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

  'ಮಹಾನದಿ' ಧಾರಾವಾಹಿ ಇದೇ ಜುಲೈ 4 ರಿಂದ ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  English summary
  Sandalwood Actor Srinagara Kitty's wife 'Bigg Boss Kannada 3' fame Bhavana Belagere is all set to turn TV Actress in 'Mahanadhi' serial. Kannada Entertainment Channel Zee Kannada has come up with a new serial called 'Mahanadhi' which will go on air from July 4th

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X