For Quick Alerts
  ALLOW NOTIFICATIONS  
  For Daily Alerts

  ಮನೆಗೆಲಸದವನಿಂದ ಅತ್ಯಾಚಾರಕ್ಕೆ ಯತ್ನ: ಕರಾಳ ಘಟನೆಯನ್ನು ಬಾಯ್ಬಿಟ್ಟ ನಟಿ ಆರತಿ ಸಿಂಗ್

  |

  ''ನನಗೆ ಆಗ 13 ವರ್ಷ ವಯಸ್ಸು. ಮನೆಯಲ್ಲಿ ಒಬ್ಬಳೇ ಇದ್ದೆ. ನಾನು ಮಲಗಿರುವಾಗ ಮನೆಗೆಲಸದವನಿಂದ ಅತ್ಯಾಚಾರ ಯತ್ನಕ್ಕೆ ಒಳಗಾದೆ'' ಎಂದು ಕರಾಳ ಘಟನೆಯೊಂದರ ಕುರಿತು 'ಬಿಗ್ ಬಾಸ್' ಮನೆಯಲ್ಲಿ ನಟಿ ಆರತಿ ಸಿಂಗ್ ಬಾಯ್ಬಿಟ್ಟಿದ್ದಾರೆ.

  ಹಿಂದಿಯ 'ಬಿಗ್ ಬಾಸ್-13' ರಿಯಾಲಿಟಿ ಶೋದ ವಾರಾಂತ್ಯದಲ್ಲಿ 'ಬಿಗ್ ಬಾಸ್' ಮನೆಯೊಳಗೆ 'ಚಪಾಕ್' ಚಿತ್ರದ ಪ್ರಚಾರಕ್ಕಾಗಿ ದೀಪಿಕಾ ಪಡುಕೋಣೆ, ಲಕ್ಷ್ಮೀ ಅಗರ್ವಾಲ್ ಅತಿಥಿಗಳಾಗಿ ಬಂದರು. ಈ ವೇಳೆ ತಮ್ಮ ಜೀವನದ ಕಹಿ ಘಟನೆಗಳನ್ನು 'ಬಿಗ್ ಬಾಸ್' ಸ್ಪರ್ಧಿಗಳು ಬಹಿರಂಗ ಪಡಿಸಿದರು.

  ತಮ್ಮ ಮೇಲೆ ನಡೆದ ಅತ್ಯಾಚಾರ ಯತ್ನದ ಬಗ್ಗೆ ನಟಿ ಆರತಿ ಸಿಂಗ್ ಮಾತನಾಡಿದ್ದು ಕೂಡ ಇದೇ ಸಂದರ್ಭದಲ್ಲಿ. ''ನಾವು ಲಕ್ನೌನಲ್ಲಿ ವಾಸವಿದ್ದೆವು. ನನಗೆ ಮಧ್ಯಾಹ್ನ ನಿದ್ದೆ ಮಾಡುವ ಅಭ್ಯಾಸವಿತ್ತು. ಅವತ್ತು ನಾನು ಮನೆಯಲ್ಲಿ ಒಬ್ಬಳೇ ಇದ್ದೆ. ನಾನು ಮಲಗಿರುವಾಗ, ಮನೆಯ ಕೆಲಸದವನು ಅತ್ಯಾಚಾರ ಮಾಡಲು ಯತ್ನಿಸಿದ. ಈ ವೇಳೆ ನಾನು ಕಿರುಚಾಡಿ, ಆತನ ಬಟ್ಟೆ ಹರಿದು ಹಾಕಿ, ಹೊರಗೆ ಬಂದೆ'' ಎಂದು ಆರತಿ ಸಿಂಗ್ ತಮ್ಮ ಬದುಕಿನಲ್ಲಿ ನಡೆದ ಕರಾಳ ಘಟನೆಯನ್ನು ಬಿಚ್ಚಿಟ್ಟರು.

  ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ಆರತಿ ಸಿಂಗ್. 'ದೇವೋಂ ಕೆ ದೇವ್.. ಮಹಾದೇವ್', 'ಎನ್ ಕೌಂಟರ್', 'ಸಸುರಾಲ್ ಸಿಮರ್ ಕಾ', 'ವಾರಿಸ್', 'ಉಡಾನ್' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಆರತಿ ಸಿಂಗ್ ಅಭಿನಯಿಸಿದ್ದಾರೆ. ಇದೀಗ 'ಬಿಗ್ ಬಾಸ್-13' ನಲ್ಲಿ ಆರತಿ ಸಿಂಗ್ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.

  English summary
  Bigg Boss Contestant Aarthi Singh reveals that she faced rape attempt at the age of 13.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X